ಆಂಧ್ರದಲ್ಲಿ 'ಸಲಾರ್' ಮುಂದಿದೆ ಬಿಗ್ ಚಾಲೆಂಜ್: RRR ರೇಂಜ್‌ನಲ್ಲಿ ಬ್ಯುಸಿನೆಸ್ ಮಾಡಿದ್ರೆ ಸೇಫ್.. ಏನಿದು ಲೆಕ್ಕಾಚಾರ?
'ಸಲಾರ್' ಮೇಲೆ ಪ್ರಭಾಸ್ ಫ್ಯಾನ್ಸ್ ನಂಬಿಕೆ ಅಂತ ಇಟ್ಟಿರೋದು. 'ಬಾಹುಬಲಿ 2' ಬಳಿಕ ಪ್ರಭಾಸ್ ಸಿನಿಮಾಗಳು ಅವರ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದೇ ಹೆಚ್ಚು. ಅದರಲ್ಲೂ ರಾಜಮೌಳಿ ಸಿನಿಮಾ ಬಳಿಕ ಪ್ರಭಾಸ್‌ಗೆ ನಿರ್ದೇಶಿಸಿದ ಸಿನಿಮಾಗಳ ನಿರ್ದೇಶಕರೆಲ್ಲರೂ ಸೋತು ಸುಣ್ಣವಾಗಿದ್ದಾರೆ.
ಪ್ರಭಾಸ್ (https://kannada.filmibeat.com/topic/prabhas) ಮತ್ತೆ 'ಬಾಹುಬಲಿ' ಇಮೇಜ್ ಕೊಡುವುದರಲ್ಲಿ ಸೋತಿದ್ದಾರೆ. ಈಗ ಅಂತಹದ್ದೇ ಮತ್ತೊಂದು ಮೆಗಾ ಸಿನಿಮಾ ಕೊಟ್ಟಿರೋ ಪ್ರಶಾಂತ್ ನೀಲ್ ಹೆಗಲ ಮೇಲೆ ಈ ಜವಾಬ್ದಾರಿ ಬಂದಿದೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ವರ್ಕ್ ಆಗುತ್ತಾ? ಬಾಕ್ಸಾಫೀಸ್‌ನಲ್ಲಿ ಮತ್ತೊಂದು ಇತಿಹಾಸವನ್ನು ಸೃಷ್ಠಿ ಮಾಡುತ್ತಾ? ಅನ್ನೋ ಕುತೂಹಲ ಟಾಲಿವುಡ್ ಮಂದಿಯ ಮುಂದಿದೆ.

ಇದೇ ಕುತೂಹಲವನ್ನು ಇಟ್ಟುಕೊಂಡು 'ಸಲಾರ್' ಮುಂದಿರೋ ಅತೀ ದೊಡ್ಡ ಸವಾಲಿನ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. 'ಸಲಾರ್' ಸಿನಿಮಾ ಆಂಧ್ರ ಏರಿಯಾದಲ್ಲಿ RRR ರೇಂಜ್‌ನಲ್ಲಿ ಕಲೆಕ್ಷನ್ ಮಾಡಬೇಕು. ಇಲ್ಲದೇ ಹೋದಲ್ಲಿ ಸಿನಿಮಾ ಕೊಂಡುಕೊಂಡವರಿಗೆ ನಷ್ಟ ಕಟ್ಟಿಟ್ಟ ಬಿತ್ತಿ ಎಂದು ಲೆಕ್ಕ ಹಾಕಿದ್ದಾರೆ. ಈ ಬಗ್ಗೆ ತೆಲುಗು ಮಾಧ್ಯಮಗಳು ವರದಿ ಮಾಡಿವೆ.
'ಸಲಾರ್' ಸಿನಿಮಾವನ್ನು ಆಂಧ್ರ ಏರಿಯಾದ ಅತೀ ದೊಡ್ಡ ಏರಿಯಾಗಳಲ್ಲಿ ಒಂದಾದ ನಿಜಾಂನಲ್ಲಿ ಮೈತ್ರಿ ಮೂವಿ ಮೇಕರ್ಸ್ ವಿತರಣೆ ಮಾಡುತ್ತಿದ್ದಾರೆ. ಟಾಲಿವುಡ್‌ನ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿರೋ ಈ ಸಂಸ್ಥೆ ನಿಜಾಂನಲ್ಲಿ ರಿಲೀಸ್ ಮಾಡುತ್ತಿರೋದು ಹೊಂಬಾಳೆ ಫಿಲ್ಮ್ಸ್‌ಗೆ ಬಿಗ್ ರಿಲೀಫ್ ಅಂತ ಹೇಳಲಾಗುತ್ತಿದೆ.

