For Quick Alerts
  ALLOW NOTIFICATIONS  
  For Daily Alerts

  ನಾಚಿಕೆ ಬಿಟ್ಟು 'ಗೇಮ್ ಆಫ್ ಥ್ರೋನ್ಸ್' ಅನ್ನೇ ಕಾಪಿ ಮಾಡಿದ್ದಾರೆ: 'ಆದಿಪುರುಷ್' ವಿರುದ್ಧ ಆಕ್ರೋಶ!

  |

  'ಆದಿಪುರುಷ್' ಸಿನಿಮಾ ಭಾರತದ ಪೌರಾಣಿಕ ಸಿನಿಮಾ. 'ರಾಮಾಯಣ'ವನ್ನೇ ಆಧಾರವಾಗಿಟ್ಟುಕೊಂಡು ನಿರ್ಮಿಸಿರೋ ಈ ಸಿನಿಮಾ ಬಗ್ಗೆ ನಿರೀಕ್ಷೆ ಏನು ಕಮ್ಮಿಯಿಲ್ಲ. ಓಂ ರಾವತ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಶೂಟ್ ಆಗುತ್ತಿದೆ.

  ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ 'ಆದಿಪುರುಷ್' ಸಿನಿಮಾ ಮೂಲಕ ಪೌರಾಣಿಕ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿ 12ಕ್ಕೆ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

  ಹುರಿ ಮೀಸೆ ರಾಮ.. ತಳಬುಡ ಇಲ್ಲದ ಗ್ರಾಫಿಕ್ಸ್.. ರಾಮಾಯಣಕ್ಕೆ ವೆಸ್ಟರ್ನ್ ಟಚ್.. 'ಆದಿಪುರುಷ್' ಟೀಸರ್ ಟ್ರೋಲ್!ಹುರಿ ಮೀಸೆ ರಾಮ.. ತಳಬುಡ ಇಲ್ಲದ ಗ್ರಾಫಿಕ್ಸ್.. ರಾಮಾಯಣಕ್ಕೆ ವೆಸ್ಟರ್ನ್ ಟಚ್.. 'ಆದಿಪುರುಷ್' ಟೀಸರ್ ಟ್ರೋಲ್!

  'ಆದಿಪುರುಷ್' ಸಿನಿಮಾ 3ಡಿಯಲ್ಲಿ ಬಿಡುಗಡೆಯಾಗುತ್ತಿದ್ದು, ಸಜಹವಾಗಿಯೇ ನಿರೀಕ್ಷೆ ಹುಟ್ಟಿಸಿದೆ. ಆದರೆ, ಇಲ್ಲಿವರೆಗೂ ಸಿನಿಮಾ ಬಗ್ಗೆ ಚಿಕ್ಕದೊಂದು ರಹಸ್ಯವನ್ನೂ ಬಿಟ್ಟು ಕೊಡದ ಚಿತ್ರತಂಡ ನವರಾತ್ರಿ ಹಬ್ಬಕ್ಕೆಂದು ಟೀಸರ್ ರಿಲೀಸ್ ಮಾಡಿತ್ತು. 'ಆದಿಪುರುಷ್' ಟೀಸರ್‌ ರಿಲೀಸ್ ಆದಲ್ಲಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದೆ. ಒಬ್ಬರು ಒಂದೊಂದು ಹುಳುಕು ತೆಗೆಯಲು ಆರಂಭಿಸಿದ್ದಾರೆ.

