ಚಿತ್ರಮಂದಿರಕ್ಕೆ ನುಗ್ಗಿ 'ಹರಿಹರ ವೀರಮಲ್ಲು' ಪೋಸ್ಟರ್ ಹರಿದ ಕನ್ನಡ ಪರ ಹೋರಾಟಗಾರರು: ಆಕ್ರೋಶಕ್ಕೆ ಕಾರಣವೇನು?

ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ಬಹಳ ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಕಳೆದ ಐದಾರು ವರ್ಷಗಳಿಂದ ನಟಿಸುತ್ತಿದ್ದ 'ಹರಿ ಹರ ವೀರ ಮಲ್ಲು' ಸಿನಿಮಾ ವಿಶ್ವದಾದ್ಯಂತ ಪ್ರದರ್ಶನಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿವೆಯಷ್ಟೇ. ಕೇವಲ ಆಂಧ್ರ, ತೆಲಂಗಾಣ ಅಷ್ಟೇ ಅಲ್ಲ. ಕರ್ನಾಟಕದಲ್ಲಿಯೂ ಪವನ್ ಕಲ್ಯಾಣ್ ಸಿನಿಮಾ ಕ್ರೇಜ್ ಜೋರಾಗಿದೆ. ಅಭಿಮಾನಿಗಳ ಒತ್ತಾಸೆಯ ಮೇರೆಗೆ ಇಂದು (ಜುಲೈ 23) ರಾತ್ರಿ ಪೇಯ್ಡ್ ಪ್ರೀಮಿಯರ್ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಮಡಿವಾಳ ಸಮೀಪವಿರುವ ಸಂದ್ಯ ಚಿತ್ರಮಂದಿರಲ್ಲಿ 'ಹರಿ ಹರ ವೀರಮಲ್ಲು' ಸಿನಿಮಾ ಪ್ರೀಮಿಯರ್ ಇದೆ. ಈ ಕಾರಣಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳು ಚಿತ್ರಮಂದಿರ ಮುಂದೆ ದೊಡ್ಡ ಬ್ಯಾನರ್‌ಗಳನ್ನು ಹಾಕಿದ್ದರು. ಈ ಮೂಲಕ ಇಂದು ರಾತ್ರಿ ನಡೆಯಲಿರುವ ಪ್ರೀಮಿಯರ್ ಶೋದಲ್ಲಿ ಧಮಾಕಾ ಮಾಡುವುದಕ್ಕೆ ಮುಂದಾಗಿದ್ದರು. ಈ ವೇಳೆ ಕನ್ನಡ ಪರ ಸಂಘಟನೆಗಳು ಥಿಯೇಟರ್‌ಗೆ ನುಗ್ಗಿ ಬ್ಯಾನರ್‌ಗಳನ್ನು ಹರಿದು ಹಾಕಿದ್ದರು.

Pro-Kannada Activists Remove Pawan Kalyan s Movie banner in Sandhya Theater Bengaluru

ಆಂಧ್ರ ಪ್ರವೇಶದ ಉಪಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಈ ಸಿನಿಮಾಗಾಗಿ ಮೂರು ದಿನಗಳನ್ನು ಮೀಸಲಿಟ್ಟಿದ್ದರು. 'ಹರಿ ಹರ ವೀರಮಲ್ಲು' ಪವನ್ ಕಲ್ಯಾಣ್ ವೃತ್ತಿ ಬದುಕಿನಲ್ಲೇ ವಿಶಿಷ್ಠ ಸಿನಿಮಾ ಎಂದು ಹೇಳಲಾಗುತ್ತಿದ್ದು, ಅವರ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋಗಾಗಿ ಎದುರು ನೋಡುತ್ತಿದ್ದಾರೆ. ಈ ವೇಳೆ ಕನ್ನಡ ಪರ ಸಂಘಟನೆಗಳು ಬ್ಯಾನರ್ ಹರಿದು ಹಾಕಿ ಆಕ್ರೋಶ ಹೊರಹಾಕಿದೆ. ಅಷ್ಟಕ್ಕೂ ಅಂತಹದ್ದೇನಾಯ್ತು?

ಥಿಯೇಟರ್‌ನಲ್ಲಿದ್ದ ಬ್ಯಾನರ್‌ ತೆರವು

'ಹರಿ ಹರ ವೀರಮಲ್ಲು' ತೆಲುಗಿನ ಬಿಗ್ ಬಜೆಟ್ ಸಿನಿಮಾ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳು ಬಾಕಿ ಉಳಿದಿರುವಾಗಲೇ ಕೆಲವು ಅಡೆತಡೆಗಳನ್ನು ಎದುರಿಸುತ್ತಿದೆ. ನಿರ್ಮಾಪಕ ಹಣಕಾಸಿನ ಸಮಸ್ಯೆಯಿಂದ ಈ ಸಿನಿಮಾ ಬಿಡುಗಡೆಯಾಗುತ್ತೋ ಇಲ್ಲವೋ ಎನ್ನುವ ಅನುಮಾನ ಮೂಡಿತ್ತು. ಕೊನೆಗೂ ನಿಟ್ಟುಸಿರು ಬಿಟ್ಟಿದ್ದ ಫ್ಯಾನ್ಸ್‌ಗೆ ಕೆಲವೆಡೆ ಫ್ಲೆಕ್ಸ್ ತೆರವು ಆಗಿದ್ದು, ಬೆಂಗಳೂರಿನ ಥಿಯೇಟರ್‌ನಲ್ಲಿ ಬ್ಯಾನರ್ ಹರಿದು ಹಾಕಿದ್ದು ನಿರಾಸೆ ಮೂಡಿಸಿದೆ.

