ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್‌ಗಾಗಿ ಮಹೇಶ್ ಬಾಬು, ಜೂ. ಎನ್ ಟಿಆರ್ ಪೈಪೋಟಿ

'ಉಗ್ರಂ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್, 'ಕೆಜಿಎಫ್' ಮೂಲಕ ಇಡೀ ದೇಶಕ್ಕೆ ಪರಿಚಿತರಾದರು. 'ಕೆಜಿಎಫ್ 2' ತಯಾರಿಯಲ್ಲಿರುವ ಅವರೆಡೆಗೆ ಇಡೀ ಚಿತ್ರರಂಗ ಕಾತರದಿಂದ ನೋಡುತ್ತಿದೆ. 'ಕೆಜಿಎಫ್' ಬಳಿಕ ಮುಂದೆ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲವೂ ಇದೆ.

Recommended Video

ಮಕ್ಕಳೊಂದಿಗೆ KGF ನಿರ್ದೇಶಕ ಪ್ರಶಾಂತ್ ನೀಲ್ ಜಬರ್ದಸ್ತ್ ಫೃಟ್ | Prashanth Neel | KGF 2

ಈ ನಡುವೆ ಪ್ರಶಾಂತ್ ನೀಲ್ ಅವರಿಗೆ ಭರ್ಜರಿ ಡಿಮ್ಯಾಂಡ್‌ಗಳು ಬರುತ್ತಿವೆ. ಅದರಲ್ಲಿಯೂ ಅದ್ಧೂರಿ ಸಿನಿಮಾಗಳನ್ನು ಮಾಡುವುದರಲ್ಲಿ ಹೆಸರುವಾಸಿಯಾದ ತೆಲುಗು ಚಿತ್ರರಂಗದಿಂದ ಅನೇಕ ಸ್ಟಾರ್ ನಟರು ಪ್ರಶಾಂತ್ ನೀಲ್ ಜತೆ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅವರಲ್ಲಿ ಮಹೇಶ್ ಬಾಬು ಮತ್ತು ಜೂ. ಎನ್‌ಟಿಆರ್ ಅವರ ಹೆಸರು ಕೇಳಿಬಂದಿದ್ದವು. ಮಹೇಶ್ ಬಾಬು ಜತೆ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಜೂ. ಎನ್‌ಟಿಆರ್ ಜತೆ ಸಿನಿಮಾ ಮಾಡುತ್ತಾರೆಂಬ ಮಾತೂ ಕೇಳಿಬಂದಿತ್ತು. ಈಗ ಅದು ಪುನಃ ಮುನ್ನೆಲೆಗೆ ಬಂದಿದೆ. ಮುಂದೆ ಓದಿ...

ಪ್ರಶಾಂತ್ ನೀಲ್ ಭೇಟಿ ಮಾಡಿದ ನಮ್ರತಾ

ಪ್ರಶಾಂತ್ ನೀಲ್ ಭೇಟಿ ಮಾಡಿದ ನಮ್ರತಾ

ಪ್ರಶಾಂತ್ ನೀಲ್ ಅವರ ತೆಲುಗು ಪಾದಾರ್ಪಣೆಯ ಸುದ್ದಿ ಕಳೆದ ಒಂದು ವರ್ಷದಿಂದ ಹರಿದಾಡುತ್ತಿದೆ. ಮೊದಲು ಸುದ್ದಿಯಾಗಿದ್ದು ಮಹೇಶ ಬಾಬು ಬ್ಯಾನರ್‌ನಿಂದ. ಮಹೇಶ್ ಬಾಬು ಪತ್ನಿ ನಮ್ರತಾ, ಮೈತ್ರಿ ಮೂವೀಸ್ ಬ್ಯಾನರ್ ಮೂಲಕ ಪ್ರಶಾಂತ್ ನೀಲ್ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿತ್ತು.

ಮತ್ತೆ ಜೂ. ಎನ್ ಟಿಆರ್ ಜತೆ ಸಿನಿಮಾ?

ಮತ್ತೆ ಜೂ. ಎನ್ ಟಿಆರ್ ಜತೆ ಸಿನಿಮಾ?

