'ಸಲಾರ್' ಸೆಟ್ಟಿನಲ್ಲಿ ಡಾರ್ಲಿಂಗ್ ಪ್ರಭಾಸ್ ರಗಡ್ ಲುಕ್: ಮತ್ತೊಂದು ಫೋಟೊ ಲೀಕ್!
ಪ್ರಶಾಂತ್ ನೀಲ್ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. 'ಕೆಜೆಎಫ್ 2' ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಮತ್ತೆ 'ಸಲಾರ್' ಸಿನಿಮಾ ಕೈಗೆತ್ತಿಕೊಂಡಿದ್ದರು. ಆದಷ್ಟು ಬೇಗ ಸಿನಿಮಾ ಮುಗಿಸೋಕೆ ತಯಾರಿ ನಡೆಸಿದ್ದರು. ಒಂದಿಷ್ಟು ದಿನ ಶೂಟಿಂಗ್ ಮಾಡಿದ ಬಳಿಕ ಪ್ರಶಾಂತ್ ನೀಲ್ ಬ್ರೇಕ್ ಕೊಟ್ಟಿದ್ದರು.
ಈಗ ಮತ್ತೆ 'ಸಲಾರ್' ಶೂಟಿಂಗ್ ಶುರು ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪ್ರಭಾಸ್ ಚಿಕ್ಕಪ್ಪ ಕೃಷ್ಣಂ ರಾಜು ನಿಧನರಾಗಿದ್ದರು. ಆ ನೋವಿನಲ್ಲೂ ಪ್ರಭಾಸ್ ಶೂಟಿಂಗ್‌ಗೆ ಹಾಜರಾಗಿದ್ದಾರೆ. ಪ್ರತಿ ಬಾರಿ ಶೂಟಿಂಗ್ ಆರಂಭ ಆದಾಗಲೂ ಪ್ರಭಾಸ್ ಸೆಟ್ಟಿನಲ್ಲಿರೋ ಒಂದು ಫೋಟೊ ಲೀಕ್ ಆಗುತ್ತೆ. ಕಳೆದ ಬಾರಿ ಕೂಡ ಪ್ರಭಾಸ್ ಫೋಟೊ ಲೀಕ್ ಆಗಿ ವೈರಲ್ ಆಗಿತ್ತು.
ಪ್ರಶಾಂತ್ ನೀಲ್ ಮತ್ತೆ 'ಸಲಾರ್' ಸಿನಿಮಾದ ಶೂಟಿಂಗ್ ಅನ್ನು ಗ್ರ್ಯಾಂಡ್ ಆಗಿ ಶುರು ಮಾಡಿದ್ದಾರೆ. ಟಾಲಿವುಡ್‌ನ ಬಹುನಿರೀಕ್ಷೆಯ ಸಿನಿಮಾ ಆಗಿರೋದ್ರಿಂದ ಪ್ರಶಾಂತ್ ನೀಲ್ ಕಟ್ಟು ನಿಟ್ಟಿನಿಂದ ಶೂಟಿಂಗ್ ಆರಂಭಿಸಿದ್ದರು. ಆದರೂ, 'ಸಲಾರ್' ಸೆಟ್ಟಿನಿಂದ ಪ್ರಭಾಸ್ ಫೋಟೊ ಲೀಕ್ ಆಗಿದ್ದು ವೈರಲ್ ಆಗುತ್ತಿದೆ.

