"ನಿರ್ಮಾಪಕ ನನ್ನ ಬಟ್ಟೆ ಎಳೆಯಲು ಯತ್ನಿಸಿದ, ಅದೇ ಡ್ರೆಸ್ ನನ್ನನ್ನು ರಕ್ಷಿಸಿತು..ಇಂದು ಕಷ್ಟದಲ್ಲಿದ್ದೇನೆ";ಯಾರೀ ಯುವ ನಟಿ
ಸಿನಿಮಾರಂಗ ನಟಿಯರಿಗೆ ಸೇಫ್ ಅಲ್ಲ ಅನ್ನೋದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ವಿಷಯ. ಇತ್ತೀಚೆಗೆ ಈ ವಿಷಯ ಓಪನ್ ಆಗಿ ಚರ್ಚೆಯಾಗುತ್ತಿದೆ. ನಟಿಯರು ಸಿನಿಮಾರಂಗದಲ್ಲಿ ತಮಗಾಗುತ್ತಿರುವ ದೌರ್ಜನ್ಯದ ಬಗ್ಗೆ ಓಪನ್ ಆಗಿ ಮಾತಾಡುತ್ತಿದ್ದಾರೆ. ಅದರಲ್ಲೂ ಮೀಟೂ ಅಭಿಯಾನ ಶುರುವಾದ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತಾಡುವುದಕ್ಕೆ ಮುಂದಾಗುತ್ತಿದ್ದಾರೆ. ಅಂತಹವರಲ್ಲಿ ಗಾಯತ್ರಿ ಗುಪ್ತಾ ಕೂಡ ಇಬ್ಬರು.
ನಟಿ ಗಾಯತ್ರಿ ಗುಪ್ತಾ ತನ್ನದೇ ಯೂಟ್ಯೂಬ್ ಚಾನೆಲ್‌ನಲ್ಲಿ ತನಗಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಹೆಚ್ಚು ಕೆಲಸ ಮಾಡಿರುವ ಈ ನಟಿ 'ಫಿದಾ', 'ಬುರ್ರಾ ಕಥಾ', 'ಕೊಬ್ಬರಿ ಮಟ್ಟ', 'ಸೈಟ್ ಅನ್ ದಿ ರೋಡ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ನಟಿ ತನ್ನದೇ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ತನ್ನ ಆರೋಗ್ಯ ಸರಿಯಿಲ್ಲ. ತಾನೀಗ ಸಂಕಷ್ಟದಲ್ಲಿ ಇದ್ದೇನೆಂದು ಹೇಳಿಕೊಂಡಿದ್ದಾರೆ. ಈಗಾಗಲೇ ನೀಡಿದ ಸಂದರ್ಶನದಲ್ಲಿ ಈ ನಟಿ ಚಿಕಿತ್ಸೆಗಾಗಿ ದಾನಿಗಳ ಸಹಾಯವನ್ನು ಕೋರಿ ಸುದ್ದಿಯಾಗಿದ್ದರು.

ಇದರೊಂದಿಗೆ ಗಾಯತ್ರಿ ಗುಪ್ತಾ ಸಿನಿಮಾರಂಗದಲ್ಲಿ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿಡಿಯೋ ಮಾಡಿ ಯೂಟ್ಯೂನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಹೋರಾಟಗಳ ಬಗ್ಗೆ ಮಾತನಾಡಿದ್ದಾರೆ. ನಿರ್ಮಾಪಕನೊಬ್ಬ ಸಕ್ಸಸ್ ಮೀಟ್‌ಗೆ ಕರೆದು ಬಟ್ಟೆ ಹಿಡಿದು ಎಳೆದು ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ಆರೋಪ ಮಾಡಿದ್ದಾರೆ. ಅಂದು ಅದೇ ಡ್ರೆಸ್ ತನ್ನನ್ನು ಕಾಪಾಡಿದ್ದೇಗೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಇತ್ತೀಚೆಗೆ ಹಲವು ಮಂದಿ ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟಿ ಗಾಯತ್ರಿ ಗುಪ್ತಾ ಕೂಡ ಇಂತಹದ್ದೇ ಒಂದು ಅನುಭವವನ್ನು ಶೇರ್ ಮಾಡಿದ್ದಾರೆ. "ನಾನು ಉದ್ಯಮಕ್ಕೆ ಬಂದ ದಿನದಿಂದ ಎಷ್ಟು ಲೈಂಗಿಕ ದೌರ್ಜನ್ಯಗಳಾಗಿವೆ. ಅದ್ಯಾವುದಕ್ಕೂ ಪುರಾವೆಗಳಿಲ್ಲ. ನಾನು ಈ ಚಿತ್ರರಂಗದಲ್ಲಿ ಮುಗ್ಧಳಾಗಿ, ಏನೂ ತಿಳಿಯದೆ ಓಡಾಡುತ್ತಿದ್ದೆ. ಕಾಲೇಜಿನಲ್ಲಿ ನನ್ನ ಸೀನಿಯರ್ಸ್ ಹಾಲಿವುಡ್ ವಿಡಿಯೋಗಳನ್ನು ತೋರಿಸಿದ್ದರು. ಆಗ ಭಯ ಆಗಿತ್ತು. ತೆಲುಗಿನವರು ಒಳ್ಳೆಯ ಜನ. ಹಾಗಾಗಿ ಏನಾದರೂ ಮಾಡುವುದಿದ್ದರೆ ಇದೇ ಚಿತ್ರರಂಗದಲ್ಲೇ ಮಾಡಬೇಕೆಂದು ನಿರ್ಧರಿಸಿದೆ." ಎಂದು ಹೇಳಿದ್ದಾರೆ.