ಆದರೆ ಪ್ರಶಾಂತ್ ನೀಲ್, ಜೂನಿಯರ್ ಎನ್ ಟಿಆರ್ ಜತೆ ಸಿನಿಮಾ ಮಾಡುತ್ತಾರೆ ಎಂಬುದು ಕೂಡ ವರದಿಯಾಗಿತ್ತು. ಕಳೆದ ಒಂದು ವರ್ಷದಿಂದ ಟಾಲಿವುಡ್‌ನಿಂದ ಈ ರೀತಿಯ ಊಹಾಪೋಹಗಳು ಬರುತ್ತಲೇ ಇವೆ. ಒಮ್ಮೆ ಮಹೇಶ್ ಬಾಬು ಹೆಸರು, ಮತ್ತೊಮ್ಮೆ ಜೂ. ಎನ್ ಟಿಆರ್ ಹೆಸರು ಕೇಳಿಬರುತ್ತಿವೆ.

ಜಂಟಿ ನಿರ್ಮಾಣದ ಸಿನಿಮಾ

ಜಂಟಿ ನಿರ್ಮಾಣದ ಸಿನಿಮಾ

ಈಗ ಟಾಲಿವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಹೊರಬಂದಿದ್ದು, ಎನ್ ಟಿಆರ್ ಆರ್ಟ್ಸ್ ಮತ್ತು ಮೈತ್ರಿ ಮೂವೀಸ್ ಜಂಟಿ ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ಸಿನಿಮಾ ನಿರ್ದೇಶಿಸಲಿದ್ದಾರೆ. ಇದಕ್ಕೆ ಜೂ. ಎನ್ ಟಿಆರ್ ನಾಯಕರಾಗಿರಲಿದ್ದು, ತ್ರಿವಿಕ್ರಮ್ ನಿರ್ದೇಶನದ ಚಿತ್ರದ ಬಳಿಕ ಅದು ಸೆಟ್ಟೇರಲಿದೆ ಎನ್ನಲಾಗಿದೆ.

ಜೂ. ಎನ್ ಟಿಆರ್ ಸಿನಿಮಾಗಳು

ಜೂ. ಎನ್ ಟಿಆರ್ ಸಿನಿಮಾಗಳು

ಜೂ. ಎನ್ ಟಿಆರ್ ಅವರಿಗೆ ಈ ಹಿಂದೆ ಉತ್ತಮ ನಿರ್ದೇಶಕರ ಬೆಂಬಲ ಸಿಕ್ಕಿರಲಿಲ್ಲ. ಆದರೆ ಈಗ ರಾಜಮೌಳಿ, ತ್ರಿವಿಕ್ರಮ್ ಅವರಂತಹ ನಿರ್ದೇಶಕರ ಸಿನಿಮಾಗಳು ಸಿಕ್ಕಿದ್ದು, ಕೊರತಲಾ ಶಿವ ಜತೆಗೂ ಎನ್ ಟಿಆರ್ ಪ್ರಶಾಂತ್ ನೀಲ್ ಕೂಡ ಈ ಸಾಲಿಗೆ ಸೇರಿಕೊಂಡರೆ ಜೂ. ಎನ್ ಟಿಆರ್ ಸಿನಿಮಾಗಳು ಮತ್ತೊಂದು ಘಟ್ಟಕ್ಕೆ ತಲುಪುವುದು ಖಚಿತ.

'ಇನ್ನೂ ನಿರ್ಧಾರ ಕೈಗೊಂಡಿಲ್ಲ'

'ಇನ್ನೂ ನಿರ್ಧಾರ ಕೈಗೊಂಡಿಲ್ಲ'

ಮಹೇಶ್ ಬಾಬು ಪತ್ನಿ ನಮ್ರತಾ ಕೆಲವು ತಿಂಗಳ ಹಿಂದೆ ಪ್ರಶಾಂತ್ ನೀಲ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರು. 'ಪ್ರಶಾಂತ್ ನೀಲ್ ನನಗೆ ಕೆಲವು ಸಾಲುಗಳನ್ನು ವಿವರಿಸಿದ್ದಾರೆ. ಆದರೆ ನಾನು ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ' ಎಂದು ಮಹೇಶ್ ಬಾಬು ಹೇಳಿದ್ದರು. ಹೀಗಾಗಿ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾ ಯಾರ ಜತೆ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Reports says KGF fame Prashanth Neel will direct Jr NTR's movie in NTR Arts- Mythri Movies joint venture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X