'Kalki 2898 AD':ನಾಲ್ಕೇ ದಿನಕ್ಕೆ 500 ಕೋಟಿ ದೂಚಿದ 'ಕಲ್ಕಿ'; ಅದು ಹೇಗೆ ಸಾಧ್ಯ?
ಭಾರತದ ಅತೀ ದುಬಾರಿ ಸಿನಿಮಾ 'ಕಲ್ಕಿ 2898ಎಡಿ' (Kalki 2898 AD) ಬಾಕ್ಸಾಫೀಸ್‌ನಲ್ಲೂ ಮೋಡಿ ಮಾಡುತ್ತಿದೆ. ರಿಲೀಸ್ ಆದ ನಾಲ್ಕು ದಿನಗಳಲ್ಲಿ ಬಾಕ್ಸಾಫೀಸ್ ಅನ್ನು ಧೂಳೀಪಟ ಮಾಡಿದೆ. ವಿಶ್ವದಾದ್ಯಂತ ಈ ಸಿನಿಮಾ ಸೂಪರ್ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ವಾರವೇ ಭರ್ಜರಿ ಗಳಿಕೆ ಕಂಡಿದೆ.
ಪ್ರಭಾಸ್ ಹಾಗೂ ನಾಗ ಅಶ್ವಿನ್ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ಇಷ್ಟು ದೊಡ್ಡ ಬಜೆಟ್ ಸಿನಿಮಾ ಬಂಡವಾಳವನ್ನು ರಿವಕರಿ ಮಾಡುತ್ತಾ? ಅನ್ನೋ ಅನುಮಾನ ಸಿನಿಮಾ ಮಂದಿಯಲ್ಲಿ ಇತ್ತು. ಆದ್ರೀಗ ಕೇವಲ ನಾಲ್ಕು ದಿನಗಳಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವಿಷಯವನ್ನು ಸ್ವತ: ನಿರ್ಮಾಣ ಸಂಸ್ಥೆ ವೈ ಜಯಂತಿ ಮೂವೀಸ್ ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.

'ಕಲ್ಕಿ 2898ಎಡಿ' ವಿಶ್ವದಲ್ಲಷ್ಟೇ ಅಲ್ಲ ಭಾರತದಲ್ಲೂ ಕೂಡ ಅದ್ಭುತ ಕಲೆಕ್ಷನ್ ಮಾಡಿದೆ. ಈ ನಾಲ್ಕು ದಿನಗಳಲ್ಲಿಗಳಲ್ಲಿ 300 ಕೋಟಿ ರೂಪಾಯಿ (nett) ಕ್ಲಬ್ ಸೇರಿದೆ. ಈ ಸಿನಿಮಾ ರಿಲೀಸ್ ಆದ ಎಲ್ಲಾ ಭಾಷೆಯಿಂದಲೂ ಪಾಸಿಟಿವ್ ರಿಸಲ್ಟ್ ಬಂದಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಕಂಡು ಮುನ್ನುಗ್ಗುತ್ತಿದೆ. ಭಾರತ ಅಷ್ಟೇ ಅಲ್ಲ, ಉತ್ತರ ಅಮೆರಿಕದಲ್ಲೂ ಈ ಸಿನಿಮಾ ದಾಖಲೆ ಗಳಿಕೆ ಮಾಡಿದೆ.
ಪ್ರತ್ಯಂಗಿರ ಸಿನಿಮಾಸ್ ಸಂಸ್ಥೆ ತನ್ನ ಎಕ್ಸ್ ಖಾತೆಯಲ್ಲಿ ಉತ್ತರ ಅಮೆರಿಕದಲ್ಲಿ ಆದ ಕಲೆಕ್ಷನ್ ಎಷ್ಟು ಅನ್ನೋದನ್ನು ಶೇರ್ ಮಾಡಿಕೊಂಡಿದೆ. ಇದರ ಪ್ರಕಾರ, ಈ ವೀಕೆಂಡ್‌ನಲ್ಲಿ ಹೊತ್ತಿಗೆ ಸುಮಾರು 87 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಕಾರಣಕ್ಕೆ ನಿರ್ದೇಶಕ ನಾಗ ಅಶ್ವಿನ್ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಧನ್ಯವಾದ ಹೇಳಿ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.
'ಕಲ್ಕಿ 2898ಎಡಿ' ನಿನ್ನೆ (ಜೂನ್ 30) ಕೂಡ ಕಲೆಕ್ಷನ್ ಸಖತ್ ಆಗಿಯೇ ಆಗಿದೆ. ಈ ಸಿನಿಮಾ ತೆರೆಕಂಡು ಮೊದಲ ವಾರ ಆಗಿದ್ದರಿಂದ ಬಾಕ್ಸಾಫೀಸ್ ಮೇಲೆ ನಿರೀಕ್ಷೆಯಿತ್ತು. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಸಿನಿಮಾ ಭಾನುವಾರ ಕೇವಲ ಭಾರತದಲ್ಲಿ 85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ತೆಲುಗು ವರ್ಷನ್‌ಗಿಂತ ಹಿಂದಿ ವರ್ಷನ್ ಹೆಚ್ಚು ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ.

ಹೌದು, ಹಿಂದಿ ಬೆಲ್ಟ್‌ನಲ್ಲಿ 'ಕಲ್ಕಿ 2898ಎಡಿ'ಗೆ ಭಾನುವಾರ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು ವರ್ಷನ್ 36.8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ಹಿಂದಿ ವರ್ಷನ್ 39 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಮಾಹಿತಿ ಹಂಚಿಕೊಂಡಿದ್ದಾರೆ. ಒಟ್ಟಾಗಿ ಭಾರತದಲ್ಲಿ ಮೊದಲ ನಾಲ್ಕು ದಿನಗಳಲ್ಲಿ 302.4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ ತೆಲುಗು ವರ್ಷನ್‌ನಿಂದ 84.24 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ 'ಕಲ್ಕಿ 2898ಎಡಿ' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ವೈಜಯಂತಿ ಮೂವೀಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ದಿಗ್ಗಜರ ದೊಡ್ಡ ತಾರಾಬಳಗವೇ ಇದೆ. ಹೀಗಾಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಸದ್ಯಕ್ಕೀಗ ಮೊದಲ ವಾರ ಸಿನಿಮಾ ಉತ್ತಮ ಗಳಿಕೆ ಕಂಡಿದ್ದು, ಬಾಕ್ಸಾಫೀಸ್ ದಾಖಲೆ ಬರೆಯುತ್ತಾ? ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











