'ಆದಿಪುರುಷ್' ದಾಖಲೆ ಬ್ಯುಸಿನೆಸ್: ತೆಲುಗಿನಲ್ಲೇ ₹200 ಕೋಟಿ.. KGF 2 ರೆಕಾರ್ಡ್ ಬ್ರೇಕ್ ಆಗುತ್ತಾ? ಏನಿದು ಲೆಕ್ಕಾಚಾರ?

'ಬಾಹುಬಲಿ' ಬಳಿಕ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. 'ಸಾಹೋ', 'ರಾಧೆ ಶ್ಯಾಮ್' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿದ್ದವು. ಹೀಗಾಗಿ ಎಲ್ಲರ ಕಣ್ಣು 'ಆದಿಪುರುಷ್' ಮೇಲೆ ನೆಟ್ಟಿದೆ.

'ಆದಿಪುರುಷ್' ಸಿನಿಮಾದ ಮೇಲೆ ಸಹಜವಾಗಿಯೇ ಹೆಚ್ಚಿತ್ತು ನಿರೀಕ್ಷೆಯಿತ್ತು. ಆದರೆ, ಒಂದೇ ಒಂದು ಟೀಸರ್ ಎಲ್ಲವನ್ನೂ ಈ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿತ್ತು. ಇನ್ನೇನು ಪ್ರಭಾಸ್ ಕೆರಿಯರ್‌ಗೆ ಮತ್ತೊಂದು ಫ್ಲಾಪ್ ಸಿನಿಮಾ ಫಿಕ್ಸ್ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ, ಟ್ರೈಲರ್ ಹಾಗೂ ಹಾಡುಗಳು ಆ ಎಲ್ಲಾ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದ್ದವು.

Prabhas Movie Adipurush Pre Release

ಈ ಸಿನಿಮಾ ಬಿಡುಗಡೆಗೆ ಇನ್ನು 15 ದಿನಗಳು ಬಾಕಿ ಉಳಿದಿವೆ. ಆಗಲೇ 'ಆದಿಪುರುಷ್' ಬಿಡುಗಡೆಗೂ ಮುನ್ನ ಭರ್ಜರಿ ಬ್ಯುಸಿನೆಸ್ ಮಾಡುತ್ತಿದೆ. ಈಗಾಗಲೇ ದೊಡ್ಡ ಮೊತ್ತಕ್ಕೆ ತೆಲುಗು ಭಾಷೆಯ ಥಿಯೇಟ್ರಿಕಲ್ ಹಕ್ಕುಗಳು ಮಾರಾಟ ಆಗಿವೆ ಎಂದು ಹೇಳಲಾಗುತ್ತಿದೆ. ಜೊತೆ ಮೊದಲ ದಿನ ಕಲೆಕ್ಷನ್ ಎಷ್ಟಾಗಬಹುದು ಎಂದೂ ಅಂದಾಜಿಸಲಾಗುತ್ತಿದ್ದೆ. ಆದರೆ, ಕೆಜಿಎಫ್ 2 ದಾಖಲೆಯನ್ನು ಅಳಿಸಬಹುದೇ? ಅನ್ನೋದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

'ಆದಿಪುರುಷ್' ಪ್ರೀ ರಿಲೀಸ್ ಬ್ಯುಸಿನೆಸ್ ಎಷ್ಟು?

'ಆದಿಪುರುಷ್' ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಕೆರಿಯರ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಯಾಕಂದ್ರೆ, ಪೌರಾಣಿಕ ಪಾತ್ರದಲ್ಲಿ ಪ್ರಭಾಸ್ ಹಿಂದೆಂದೂ ನಟಿಸಿರಲಿಲ್ಲ. ಹೀಗಾಗಿ ಡಾರ್ಲಿಂಗ್ ಫ್ಯಾನ್ಸ್ ಈ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಟೀಸರ್ ಪೆಟ್ಟು ಕೊಟ್ಟಿದ್ದರೂ, ಟ್ರೈಲರ್ ಹಾಗೂ ಹಾಡುಗಳು ಪ್ರಾಮಿಸಿಂಗ್ ಆಗಿವೆ. ಈ ಕಾರಣಕ್ಕೆ ಬ್ಲಾಕ್ ಬಸ್ಟರ್ ಲಿಸ್ಟ್‌ ಸೇರೋದು ಪಕ್ಕಾ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Prabhas Movie Adipurush Pre Release

'ಆದಿಪುರುಷ್' ಸಿನಿಮಾದ ತೆಲುಗು ವಿತರಣೆ ಹಕ್ಕನ್ನು 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಅನ್ನೋ ಸಂಸ್ಥೆ ಕೊಂಡಿದೆ. 185 ಕೋಟಿ ರೂ.ಗೆ 'ಆದಿಪುರುಷ್' ಬ್ಯುಸಿನೆಸ್ ಕುದುರಿದೆ. ಜೆಎಸ್‌ಟಿ ಸೇರಿಸಿದರೆ, 200 ಕೋಟಿ ರೂ. ಬ್ಯುಸಿನೆಸ್ ಆಗಿದೆ ಎಂದು ಟಾಲಿವುಡ್.ನೆಟ್ ವರದಿ ಮಾಡಿದೆ. ಇದು ಇತ್ತೀಚೆಗಿನ ದಿನಗಳಲ್ಲಿ ನಡೆದಿರೋ ದೊಡ್ಡ ಬ್ಯುಸಿನೆಸ್ ಎಂದು ಹೇಳಲಾಗುತ್ತಿದೆ. ಇನ್ನು ಉಳಿದ ನಾಲ್ಕು ಭಾಷೆಗಳ ಬ್ಯುಸಿನೆಸ್‌ ಬಾಕಿ ಉಳಿದಿದೆ.

