2021ನೇ ಸಾಲಿನ ದಕ್ಷಿಣ ಏಷ್ಯಾದ ನಟರಲ್ಲಿ ವಿಶ್ವಕ್ಕೆ ನಂ 1 ನಟ ಪ್ರಭಾಸ್: ಬ್ರಿಟನ್ ಪತ್ರಿಕೆ ಘೋಷಣೆ

ಡಾರ್ಲಿಂಗ್ ಪ್ರಭಾಸ್ ಕೇವಲ ದಕ್ಷಿಣ ಭಾರತದ ನಟನಾಗಿ ಉಳಿದಿಲ್ಲ. ಬಾಹುಬಲಿ ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್‌ ತಾರೆಯರನ್ನೂ ಹಿಂದಿಕ್ಕಿರುವ ಪ್ರಭಾಸ್ ಭಾರತದ ಬಹುಬೇಡಿಕೆಯ ನಟನಾಗಿದ್ದಾರೆ. ಪ್ರಭಾಸ್ ಜೊತೆ ಸಿನಿಮಾ ಮಾಡುವುದಕ್ಕೆ ನಿರ್ಮಾಪಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಈಗ ಪ್ರಭಾಸ್ ಸಾಧನೆಗೆ ಮತ್ತೊಂದು ಗರಿ ಮುಡಿಗೇರಿದೆ. 2021ನೇ ಸಾಲಿನ ದಕ್ಷಿಣ ಏಷ್ಯಾದ ನಟರಲ್ಲಿ ವಿಶ್ವಕ್ಕೆ ನಂ 1 ಪಟ್ಟ ಧಕ್ಕಿದೆ.

'ಸಾಹೋ' ಬಳಿಕ ಪ್ರಭಾಸ್ ನಟಿಸಿದ ಬೇರಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆದರೆ, ಕೈ ತುಂಬಾ ಸಿನಿಮಾಗಳಿದ್ದು, ಒಂದರ ಹಿಂದೊಂದು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ಇವೆಲ್ಲವೂ ಪ್ಯಾನ್ ಇಂಡಿಯಾ ಸಿನಿಮಾ ಅನ್ನುವುದು ವಿಶೇಷ. ಪ್ರಭಾಸ್ ದಾಖಲೆಯನ್ನು ಮುರಿಯುವುದಕ್ಕೆ ಬಾಲಿವುಡ್ ಸೂಪರ್‌ಸ್ಟಾರ್‌ಗಳು ಹೆಣಗಾಡುತ್ತಿರುವಾಗ, ಡಾರ್ಲಿಂಗ್ 2021ನೇ ಸಾಲಿನಲ್ಲಿ ದಕ್ಷಿಣ ಏಷ್ಯಾದ ನಟರಲ್ಲಿ ವಿಶ್ವದ ನಂ1 ಪಟ್ಟಕ್ಕೇರಿದ್ದಾರೆಂದು ಬ್ರಿಟನ್‌ನ ನಿಯತಕಾಲಿಕೆಯೊಂದು ವರದಿ ಮಾಡಿದೆ.

ಡಾರ್ಲಿಂಗ್ ಪ್ರಭಾಸ್ ವಿಶ್ವದ ನಂ 1 ನಟ

ಡಾರ್ಲಿಂಗ್ ಪ್ರಭಾಸ್ ವಿಶ್ವದ ನಂ 1 ನಟ

ರಾಜಮೌಳಿ ನಿರ್ದೇಶಿಸಿದ ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ಅದೃಷ್ಟವೇ ಬದಲಾಗಿದೆ. ಪ್ರಭಾಸ್ ಭಾರತದ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ಈಗ ಯುಕೆ ಮೂಲದ ಈಸ್ಟರ್ಸ್ ಐ ವಾರ ಪತ್ರಿಕೆ ಪ್ರಭಾಸ್‌ಗೆ ವಿಶ್ವದ ನಂ 1 ಪಟ್ಟ ಕೊಟ್ಟಿದೆ. ದಕ್ಷಿಣ ಏಷ್ಯಾದ ಸೆಲೆಬ್ರೆಟಿ ಪ್ರಭಾಸ್ ವಿಶ್ವದ ನಂ 1 ನಟನೆಂದು ತನ್ನ ಪತ್ರಿಕೆಯಲ್ಲಿ ವರದಿ ಮಾಡಿದೆ. "ಪ್ರಾದೇಶಿಕ ಭಾಷೆಯ ಸಿನಿಮಾಗಳ ಮೂಲಕ ಪ್ರಭಾಸ್ ಹಿಂದೆಂದೂ ಕಾಣದಷ್ಟು ಗಮನ ಸೆಳೆದಿದ್ದಾರೆ. ಇನ್ಮುಂದೆ ಬಾಲಿವುಡ್ ದೊಡ್ಡಣ್ಣ ಅಲ್ಲ. ಭಾರತದ ಸಿನಿಮಾಗಳಲ್ಲಿ ಬಹುಭಾಷೆಯಲ್ಲಿ ಎಲ್ಲರೂ ಬಿಡುಗಡೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ." ಎಂದು ಬ್ರಿಟನ್ ವಾರ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರಭಾಸ್ ನಂ 1 ಪಟ್ಟಕ್ಕೆ ಆಯ್ಕೆಯಾಗಿದ್ದು ಹೇಗೆ?

ಪ್ರಭಾಸ್ ನಂ 1 ಪಟ್ಟಕ್ಕೆ ಆಯ್ಕೆಯಾಗಿದ್ದು ಹೇಗೆ?

