Salaar Box Office: 'ಸಲಾರ್' ರಿ-ರಿಲೀಸ್‌ಗೆ ಭರ್ಜರಿ ರೆಸ್ಪಾನ್ಸ್ ; ಮೊದಲ 2 ದಿನಗಳ ಕಲೆಕ್ಷನ್ ಎಷ್ಟು?

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ 'ಸಲಾರ್ ಪಾರ್ಟ್ 1 ಸೀಸ್‌ಫೈರ್' ರಿ-ರಿಲೀಸ್ ಆಗಿದೆ. 2023 ಡಿಸೆಂಬರ್‌ನಲ್ಲಿ ರಿಲೀಸ್ ಆಗಿದ್ದ 'ಸಲಾರ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾವನ್ನು ನಿರ್ದೇಶಿಸಿದ್ದ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದರು. ಬಾಕ್ಸಾಪೀಸ್‌ನಲ್ಲಿ ಈ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿತ್ತು.

ಐಪಿಎಲ್ ಆರಂಭ ಆದ ಬೆನ್ನಲ್ಲೇ 'ಸಲಾರ್ ಪಾರ್ಟ್ 1' ಸಿನಿಮಾವನ್ನು ಮರು ಬಿಡುಗಡೆಯಾಗಿದೆ. ಯಾವುದೇ ವಿಶೇಷ ದಿನ ಅಲ್ಲದೆ ಹೋದರೂ ಸಿನಿಮಾವನ್ನು ಮರು ಬಿಡುಗಡೆ ಬಿಡುಗಡೆ ಮಾಡಲಾಗಿತ್ತು. ಮಾರ್ಚ್‌ 13 ರಿಂದಲೇ ಸಿನಿಮಾದ ಟಿಕೆಟ್ ಬುಕಿಂಗ್ ಅನ್ನು ಆರಂಭ ಮಾಡಲಾಗಿತ್ತು. ಅಡ್ವಾನ್ಸ್ ಬುಕಿಂಗ್‌ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

Prabhas Prashanth Neel film Salaar Part 1 Re release Karnataka box office collection day 2 report

ಅಡ್ವಾನ್ಸ್ ಬುಕಿಂಗ್ ಆದ ಐದು ದಿನಗಳಲ್ಲಿಯೇ 55 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟ ಆಗಿದ್ದವು. ಮೊದಲ ದಿನ ಒಂದರಲ್ಲೇ ಪ್ರಭಾಸ್ ಸಿನಿಮಾ 1 ಕೋಟಿ ಮೌಲ್ಯದ ಟಿಕೆಟ್‌ಗಳನ್ನು ಸೇಲ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯ 'ಸಲಾರ್' ಮರು ಬಿಡುಗಡೆ ಆದಾಗ ಎಷ್ಟು ಕಲೆಕ್ಷನ್ ಆಗಿದೆ? ಕರ್ನಾಟಕದಲ್ಲಿ ರೆಸ್ಪಾನ್ಸ್ ಹೇಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಮೊದಲ ದಿನದ ಕಲೆಕ್ಷನ್ ಎಷ್ಟು?

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ 'ಸಲಾರ್' ಮರು ಬಿಡುಗಡೆಗೆ ಯಾವುದೇ ಕಾರಣವಿಲ್ಲ. ಸಾಮಾನ್ಯವಾಗಿ ಪ್ರಭಾಸ್ ಬರ್ತ್‌ಡೇಗೂ ಇಲ್ಲವೇ ಬೇರೆ ಯಾವುದೋ ಪ್ರಮುಖ ಸನ್ನಿವೇಶಗಳಲ್ಲಿಯೋ ಸಿನಿಮಾ ರಿಲೀಸ್ ಆಗುತ್ತೆ. ಆದರೆ, ಅಂತಹ ಯಾವುದೇ ಪ್ರಮುಖ ಸನ್ನಿವೇಶಗಳು ಇಲ್ಲದ ಹೊತ್ತಲ್ಲಿ ಸಲಾರ್ ಮರುಬಿಡುಗಡೆಯಾಗಿದೆ. ಮೊದಲ ದಿನವೇ ಭಾರತದಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 3.24 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ವರದಿ ಮಾಡಿದ್ದಾರೆ.

