'ಸಲಾರ್' ಸಿನಿಮಾದ ಅದ್ಧೂರಿ ಆಕ್ಷನ್ ಸೀನ್‌ಗೆ ಪ್ರಶಾಂತ್ ನೀಲ್ ಸಜ್ಜು: ಪ್ರಭಾಸ್ ಎಂಟ್ರಿ ಯಾವಾಗ?

ಕೊನೆಗೂ ಪ್ರಭಾಸ್ 'ಸಲಾರ್' ಸಿನಿಮಾ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ಪ್ರಶಾಂತ್ ನೀಲ್ 'ಕೆಜಿಎಫ್ ಚಾಪ್ಟರ್ 2' ಹ್ಯಾಂಗೋವರ್‌ನಿಂದ ಹೊರ ಬಂದಿದ್ದಾರೆ. ಇಬ್ಬರೂ ಮತ್ತೆ 'ಸಲಾರ್' ಸಿನಿಮಾಗಾಗಿ ಒಂದಾಗುತ್ತಿದ್ದಾರೆ. ಅದಕ್ಕೆ ಪ್ರಶಾಂತ್ ನೀಲ್ ದೊಡ್ಡದಾಗಿ ಏನೋ ಪ್ಲ್ಯಾನ್ ಮಾಡುತ್ತಿದ್ದಾರೆ. ಆದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನಾಗ ಅಶ್ವಿನ್ ನಿರ್ದೇಶಿಸುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿಯೂ ಭಾಗಿಯಾಗಿದ್ದರು. ಈಗ ಸಂಪೂರ್ಣ ತಯಾರಿಯೊಂದಿಗೆ ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್ ಮೂಲಕ 'ಸಲಾರ್' ಸೆಟ್ಟಿಗೆ ಎಂಟ್ರಿ ಕೊಡುತ್ತಿದ್ದಾರೆ.

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟಿಸಿದ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿವೆ. ಪ್ರಶಾಂತ್ ನೀಲ್ 'ಕೆಜಿಎಫ್ 2' ಮೆಗಾ ಬ್ಲಾಕ್‌ಬಸ್ಟರ್ ಆಗಿದೆ. ಈ ಕಾರಣಕ್ಕೆ ಪ್ರಶಾಂತ್ ನೀಲ್ ಮೇಲೆ ಒತ್ತಡ ಹೆಚ್ಚಾಗಿದೆ. 'ಕೆಜಿಎಫ್ 2' ಸಿನಿಮಾವನ್ನೂ ಮೀರಿಸುವಂತೆ 'ಸಲಾರ್' ಸಿನಿಮಾವನ್ನುತೆಗೆಯಬೇಕಿದೆ. ಈ ಕಾರಣಕ್ಕೆ ಪ್ರಶಾಂತ್ 'ಕೆಜಿಎಫ್ 2' ಹ್ಯಾಂಗೋವರ್‌ನಿಂದ ಹೊರಬಂದು 'ಸಲಾರ್‌'ಗಾಗಿ ತಲೆಕೆಡಿಸಿಕೊಂಡಿದ್ದಾರೆ.

ಅದ್ಧೂರಿ ಆಕ್ಷನ್‌ನಿಂದ ಸಲಾರ್ ಆರಂಭ

ಅದ್ಧೂರಿ ಆಕ್ಷನ್‌ನಿಂದ ಸಲಾರ್ ಆರಂಭ

ಹೊಂಬಾಳೆ ಫಿಲ್ಮ್ಸ್ 'ಸಲಾರ್' ಸಿನಿಮಾ ಶೂಟಿಂಗ್ ಅನ್ನು ಮತ್ತೆ ಆರಂಭ ಮಾಡಿದೆ. ಇನ್ನೊಂದು ಕಡೆ ಪ್ರಶಾಂತ್ ನೀಲ್ ಕೂಡ 'ಸಲಾರ್‌'ಗಾಗಿ ಅಖಾಡಕ್ಕೆ ಇಳಿದಿದ್ದಾರೆ. ಬೆಚ್ಚಿಬೀಳಿಸುವಂತಹ ಆಕ್ಷನ್ ಸೀಕ್ವೆನ್ಸ್‌ನಿಂದಲೇ ಸಿನಿಮಾವನ್ನು ಆರಂಭ ಮಾಡಲು ನಿರ್ಧರಿಸಲಾಗಿದೆ. ಈ ಕಾರಣಕ್ಕೆ ಈಗಾಗಲೇ ಪ್ರಿಪರೇಷನ್ ಕೂಡ ಶುರುವಾಗಿದೆ. ಪ್ರಶಾಂತ್ ನೀಲ್ ತಂಡ ಅಖಾಡಕ್ಕಿಳಿದಿದ್ದು, ಫುಲ್ ಸ್ವಿಂಗ್‌ನಲ್ಲಿ ಕೆಲಸ ಆರಂಭಿಸಿದೆ.

