'ಶಾಕುಂತಲಂ'ಗೆ ಬೆದರಿದ ಪ್ರಭಾಸ್ ಫಾನ್ಸ್: "ಜೂನ್‌ನಲ್ಲಿ ಬರ್ತಿರೋ ಅದ್ಭುತ VFXಗೆ ಏನಾಗುತ್ತೋ" ಎಂದ ನೆಟ್ಟಿಗರು!
'ಶಾಕುಂತಲಂ'.. ಈ ವಾರ ಸಮಂತಾ ನಟಿಸಿದ ಈ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆನೇ ಮಾತು. ಗುಣಶೇಖರ್ ನಿರ್ದೇಶಿಸಿದ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಅಲ್ಲದೆ ಸಮಂತಾ ಪ್ಯಾನ್ ಇಂಡಿಯಾ ಲೇಡಿ ಸೂಪರ್‌ಸ್ಟಾರ್ ಆಗುವ ಎಲ್ಲಾ ಅವಕಾಶವೂ ಇತ್ತು.
ಆದರೆ, 'ಶಾಕುಂತಲಂ' ಈ ಅವಕಾಶವನ್ನು ಕಳೆದುಕೊಂಡಿದೆ. ಸಿನಿಮಾ ನೋಡಿದ ವಿಮರ್ಶಕರು ವಿಎಫ್‌ಎಕ್ಸ್ ಬಗ್ಗೆ ಕಟುಟೀಕೆ ಮಾಡುತ್ತಿದ್ದಾರೆ. ಅಲ್ಲದೆ ಪ್ರೇಕ್ಷಕರು ಕೂಡ ಸಿನಿಮಾದ ವಿಜ್ಯೂವಲ್ಸ್ ಎಫೆಕ್ಟ್ಸ್ ಬಗ್ಗೆ ಕಿಡಿಕಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.

ಇದೇ ಸಿನಿಮಾ ಈಗ ಪ್ರಭಾಸ್ ಅಭಿಮಾನಿಗಳ ನಿದ್ದೆ ಕೆಡಿಸಿದೆ. 'ಶಾಕುಂತಲಂ' ಸಿನಿಮಾದ ವಿಮರ್ಶೆಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆನೇ ಚರ್ಚೆ ಮಾಡುತ್ತಿದ್ದಾರೆ. ಅಸಲಿಗೆ ಪ್ರಭಾಸ್ ಅಭಿಮಾನಿಗಳ ಭಯಕ್ಕೆ ಕಾರಣವೇನು? ಬೆಚ್ಚಿಬಿದ್ದಿದ್ದು ಏಕೆ? ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರೋ ಚರ್ಚೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಶಾಕುಂತಲಂ' ನೋಡಿ ಬೆದರಿದ ಪ್ರಭಾಸ್ ಫ್ಯಾನ್ಸ್
'ಶಾಕುಂತಲಂ' ಸಿನಿಮಾ ನೋಡಿದವರಿಗೆ ವಿಎಫ್‌ಎಕ್ಸ್ ಹಿಡಿಸಿಲ್ಲ. ಇದು ವಿಮರ್ಶಕರು ಮಾಡುತ್ತಿರೋ ಕುಟುಟೀಕೆಯಲ್ಲೊಂದು. 3ಡಿನೂ ಕೆಟ್ಟದಾಗಿದೆ ಅಂತ ಅಭಿಪ್ರಾಯವನ್ನು ವ್ಯಕ್ತಡಿಸುತ್ತಿದ್ದಾರೆ. ಈ ವಿಮರ್ಶೆಗಳನ್ನು ನೋಡಿದ ಬಳಿಕ ಪ್ರಭಾಸ್ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಅದಕ್ಕೆ ಕಾರಣ 'ಆದಿಪುರುಷ್' ವಿಎಫ್‌ಎಕ್ಸ್.
ದಸರಾ ಹಬ್ಬದಂದು ರಿಲೀಸ್ ಆಗಿದ್ದ 'ಆದಿಪುರುಷ್' ತುಣುಕುಗಳನ್ನು ನೋಡಿ ಪ್ರಭಾಸ್ ಫ್ಯಾನ್ಸ್ ಕೆಂಡಾಮಂಡಲವಾಗಿದ್ದರು. ಈಗ 'ಶಾಕುಂತಲಂ' ವಿಮರ್ಶೆಗಳನ್ನು ನೋಡಿದ ಬಳಿಕ ಮುಂದಿನ ಸರಿದಿ 'ಆದಿಪುರುಷ್' ಎಂದು ಭಯಬೀಳುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಒಂದರ ಹೊಂದೊಂದು ಕಮೆಂಟ್ ಮಾಡುತ್ತಿದ್ದಾರೆ.

