'ರಾಧೆಶ್ಯಾಮ್' ಟ್ರೈಲರ್ ಲಾಂಚ್‌ನಲ್ಲಿ ರಾಕಿಂಗ್ ಸ್ಟಾರ್ 'KGF 2' ಹವಾ

2022ರಲ್ಲಿ ಬಿಡುಗಡೆಯಾಗುತ್ತಿರುವ ಎರಡು ಬಹು ನಿರೀಕ್ಷಿತ ಸಿನಿಮಾಗಳೆಂದರೆ 'ರಾಧೆಶ್ಯಾಮ್' ಹಾಗೂ 'ಕೆಜಿಎಫ್ 2'. ಈ ಎರಡೂ ಸಿನಿಮಾಗಳನ್ನು ನೋಡುವುದಕ್ಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾಗಿಂತ ಮೊದಲು ಪ್ರಭಾಸ್ ನಟನೆಯ 'ರಾಧೆಶ್ಯಾಮ್' ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿಯೇ ಡಾರ್ಲಿಂಗ್ ಪ್ರಭಾಸ್ ಸಿನಿಮಾ ಬಗ್ಗೆ ಎಲ್ಲೆಡೆ ಭರ್ಜರಿಯಾಗಿ ಪ್ರಚಾರ ಆರಂಭಿಸಿದ್ದಾರೆ.

ನಿನ್ನೆ( ಡಿಸೆಂಬರ್ 23) ಹೈದರಾಬಾದ್‌ನಲ್ಲಿ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ರಾಧೆಶ್ಯಾಮ್' ಟ್ರೈಲರ್ ಲಾಂಚ್ ಇತ್ತು. ಅದ್ದೂರಿ ಟ್ರೈಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕೇಳಲು ಸಿಕ್ಕಿದೆ. ಕನ್ನಡ ಸಿನಿಮಾ 'ಕೆಜಿಎಫ್ 2' ಸೇರಿದಂತೆ ಈ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆನೂ ಪ್ರಸ್ತಾಪ ಆಗಿದೆ. ಅಷ್ಟಕ್ಕೂ ರಾಧೆಶ್ಯಾಮ್ ವೇದಿಕೆ ಮೇಲೆ 'ಕೆಜಿಎಫ್ 2' ಬಂದಿದ್ದು ಯಾಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ನವೀನ್ ಪೊಲಿಶೆಟ್ಟಿ ಕಾರ್ಯಕ್ರಮದ ನಿರೂಪಣೆ

ನವೀನ್ ಪೊಲಿಶೆಟ್ಟಿ ಕಾರ್ಯಕ್ರಮದ ನಿರೂಪಣೆ

'ರಾಧೆಶ್ಯಾಮ್' ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ದೊಡ್ಡ ವೇದಿಕೆಯಲ್ಲಿ ಡಾರ್ಲಿಂಗ್ ಪ್ರಭಾಸ್, ಪೂಜಾ ಹೆಗ್ಡೆ ಪ್ರಮುಖ ಆಕರ್ಷಣೆಯಾಗಿದ್ದರು. ಈ ವೇಳೆ ಟ್ರೈಲರ್ ಲಾಂಚ್‌ನಲ್ಲಿ ಮತ್ತೊಂದು ಆಕರ್ಷಣೆ ಅಂದರೆ, ಅದು 'ಜಾತಿ ರತ್ನಲು' ಸಿನಿಮಾದ ನಟ ನವೀನ್ ಪೊಲಿಶೆಟ್ಟಿ ನಿರೂಪಕರಾಗಿ ಎಂಟ್ರಿಕೊಟ್ಟಿದ್ದರು. ಇವರ ಮಾತಿನ ಮೋಡಿಗೆ ಡಾರ್ಲಿಂಗ್ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು. ನವೀನ್ ನಿರೂಪಣೆ ವೇಳೆ ಪ್ರಭಾಸ್‌ರಿಂದ ಕನ್ನಡ ಫ್ಯಾನ್ಸ್‌ಗೆ ಹಾಯ್ ಹೇಳಿಸಿದ್ದರು. ಈ ವೇಳೆ 'ಕೆಜಿಎಫ್ 2' ಸಿನಿಮಾ ಪ್ರಸ್ತಾಪ ಆಗಿದೆ.