ಬ್ಯಾನರ್ ಹರಿದು ಹಾಕಿದ್ದೇಕೆ?

ಬೆಂಗಳೂರಿನ ಸಂಧ್ಯಾ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್ ನಟಿಸಿದ 'ಹರಿ ಹರ ವೀರಮಲ್ಲು' ಸಿನಿಮಾದ ಬ್ಯಾನರ್‌ ಹಾಕಲಾಗಿತ್ತು. ಕನ್ನಡ ಪರ ಸಂಘಟನೆಗಳು ಥಿಯೇಟರ್‌ಗೆ ನುಗ್ಗಿ ಆ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಏಕಾಏಕಿ ಹೀಗೆ ಬ್ಯಾನರ್ ಹರಿದು ಹಾಕಿದ್ದಕ್ಕೆ ಕಾರಣವಿದೆ. ಅಭಿಮಾನಿಗಳು ಈ ಸಿನಿಮಾದ ಬ್ಯಾನರ್‌ಗಳನ್ನು ತೆಲುಗಿನಲ್ಲಿ ಹಾಕಿದ್ದರು. ಒಂದೇ ಒಂದು ಕನ್ನಡದ ಬ್ಯಾನರ್ ಇರಲಿಲ್ಲ. ಈ ಕಾರಣಕ್ಕೆ ಆಕ್ರೋಶಗೊಂಡ ಕನ್ನಡ ಪರ ಸಂಘಟನೆಗಳು ಬ್ಯಾನರ್ ಅನ್ನು ಹರಿದು ಹಾಕಿದ್ದಾರೆ.

Pro-Kannada Activists Remove Pawan Kalyan s Movie banner in Sandhya Theater Bengaluru

ಕನ್ನಡ ಬ್ಯಾನರ್ ಹಾಕಿದ ಫ್ಯಾನ್ಸ್

ಕನ್ನಡ ಪರ ಸಂಘಟನೆಗಳು ಎಂಟ್ರಿ ಕೊಟ್ಟು ತೆಲುಗು ಬ್ಯಾನರ್‌ಗಳನ್ನು ಕಿತ್ತಾಕಿದ ಬಳಿಕ ಫ್ಯಾನ್ಸ್ ಎಚ್ಚೆತ್ತುಕೊಂಡಿದ್ದಾರೆ. ಸಂಧ್ಯಾ ಚಿತ್ರಮಂದಿರದ ಮುಂದೆ ಕನ್ನಡದ ಬ್ಯಾನರ್‌ಗಳನ್ನು ಹಾಕಲಾಗಿದೆ. ಸದ್ಯ ಈ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕನ್ನಡ ಪರ ಸಂಘಟನೆಗಳು ಬ್ಯಾನರ್ ಹರಿದು ಹಾಕಿದಾಗ ಹಿಂದಿ ಭಾಷೆಯ ಬಗ್ಗೆ ಪವನ್ ಕಲ್ಯಾಣ್ ಕೊಟ್ಟ ಹೇಳಿಕೆಯನ್ನು ಖಂಡಿಸಿ, ಬ್ಯಾನರ್ ಹರಿದು ಹಾಕಿದ್ದಾರೆಂದು ನಂಬಲಾಗಿತ್ತು. ಆದ್ರೀಗ ಥಿಯೇಟರ್ ಮೂಲಗಳು ಅಸಲಿ ಕಾರಣವನ್ನು ರಿವೀಲ್ ಮಾಡಿವೆ.

ಪವನ್ ಕಲ್ಯಾಣ್ ನಟಿಸಿರುವ 'ಹರಿ ಹರ ವೀರಮಲ್ಲು' ಸಿನಿಮಾವನ್ನು ಎ.ಎಂ ರತ್ನ ನಿರ್ಮಾಣ ಮಾಡಿದ್ದಾರೆ. ಇದರ ಬಜೆಟ್ ಸುಮಾರು 250 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಆರಂಭದಲ್ಲಿಈ ಸಿನಿಮಾವನ್ನು ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ಆರಂಭಿಸಿದ್ದರು. ಬಳಿಕ ಈ ಸಿನಿಮಾವನ್ನು ಎ.ಎಂ. ರತ್ನಂ ಅವರ ಪುತ್ರ ಎ.ಎಂ. ಜ್ಯೋತಿಕೃಷ್ಣ ಫಿನಿಶ್ ಮಾಡಿದ್ದರು. ಈಗ ಹರಿ ಹರ ವೀರಮಲ್ಲು ಪಾರ್ಟ್‌ 1 ಅನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.

More from Filmibeat

English summary
Pro-Kannada activists have torn down the poster of Pawan Kalyan's 'Hari Hara Veera Mallu' at Sandhya Cinema in Bengaluru, highlighting ongoing regional sentiments.
Read more about: pawan kalyan actor telugu movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X