ಪ್ರಶಾಂತ್ ನೀಲ್ ವಿಡಿಯೋ ವೈರಲ್

'ಕೆಜಿಎಫ್ 2' ಬಳಿಕ ಪ್ರಶಾಂತ್ ನೀಲ್ ಈಗ ಭಾರತದ ಸ್ಟಾರ್ ನಿರ್ದೇಶಕನಾಗಿದ್ದಾರೆ. ಅಂದ್ಮೇಲೆ ಮುಂದಿನ ಸಿನಿಮಾ ಕೂಡ 'ಕೆಜಿಎಫ್ 2' ರೇಂಜ್‌ನಲ್ಲಿಯೇ ಇರಬೇಕು. ಅದಕ್ಕಾಗಿ ಪ್ರಶಾಂತ್ ನೀಲ್ ಹಾಗೂ ತಂಡ ಮತ್ತೆ ಕೆಲಸ ಆರಂಭಿಸಿದೆ. ಇದೇ ವೇಳೆ 'ಸಲಾರ್' ಸಿನಿಮಾ ಬಗ್ಗೆ ಮಾಹಿತಿ ನೀಡಲು ಟ್ವಿಟರ್‌ನಲ್ಲಿ ಪ್ರತ್ಯೇಕ ಖಾತೆಯನ್ನೂ ಸಿನಿಮಾ ತಂಡ ತೆರೆದಿದೆ. ಇಲ್ಲಿ ಪ್ರಶಾಂತ್ ನೀಲ್ ಆರ್ಟ್‌ ಡೈರೆಕ್ಟರ್ ಶಿವಕುಮಾರ್ ಜೊತೆ ಚರ್ಚೆ ಮಾಡುತ್ತಿರುವ ವಿಡಿಯೋವನ್ನು ಚಿತ್ರತಂಡವೇ ರಿಲೀಸ್ ಮಾಡಿದೆ. ಈ ವಿಡಿಯೋ ನೋಡುತ್ತಿದ್ದಂತೆ ಪ್ರಭಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

'ಸಲಾರ್' ಸೆಟ್ಟಿಗೆ ಪ್ರಭಾಸ್ ಎಂಟ್ರಿ ಯಾವಾಗ?

'ಸಲಾರ್' ಸೆಟ್ಟಿಗೆ ಪ್ರಭಾಸ್ ಎಂಟ್ರಿ ಯಾವಾಗ?

ಪ್ರಶಾಂತ್ ನೀಲ್ ಕೆಲಸ ಆರಂಭ ಮಾಡಿದ್ದು ನೋಡಿದರೆ, 'ಸಲಾರ್' ಸೆಟ್ಟಿಗೆ ಪ್ರಭಾಸ್ ಶೀಘ್ರದಲ್ಲಿಯೇ ಬರೋದು ಗ್ಯಾರಂಟಿ. ಅದು ಯಾವಾಗ ಅನ್ನುವ ಕುತೂಹಲ ಡಾರ್ಲಿಂಗ್ ಫ್ಯಾನ್ಸ್‌ನಲ್ಲಿ ಇದ್ದೇ ಇತ್ತು. ಅದಕ್ಕೆ ತಕ್ಕಂತೆ 'ಸಲಾರ್' ಅಡ್ಡಾದಿಂದ ಖುಷಿ ಪಡುವ ವಿಷಯವೊಂದು ಹೊರಬಿದ್ದಿದೆ. ಮೇ 24 ರಿಂದ 'ಸಲಾರ್' ತಂಡವನ್ನು ಪ್ರಭಾಸ್ ಸೇರಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ, ಈ ಸೀನ್‌ಗಾಗಿ ಪ್ರಭಾಸ್ ತೂಕವನ್ನು ಇಳಿಸಿಕೊಂಡಿದ್ದಾರಂತೆ. ಈ ಮೂಲಕ ಹೊಸ ಲುಕ್‌ನಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಅಕ್ಟೋಬರ್‌ಗೆ 'ಸಲಾರ್' ರಿಲೀಸ್!

ಅಕ್ಟೋಬರ್‌ಗೆ 'ಸಲಾರ್' ರಿಲೀಸ್!

ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಅಕ್ಟೋಬರ್‌ಗೆ ಶೂಟಿಂಗ್ ಮುಗಿಯಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹಿಂದಿ ಮಾಧ್ಯಮಕ್ಕೆ ಹೇಳಿದ್ದಾರೆ. ಅವರೇ ನೀಡಿರುವ ಹೇಳಿಕೆ ಪ್ರಕಾರ, 'ಸಲಾರ್' ಈಗಾಗಲೇ ಶೇ.30-35ರಷ್ಟು ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣವನ್ನು ನಾನ್ ಸ್ಟಾಪ್ ಮುಗಿಸಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಈಗ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ನಿರ್ಮಾಪಕ ಹೇಳಿದಂತೆ 'ಸಲಾರ್' ಮುಗಿದರೆ, ಇದೇ ವರ್ಷ ಸಿನಿಮಾ ರಿಲೀಸ್ ಆಗೋದು ಪಕ್ಕಾ.

More from Filmibeat

English summary
Prashanth Neel Prepation for Prabhas Starrer Salaar Shooting Video Goes Viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X