"ಬಿಕಿನಿಯಲ್ಲಿ ಕರೀನಾ ಕಪೂರ್‌ಗೆ ಹೋಲಿಕೆ ಮಾಡಿದ್ದ ನಿರ್ದೇಶಕ" ವಿವಾದದ ಬಗ್ಗೆ ಪ್ರಿಯಾಮಣಿ ಮಾತು

ಒಂದು ಕಾಲದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದವರು ಪ್ರಿಯಾಮಣಿ. ಇವರ ನಟನೆ ಕಂಡು ದಕ್ಷಿಣ ಭಾರತದ ಸಿನಿಮಾ ಮಂದಿ ಫಿದಾ ಆಗಿದ್ದರು. ಇನ್ನೊಂದು ಕಡೆ ರಾಷ್ಟ್ರ ಪ್ರಶಸ್ತಿಗಳಿಂದ ಹಿಡಿದು ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಜನರ ಮನಗೆದ್ದಿದ್ದರು.

ವಿವಾಹದ ಬಳಿಕ ಪ್ರಿಯಾಮಣಿ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಪ್ರಿಯಾಮಣಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗ ಅವರು ಪರ್ಫಾಮೆನ್ಸ್ ಓರಿಯೆಂಟೆಡ್ ಪಾತ್ರಗಳು ಅಷ್ಟೇ ಅಲ್ಲ. ಗ್ಲಾಮರ್ ರೋಲ್‌ಗಳಲ್ಲಿಯೂ ಕಾಣಿಸಿಕೊಂಡಿದ್ದರು. ಸಿನಿಮಾಗಳಲ್ಲಿ 'ಬಿಕಿನಿ' ಹಾಕಿ ಅಚ್ಚರಿಯನ್ನೂ ಮೂಡಿಸಿದ್ದರು.

Priyamani says Drona movie director compared her to Kareena Kapoor in Bikini scene

ಇತ್ತೀಚೆಗೆ ಅವರು ನಟಿಸಿದ 'ದ್ರೋಣ' ಸಿನಿಮಾದಲ್ಲಿ ಬಿಕಿನಿ ಧರಿಸಿದ್ದರ ಕುರಿತು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ 'ದ್ರೋಣ' ಸಿನಿಮಾದಲ್ಲಿ ಬಿಕಿನಿ ಧರಿಸಿದ್ದು ಯಾಕೆ? ರಿಲೀಸ್ ಬಳಿಕ ಹಣಕ್ಕಾಗಿ ಬಿಕಿನಿ ಧರಿಸಿದ್ದಾರೆಂಬ ಆರೋಪ ಕೇಳಿಬಂದಿದ್ದೇಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಸಿನಿಮಾ ಅಂದ್ಮೇಲೆ ಗ್ಲಾಮರ್‌ ಇರೋದು ಸಹಜ. ಅದರಲ್ಲೂ ನಾಯಕಿಯರು ಗ್ಲಾಮರ್ ಲುಕ್ ಕೊಡಬೇಕು ಅಂತ ಬಯಸೋದು ಸಹಜ. ಆದರೆ, ಸಿನಿಮಾಗಳಲ್ಲಿ ನಾಯಕಿಯರು ಬಿಕಿನಿ ಧರಿಸಿ ಬಂದರೆ, ದೊಡ್ಡ ಸಂಚಲನವೇ ಸೃಷ್ಟಿಯಾಗುತ್ತಿತ್ತು. ನಟಿಯರ ವೃತ್ತಿ ಬದುಕಿಗೆ ಇದೊಂದು ಅಪಾಯಕಾರಿ ಹೆಜ್ಜೆಯೆಂದು ಪರಿಗಣಿಸಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಪ್ರಿಯಾಮಣಿ 'ದ್ರೋಣ' ಸಿನಿಮಾದಲ್ಲಿ ಬಿಕಿನಿ ಧರಿಸಿ ಅಚ್ಚರಿ ಮೂಡಿಸಿದ್ದರು. ಬಿಗ್ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಗಳಿಸದೇ ಹೋದರೂ, ಸಿನಿಮಾದ ಕೆಲವು ದೃಶ್ಯಗಳು ಗಮನ ಸೆಳೆದಿತ್ತು.