ನೋವಿನಲ್ಲೇ ಶೂಟಿಂಗ್‌ಗೆ ಮರಳಿದ ಪ್ರಭಾಸ್
ಡಾರ್ಲಿಂಗ್ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್. ಇಬ್ಬರ ಕಾಂಬಿನೇಷನ್ ಸಿನಿಮಾ ಅಂದರೆ, ಗ್ಲೋಬಲ್ ಲೆವೆಲ್‌ನಲ್ಲಿ ಕ್ರೇಜ್ ಇರುತ್ತೆ. ಅಲ್ಲದೆ ಸಿನಿಮಾಗೆ ಹೆಚ್ಚು ಸಮಯ ಕೊಡಬೇಕಾಗುತ್ತೆ. ಆ ಒಂದು ಕಾರಣಕ್ಕೆ ಪ್ರಭಾಸ್ ಚಿಕ್ಕಪ್ಪ ಕೃಷ್ಣಂ ರಾಜು ನಿಧನದ ಬಳಿಕ ನೋವಿನಲ್ಲಿಯೂ ಶೂಟಿಂಗ್‌ಗೆ ಹಾಜರಾಗಿದ್ದಾರೆ. ರಗಡ್ ಸೀನ್‌ಗಳಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಸೆಟ್ಟಿನಿಂದ ಫೋಟೊವೊಂದು ವೈರಲ್ ಆಗಿದೆ.

ಪ್ರಭಾಸ್ ರಗಡ್ ಶೇಡ್
ಆಗಸ್ಟ್ ತಿಂಗಳಿನಲ್ಲಿ 'ಸಲಾರ್' ಸಿನಿಮಾ ತಂಡ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು. ಇದರಲ್ಲಿ ಟೈಟ್ ಟಿ-ಶರ್ಟ್ ಹಾಗೂ ಜೀನ್ಸ್ ತೊಟ್ಟು ಕೈಯಲ್ಲಿ ಆಯುಧವನ್ನು ಹಿಡಿದು ನಿಂತಿದ್ದ ಪ್ರಭಾಸ್ ಫೋಟೊಗೆ ಡಾರ್ಲಿಂಗ್ ಅಭಿಮಾನಿಗಳು ಕಿಕ್ ಕೊಟ್ಟಿತ್ತು. ಪ್ರಭಾಸ್ ಯಾವುದೋ ಯುದ್ಧ ಭೂಮಿಯಲ್ಲಿ ಮೃತದೇಹದ ಮುಂದೆ ನಿಂತಿರೋ ಹಾಗೇ ಭಾಸವಾಗುತ್ತಿತ್ತು. ಸದ್ಯ ಹೊರಬಿಟ್ಟಿರೋ ಎರಡೂ ಫೋಟೊಗಳೂ ಕೂಡ ವೈರಲ್ ಆಗಿತ್ತು.

ಬಾಕ್ಸಾಫೀಸ್ ಮೇಲೆ ಕಣ್ಣು
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. 'ಕೆಜಿಎಫ್ 2' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿರೋ ಪ್ರಶಾಂತ್ ನೀಲ್ 'ಸಲಾರ್' ಏನಾಗುತ್ತೆ? ಬಾಕ್ಸಾಫೀಸ್‌ನಲ್ಲಿ ಯಾವ ಮಟ್ಟಕ್ಕೆ ಸದ್ದು ಮಾಡುತ್ತೆ ಅನ್ನೋದನ್ನು ಎದುರು ನೋಡುತ್ತಿದ್ದಾರೆ.

'ಕೆಜಿಎಫ್ 2'ಗಿಂತ ದೊಡ್ಡದು 'ಸಲಾರ್'
'ಕೆಜಿಎಫ್ 2' ಸಿನಿಮಾನೇ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಇನ್ನು 'ಸಲಾರ್' ಅದಕ್ಕಿಂತಲೂ ದೊಡ್ಡ ಸಿನಿಮಾ ಎಂದು ತಂಡವೇ ಹೇಳಿದೆ. ಕೆಲವು ದಿನಗಳ ಹಿಂದಷ್ಟೇ
'ಸಲಾರ್' ಸಿನಿಮಾ 'ಕೆಜಿಎಫ್ 2'ಗಿಂತಲೂ ದೊಡ್ಡದು ಎಂದು ಛಾಯಾಗ್ರಾಹಕ ಭುವನ್ ಗೌಡ ಹೇಳಿದ್ದರು. ಅಲ್ಲದೆ ಈ ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ.


Click it and Unblock the Notifications











