'ಅನ್‌ಸ್ಟಾಪಬಲ್' ಬಾಲಕೃಷ್ಣ ಮುಂದೆ 'ಸಲ್ಮಾನ್ ಖಾನ್ ಮದುವೆ ಬಳಿಕ ನನ್ನ ಮದುವೆ' ಎಂದು ಪ್ರಭಾಸ್!
ಕೆಲವು ಸೂಪರ್‌ಸ್ಟಾರ್‌ಗಳು ಮದುವೆ ಯಾವಾಗ ಆಗ್ತಾರೆ ಅನ್ನೋದು ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿರಬಹುದು. ಅದರಲ್ಲೂ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಹಾಗೂ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಮದುವೆ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.
ಡಾರ್ಲಿಂಗ್ ಪ್ರಭಾಸ್ ವಯಸ್ಸು 40 ದಾಟಿದೆ. ಇನ್ನಾದರೂ ಮದುವೆ ಆಗಬಹುದು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಪ್ರಭಾಸ್ ಮಾತ್ರ ವಿವಾಹದ ಬಗ್ಗೆ ಸುಳಿವನ್ನೇ ನೀಡುತ್ತಿಲ್ಲ.
ಲೆಜೆಂಡ್ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋ ಅನ್‌ಸ್ಟಾಪಬಲ್‌ನಲ್ಲಾದ್ರೂ ಮದುವೆ ಬಗ್ಗೆ ಸುಳಿವು ಬಿಟ್ಟುಕೊಡಬಹುದು ಅನ್ನೋ ನಿರೀಕ್ಷೆಯಿತ್ತು. ಆದರೆ, ಅಲ್ಲೂ ಡಾರ್ಲಿಂಗ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಪ್ರಭಾಸ್ ಪ್ರೋಮೊ ವೈರಲ್
ಬಾಲಕೃಷ್ಣ ಟಾಕ್ ಶೋ 'ಅನ್‌ಸ್ಟಾಪಬಲ್'ಗೆ ಡಾರ್ಲಿಂಗ್ ಪ್ರಭಾಸ್ ಬರಬಹುದು ಎಂದು ಫ್ಯಾನ್ಸ್ ನಿರೀಕ್ಷೆ ಮಾಡಿದ್ದರು. ಅದರಂತೆ ಸೀಸನ್ 2ಗೆ ಪ್ರಭಾಸ್ ಅತಿಥಿಯಾಗಿ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಭಾಸ್ ಪ್ರೋಮೊವನ್ನು ರಿಲೀಸ್ ಮಾಡಿದ್ದರು. ಆ ಪ್ರೋಮೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಮಾರು 1 ಕೋಟಿಗೂ ಅಧಿಕ ಮಂದಿ ಈ ಪ್ರೋಮೊ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಪ್ರೋಮೊದಲ್ಲಿರುವ ಹಲವು ಇಂಟ್ರೆಸ್ಟಿಂಗ್ ವಿಷಯಗಳಿದ್ದು, ಅದರಲ್ಲಿ ಮದುವೆ ಬಗ್ಗೆ ನೀಡಿದ ಪ್ರತಿಕ್ರಿಯೆ ವೈರಲ್ ಆಗುತ್ತಿದೆ.

ಸಲ್ಮಾನ್ ಖಾನ್ ವಿವಾಹದ ಬಳಿಕ ಮದುವೆ
ಬಾಲಕೃಷ್ಣ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗೆ ಮದುವೆ ಬಗ್ಗೆ ಪ್ರಶ್ನೆ ಹಾಕಿದ್ದರು. " ಈ ಶೋ ಶರ್ವಾನಂದ್ ಬಂದಾಗ ಹೇಳಿದ್ರು. ಪ್ರಭಾಸ್ ಮದುವೆ ಆದ ಬಳಿಕವೇ ಅವರು ಮದುವೆ ಆಗ್ತಾರಂತೆ. ನೀವು ಯಾವಾಗ? ಎಂದು ಬಾಲಕೃಷ್ಣ ಕೇಳಿದ್ದರು. ಆ ಪ್ರಶ್ನೆಗೆ ಪ್ರಭಾಸ್ ಕೊಟ್ಟ ಉತ್ತರ ಎಲ್ಲರ ನಗುವಿಗೆ ಕಾರಣವಾಗಿದೆ. "ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನನ್ನ ಮದುವೆ " ಎಂದು ಹೇಳಿದ್ದಾರೆ. ಈ ಮಾತು ಅಭಿಮಾನಿಗಳಲ್ಲಿ ನಗು ಮೂಡಿಸಿತ್ತು.

ಕೃತಿ ಸೆನನ್ - ಪ್ರಭಾಸ್ ಮ್ಯಾಟರ್ ಏನಾಯ್ತು?
ಬಾಲಿವುಡ್ ನಟಿ ಕೃತಿ ಸೆನನ್ ಹಾಗೂ ಪ್ರಭಾಸ್ 'ಆದಿಪುರುಷ್' ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ವೇಳೆ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಒಂದಿಷ್ಟು ಸುದ್ದಿಗಳು ಹರಿದಾಡಿದ ಬಳಿಕ ಕೃತಿ ಸೆನನ್ ಸ್ಪಷನೆ ನೀಡಿದ್ದು, ಈಗ ಹರಿದಾಡುತ್ತಿರುವ ಎಲ್ಲಾ ವದಂತಿಗಳು ಆಧಾರ ರಹಿತವಾಗಿವೆ. ವರುಣ್ ಧವನ್ ತಮಾಷೆಯಾಗಿ ಆಡಿದ ಮಾತಿನಿಂದ ಇಷ್ಟೆಲ್ಲಾ ಸುದ್ದಿಗಳಿಗೆ ಕಾರಣವಾಗಿದೆ ಎಂದು" ಕೃತಿ ಸೆನನ್ ಊಹಾ-ಪೋಹಗಳಿಗೆ ಸದ್ಯಕ್ಕೆ ತೆರೆಎಳೆದಿದ್ದಾರೆ.

ಪ್ರಭಾಸ್ ಶೋ ಪ್ರಸಾರ ಯಾವಾಗ?
ಪ್ರಭಾಸ್ ಹಾಗೂ ಗೆಳೆಯ ಗೋಪಿಚಂದ್ ಒಟ್ಟಿಗೆ ಬಾಲಯ್ಯನ ಅನ್‌ಸ್ಟಾಪಬಲ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರೋಮೊ ವೈರಲ್ ಆಗಿದ್ದು, ಆಹಾ ಓಟಿಟಿಯಲ್ಲಿ ಡಿಸೆಂಬರ್ 30ರಂದು ಈ ಶೋ ಪ್ರಸಾರ ಆಗಲಿದೆ. ಆದರೆ, ಅದಕ್ಕಿಂತ ಮುನ್ನ ಪ್ರೋಮೊ ರಿಲೀಸ್ ಮಾಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತೆಲುಗು ಸಿನಿಮಾ ಪ್ರೇಮಿಗಳು ಈ ಟಾಕ್ ಶೋ ನೋಡುವುದಕ್ಕೆ ಕಾದು ಕೂತಿದ್ದಾರೆ.


Click it and Unblock the Notifications











