"ಸ್ವೀಟಿ.. ನಿನ್ನ ಪವರ್‌ಫುಲ್‌ ಪಾತ್ರವನ್ನು ನೋಡಲು ಕಾಯುತ್ತಿದ್ದೇನೆ" ಅನುಷ್ಕಾ ಶೆಟ್ಟಿಗೆ ಡಾರ್ಲಿಂಗ್ ಪ್ರಭಾಸ್ ಸಂದೇಶ

ಅನುಷ್ಕಾ ಶೆಟ್ಟಿ ಬಹಳ ದಿನಗಳ ಬಳಿಕ ನಟಿಸಿರುವ 'ಘಾಟಿ' ಸಿನಿಮಾ ಬಿಡುಗಡೆಯಾಗುತ್ತಿದೆ. ಇದರ ಟೀಸರ್ ಹಾಗೂ ಟ್ರೈಲರ್‌ಗಳನ್ನು ನೋಡಿದ ಬಳಿಕ ಮತ್ತೆ ಹಳೆಯ ಅನುಷ್ಕಾ ಶೆಟ್ಟಿಯನ್ನು ನೋಡಿದಂತೆ ಅನುಭವ ಅಭಿಮಾನಿಗಳಿಗೆ ಆಗುತ್ತಿದೆ. ಈ ಕಾರಣಕ್ಕೆ ನಾಳೆ (ಸೆಪ್ಟೆಂಬರ್ 5) ರಿಲೀಸ್ ಆಗುತ್ತಿರುವ 'ಘಾಟಿ' ಸಿನಿಮಾ ತೆಲುಗು ಮಂದಿಯಲ್ಲಿ ಕುತೂಹಲವನ್ನು ಸೃಷ್ಟಿಸಿದೆ.

ಕನ್ನಡದ ಕರಾವಳಿಯ ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಸ್ಟಾರ್ ನಟಿ. ಟಾಲಿವುಡ್‌ನಲ್ಲಿ ಮೆಗಾ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ. ಹೀಗಾಗಿ ಇವರನ್ನು ಸೂಪರ್‌ಸ್ಟಾರ್‌ಗಳ ರೇಂಜ್‌ಗೆ ಹೋಲಿಕೆ ಮಾಡುತ್ತಾರೆ. ಹಾಗೇ ದಕ್ಷಿಣ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಅನುಷ್ಕಾ ಶೆಟ್ಟಿ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ಹೀಗಾಗಿ ತೆಲುಗಿನ 'ಘಾಟಿ' ಸಿನಿಮಾವನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

Prabhas Says He is Waiting to See Anushka Shetty s Powerful Character in Ghaati

'ಘಾಟಿ' ಸಿನಿಮಾ ಟ್ರೈಲರ್‌ ಮೂಲಕವೇ ಅನುಷ್ಕಾ ಅಭಿಮಾನಿಗಳನ್ನು ಹಾಗೂ ಸಿನಿಪ್ರೇಮಿಗಳನ್ನು ಬೆಚ್ಚಿಬೀಳಿಸಿದೆ. ಈ ಸಿನಿಮಾ ರಿಲೀಸ್‌ಗೆ ಇನ್ನೇನು ಕೇವಲ ಒಂದೇ ದಿನ ಬಾಕಿ ಇದೆ. ಸೆಪ್ಟೆಂಬರ್‌ 5ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರುತ್ತಿದೆ. ಇದೀಗ ದೇಶಾದ್ಯಂತ ಸದ್ದು ಮಾಡುವುದಕ್ಕೆ ಸಜ್ಜಾಗಿರುವ ಈ ಸಿನಿಮಾಗೆ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಶುಭ ಹಾರೈಸಿದ್ದಾರೆ.

