ಬ್ರಿಟನ್‌ನಲ್ಲಿ ಒಂದು ಮಿಲಿಯನ್ ಟಿಕೆಟ್ ಸೇಲ್: ದಾಖಲೆ ಬರೆಯಲು ಸಜ್ಜಾದ 'ರಾಧೆಶ್ಯಾಮ್'
ಪ್ರಭಾಸ್, ಪೂಜಾ ಹೆಗ್ಡೆ ಸಿನಿಮಾ 'ರಾಧೆ ಶ್ಯಾಮ್' ಮಾರ್ಚ್ 11ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಬಿಡುಗಡೆ ಕೇವಲ ಎರಡು ದಿನ ಬಾಕಿ ಇದೆ. ಇದೂವರೆಗೂ 'ರಾಧೆಶ್ಯಾಮ್'ಗಾಗಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇಬ್ಬರೂ ಸೇರಿ ಭರ್ಜರಿ ಪ್ರಚಾರ ಮಾಡಿದ್ದಾರೆ. ರಿಲೀಸ್‌ಗೆ ಕೇವಲ ಎರಡು ದಿನ ಬಾಕಿ ಇರುವಂತೆಯೇ ಹೊಸ ದಾಖಲೆ ಬರೆಯುತ್ತಿದೆ. ಅದು ಭಾರತದಲ್ಲಿ ಅಲ್ಲ ಬ್ರಿಟನ್‌ನಲ್ಲಿ.
'ರಾಧೆ ಶ್ಯಾಮ್' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಈ ಸಿನಿಮಾ ನೋಡುವುದಕ್ಕೆ ವಿಶ್ವದಾದ್ಯಂತ ತುದಿಗಾಲಲ್ಲಿ ನಿಂತಿದ್ದಾರೆ. ಭಾರತದಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವ ಪದ್ಧತಿ ಇದೆ. ಪ್ರಭಾಸ್ ಡೈ ಹಾರ್ಟ್ ಫ್ಯಾನ್ಸ್ ರಾತ್ರಿಯಿಂದಲೇ ಥಿಯೇಟರ್ ಮುಂದೆ ಕ್ಯೂ ನಿಂತು ಸಿನಿಮಾವನ್ನ ನೋಡುತ್ತಾರೆ. ಆದರೆ, ವಿದೇಶದಲ್ಲೂ ಇದೇ ಮೊದಲ ಬಾರಿಗೆ ಮೊದಲ ಶೋ ನೋಡಲು ಸಿದ್ಧರಾಗಿದ್ದಾರೆ. ಹೀಗಾಗಿ 'ರಾಧೆಶ್ಯಾಮ್' ಚಿತ್ರದ ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ.

1 ಮಿಲಿಯನ್ ಟಿಕೆಟ್ ಸೇಲ್
ಬ್ರಿಟನ್‌ನಲ್ಲಿ 'ರಾಧೆ ಶ್ಯಾಮ್' ಟಿಕೆಟ್ ಖರೀದಿ ಮಾಡುವುದರಲ್ಲಿ ದಾಖಲೆಗಳನ್ನು ಮುರಿಯಲು ಸಜ್ಜಾಗುತ್ತಿದೆ. ಹೌದು.. 'ರಾಧೆ ಶ್ಯಾಮ್' ಬಿಡುಗಡೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಅನ್ನುವಾಗಲೇ ಪ್ರಿ ಬುಕಿಂಗ್ ಆರಂಭ ಆಗಿತ್ತು. ಅದರಲ್ಲೂ ಬ್ರಿಟನ್‌ನಲ್ಲಿ ನಾಲ್ಕೈದು ದಿನಗಳ ಹಿಂದೆಯೇ ಟಿಕೆಟ್ ಬುಕ್ಕಿಂಗ್ ಅನ್ನು ಓಪನ್ ಮಾಡಲಾಗಿತ್ತು. ಚಿತ್ರತಂಡದ ಪ್ರಕಾರ, ಬ್ರಿಟನ್‌ನಲ್ಲಿ ಮಾರ್ಚ್ 09ರ ವರೆಗೆ ಸುಮಾರು 1 ಮಿಲಿಯನ್ ಟಿಕೆಟ್‌ಗಳು ಸೇಲ್ ಆಗಿವೆ. ಇದು ವಿದೇಶದಲ್ಲಿ ಹೊಸ ದಾಖಲೆ ಎಂದು ಹೇಳಲಾಗುತ್ತಿದೆ.

