ಟ್ರೈಲರ್ ರಿಲೀಸ್ ಮುನ್ನವೇ 'ಸಲಾರ್' ನೋಡಲು ಮುಗಿಬಿದ್ದ ಫ್ಯಾನ್ಸ್: ಬುಕ್ ಮೈ ಶೋನಲ್ಲಿ ಭರ್ಜರಿ ರೆಸ್ಪಾನ್ಸ್
2023 ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಸಲಾರ್' ಕೂಡ ಒಂದು. ಪ್ರಭಾಸ್, ಪ್ರಶಾಂತ್ ನೀಲ್ ಜೋಡಿಯ ಈ ಆಕ್ಷನ್ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಸಿನಿಮಾ ಬಿಡುಗಡೆ ಇನ್ನು ಒಂದು ತಿಂಗಳು ಉಳಿದಿದೆ. ಅದರೂ ಇನ್ನೂ ಅಧಿಕೃತವಾಗಿ ಪ್ರಚಾರ ಆರಂಭ ಮಾಡಿಲ್ಲ.
ಪ್ರಭಾಸ್ ಟ್ರೈಲರ್ ರಿಲೀಸ್ ಮಾಡುವ ಮೂಲಕ ನಿರಂತರವಾಗಿ ಸಿನಿಮಾ ಪ್ರಚಾರ ಮಾಡಲು ಮುಂದಾಗಿದೆ. ಪ್ರಶಾಂತ್ ನೀಲ್ ವಿಷನ್, ಪ್ರಭಾಸ್ ಆಕ್ಷನ್ ಕಣ್ತುಂಬಿ ಕೊಳ್ಳುವುದಕ್ಕೆ ವಿಶ್ವದಾದ್ಯಂತ ಇರುವ ಪ್ರಭಾಸ್ ಅಭಿಮಾನಿಗಳು ಸಿದ್ಧರಾಗಿ ನಿಂತಿದ್ದಾರೆ. ಡಿಸೆಂಬರ್ 1 ರಿಂದ 'ಸಲಾರ್' ಅಸಲಿ ಆಟ ಶುರುವಾಗುತ್ತಿದೆ.

'ಕೆಜಿಎಫ್ 2' ಬಳಿಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾವಿದು. ಹೀಗಾಗಿ ಈ ಸಿನಿಮಾ ಹೇಗಿರುತ್ತೋ ಅಂತ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಚಿತ್ರತಂಡಕ್ಕೆ ಖುಷಿ ಪಡುವ ವಿಷಯೊಂದು ಸಿಕ್ಕಿದೆ. ಬುಕ್ ಮೈ ಶೋನಲ್ಲಿ 'ಸಲಾರ್' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಪ್ರಭಾಸ್ ಜೊತೆಗೆ ದಕ್ಷಿಣ ಭಾರತದ ದೊಡ್ಡ ತಾರಾಬಳಗವೇ ನಟಿಸಿದೆ. ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರಿಯಾ ರೆಡ್ಡಿ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಈ ಕಾರಣಕ್ಕೆ ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಎಕ್ಸ್‌ಪೀರಿಯನ್ಸ್ ಅನ್ನು ಕಣ್ತುಂಬಿ ಕೊಳ್ಳುವುದಕ್ಕೆ ಜನರು ಆಸಕ್ತಿ ತೋರಿದ್ದಾರೆ. ಭಾರತದಾದ್ಯಂತ ಬುಕ್ ಮೈ ಶೋನಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿದ್ದಾರೆ.
ಟಿಕೆಟ್ ಬುಕಿಂಗ್ ವೇದಿಕೆಯ ಬುಕ್ ಮೈ ಶೋನಲ್ಲಿ ಸಿಕ್ಕಿರೋ ರೆಸ್ಪಾನ್ಸ್‌ಗೆ ಚಿತ್ರತಂಡ ಫಿದಾ ಆಗಿದೆ. ಇನ್ನೊಂದು ಕಡೆ ಪ್ರೇಕ್ಷಕರಿಗೆ ಈ ಸಿನಿಮಾ ಅದ್ಭುತ ಅನುಭವ ಕೊಡುತ್ತೆ. ಜನರು ಸಿನಿಮಾವನ್ನು ಇಷ್ಟ ಪಡುತ್ತಾರೆ ಅನ್ನೋ ಕಾನ್ಫಿಡೆನ್ಸ್ ಚಿತ್ರತಂಡವಿದೆ. ಇನ್ನೊಂದು ಕಡೆ ಇದೇ ಸಮಯಕ್ಕೆ ಬಾಲಿವುಡ್ ಸಿನಿಮಾ 'ಡಂಕಿ' ಟಕ್ಕರ್ ಕೊಡುತ್ತಿದೆ. ಅಂದುಕೊಂಡಿದ್ದಕ್ಕಿಂತ 1 ದಿನ ಮುನ್ನವೇ ಶಾರುಖ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದೆ.

'ಸಲಾರ್' ಸಿನಿಮಾಗೆ ಕನ್ನಡದವೇ ಹೆಚ್ಚು ಮಂದಿ ಕೆಲಸ ಮಾಡಿದ್ದಾರೆ. ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದರೆ, ಶಿವ ಕುಮಾರ್ ಆರ್ಟ್ ಡೈರೆಕ್ಷನ್ ಮಾಡಿದ್ದಾರೆ. ಅದೇ ಇನ್ನೊಂದು ಕಡೆ ಭುವನ್ ಗೌಡ ಕ್ಯಾಮರಾ ವರ್ಕ್ ಇದೆ. ಡಿಸೆಂಬರ್ 22ಕ್ಕೆ 'ಸಲಾರ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಅಂದ್ಹಾಗೆ 'ಸಲಾರ್' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಆಗಿದೆ. ಇದಕ್ಕೆ ಅನಿವಾಸಿ ಭಾರತೀಯರಿಂದ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಮೂಲಗಳ ಪ್ರಕಾರ, ಪ್ರಭಾಸ್ ಸಿನಿಮಾ ವಿಶ್ವದ 1979 ಲೋಕೇಶ್‌ಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಅಂದಾಜು 5 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ ಎನ್ನಲಾಗಿದೆ.


Click it and Unblock the Notifications











