ಕಪ್ಪು ಬಣ್ಣದ ಉಡುಪು ತೊಟ್ಟು ಬೆರಗುಗೊಳಿಸಿದ ತುಂಬು ಗರ್ಭಿಣಿ ಕಾಜಲ್ ಅಗರ್ವಾಲ್
ಮಗಧೀರ ನಟಿ ಕಾಜಲ್ ಅಗರ್ವಾಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯ ಈಗ ಹೊಸದೇನಲ್ಲ. ಹೊಸ ವರ್ಷದ ಆರಂಭದಲ್ಲಿ ಈ ವಿಷಯವನ್ನು ಕಾಜಲ್ ಅಗರ್ವಾಲ್ ಹಾಗೂ ಪತಿ ಗೌತಮ್ ಕಿಚ್ಲು ಜಗತ್ತಿಗೆ ಸಾರಿ ಹೇಳಿದ್ದರು. ಈಗ ಕಾಜಲ್ ಅಗರ್‌ವಾಲ್ ಮಾಡಿಸಿದ ಮೆಟರ್ನಿಟಿ ಫೋಟೊಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೊಗಳನ್ನು ನೋಡಿ ಕಾಜಲ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಕಾಜಲ್‌ಗೆ ಮನಸಾರೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಕಪ್ಪು ಬಣ್ಣದ ಉಡುಪು ತೊಟ್ಟು ಮಾಡಿಸಿದ ಫೋಟೊ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಕಾಜಲ್ ಅಭಿಮಾನಿಗಳು ಹಾಗೂ ಚಿತ್ರರಂಗದ ತಾರೆಯರು ಈ ಫೋಟೊಶೂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಪ್ಪು ಬಣ್ಣದ ಗೌನ್ ತೊಟ್ಟು, ಕೈಯಲ್ಲಿ ಬೇಬಿ ಬಂಪ್ ಹಿಡಿದು ತೆಗೆಸಿದ ಫೋಟೊಗೆ ಅಭಿನಂದನೆಗಳ ಸುರಿಮಳೆಯೇ ಬಂದಿದೆ. ಕಳೆದೆರಡು ದಿನಗಳಿಂದ ಕಾಜಲ್ ಅಗರ್ವಾಲ್ ಬೇಬಿ ಬಂಪ್ ಜೊತೆ ಮಾಡಿಸಿದ ಫೋಟೊಶೂಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದಾರೆ.

ಗರ್ಭಿಣಿ ಕಾಜಲ್‌ಗೆ ಮೆಚ್ಚುಗೆ ಮಹಾಪೂರ
ಯಾರೇ ಇರಲಿ, ಹೆಣ್ಣಿಗೆ ತಾಯಿ ಆಗುತ್ತಿರುವ ಸಂಗತಿ ಅವರ ಬದುಕಿನ ಅತ್ಯಂತ ಮಧುರ ಕ್ಷಣಗಳಲ್ಲೊಂದು. ಇಂತಹ ಕ್ಷಣವನ್ನು ಯಾರೂ ಮಿಸ್ ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ. ನಟಿ ಕಾಜಲ್ ಅಗರ್ವಾಲ್ ಕೂಡ ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾಜಲ್ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು, ದಿನಕ್ಕೊಂದು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕಾಜಲ್ ಅಗರ್ವಾಲ್ ಬದುಕಿನ ಈ ಖುಷಿಯ ಕ್ಷಣಗಳಿಗೆ ನೆಟ್ಟಿಗರೂ ಕೂಡ ಸಾಥ್ ನೀಡುತ್ತಿದ್ದಾರೆ. ಕಪ್ಪು ಬಣ್ಣದ ಗೌನ್ ಧರಿಸಿ, ಕೈಯಲ್ಲಿ ಬೇಬಿ ಬಂಪ್ ಹಿಡಿದು ತೆಗೆಸಿದ ಫೋಟೊಗೆ ಮೆಚ್ಚುಗೆಯ ಸುರಿಮಳೆಯೇ ಸುರಿದಿದೆ.