ಬ್ರಿಟನ್‌ನ ಈಸ್ಟರ್ಸ್ ಐ ವಾರ ಪತ್ರಿಕೆ ಟಾಪ್ 50 ಸೆಲೆಬ್ರೆಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2021ರಲ್ಲಿ ಅಭೂತಪೂರ್ವ ಸಾಧನೆ ಮಾಡಿದ ತಾರೆಯರನ್ನು ಗಣನೆಗೆ ತೆಗೆದುಕೊಂಡಿದೆ. ಸಿನಿಮಾ ಕ್ಷೇತ್ರದಲ್ಲಿ ಪಾಸಿಟಿವ್ ಪರಿಣಾಮ ಬೀರಿದ ನಟ-ನಟಿಯರು, ಗಡಿರೇಖೆಯನ್ನು ಮುರಿದು ಮುನ್ನುಗ್ಗಿದ್ದವರು, ಅಭಿಮಾನಿಗಳ ಗಮನ ಸೆಳೆದವರು ಅಥವಾ ಅವರು ಪ್ರೇರೆಪಿಸಿದವರನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಈ ಎಲ್ಲಾ ಮಾನದಂಡಗಳನ್ನು ಆಧರಿಸಿ ಪ್ರಭಾಸ್‌ಗೆ ನಂ 1 ಪಟ್ಟವನ್ನು ನೀಡಲಾಗಿದೆ.

ನಂ 2 ಪಾಕ್ ನಟ ರಿಜ್ ಅಹಮದ್.. ನಂ 2 ಪ್ರಿಯಾಂಕಾ

ನಂ 2 ಪಾಕ್ ನಟ ರಿಜ್ ಅಹಮದ್.. ನಂ 2 ಪ್ರಿಯಾಂಕಾ

ಬ್ರಿಟಷ್ ಹಾಗೂ ಪಾಕಿಸ್ತಾನಿ ನಟ ರಿಜ್ ಅಹಮದ್‌ಗೆ ಎರಡನೇ ಸ್ಥಾನ ನೀಡಿದೆ. ನಟನೆ ಹಾಗೂ ಗಾಯನ ಎರಡರಲ್ಲೂ ಸಾಧನೆ ಮಾಡಿದ ರಿಜ್ 2021ರಲ್ಲಿ ವಿಶ್ವದ ಗಮನ ಸೆಳೆದಿದ್ದಾರೆ. ಇವರು ನಟಿಸಿದ 'ಸೌಂಡ್ ಆಫ್ ಮೆಟಲ್' ಚಿತ್ರ ಅತ್ಯುತ್ತಮ ನಟ ಕ್ಯಾಟಗರಿಯಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಆಸ್ಕರ್ ಪ್ರಶಸ್ತಿ ನಾಮಿನೇಷನ್‌ನಲ್ಲಿ ಆಯ್ಕೆಯಾದ ಮೊದಲ ಪಾಕಿಸ್ತಾನಿ ನಟನೆಂಬ ಹೆಗ್ಗಳಿಕೆ ಈ ನಟನಿಗೆ ಸಿಕ್ಕಿದೆ. ಇನ್ನು ಮೂರನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಇದ್ದಾರೆ. ಪ್ರಿಯಾಂಕಾ ನಟಿಸಿದ 'ದಿ ವೈಟ್ ಟೈಗರ್' ಹಾಗೂ ಹಾಲಿವುಡ್‌ ಸಿನಿಮಾ 'ಮ್ಯಾಟ್ರಿಕ್ಸ್' ನಿಂದ ಹೆಚ್ಚು ಖ್ಯಾತಿ ಗಳಿಸಿದ್ದಾರೆಂದು ಈಸ್ಟರ್ಸ್ ಐ ತಿಳಿಸಿದೆ.

'ರಾಧೆ ಶ್ಯಾಮ್' ಸಿನಿಮಾಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್

'ರಾಧೆ ಶ್ಯಾಮ್' ಸಿನಿಮಾಗಾಗಿ ಎದುರು ನೋಡುತ್ತಿರುವ ಫ್ಯಾನ್ಸ್

ಪ್ರಭಾಸ್ ನಟಿಸಿದ 'ರಾಧೆ ಶ್ಯಾಮ್' ಸಿನಿಮಾ 2022ರಂದು ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ಗ್ರ್ಯಾಂಡ್ ರಿಲೀಸ್ ಆಗಲಿರುವ ಸಿನಿಮಾ ಈಗಾಗಲೇ ಹಾಡುಗಳು ಹಾಗೂ ಟ್ರೈಲರ್‌ನಿಂದ ಗಮನ ಸೆಳೆಯುತ್ತಿದೆ. ಲವ್ ಸ್ಟೋರಿ ಆಗಿದ್ದರೂ, ಕತೆಯೇ ವಿಭಿನ್ನಾಗಿದೆ ಎನ್ನಲಾಗಿದೆ. ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ಕಾಂಬಿನೇಷನ್ ಪ್ರೇಕ್ಷಕರಿಗೆ ಈಗಾಗಲೇ ಇಷ್ಟ ಆಗಿದ್ದು, ಸಿನಿಮಾ ಬಿಡುಗಡೆಗಾಗಿ ಡಾರ್ಲಿಂಗ್ ಡೈ ಹಾರ್ಡ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

More from Filmibeat

English summary
Prabhas named as the number one South Asian celebrity in the world for 2021 by UK-based Eastern Eye weekly newspaper.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X