Prabhas Vs Bollywood Stars:'ಆದಿಪುರುಷ್' ಸೋತರೆ ಏನಂತೆ? ಪ್ರಭಾಸ್ ಹಿಂದಿಕ್ಕಲು ಬಾಲಿವುಡ್ ಸ್ಟಾರ್‌ಗಳ ಪರದಾಟ!

ಬಾಹುಬಲಿ ಬಳಿಕ ಪ್ರಭಾಸ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಮಾಡಿಲ್ಲ ನಿಜ. 'ಸಾಹೋ', 'ರಾಧೆ ಶ್ಯಾಮ್' ಈಗ 'ಆದಿಪುರುಷ್' ಸಿನಿಮಾಗಳು ಸೋತಿವೆ ಅನ್ನೋದೂ ನಿಜ. ಆದರೂ, ಬಾಲಿವುಡ್‌ ಸ್ಟಾರ್‌ಗಳಿಗಿಂತ ಪ್ರಭಾಸ್ ದೊಡ್ಡ ಸ್ಟಾರ್ ಅನ್ನೋ ಚರ್ಚೆ ಶುರುವಾಗಿದೆ.

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳ ಮುಂದೆ ದಕ್ಷಿಣ ಭಾರತದ ಸಿನಿಮಾಗಳು ತಣ್ಣಗಾಗುತ್ತಿದ್ದವು. ಬಾಲಿವುಡ್ ತಾರೆಯರ ಮುಂದೆ ಸೌತ್ ಸಿನಿಮಾ ಸ್ಪರ್ಧೆ ಮಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಇಂತಹ ಸ್ಥಿತಿ ಈಗ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಬದಲಾಗಿದೆ.

Prabhas-Bollywood Stars

'ಬಾಹುಬಲಿ', 'ಕೆಜಿಎಫ್2','RRR' 'ಕಾಂತಾರ'ದಂತಹ ಸಿನಿಮಾಗಳು ಹೊಸ ಇತಿಹಾಸ ಬರೆದಿದ್ದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ, 'ಬಾಹುಬಲಿ' ಬಳಿಕ ಪ್ರಭಾಸ್ ಸಿನಿಮಾ ಗೆಲ್ಲುತ್ತಿಲ್ಲ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಫ್ಟರ್ ಎಫೆಕ್ಟ್ ಎನ್ನಬಹುದು. ಇಷ್ಟೆಲ್ಲ ಆಗಿದ್ದರೂ, ಪ್ರಭಾಸ್ ಬಾಲಿವುಡ್ ಸ್ಟಾರ್‌ಗಳಿಗಿಂತ ದೊಡ್ಡ ಸ್ಟಾರ್ ಅಂತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್.

ಪ್ರಭಾಸ್‌ಗೆ ಬ್ಯಾಕ್ ಟು ಬ್ಯಾಕ್ ಸೋಲು

ಡಾರ್ಲಿಂಗ್ ಪ್ರಭಾಸ್‌ ಸಿನಿಮಾಗಳ ಆಯ್ಕೆಯಲ್ಲಿ ಸೋಲುತ್ತಿದ್ದಾರಾ? ಇಲ್ಲ ಎಂತಹ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕು ಅಂತಾ ಗೊತ್ತಾಗುತ್ತಿಲ್ವಾ? ಅವರ ಅಭಿಮಾನಿಗಳು ಇದೇ ಗೊಂದಲದಲ್ಲಿದ್ದಾರೆ. 'ಸಾಹೋ','ರಾಧೆ ಶ್ಯಾಮ್','ಆದಿಪುರುಷ್' ಸೋಲಿನ ಬಗ್ಗೆ ಚಿಂತೆಗೀಡಾಗಿದ್ದರು. ಆದ್ರೀಗ ಈ ಎಲ್ಲಾ ಸಿನಿಮಾಗಳು ಸೋತರೂ ಅವರ ಫ್ಯಾನ್ಸ್‌ಗೊಂದು ಖುಷಿ ವಿಷಯವಿದೆ.

Prabhas-Bollywood Stars

'ಸಾಹೋ', 'ರಾಧೆ ಶ್ಯಾಮ್' ಹಾಗೂ 'ಆದಿಪುರುಷ್' ಈ ಎಲ್ಲಾ ಸಿನಿಮಾಗಳು ಸೋತಿದ್ದೇನೋ ನಿಜ. ಆದರೆ, ಪ್ರಭಾಸ್ ಇಮೇಜ್‌ನಿಂದಲೇ ಪ್ರತಿ ಸಿನಿಮಾವೂ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಹೀಗಾಗಿಯೇ ಬಾಲಿವುಡ್ ತಾರೆಯರಿಗಿಂತಲೂ ಪ್ರಭಾಸ್ ಬಿಗ್ ಸ್ಟಾರ್ ಅನ್ನೋ ಚರ್ಚೆ ಶುರುವಾಗಿದೆ.

