"Jr.NTR 'ದೇವರ' ಸಿನಿಮಾದಿಂದ ಕೋಟಿಗಟ್ಟಲೆ ಕಳೆದು ಕೊಂಡಿದ್ದೇನೆ"; ನಿರ್ಮಾಪಕ ಬೇಸರ

ಜೂ.ಎನ್‌ಟಿಆರ್ ನಟಿಸಿದ 'ದೇವರ' ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. RRR ಸಿನಿಮಾ ಮೂಲಕ ಜೂ.ಎನ್‌ಟಿಆರ್ ನಟಿಸುತ್ತಿರುವ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿತ್ತು. ಆದರೆ, ಮೊದಲ ದಿನವೇ 'ದೇವರ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿತ್ತು.

'ದೇವರ' ಬ್ಲಾಕ್‌ ಬಸ್ಟರ್ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ. ಈ ವರ್ಷದ ರಿಲೀಸ್ ಆದ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ದೇವರ' ಇದೆ. ಜೂ.ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಮತ್ತೆ ವರ್ಕ್ ಆಗಿದೆ. ಇದೇ ಬೆನ್ನಲ್ಲೇ 'ದೇವರ ಪಾರ್ಟ್ 2' ಕೂಡ ಟೇಕಾಫ್ ಆಗುತ್ತಾ ಅಂತ ಜೂ.ಎನ್‌ಟಿಆರ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

Producer Etv Prabhakar told that Jr NTR Devara movie caused huge loss for Ram Nagar Bunny

'ದೇವರ' ಬ್ಲಾಕ್‌ ಬಸ್ಟರ್ ಲಿಸ್ಟ್‌ ಏನೋ ಸೇರಿದೆ. ಆದರೆ, ಇಲ್ಲೊಬ್ಬ ನಿರ್ಮಾಪಕ ಈ ಸಿನಿಮಾದಿಂದ ನಷ್ಟ ಅನುಭವಿಸಿದ್ದೇನೆ ಎಂದು ಹೇಳಿ ಬೇಸರ ಹೊರಹಾಕಿದ್ದಾರೆ. ಈ ಹೇಳಿಕ ಸದ್ಯ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ನಿರ್ಮಾಪಕ 'ದೇವರ' ವಿತರಣೆ ಮಾಡಿದ್ದರಿಂದ ನಷ್ಟ ಆಗಿದೆ ಅಂತ ಹೇಳಿದ್ದಲ್ಲ. 'ದೇವರ' ಸಿನಿಮಾದಿಂದ ತನ್ನ ಸಿನಿಮಾಗೆ ನಷ್ಟ ಆಗಿದೆ ಎಂದು ಕಂಡುಕೊಂಡಿದ್ದಾರೆ.

ಟಾಲಿವುಡ್‌ನಲ್ಲಿ ಈ ಟಿವಿ ಪ್ರಭಾಕರ್ ಅಂತಲೇ ಜನಪ್ರಿಯರಾಗಿರುವ ನಿರ್ಮಾಪಕ 'ರಾಮ್‌ ನಗರ ಬನ್ನಿ' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಮೂಲಕ ತಮ್ಮ ಪುತ್ರ ಚಂದ್ರಹಾಸ್ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯ ಮಾಡಿದ್ದರು. ಮಗನ ಸಿನಿಮಾವನ್ನು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು.

'ರಾಮ್ ನಗರ ಬನ್ನಿ' ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಮಾತ್ರ ಉತ್ತಮ ಗಳಿಕೆ ಮಾಡುವಲ್ಲಿ ಸಾಧ್ಯವಾಗಲಿಲ್ಲ. ಅದ್ಯಾಕೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ ಅನ್ನೋದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪುತ್ರ ಸಿನಿಮಾ ರಿಲೀಸ್ ಆದಾಗ ಎಲ್ಲರೂ ಇಷ್ಟ ಪಟ್ಟಿದ್ದರು. ಮಗನ ಅಭಿನಯದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದರು. ಆದರೆ, ಅದು ಬಾಕ್ಸಾಫೀಸ್ ಸಕ್ಸಸ್ ಆಗಿ ಕನ್ವರ್ಟ್ ಆಗಿಲ್ಲ ಎಂದಿದ್ದಾರೆ.

Producer Etv Prabhakar told that Jr NTR Devara movie caused huge loss for Ram Nagar Bunny

ತಮ್ಮ ಮಗನ ಸಿನಿಮಾ 'ರಾಮ್ ನಗರ ಬನ್ನಿ' ಸಿಕ್ಕಿದ ಪ್ರತಿಕ್ರಿಯೆ ನೋಡಿ ಕಲೆಕ್ಷನ್ ಕೂಡ ಅದ್ಭುತವಾಗಿರುತ್ತೆ ಎಂದು ನಂಬಿದ್ದೆ. ಆದರೆ, 'ದೇವರ' ಸಿನಿಮಾ ರಿಲೀಸ್ ಆಗಿದ್ದರಿಂದ ನಮ್ಮ ಸಿನಿಮಾದ ಕಲೆಕ್ಷನ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಈ ಕಾರಣಕ್ಕೆ ಸಿನಿಮಾವನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರದಿಂದ ಎತ್ತಂಗಡಿ ಮಾಡಿದ್ದರು. ಇದರಿಂದ ಕೋಟಿಗಟ್ಟಲೆ ನಷ್ಟ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

'ರಾಮ್ ನಗರ ಬನ್ನಿ' ಸಿನಿಮಾ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರು. ಹೊಸಬರ ಸಿನಿಮಾ ಇನ್ನೇನು ಬಾಕ್ಸಾಫೀಸ್‌ನಲ್ಲಿ ಪಿಕಪ್ ಆಗಬೇಕು ಅನ್ನುವ ಹೊತ್ತಲ್ಲೇ ಸೂಪರ್‌ಸ್ಟಾರ್ ಸಿನಿಮಾ 'ದೇವರ' ರಿಲೀಸ್ ಆಗಿತ್ತು. ಹೀಗಾಗಿ ಜನರು ಎಲ್ಲಾ ಆ ಸಿನಿಮಾ ಕಡೆಗೆ ವಾಲಿದ್ದರು. ಇದರಿಂದ 'ರಾಮ್ ನಗರ ಬನ್ನಿ' ಬಾಕ್ಸಾಫೀಸ್‌ನಲ್ಲಿ ನೆಲಕ್ಕಚ್ಚಿತ್ತು.

More from Filmibeat

English summary
Producer Etv Prabhakar told that Jr.NTR Devara movie caused huge loss for Ram Nagar Bunny:
Read more about: ntr box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X