Prabhas Prashanth Neel film Salaar Part 1 Re release Karnataka box office collection day 2 report

2ನೇ ದಿನ ರೆಸ್ಪಾನ್ಸ್ ಹೇಗಿದೆ?

ಮೊದಲ ದಿನ ಸುಮಾರು ಒಂದು ಕೋಟಿಗೂ ಅಧಿಕ ಟಿಕೆಟ್‌ಗಳು ಸೇಲ್ ಆಗಿದ್ದವು. ಆದರೆ, ಎರಡೇ ದಿನ ಕಲೆಕ್ಷನ್ ಸಹಜವಾಗಿ ಡ್ರಾಪ್ ಆಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಎರಡನೇ ದಿನ ಕೇವಲ ತೆಲಂಗಾಣ ಹಾಗೂ ಆಂಧ್ರ ಪ್ರದೇದದಲ್ಲಿ 80 ಲಕ್ಷದಿಂದ ಒಂದು ಕೋಟಿ ಆಸು ಪಾಸಿನಲ್ಲಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಒಟ್ಟು ಎರಡು ದಿನಗಳ ಕಲೆಕ್ಷನ್ 4 ಕೋಟಿಯಿಂದ 4.15 ಕೋಟಿ ಎಂದು ನಿರೀಕ್ಷೆ ಮಾಡಲಾಗಿತ್ತು.

Take a Poll

ಕರ್ನಾಟಕದಲ್ಲಿ ಹೇಗಿದೆ ರೆಸ್ಪಾನ್ಸ್

ಕನ್ನಡ ನಿರ್ಮಾಣ ಸಂಸ್ಥೆ ಹೊಂಬಾಳೆ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಆಗಿದ್ದರಿಂದ ಕರ್ನಾಟಕದಲ್ಲಿಯೂ ಸೂಪರ್‌ ರೆಸ್ಪಾನ್ಸ್ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕರ್ನಾಟಕದಲ್ಲಿ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಕರ್ನಾಟಕದ ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಮೊದಲ ದಿನ 5.80 ಲಕ್ಷ ಹಾಗೂ ಎರಡನೇ ದಿನ 3.20 ಲಕ್ಷ ರೂಪಾಯಿ ಕಲೆಕ್ಷನ್ ಆಗಿದ್ದು, ಎರಡು ದಿನಗಳ ಒಟ್ಟು ಗಳಿಕೆ 9 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ ಎಂದು ಹೇಳಾಗುತ್ತಿದೆ.

'ಗಿಲ್ಲಿ' ದಾಖಲೆ ಬ್ರೇಕ್ ಆಗಲಿಲ್ಲ

ಪ್ರಭಾಸ್, ಪ್ರಥ್ವಿರಾಜ್ ಸುಕುಮಾರನ್, ಪ್ರಶಾಂತ್ ನೀಲ್ ಕಾಂಬಿನೇಷನ್ 'ಸಲಾರ್', ಮರು ಬಿಡುಗಡೆಯಾದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಉಡೀಸ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಹಾಗಾಗಲಿಲ್ಲ. ದಳಪತಿ ವಿಜಯ್ ನಟನೆಯ 'ಗಿಲ್ಲಿ' 7 ಕೋಟಿ ರೂ., ಪವನ್ ಕಲ್ಯಾಣ್ ಸಿನಿಮಾ ಗಬ್ಬರ್ ಸಿಂಗ್ 6.5 ಕೋಟಿ ರೂ., ಮಹೇಶ್ ಬಾಬು 'ಮುರಾರಿ' 5 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ, ಈ ಸಿನಿಮಾಗಳ ದಾಖಲೆಯನ್ನು ಪ್ರಭಾಸ್ ಸಿನಿಮಾ ಮುರಿಯುವಲ್ಲಿ ವಿಫಲವಾಗಿದೆ. ಮರು ಬಿಡುಗಡೆಯಾದ ಟಾಪ್ 10 ಸಿನಿಮಾಗಳಲ್ಲಿ ಇದೂ ಒಂದಾಗಬಹುದಷ್ಟೇ ಎನ್ನಲಾಗಿದೆ.

More from Filmibeat

English summary
Prabhas, Prashanth Neel film Salaar Part 1 Re release Karnataka box office collection day 2 report;
Read more about: prabhas prashant neel box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X