  'ಆದಿಪುರುಷ್', 'ಗೇಮ್ ಆಫ್ ಥ್ರೋನ್ಸ್' ಕಾಪಿ

  'ಆದಿಪುರುಷ್', 'ಗೇಮ್ ಆಫ್ ಥ್ರೋನ್ಸ್' ಕಾಪಿ

  ಪ್ರಭಾಸ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆದಿಪುರುಷ್'. ಬಹಳ ದಿನಗಳ ಬಳಿಕ ಪ್ರೇಕ್ಷಕರಿಗೆ ಐತಿಹಾಸಿಕ ಸಿನಿಮಾ ನೋಡುವುದಕ್ಕೆ ಸಿಗುತ್ತಿದೆ. ಇನ್ನೇನು ಮೂರು ತಿಂಗಳಲ್ಲಿ ಸಿನಿಮಾ ಥಿಯೇಟರ್‌ಗೆ ಬರುತ್ತೆ ಅಂತ ಕಾತುರದಿಂದ ಕಾದು ಕೂತಿದ್ದವರಿಗೆ ಮೊದಲ ಟೀಸರ್ ನಿರಾಸೆ ಮಾಡಿದೆ. ಸಿನಿಮಾ ಗ್ರಾಫಿಕ್ಸ್ ನೋಡಿ ನೆಟ್ಟಿಗೆ ಮುಸಿಮುಸಿ ನಗುತ್ತಿದ್ದಾರೆ. ಅಲ್ಲದೆ ಇದು ಹಾಲಿವುಡ್‌ನ 'ಗೇಮ್ ಆಫ್ ಥ್ರೋನ್ಸ್' ಸಿನಿಮಾದ ಕೆಲವು ದೃಶ್ಯಗಳನ್ನು ಕಾಪಿ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

  ನ್ಯಾಯ ಮಾರ್ಗದಲ್ಲಿ ಅನ್ಯಾಯದ ಸರ್ವನಾಶಕ್ಕೆ ಬಂದ 'ಆದಿಪುರುಷ್': ಟೀಸರ್ ಸೂಪರ್ ಹಿಟ್.. ಆದರೆ?ನ್ಯಾಯ ಮಾರ್ಗದಲ್ಲಿ ಅನ್ಯಾಯದ ಸರ್ವನಾಶಕ್ಕೆ ಬಂದ 'ಆದಿಪುರುಷ್': ಟೀಸರ್ ಸೂಪರ್ ಹಿಟ್.. ಆದರೆ?

  'ನಾಚಿಕೆ ಬಿಟ್ಟು ಕಾಪಿ ಮಾಡಿದ್ದೀರ'

  'ನಾಚಿಕೆ ಬಿಟ್ಟು ಕಾಪಿ ಮಾಡಿದ್ದೀರ'

  'ಆದಿಪುರುಷ್' ಟೀಸರ್ ಕಳೆದೆರಡು ದಿನಗಳಿಂದ ನೆಟ್ಟಿಗರ ಕಣ್ಣಿಗೆ ಆಹಾರವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಇಲ್ಲೊಬ್ಬರು ಇದು ಹಾಲಿವುಡ್ ಸಿನಿಮಾ 'ಗೇಮ್ ಆಫ್ ಥ್ರೋನ್' ಸಿನಿಮಾದ ಕಾಪಿ ಎಂದು ಸಾಕ್ಷಿಯನ್ನು ಮುಂದಿಟ್ಟು ಟೀಕೆ ಮಾಡಿದ್ದಾರೆ. 'ಗೇಮ್ ಆಫ್ ಥ್ರೋನ್‌'ನ ಕೆಲವು ದೃಶ್ಯಗಳಿಗೂ ಹಾಗೂ 'ಆದಿಪುರುಷ್‌' ಟೀಸರ್‌ಗೂ ಸಾಮ್ಯತೆ ಇದೆ. "ನಾಚಿಕೆ ಬಿಟ್ಟು 'ಗೇಮ್ ಆಫ್ ಥ್ರೋನ್' ಸಿನಿಮಾವನ್ನು ಕಾಪಿ ಮಾಡಿದ್ದಾರೆ" ಎಂದು ಟ್ರೋಲ್ ಮಾಡಿದ್ದಾರೆ.