ನನಗೆ ಕೆಜಿಎಫ್ ಗೊತ್ತು.. ಪ್ರಶಾಂತ್ ನೀಲ್ ಗೊತ್ತು

ಕಾರ್ಯಕ್ರಮಕ್ಕೆ ಪ್ರಭಾಸ್ ಎಂಟ್ರಿ ಕೊಡುತ್ತಿದ್ದಂತೆ ನವೀನ್ ಪೊಲಿಶೆಟ್ಟಿ ವೇದಿಕೆಯಿಂದ ಕೆಳಗಿಳಿದಿದ್ದರು. ಪ್ರಭಾಸ್ ಪಕ್ಕದಲ್ಲಿಯೇ ಕೂತು ಕನ್ನಡ ಫ್ಯಾನ್ಸ್ ಜೊತೆ ಪ್ರಭಾಸ್ ಮಾತಾಡಲು ಪೀಠಿಕೆ ಹಾಕಿದ್ದರು. "ಕನ್ನಡ ಫ್ಯಾನ್ಸ್.. ಏನ್ ಮಗಾ ಏನ್ ಮಾಡ್ತಿದ್ದೀಯಾ? ನನಗೆ ಕನ್ನಡ ಗೊತ್ತು.. ಕೆಜಿಎಫ್ ಗೊತ್ತು.. ಪ್ರಶಾಂತ್ ನೀಲ್ ಗೊತ್ತು. ಸಲಾರ್ ಗೊತ್ತು." ಕನ್ನಡ ಅಭಿಮಾನಿಗಳಿಗೆ ಒಮ್ಮೆ ಹಾಯ್ ಹೇಳಿ ಬಿಡಿ ಅಂತ ನವೀನ್ ಪೊಲಿಶೆಟ್ಟಿ ರಾಧೆ ಶ್ಯಾಮ್ ಸಮಾರಂಭದಲ್ಲಿ ಹೇಳಿದ್ದರು. 'ಕೆಜಿಎಫ್ 2' ಪ್ರಶಾಂತ್ ನೀಲ್ ಹಾಗೂ 'ಸಲಾರ್' ಸಿನಿಮಾದ ಹೆಸರು ಕೇಳಿ ಪ್ರಭಾಸ್ ಫುಲ್ ಖುಷಿಯಾಗಿದ್ದರು. ಇತ್ತ ಯಶ್ ಅಭಿಮಾನಿಗಳು ಆ ವಿಡಿಯೋ ನೋಡಿ ಹುಚ್ಚೆದ್ದು ಕುಣಿಯುತ್ತಿದ್ದಾರೆ.

'ಕೆಜಿಎಫ್' ಸಿನಿಮಾ ತೆರೆಕಂಡು 3 ವರ್ಷ

'ಕೆಜಿಎಫ್' ಸಿನಿಮಾ ತೆರೆಕಂಡು 3 ವರ್ಷ

ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಬಿಡುಗಡೆಯಾಗಿ ಮೂರು ವರ್ಷ ಆಗಿದೆ. ಹೀಗಾಗಿ ರಾಕಿ ಭಾಯ್ ಅಭಿಮಾನಿಗಳಿಗೆ ಒಂಥರಾ ಡಬಲ್ ಖುಷಿ. ಇದೇ ಡಿಸೆಂಬರ್ 21ಕ್ಕೆ ಮೂರು ವರ್ಷಗಳನ್ನು ಪೂರೈಸಿದೆ. ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಅಭಿಮಾನಿಗಳು ಸಂಭ್ರಮಿಸಿದ್ದರು. 'ಕೆಜಿಎಫ್ ಚಾಪ್ಟರ್ 1' ಪ್ಯಾನ್ ಇಂಡಿಯಾ ಸಿನಿಮಾ ಆಗಿ ಎಲ್ಲರ ಗಮನ ಸೆಳೆದಿತ್ತು.

ರಾಕಿ ಭಾಯ್ ಬರ್ತ್‌ಡೇಗೆ ಹೊಸ ಟೀಸರ್?

ರಾಕಿ ಭಾಯ್ ಬರ್ತ್‌ಡೇಗೆ ಹೊಸ ಟೀಸರ್?

2021 ಜನವರಿ 7ರಂದು 'ಕೆಜಿಎಫ್ 2' ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ರಾಕಿ ಭಾಯ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ 'ಕೆಜಿಎಫ್ 2' ಟೀಸರ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿತ್ತು. ಈ ಟೀಸರ್ ಸುಮಾರು 230 ಮಿಲಿಯನ್‌ಗೂ ಅಧಿಕ ಮಂದಿ ವೀವ್ಸ್ ಪಡೆದಿತ್ತು. ಈಗ ಮತ್ತೆ ಯಶ್ ಹುಟ್ಟುಹಬ್ಬ ಸಮೀಪಿಸುತ್ತಿರುವುದರಿಂದ ಮತ್ತೊಂದು ಟೀಸರ್ ರಿಲೀಸ್ ಮಾಡುವ ನಿರೀಕ್ಷೆಯಿದೆ. ಈ ಬಾರಿ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಯಾವ ರೀತಿ ಸರ್ಪ್ರೈಸ್ ನೀಡುತ್ತಾರೋ ಅನ್ನುವ ಕುತೂಹಲವಿದೆ.

More from Filmibeat

English summary
Prabhas Radhe Shyam Trailer launch event Naveen Poli Shetty talks about KGF 2. He also talks in kannada and about salaar director Prashanth Neel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X