ಇಡೀ ರಾಧೆಶ್ಯಾಮ್ ಪ್ರದರ್ಶನ
'ರಾಧೆ ಶ್ಯಾಮ್' ಬಿಡುಗಡೆ ಇನ್ನೂ ಎರಡು ದಿನ ಬಾಕಿಯಿದೆ. ಆಗಲೇ ಮಿಲಿಯನ್ ಟಿಕೆಟ್ ಸೇಲ್ ಆಗಿದೆ. ಇನ್ನು ಎರಡು ದಿನಗಳಲ್ಲಿ ಮತ್ತಷ್ಟು ಟಿಕೆಟ್‌ಗಳು ಸೇಲ್ ಆಗುವ ಸಾಧ್ಯತೆ ಇದೆ. ಈ ಮೂಲಕ ಬ್ರಿಟನ್‌ನಲ್ಲಿ ಇಡೀ ದಿನ ಕೇವಲ 'ರಾಧೆಶ್ಯಾಮ್' ಒಂದೇ ಸಿನಿಮಾ ಪ್ರದರ್ಶನ ಕಾಣುವ ಸಾಧ್ಯತೆ ಇದೆ. ತೆಲುಗು ಚಿತ್ರರಂಗದ ಇತಿಹಾಸದಲ್ಲಿಯೇ ಇಂತಹದ್ದೊಂದು ಅಪರೂಪ ಘಳಿಗೆ ಹಿಂದೆಂದೂ ಆಗಿರಲಿಲ್ಲ.

ಫಸ್ಟ್ ಡೇನೇ ರೆಕಾರ್ಡ್ ಬ್ರೇಕ್ ಸಾಧ್ಯತೆ
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗೆ ಎಲ್ಲೆಡೆ ಕ್ರೇಜ್ ಇದೆ. ಅದರಲ್ಲೂ ಬಹಳ ದಿನಗಳ ಬಳಿಕ 'ರಾಧೆ ಶ್ಯಾಮ್' ಅಂತಹ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿವರೆಗೂ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್, ಲವ್ ಸ್ಟೋರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಒಂದು ಲೆಕ್ಕದ ಪ್ರಕಾರ, ವಿಶ್ವದಾದ್ಯಂತೆ ಸುಮಾರು 10 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ.

ಹಿಂದಿ ವರ್ಷನ್ ಮೇಲೆ ಕಣ್ಣು
'ರಾಧೆಶ್ಯಾಮ್' ಸಿನಿಮಾ ಬಾಕ್ಸಾಫೀಸ್ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಈ ಸಿನಿಮಾದ ಗಳಿಕೆ ಎಷ್ಟು ಅನ್ನುವ ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ದುಪ್ಪಟ್ಟಾಗಿದೆ. 'ಬಾಹುಬಲಿ ಪಾರ್ಟ್ 1' ಹಿಂದಿ ವರ್ಷನ್ 114 ಕೋಟಿ ಗಳಿಸಿತ್ತು. ಅದೇ 'ಬಾಹುಬಲಿ 2' 510 ಕೋಟಿ ಗಳಿತ್ತು. 'ಸಾಹೋ' 143 ಕೋಟಿ ಲೂಟಿ ಮಾಡಿತ್ತು. ಹೀಗಾಗಿ 'ರಾಧೆಶ್ಯಾಮ್' ಸಿನಿಮಾ ಗಳಿಕೆ ಮೇಲೆ ಎಲ್ಲರ ಕನ್ಣು ನೆಟ್ಟಿದೆ.


Click it and Unblock the Notifications