  ಕಾರ್ಟೂನ್ ನೆಟ್‌ವರ್ಕ್‌ಗೆ ಸ್ಯಾಟಲೈಟ್ ರೈಟ್ಸ್

  ಕಾರ್ಟೂನ್ ನೆಟ್‌ವರ್ಕ್‌ಗೆ ಸ್ಯಾಟಲೈಟ್ ರೈಟ್ಸ್

  'ಆದಿಪುರುಷ್' ಟೀಸರ್ ನೋಡಿ ಕಮೆಂಟ್ ಮಾಡೋರಿಗೇನು ಕಮ್ಮಿಯಿಲ್ಲ. 1994ರಲ್ಲಿ ಬಂದ ಜಪಾನ್ ಸಿನಿಮಾಗಳಿಗಿಂತ 'ಆದಿಪುರುಷ್' ಗ್ರಾಫಿಕ್ಸ್ ಕೆಟ್ಟದಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಮತ್ತೊಬ್ಬರು ಈ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಕಾರ್ಟೂನ್ ನೆಟ್‌ವರ್ಕ್‌ಗೆ ಸೇಲ್ ಮಾಡಿದ್ದಾರೆಂದು ಚಿತ್ರತಂಡದ ಕಾಲೆಳೆದಿದ್ದಾರೆ. ಒಟ್ಟಾರೆ, ಈ 'ಆದಿಪುರುಷ್' ಟೀಸರ್ ಪ್ರೇಕ್ಷಕರನ್ನು ತುಂಬಾನೇ ನಿರಾಸೆ ಮಾಡಿದೆ.

  '700 ಕೋಟಿಯ ಟೆಂಪಲ್ ರನ್ ಗೇಮ್': ದೊಡ್ಡ ಮಟ್ಟದಲ್ಲಿ ಟ್ರೋಲ್ ಆದ ಆದಿಪುರುಷ್ ಟೀಸರ್!'700 ಕೋಟಿಯ ಟೆಂಪಲ್ ರನ್ ಗೇಮ್': ದೊಡ್ಡ ಮಟ್ಟದಲ್ಲಿ ಟ್ರೋಲ್ ಆದ ಆದಿಪುರುಷ್ ಟೀಸರ್!

   'ಆದಿಪುರುಷ್' ಟ್ರೈಲರ್ ಮೇಲೆ ನಿರೀಕ್ಷೆ

  'ಆದಿಪುರುಷ್' ಟ್ರೈಲರ್ ಮೇಲೆ ನಿರೀಕ್ಷೆ

  ನಿರ್ದೇಶಕ ಓಂ ರಾವತ್ 'ಆದಿಪುರುಷ್' ಟೀಸರ್ ಅನ್ನು ಒತ್ತಡದಲ್ಲಿ ಸಿನಿಮಾ ಬಿಡುಗಡೆ ಮಾಡಿದ್ರಾ? ಅನ್ನೋ ಅನುಮಾನ ಎಲ್ಲರನ್ನೂ ಕಾಡಿದಂತೂ ನಿಜ. ಇನ್ನುಕೆಲವರು ಟ್ರೈಲರ್‌ಗಾಗಿ ಎದುರು ನೋಡುತ್ತಿದ್ದಾರೆ. ಟ್ರೈಲರ್‌ನಲ್ಲಿ ಇನ್ನೂ ಅದ್ಭುತವಾದ ಗ್ರಾಫಿಕ್ಸ್ ಇರುತ್ತೆ ಅಂತ ಸಮಧಾನ ಪಟ್ಟುಕೊಂಡಿದ್ದಾರೆ. ಇನ್ನು ಟ್ರೈಲರ್ ಅದ್ಭುತವಾಗಿದ್ದರೆ, ಪ್ರಭಾಸ್ ಸಿನಿಮಾ ಗೆದ್ದಂತೆ. ಅದೇ ಟೈಟರ್ ಸೋತರೆ, ಸಿನಿಮಾ ಸೋತಂತೆ.

  English summary
  Prabhas Starrer Adipurush Copied Game Of Thrones Shamelessly Trolled Netizens, Know More.
  Monday, October 3, 2022, 15:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X