ಏನಂತಿದ್ದಾರೆ ಪ್ರಭಾಸ್ ಫ್ಯಾನ್ಸ್?
'ಶಾಕುಂತಲಂ' ನೋಡಿ ಹೊರಬರುತ್ತಿದ್ದಂತೆ ವಿಎಫ್‌ಎಕ್ಸ್ ಬಗ್ಗೆ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಇನ್ನೊಂದು ಕಡೆ 'ಆದಿಪುರುಷ್' ವಿಎಫ್‌ಎಕ್ಸ್ ಬಗ್ಗೆ ಭಯ ಶುರುವಾಗಿದೆ. " ನೀವು 'ಶಾಕುಂತಲಂ' ವಿಎಫ್‌ಎಕ್ಸ್ ನೋಡಿ ಭಯ ಬೀಳುತ್ತಿದ್ದೀರಿ. ನಾನು ಜೂನ್‌ನಲ್ಲಿ ಬರ್ತಿರೋ ಮಾಸ್ಟರ್‌ಪೀಸ್ ವಿಎಫ್‌ಎಕ್ಸ್ ಬಗ್ಗೆ ಯೋಚಿಸುತ್ತಿದ್ದೇನೆ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬರು " ನಿರೀಕ್ಷೆಯಂತೆ ಶಾಕುಂತಲಂ ನೋಡಿ ಹೀಗನ್ನಿಸುತ್ತಿದೆ. ನಾಳೆ ಆದಿಪುರುಷ್ ನೋಡಿದ್ಮೇಲೂ ಹೀಗೆ ಅನಿಸಬಹುದು. ಭಾರತದಲ್ಲಿ ಎಸ್ ಎಸ್ ರಾಜಮೌಳಿ ವಿಎಫ್‌ಎಕ್ಸ್ ಬಳಸಬೇಕು. ಈಗ, ಬಾಹುಬಲಿ ಬೇರೆ ಲೆವೆಲ್‌ನಲ್ಲೇ ಇದೆ. RRRನಲ್ಲಿ ಅಲ್ಲೊಂದು ಇಲ್ಲೊಂದು ತಪ್ಪು ಮಾಡಿದ್ದರೂ ಪಾರಾಗಿದ್ದಾರೆ. ಅವರು ಮತ್ತೆ ಎದ್ದು ಬರುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಫ್ಯಾನ್ಸ್ ಮೆಚ್ಚಿಸಲು ಹರಸಾಹಸ
'ಆದಿಪುರುಷ್' ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದ್ದು ಜೂf 16ಕ್ಕೆ ರಿಲೀಸ್ ಆಗುತ್ತಿದೆ. 'ಆದಿಪುರುಷ್' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಸಿನಿಮಾದ ಟೀಸರ್ ನೋಡಿ ಬೆಚ್ಚಿದ್ದಿರೋ ಫ್ಯಾನ್ಸ್‌ಗೆ ಸಿನಿಮಾ ಹೇಗಿರುತ್ತೋ? ಅನ್ನೋ ಆತಂಕ ಹೆಚ್ಚಾಗಿದೆ.
ಈ ಸಿನಿಮಾವನ್ನು ಮೋಷನ್ ಕ್ಯಾಪ್ಷನ್ ತಂತ್ರಜ್ಞಾನ ಬಳಿಸಿ ನಿರ್ಮಾಣ ಮಾಡಲಾಗಿದೆ. ಆದರೆ, ಡಾರ್ಲಿಂಗ್ ಫ್ಯಾನ್ಸ್‌ಗೆ ಇದು ಇಷ್ಟ ಆಗಿಲ್ಲ. ಬದಲಾಗಿದೆ ಆಕ್ಷನ ಸೀನ್‌ಗಳು, ಮಾಸ್ ಕಂಟೆಂಟ್ ಬೇಕು ಎಂದು ಹೇಳುತ್ತಿದ್ದಾರೆ. ಹೀಗಾಗಿ 'ಶಾಕುಂತಲಂ'ಗೆ ಬಂದ ಟೀಕೆನೇ 'ಆದಿಪುರುಷ್'ಗೂ ಬರುತ್ತೆ ಎಂದು ಭಯ ಬಿದ್ದಿದ್ದಾರೆ.


Click it and Unblock the Notifications