ಇನ್ನು ಈ ಸಿನಿಮಾದ ಕಥೆ ಒಪ್ಪಿಸುವಾಗ ಪ್ರಿಯಾಮಣಿ ಬಳಿ ನಿರ್ದೇಶಕ ಕರುಣ್ ಕುಮಾರ್ ಬಿಕಿನಿಯ ದೃಶ್ಯದ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಸಿನಿಮಾ ಶೂಟಿಂಗ್ ಆರಂಭ ಆದ ಬಳಿಕವಷ್ಟೇ ಈ ಬಗ್ಗೆ ಬಿಕಿನಿ ಧರಿಸುವಂತೆ ಹೇಳಿದ್ದರು. ಅದುವರೆಗೂ ಗ್ಲಾಮರ್ಸ್ ಲುಕ್‌ನಲ್ಲಿ ಕಾಣಿಸಿಕೊಳ್ಳದೇ ಇದ್ದ ಪ್ರಿಯಾಮಣಿ ಈ ವಿಷಯ ಕೇಳಿ ಆಘಾತಕ್ಕೆ ಒಳಗಾಗಿದ್ದರು. ಆದರೆ, ನಿರ್ದೇಶಕರು ಕಥೆ ಅವಶ್ಯಕವಾಗಿದೆ ಎಂದು ಮನವೊಲಿಸಿದ್ದರಿಂದ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

Priyamani says Drona movie director compared her to Kareena Kapoor in Bikini scene

ಹಾಗೇ ಬಿಕಿನಿ ಧರಿಸುವುದು ತಪ್ಪಲ್ಲ ಎಂದೂ ಪ್ರಿಯಾಮಣಿ ಇದೇ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 'ಟಶನ್' ಸಿನಿಮಾದಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್ ಅವರ ಬಿಕಿನಿ ಲುಕ್‌ ವೈರಲ್ ಆಗಿತ್ತು. ಆ ಬಳಿಕ ನಿರ್ದೇಶಕರು ತಮ್ಮನ್ನು ಅದೇ ರೀತಿ ಸಿನಿಮಾದಲ್ಲಿ ತೋರಿಸಲು ಬಯಸಿದ್ದರು. ಹಾಗೇ ಹೊಸದಾಗಿ ಕಾಣಿಸಿಕೊಳ್ಳುವ ಉದ್ದೇಶದಿಂದ ಬಿಕಿನಿ ದೃಶ್ಯಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾಗಿ ಅವರು ಹೇಳಿದ್ದಾರೆ. ಆದರೆ, ಸಿನಿಮಾ ಬಿಡುಗಡೆಯಾದ ಬಳಿಕ ಟೀಕೆಗಳಿಗೆ ಗುರಿಯಾಗಬೇಕಾಯ್ತು ಎಂದಿದ್ದಾರೆ.

"ಅಲ್ಲಿಯವರೆಗೂ ನಾನು ಮಾಡಿದ್ದ ಪಾತ್ರಗಳು ರೆಗ್ಯೂಲರ್ ಆಗಿದ್ದವು. ಇದ್ದಕ್ಕಿದ್ದಂತೆ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಪ್ರೇಕ್ಷಕರಿಗೆ ಆಘಾತವಾಗಿತ್ತು. ನನ್ನ ವಿರುದ್ಧ ಕಠಿಣವಾಗಿ ಟ್ರೋಲ್ ಮಾಡಲಾಯ್ತು. ಅಲ್ಲದೆ ಹಣಕ್ಕಾಗಿ ಬಿಕಿನಿ ಧರಿಸಿದರು ಎಂದು ಟೀಕಿಸಿದ್ದರು. ಇಂತಹ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದು ಪ್ರಿಯಾಮಣಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈಗ ಬಿಕಿನಿ ದೃಶ್ಯಗಳಲ್ಲಿ ನಟಿಸುವುದಿಲ್ಲವೆಂದಿದ್ದಾರೆ. ಸದ್ಯ ಪ್ರಿಯಾಮಣಿ 'ಜನ ನಾಯಗನ್' ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಿಯಾಮಣಿ ಈಗಾಗಲೇ 'ಜಿಡಿಎಸ್' ಮತ್ತು 'ಗೋಲ್ಮಾಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿವಾಹದ ಬಳಿಕ ಹೆಚ್ಚು ಸಿನಿಮಾಗಳಲ್ಲಿ ನಟಿಸಿಸುತ್ತಿದ್ದಾರೆ.

English summary
Priyamani says Drona movie director compared her to Kareena Kapoor in Bikini scene.
Read more about: priyamani kareena kapoor bikini
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X