Salaar Vs Dunki: ಡಿಸೆಂಬರ್‌ಗೆ 'ಸಲಾರ್' ರಿಲೀಸ್.. ಶಾರುಖ್ ಎದುರು ನಿಂತ ಪ್ರಭಾಸ್.. ಯಾಕೀ ಯುದ್ಧ?

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಸಿನಿಮಾ 'ಸಲಾರ್' ಸೆಪ್ಟೆಂಬರ್‌ನಲ್ಲಿಯೇ ರಿಲೀಸ್ ಆಗಬೇಕಿತ್ತು. ಇದೇ ವಾರ (ಸೆಪ್ಟೆಂಬರ್ 28)ರಂದು ಅದ್ಧೂರಿಯಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಹೊಂಬಾಳೆ ಫಿಲ್ಮ್ಸ್ ದಿಢೀರನೇ ಸಿನಿಮಾವನ್ನು ಮುಂದೂಡಿತ್ತು.

'ಸಲಾರ್' ಸಿನಿಮಾ ಕೆಲವು ದೃಶ್ಯವನ್ನು ಪ್ರಶಾಂತ್ ನೀಲ್ ರೀ ಶೂಟ್ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಕೆಲವು ದೃಶ್ಯಗಳು ಪ್ರಶಾಂತ್ ನೀಲ್‌ಗೆ ಇಷ್ಟ ಆಗಿರಲಿಲ್ಲ. ಹೀಗಾಗಿ ಮತ್ತೆ ಶೂಟ್ ಮಾಡುತ್ತಿದ್ದಾರೆ ಅನ್ನೋ ಸುದ್ದು ಹರಿದಾಡಿತ್ತು. ಆದರೆ, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಆಗಲಿ, ಪ್ರಶಾಂತ್ ನೀಲ್ ಆಗಲಿ ಪ್ರತಿಕ್ರಿಯೆ ನೀಡಿರಲಿಲ್ಲ.

ಪ್ರಭಾಸ್ 'ಸಲಾರ್' ಈ ವರ್ಷ ರಿಲೀಸ್ ಆಗೋದಿಲ್ಲ ಅಂತಾನೂ ಅಂದಾಜು ಹಾಕಿದ್ದರು. ಆದ್ರೀಗ 'ಸಲಾರ್' ಇದೇ ವರ್ಷ ರಿಲೀಸ್ ಆಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಪಕ್ಕಾ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಬಾಕ್ಸಾಫೀಸ್ ಕಿಂಗ್ ಶಾರುಖ್ ಖಾನ್ ಅನ್ನು ಎದುರು ಪ್ರಭಾಸ್ ಅಖಾಡಕ್ಕಿಳಿಯುತ್ತಿರೋದು ಕುತೂಹಲ ಮೂಡಿಸಿದೆ.

prabhas-salaar-shah-rukh-khan-dunki

ಇದೇ ವರ್ಷ ಸಲಾರ್ ರಿಲೀಸ್

ಮುಂದಿನ ವರ್ಷ ಅಲ್ಲ. ಇದೇ ವರ್ಷ 'ಸಲಾರ್' ಆಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನಿರ್ಮಾಣ ಸಂಸ್ಥೆಯಿಂದ ಹೊರಬೀಳಬೇಕಿದೆ. ಆದರೆ ಡಿಸೆಂಬರ್ ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ಪ್ರಶಾಂತ್ ನೀಲ್ ಪತ್ನಿ ಲಿಖಿತಾ ರೆಡ್ಡಿ ನೀಲ್ ಸುಳಿವು ನೀಡಿದ್ದರು. "ಡಿಸೆಂಬರ್ 2023 ಹಿಂದೆಂದಿನಂತೆ ಇರುವುದಿಲ್ಲ" ಎಂದು ಸ್ಟೇಟಸ್ ಹಾಕಿದ್ದರು. ಈ ಮೂಲಕ 'ಸಲಾರ್' ಡಿಸೆಂಬರ್‌ನಲ್ಲಿ ರಿಲೀಸ್ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದರು.

'ಡಂಕಿ' ಜೊತೆ 'ಸಲಾರ್' ಕ್ಲ್ಯಾಶ್

'ಸಲಾರ್' ಹೆಚ್ಚು ಕಡಿಮೆ ಮೂರು ತಿಂಗಳು ಮುಂದಕ್ಕೆ ಹೋಗಿದೆ. ಇತ್ತ ಇನ್ನೊಂದು ಕಡೆ ಡಿಸೆಂಬರ್‌ನಲ್ಲಿ ಕೆಲವು ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ಗೆ ಸರದಿಯಲ್ಲಿ ನಿಂತಿವೆ. ಅದರಲ್ಲೂ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ 'ಡಂಕಿ' ಸಿನಿಮಾ ಕೂಡ ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗುತ್ತಿದೆ. ಹೀಗಾಗಿ ಡಿಸೆಂಬರ್‌ನಲ್ಲಿ ಶಾರುಖ್ ಖಾನ್ 'ಡಂಕಿ' ಜೊತೆ 'ಸಲಾರ್' ಬಾಕ್ಸಾಫೀಸ್‌ ಯದ್ಧಕ್ಕೆ ಇಳಿಯಲಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಸಲಾರ್ ಯಾವಾಗ ರಿಲೀಸ್

'ಸಲಾರ್' ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತೆ ಅನ್ನೋ ಸುಳಿವಷ್ಟೇ ಸಿಕ್ಕಿತ್ತು. ತರಾನ್ ಆದರ್ಶ್ ಟ್ವೀಟ್ ಪ್ರಕಾರ ಹೊಂಬಾಳೆ ಫಿಲ್ಮ್ಸ್ ತನ್ನ ವಿತರಕರಿಗೆ ಡಿಸೆಂಬರ್ 22ಕ್ಕೆ ಕ್ರಿಸ್‌ಮಸ್ ಹಬ್ಬಕ್ಕೆ ಸಿನಿಮಾ ರಿಲೀಸ್ ಎಂದು ಸಂದೇಶ ಕಳುಹಿಸಿದೆ ಎಂದಿದ್ದಾರೆ. ಈ ಮೂಲಕ ಶಾರುಖ್ ಖಾನ್ ಜೊತೆ ಎರಡನೇ ಬಾರಿ ಹೊಂಬಾಳೆ ಫಿಲ್ಮ್ಸ್ ಬಾಕ್ಸಾಫೀಸ್ ಯುದ್ದ ಇಳಿಯಲಿದೆ.

'ಯುವ' ಪೋಸ್ಟ್‌ಪೋನ್

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾ 'ಯುವ'. ಈ ಮೂಲಕ ಅಣ್ಣಾವ್ರ ಕುಡಿ ಯುವ ರಾಜ್‌ಕುಮಾರ್ ಅನ್ನು ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದೆ. ನಿರ್ದೇಶಕ ಸಂತೋಶ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಕೂಡ ಡಿಸೆಂಬರ್‌ನಲ್ಲಿಯೇ ರಿಲೀಸ್ ಆಗುತ್ತೆ ಎನ್ನಲಾಗಿತ್ತು. ಆದ್ರೀಗ 'ಯುವ' ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Prabhas, Prashanth Neel Movie Salaar releasing in December Clash with Shah Rukh Khan Dunki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X