ಮಕ್ಕಳು ಚಿತ್ರಮಂದಿರದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನೋಡಲು ಅವಕಾಶವಿಲ್ಲ!

ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಡಿಸೆಂಬರ್ 29ಕ್ಕೆ ತೆರೆಗಪ್ಪಳಿಸಲಿದೆ. ಚಿತ್ರಕ್ಕೆ ಫೈನಲ್ ಟಚ್ ಕೊಡುವ ಪ್ರಯತ್ನ ನಡೀತಿದೆ. ಭರ್ಜರಿ ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ಮಾಡ್ತಿದೆ ಚಿತ್ರತಂಡ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ 'ಸಲಾರ್' ಟ್ರೈಲರ್ ಸೂಪರ್ ಹಿಟ್ ಆಗಿದ್ದು ಸಹಜವಾಗಿಯೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಹೊಂಬಾಳೆ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಸಲಾರ್' ಸಿನಿಮಾ ನಿರ್ಮಾಣ ಮಾಡಿದೆ. 'KGF' ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರು ಈ ಚಿತ್ರಕ್ಕೂ ಜೊತೆಯಾಗಿದ್ದಾರೆ. ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ಮಿಂಚಿದ್ದಾರೆ. ಇನ್ನುಳಿದಂತ ಜಗಪತಿ ಬಾಬು, ದೇವರಾಜ್, ಪ್ರಮೋದ್, ಈಶ್ವರಿ ರಾವ್, ಗರುಡ ರಾಮ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ 'ಸಲಾರ್' ಖದರ್ ಹೆಚ್ಚಿಸಿದೆ.

Prabhas Salaar CeaseFire censor formalities done certified with A, Runtime 175min

ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್ 'ಸಲಾರ್' ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ 'ಉಗ್ರಂ' ರೀಮೆಕ್ ಅಥವಾ ಅಪ್‌ಡೇಟೆಡ್ ವರ್ಷನ್ ಎನ್ನುವ ಕಾರಣಕ್ಕೆ 'ಸಲಾರ್' ಬಗ್ಗೆ ಕೆಲವರಲ್ಲಿ ಗೊಂದಲವಿದೆ. ಈಗಾಗಲೇ ನೋಡಿರುವ ಕಥೆಯನ್ನು ಮತ್ತೆ ನೋಡಬೇಕಾ? ಪ್ರಶಾಂತ್ ನೀಲ್‌ಗೆ ಬೇರೆ ಕತೆ ಸಿಗಲಿಲ್ಲವಾ? ಎಂದು ಚಕಾರ ತೆಗೆದಿದ್ದಾರೆ. ಆದರೂ ಕೂಡ ನೀಲ್ ನಿರ್ದೇಶನದ ಮೇಲೆ ಭಾರೀ ನಿರೀಕ್ಷೆಯಿದೆ.

'ಸಲಾರ್‌' ಜೊತೆಗೆ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ರಿಲೀಸ್ ಆಗಲಿದೆ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಕ್ರಿಸ್‌ಮಸ್‌ ಸಂಭ್ರಮದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್‌ ಏರ್ಪಡಲಿದೆ. ಸದ್ಯ 'ಸಲಾರ್' ಸಿನಿಮಾ ಸೆನ್ಸಾರ್ ಕೆಲಸ ಮುಗಿಸಿ ರಿಲೀಸ್‌ನತ್ತ ಮುಖ ಮಾಡಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ.