ಹೌದು ಅನುಷ್ಕಾ ಶೆಟ್ಟಿಯ ಬೆಸ್ಟ್ ಫ್ರೆಂಡ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ 'ಘಾಟಿ' ಸಿನಿಮಾಗೆ ಶುಭ ಹಾರೈಸಿದ್ದಾರೆ. ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡಿದ್ದಾರೆ. ಇದೊಂದು ಕ್ರೈಂ-ಥ್ರಿಲ್ಲರ್‌ ಡ್ರಾಮಾ ಶೈಲಿಯ ಸಿನಿಮಾ ಆಗಿದ್ದು, ಅನುಷ್ಕಾ ಶೆಟ್ಟಿ ಈ ಸಿನಿಮಾದ ಹೈಲೈಟ್. ಸಿನಿಮಾ ಬಿಡುಗಡೆಗೂ ಮುನ್ನವೇ ಟ್ರೈಲರ್‌ ವೀಕ್ಷಿಸಿದ ನಟ ಪ್ರಭಾಸ್‌ ತಮ್ಮ 'ಬಾಹುಬಲಿ' ಸಿನಿಮಾ ಕೋಸ್ಟಾರ್‌ಗೆ ಶುಭಹಾರೈಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಭಾಸ್ ಸ್ವೀಟಿಯ 'ಘಾಟಿ' ಸಿನಿಮಾಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

"ಘಾಟಿ ಸಿನಿಮಾದ ರಿಲೀಸ್‌ ಟ್ರೈಲರ್ ತೀವ್ರ ಕುತೂಹಲ ಕೆರಳಿಸುವಂತಿದೆ.. ಸ್ವೀಟಿ, ನಿನ್ನ ಪವರ್‌ಫುಲ್‌ ಪಾತ್ರವನ್ನು ನೋಡಲು ಕಾಯುತ್ತಿದ್ದೇನೆ. ಇಡೀ ಘಾಟಿ ತಂಡಕ್ಕೆ ಶುಭಾಶಯಗಳು" ಎಂದು ಪ್ರಭಾಸ್‌ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪೋಸ್ಟ್ ಅನ್ನು‌ ಶೇರ್‌ ಮಾಡಿದ್ದಾರೆ. ಈ ಒಂದು ಪೋಸ್ಟ್ ಅನುಷ್ಕಾ ಶೆಟ್ಟಿ ಸಿನಿಮಾಗೆ ದೊಡ್ಡ ಬಲ ಬಂದಂತಾಗಿದೆ.

Prabhas Says He is Waiting to See Anushka Shetty s Powerful Character in Ghaati

ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಬಹುಮುಖ ಪ್ರತಿಭೆಗಳೇ ಸೇರಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಜೊತೆ ವಿಕ್ರಮ್ ಪ್ರಭು, ಚೈತನ್ಯ ರಾವ್ ಮದಡಿ ಹಾಗೂ ಹಿರಿಯ ನಟ ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಘಾಟಿ' ಸಿನಿಮಾವನ್ನ ರಾಜೀವ್ ರೆಡ್ಡಿ ಯೇದುಗುರು ಮತ್ತು ಸಾಯಿ ಬಾಬು ಜಗರ್ಲಮುಡಿ ಅವರ ಫಸ್ಟ್ ಫ್ರೇಮ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಪ್ರಭಾಸ್, ಪ್ರಮೊದ್ ಉಪ್ಪಲಪಾಟಿ ಮತ್ತು ವಿ. ವಂಶಿಕೃಷ್ಣ ರೆಡ್ಡಿ ಅವರ ಯುವಿ ಕ್ರಿಯೇಷನ್ಸ್ ಸಂಸ್ಥೆ ಈ ಸಿನಿಮಾವನ್ನು ಪ್ರಸೆಂಟ್‌ ಮಾಡುತ್ತಿದೆ.

ಕೊನೆಯ ಹಂತದಲ್ಲಿ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಈ ಸಿನಿಮಾಕ್ಕೆ ಕೈ ಜೋಡಿಸಿದ್ದು, ತಂಡಕ್ಕೆ ಬಲ ಬಂದಂತಾಗಿದೆ. ಹೀಗಾಗಿ ನಿರೀಕ್ಷೆಗಳು ಕೂಡ ದುಪ್ಪಟ್ಟಾಗಿವೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅನುಷ್ಕಾ ಶೆಟ್ಟಿ ತಮ್ಮ ವೃತ್ ತಿಜೀವನದ ಅತ್ಯಂತ ಪವರ್‌ಫುಲ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Prabhas shared a heartfelt message for Anushka Shetty, saying he is eagerly waiting to watch her powerful character in the upcoming film Ghaati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X