ಮೊದಲ ದಿನ ಅಂದಾಜು ಕಲೆಕ್ಷನ್ ಲೆಕ್ಕಾಚಾರವೇನು?

'ಆದಿಪುರುಷ್' ದಕ್ಷಿಣ ಭಾರತದಲ್ಲಷ್ಟೇ ಅಲ್ಲ. ಉತ್ತರ ಭಾರತದಲ್ಲೂ ಹೆಚ್ಚು ಜನಪ್ರಿಯರವಾಗಿದೆ. ಹಾಡುಗಳು ಹಾಗೂ ಟ್ರೈಲರ್ ಉತ್ತರ ಭಾರತೀಯರಿಗೆ ಹತ್ತಿರವಾಗಿದೆ. ಅಲ್ಲದೆ ಪ್ರಭಾಸ್ ಬಿಟ್ಟರೆ, ಪ್ರಮುಖ ಪಾತ್ರದಲ್ಲಿರೋ ಬಹುತೇಕ ಮಂದಿ ಬಾಲಿವುಡ್‌ನವರೇ ಆಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಯುನಿವರ್ಸಲ್ ಸಬ್ಜೆಕ್ಟ್ ಆಗಿರುವುದರಿಂದ 'ಆದಿಪುರುಷ್' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತೆ ಎನ್ನಲಾಗಿದೆ.

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಆದಿಪುರುಷ್' ಮೊದಲ ದಿನದ ಗಳಿಕೆ 100 ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಬಾಕ್ಸಾಫೀಸ್‌ಗೆ 'ಆದಿಪುರುಷ್' ಹೊಸ ಹುರುಪು ತರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಇನ್ನೂ ಚಿತ್ರತಂಡ ಎಲ್ಲೆಲ್ಲಿ? ಎಷ್ಟೆಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತೆ ಅನ್ನೋದನ್ನು ರಿವೀಲ್ ಮಾಡಿಲ್ಲ.

'ಕೆಜಿಎಫ್ 2' ಬ್ಯುಸಿನೆಸ್ ಕ್ರಾಸ್ ಮಾಡುತ್ತಾ?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಕೂಡ ಬಿಡುಗಡೆಗೂ ಮುನ್ನವೇ ಭರ್ಜರಿ ಬ್ಯುಸಿನೆಸ್ ಮಾಡಿತ್ತು. ಟ್ರ್ಯಾಕ್ ಟಾಲಿವುಡ್ ಪ್ರಕಾರ, ಕೆಜಿಎಫ್ 2 ವಿಶ್ವದಾದ್ಯಂತ 350 ಕೋಟಿ ರೂ.ಗೆ ಪ್ರೀ ರಿಲೀಸ್ ಬ್ಯುಸಿನೆಸ್ ಆಗಿದೆ ಎನ್ನಲಾಗಿತ್ತು. 'ಆದಿಪುರುಷ್' ಕೇವಲ ತೆಲುಗು ಬ್ಯುಸಿನೆಸ್ 200 ಕೋಟಿ ರೂ. ಎನ್ನಲಾಗಿದೆ. ಇನ್ನೂ ನಾಲ್ಕು ಭಾಷೆ ಸೇರಿದರೆ, 350 ಕೋಟಿ ರೂ. ದಾಟಲಿದೆ.

ಆದರೆ, 'ಕೆಜಿಎಫ್ 2' ಬಾಕ್ಸಾಫೀಸ್‌ ದಾಖಲೆಯನ್ನು ಅಳಿಸಿ ಹಾಕುತ್ತಾ? ಈ ಪ್ರಶ್ನೆ ಉತ್ತರ ಜೂನ್ 16ರ ಬಳಿಕ ಸಿಗಲಿದೆ. ಸಿನಿಮಾ ಅದ್ಭುತವಾಗಿದ್ದರೆ, ಮನೆ ಮಂದಿಯೆಲ್ಲಾ ಸಿನಿಮಾ ನೋಡುತ್ತಾರೆ. ಹೀಗಾಗಿ ಬಾಕ್ಸಾಫೀಸ್‌ನಲ್ಲೂ ದಾಖಲೆ ಬರೆಯಬಹುದು. ಒಂದ್ವೇಳೆ ಟೀಸರ್‌ನಂತೆ ರೆಸ್ಪಾನ್ಸ್ ಸಿಕ್ಕರೆ ಬಾಕ್ಸಾಫೀಸ್ ಡಿಸಾಸ್ಟರ್ ಆದರೂ ಅಚ್ಚರಿ ಪಡಬೇಕಿಲ್ಲ.

More from Filmibeat

English summary
Prabhas Movie Adipurush Pre Release Telugu Theatrical Business 200cr. will it break KGF 2 record, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X