ಚಿತ್ರದಲ್ಲಿ ವೈಲೆನ್ಸ್ ಹೆಚ್ಚಾಗಿರುವ ಕಾರಣಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ಕೊಟ್ಟಿದೆ ಎನ್ನುವ ಚರ್ಚೆ ನಡೀತಿದೆ. ಇದರ ಜೊತೆ ಸಿನಿಮಾ ರನ್‌ಟೈಮ್ ಕೂಡ ರಿವೀಲ್ ಆಗಿದೆ. ಕೆಲವರು ಸಿನಿಮಾ ಬಹಳ ದೊಡ್ಡದಾಯ್ತು. ಪ್ರೇಕ್ಷಕರನ್ನು ಅಷ್ಟು ಹೊತ್ತು ಹಿಡಿದಿಟ್ಟುಕೊಳ್ಳುವುದು ಸಾಧ್ಯಾನಾ? ಎನ್ನುತ್ತಿದ್ದಾರೆ. ಆದರೆ ಚಿತ್ರತಂಡ ಮಾತ್ರ ಬಹಳ ಭರವಸೆಯಿಂದ ಇದೆ.

Prabhas Salaar CeaseFire censor formalities done certified with A, Runtime 175min

ಅಂದಹಾಗೆ 'ಸಲಾರ್‌' ರನ್‌ಟೈಮ್ 2 ಗಂಟೆ 55 ನಿಮಿಷ ಎನ್ನಲಾಗುತ್ತಿದೆ. 3 ಗಂಟೆ 12 ನಿಮಿಷಗಳ 'ಅನಿಮಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ. ಹಾಗಾಗಿ 2 ಗಂಟೆ 55 ನಿಮಿಷ ದೊಡ್ಡ ವಿಚಾರ ಅಲ್ಲವೇ ಅಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕ್ರೌರ್ಯ, ಅಶ್ಲೀಲತೆ ಇರುವ ಸಿನಿಮಾಗಳನ್ನು ಮಕ್ಕಳು ನೋಡಬಾರದು ಎನ್ನುವ ಕಾರಣಕ್ಕೆ 'ಎ' ಸರ್ಟಿಫಿಕೇಟ್ ಕೊಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ಮಾತ್ರ ಥಿಯೇಟರ್‌ಗೆ ಹೋಗಿ ಇಂತಹ ಸಿನಿಮಾಗಳನ್ನು ನೋಡಲು ಅವಕಾಶ ಇರುತ್ತದೆ.

"ಡಿಸೆಂಬರ್ 22 ರಿಂದ ಚಿತ್ರಮಂದಿರಗಳಲ್ಲಿ ತೀವ್ರವಾದ ಆಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ" ಎಂದು ಚಿತ್ರತಂಡ ಕೂಡ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿರುವುದನ್ನು ಖಚಿತಪಡಿಸಿದೆ. ಇನ್ನು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಚಿತ್ರದಲ್ಲಿ ಹಾಡುಗಳು ಇದ್ಯಾ? ಇಲ್ವಾ? ಎಂದು ಕೇಳುತ್ತಿದ್ದಾರೆ.

ಈಗಾಗಲೇ ರಿಲೀಸ್ ಆಗಿರುವ ಸಲಾರ್ ಟ್ರೈಲರ್ ಅಷ್ಟಾಗಿ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಅದರಲ್ಲಿ ಪ್ರಭಾಸ್ ಸನ್ನಿವೇಶಗಳು ಕಮ್ಮಿ ಇತ್ತು. ಇದೇ ಕಾರಣಕ್ಕೆ ಚಿತ್ರತಂಡ ಮತ್ತೊಂದು ಟ್ರೈಲರ್ ರಿಲೀಸ್ ಪ್ಲ್ಯಾನ್ ಮಾಡುತ್ತಿದೆ. ಡಿಸೆಂಬರ್ 16ಕ್ಕೆ ಮತ್ತೊಂದು ಆಕ್ಷನ್ ಪ್ಯಾಕ್ಡ್ ಸ್ಯಾಂಪಲ್ ಹೊರಬರುವ ನಿರೀಕ್ಷೆಯಿದೆ. ಇನ್ನು ಡಿಸೆಂಬರ್ 15ರಿಂದಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಲಿದೆ.

More from Filmibeat

English summary
Salaar CeaseFire censor Completed With 'A' Certificate;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X