ಟಾಲಿವುಡ್ ಮಂದಿ ಲೆಕ್ಕಾಚಾರ ಏನಂದ್ರೆ, ಆಂಧ್ರ ಏರಿಯಾಗಳಲ್ಲಿ ಸೀಡೆಡ್ ಬಿಟ್ಟು 'ಸಲಾರ್' ಸಿನಿಮಾವನ್ನು 80 ರಿಂದ 85 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ. ಇಲ್ಲಿಂದ ಸುಮಾರು 150 ಕೋಟಿ ರೂಪಾಯಿ ಹಣ ಬಾಕ್ಸಾಫೀಸ್‌ನಿಂದ ಕಲೆಕ್ಷನ್ ಆದರೆ ಲಾಭ. 85 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದವರಿಗೆ ಕಮಿಷನ್ ಸಿಗಬೇಕು ಅಂದರೆ 100 ಕೋಟಿ ರೂಪಾಯಿ ಕಲೆಕ್ಷನ್ ಆಗಲೇ ಬೇಕು ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಲ್ಲು ಅರ್ಜುನ್ ನಟಿಸಿದ 'ಅಲಾ ವೈಕುಂಠಪುರಮುಲೋ' ಉತ್ತರ ಆಂಧ್ರದಲ್ಲಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ ನಿಜಾಂನಲ್ಲಿ 42 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಹಾಗೇ ಸಲಾರ್ RRR ರೇಂಜ್‌ನಲ್ಲಿ ಈ ಏರಿಯಾಗಳಲ್ಲಿ ಕಲೆಕ್ಷನ್ ಮಾಡಬೇಕು ಎಂದು ಅಲ್ಲಿನ ವಿತರಕರು ಅಭಿಪ್ರಾಯ ಪಟ್ಟಿದ್ದಾರೆ. ನಿಜಾಂ ಏರಿಯಾದಲ್ಲಿ 'ಸಲಾರ್' 70 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಬೇಕಿದೆ. ಹಾಗೇ ಉತ್ತರಾಂಧ್ರದಲ್ಲಿ 20 ಕೋಟಿ ರೂಪಾಯಿ ಗಳಿಕೆ ಕಾಣಬೇಕು ಎಂದು ಅಂದಾಜಿಸಲಾಗಿದೆ.
ಈ ಲೆಕ್ಕಾಚಾರಗಳು ಏನೇ ಇದ್ದರೂ, ಪ್ರಭಾಸ್ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಮೂರು ಸಿನಿಮಾ ಬ್ಯಾಕ್ ಟು ಬ್ಯಾಕ್ ಸೋತಿದ್ದರೂ, 'ಸಲಾರ್' ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನವಿರೋದ್ರಿಂದ ಫ್ಯಾನ್ಸ್ ನೆಮ್ಮದಿಯಿಂದ ಇದ್ದಾರೆ. ಇದೆಲ್ಲವೂ ಡಿಸೆಂಬರ್ 1 ರಂದು ರಿಲೀಸ್ ಆಗಲಿರುವ ಟ್ರೈಲರ್ ಮೇಲೆ ನಿರ್ಧಾರವಾಗಿದೆ.


Click it and Unblock the Notifications