ಬಾಲಿವುಡ್ ತಾರೆಯರಿಗಿಂತ ಪ್ರಭಾಸ್ ಮೇಲು

ಶಾರುಖ್ ಖಾನ್ ಬಿಟ್ಟರೆ, ಬಾಲಿವುಡ್ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. ಯುವ ನಟರ ಪರಿಸ್ಥಿತಿಯೇನು ಕಮ್ಮಿಯಿಲ್ಲ. ವರುಣ್ ಧವನ್, ವಿಕ್ಕಿ ಕೌಶಲ್, ಕಾರ್ತಿಕ್ ಆರ್ಯನ್, ಆಯುಶ್ಮಾನ್ ಖುರಾನ ಅಂತವರ ಸಿನಿಮಾಗಳು 100 ರಿಂದ 150 ಕಲೆಕ್ಷನ್ ಮಾಡುವುದಕ್ಕೆ ಒದ್ದಾಡುತ್ತಿವೆ.

ಹೀಗಿರುವಾಗ ಪ್ರಭಾಸ್ ಸಿನಿಮಾ ಕೇವಲ ಹಿಂದಿ ಬೆಲ್ಟ್‌ಗಳಲ್ಲೇ 100 ರಿಂದ 150 ಕೋಟಿ ರೂ. ಕಲೆಕ್ಷನ್ ಮಾಡುತ್ತಿವೆ. ಒಂದ್ವೇಳೆ ಮತ್ತೆ 'ಬಾಹುಬಲಿ'ಯಂತಹ ಸಿನಿಮಾ ಸಿಕ್ಕರೆ, ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ದಾಖಲೆಗಳೇ ಸೃಷ್ಟಿಯಾಗುತ್ತವೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ. ಹೀಗಾಗಿ ಪ್ರಭಾಸ್ ಸ್ಟಾರ್‌ಡಮ್ ಬಾಲಿವುಡ್ ನಟರಿಗಿಂತಲೂ ದೊಡ್ಡದು ಎಂದು ಹೇಳುತ್ತಿದ್ದಾರೆ.

ನಿರ್ಮಾಪಕರಿಗೆ ನಷ್ಟದ ಪ್ರಮಾಣ ಕಡಿಮೆ

'ಸಾಹೋ', 'ರಾಧೆ ಶ್ಯಾಮ್', 'ಆದಿಪುರುಷ್' ಸೋತಿದ್ದರೂ, ನಿರ್ಮಾಪಕರನ್ನು ದೊಡ್ಡ ನಷ್ಟದಿಂದ ಬಚಾವ್ ಮಾಡಿದ್ದು ಪ್ರಭಾಸ್ ಇಮೇಜ್. ಆದಿಪುರುಷ್ ವಿಶ್ವದಾದ್ಯಂತ 370 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲೇ 150 ಕೋಟಿ ರೂ. ಅಧಿಕ ಗಳಿಕೆ ಕಂಡಿದೆ. ಹೀಗಾಗಿ ಪ್ರಭಾಸ್ ಸೋತ ಸಿನಿಮಾಗಳು ಬಾಲಿವುಡ್‌ ಸ್ಟಾರ್‌ ಸಿನಿಮಾಗಳ ಲೈಫ್ ಟೈಮ್‌ ಕಲೆಕ್ಷನ್‌ಗೆ ಸಮ ಎಂದು ಲೆಕ್ಕ ಕೊಡುತ್ತಿದ್ದಾರೆ.

'ಆದಿಪುರುಷ್' ಸೋಲನ್ನು ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಮರೆಸುತ್ತಾ ಅನ್ನೋದನ್ನು ಎದುರು ನೋಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ 'ಸಲಾರ್' ಟೀಸರ್ ರಿಲೀಸ್ ಆಗಲಿದ್ದು, ಎಲ್ಲರ ಕಣ್ಣು ಸಲಾರ್ ಸಿನಿಮಾದ ಮೇಲಿದೆ.

More from Filmibeat

English summary
Even after Adipurush's loss at the box office, Prabhas is better than Bollywood stars, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X