ಪತಿ ಜೊತೆ ಕಾಜಲ್ ಫೋಟೊಶೂಟ್
ಕಾಜಲ್ ಅರ್ಗವಾಲ್ ಎರಡು ದಿನಗಳ ಹಿಂದಷ್ಟೇ ಬ್ಯಾಕ್ ಅಂಡ್ ವೈಟ್ ಫೋಟೊವೊಂದನ್ನು ಹಂಚಿಕೊಂಡಿದ್ದರು. ಈ ಫೋಟೊದಲ್ಲಿ ಪತಿ ಗೌತಮ್ ಕಿಚ್ಲು ಕಾಲ ಮೇಲೆ ಕಾಲಿಟ್ಟು, ತನ್ನ ಬೇಬಿ ಬಂಪ್ ಅನ್ನು ಕೈಯಲ್ಲಿ ಹಿಡಿದು ಫೋಸ್ ಕೊಟ್ಟಿದ್ದರು. ಆ ಫೋಟೊವನ್ನು ಮೊದಲು ಶೇರ್ ಮಾಡಿದ್ದರು. ಇನ್ನೊಂದು ಫೋಟೊದಲ್ಲಿ ಪ್ರೀತಿಯಿಂದ ಸಾಕಿದ ಶ್ವಾನದೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೊಗಳೂ ಸೋಶಿಯಲ್ ಮೀಡಿಯಾಗಳಲ್ಲೀಗ ವೈರಲ್ ಆಗುತ್ತಿವೆ.

ಕಾಜಲ್ ಗರ್ಭಿಣಿ ಎಂದು ಹೇಳಿಕೊಂಡಿರಲಿಲ್ಲ
ಆರಂಭದ ದಿನಗಳಲ್ಲಿ ಕಾಜಲ್ ಅಗರ್ವಾಲ್ ತಾನು ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗ ಪಡಿಸಿರಲಿಲ್ಲ. ಈ ವಿಷಯವನ್ನು ಗೌಪ್ಯವಾಗಿಯೇ ಇಟ್ಟಿದ್ದರು. 2022 ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ವೇಳೆ ಪತಿ ಗೌತಮ್ ಕಿಚ್ಲು ಈ ವಿಷಯವನ್ನು ರಿವೀಲ್ ಮಾಡಿದ್ದರು. ತದನಂತರವೇ ಕಾಜಲ್ ಅಗರ್ವಾಲ್ ಗರ್ಭಿಣಿಯಾಗಿರುವ ವಿಷಯ ಬಹಿರಂಗವಾಗಿತ್ತು. ಈ ವಿಷಯ ತಿಳಿದ ಕೂಡಲೇ ಆಕೆಯ ಅಭಿಮಾನಿಗಳು ಶುಭಕೋರಿದ್ದರು. ಇದನ್ನೂ ಮುನ್ನ ಕಾಜಲ್ ಶೇರ್ ಮಾಡಿದ ಕೆಲವು ಫೋಟೊಗಳಿಂದ ಗರ್ಭಿಣಿಯಾಗಿದ್ದಾರೆ ಅಂತ ಗುಲ್ಲೆದ್ದಿತ್ತು. ಆಗ ಕಾಜಲ್ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ.

ಕಾಜಲ್‌ಗೆ ಗೌತಮ್ ಪ್ರಪೋಸ್
ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ ಎನ್ನುವ ವಿಷಯ ಹರಿದಾಡುತ್ತಲೇ ಇತ್ತು. ಆದರೆ, ಕಾಜಲ್ ಹಾಗೂ ಉದ್ಯಮಿ ಗೌತಮ್ ಕಿಚ್ಲು ಈ ಬಗ್ಗೆ ಎಲ್ಲೂ ಬಹಿರಂಗ ಹೇಳಿಕೆಗಳನ್ನು ನೀಡಿರಲಿಲ್ಲ. ಕೊನೆಗೂ ಮದುವೆ ಆಗುವುದು ಅಂತ ನಿರ್ಧಾರ ಮಾಡಿದಾಗ, ಕಾಜಲ್ ಈ ವಿಷಯವನ್ನು ರಿವೀಲ್ ಮಾಡಿದ್ದರು. ಆದರೆ, ಕೊರೊನಾ ವೇಳೆ ಮದುವೆ ಆಗಿದ್ದರಿಂದ ಕಾಜಲ್ ಕುಟುಂಬ ಹಾಗೂ ಆಪ್ತರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.


Click it and Unblock the Notifications