ಗಾಯತ್ರಿ ಗುಪ್ತಾ ಆಡಿಷನ್‌ಗೆ ಹೋದಾಗಲೆಲ್ಲ ಅವರಿಗೆ ಕಮಿಟ್‌ಮೆಂಟ್ ಕೇಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. " ಆಡಿಷನ್‌ಗೆ ಹೋದಾಗ ಲೈಂಗಿಕ ದೌರ್ಜನ್ಯಗಳು ಸಾಮಾನ್ಯವಾಗಿದ್ದವು. ಇಂದಿಗೂ ನನ್ನ ವೃತ್ತಿ ಜೀವನ ಸರಿಯಾಗಿಲ್ಲ. ನನ್ನ ಚಿಕಿತ್ಸೆಗಾಗಿ ಕ್ರೌಡ್ ಫಂಡಿಂಗ್ ಮಾಡಬೇಕಾದ ಪರಿಸ್ಥಿತಿಯಲ್ಲಿ ಇದ್ದೇನೆ" ಎಂದು ಗಾಯತ್ರಿ ಆತಂಕದಲ್ಲಿ ವಿಡಿಯೋ ಮಾಡಿದ್ದಾರೆ. ಹಾಗೇ ಸತ್ಯ ಮಾತಾಡಿದ್ದಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಸಿನಿಮಾರಂಗದಲ್ಲಿ ತನಗೆ ಕೆಲಸ ಸಿಗುತ್ತಿಲ್ಲ. ಟಾಲಿವುಡ್ ತನ್ನನ್ನು ಕಡೆಗಣಿಸಿದೆ ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಒಂದು ಸಿನಿಮಾ ಅರ್ಧಕ್ಕೆ ನಿಂತಿತ್ತು. ಅಲ್ಲಿಂದ ನಿರ್ಮಾಪಕರ ಕಾಟ ಶುರುವಾಗಿತ್ತು. ಹೀಗಾಗಿ ಎಲ್ಲಿಗೆ ಹೋದರೂ ಗೆಳೆಯನ್ನು ಕರೆದುಕೊಂಡು ಹೋಗುತ್ತಿದೆ. ಆದರೆ, ನಿರ್ಮಾಪಕರೊಬ್ಬರು ಟ್ರೈಲರ್ ಹಿಟ್ ಆಗಿದೆ ಎಂದು ಪಾರ್ಟಿಗೆ ಕರೆದಿದ್ದರು. ಅಲ್ಲಿಗೆ ಹೋದಾಗ ಬೇಡ ಎಂದು ಬೇಡಿಕೊಂಡರೂ ಬಲವಂತಾಗಿ ಮಧ್ಯ ಕುಡಿಸಿದರು ಎಂದು ಆ ನಟಿ ಹೇಳಿಕೊಂಡಿದ್ದಾರೆ.
"ಮೊದಲಿಗೆ ಮದ್ಯ ಕುಡಿಯಲು ಹಿಂಜರಿದೆ. ಆದರೆ ಒಮ್ಮೆಗೆ ನನ್ನ ಬಾಯಿಗೆ ಬಲವಂತವಾಗಿ ಸುರಿದಾಗ ನಾನು ಅಸಹಾಯಕಳಾಗಿದ್ದೆ. ನನ್ನ ಸ್ನೇಹಿತನಿಗೆ ಆತನ ಊರಿನಿಂದ ಫೋನ್ ಬಂದಾಗ, ಆತ ಅಲ್ಲಿಂದ ಹೋಗಿದ್ದ ನಾನೊಬ್ಬಳೆ ಇರುವುದನ್ನು ತಿಳಿದು ಆ ನಿರ್ಮಾಪಕ ಕಾರಿನಲ್ಲಿ ಡ್ರಾಪ್ ಮಾಡುತ್ತೇನೆ ಎಂದ. ಆ ನಿರ್ಮಾಪಕರು, ಫೋನ್ ತೆಗೆದುಕೊಂಡು ನಾಟಕವಾಡುತ್ತಾ, ಡ್ರೈವರ್ ಬರಲು ಸಮಯ ಹಿಡಿಯುತ್ತದೆಂದು ನನ್ನನ್ನು ಮತ್ತೆ ಮೇಲೆ ಕರೆದುಕೊಂಡು ಹೋದ. ಆ ನಿರ್ಮಾಪಕ ನನ್ನ ಡ್ರೆಸ್ ಎಳೆಯಲು ಪ್ರಯತ್ನಿಸಿದರು. ಆ ದಿನ ಆ ಡ್ರೆಸ್ಸೇ ನನ್ನನ್ನು ರಕ್ಷಿಸಿತು. ಆ ಡ್ರೆಸ್ ಸ್ವಲ್ಪ ಸಡಿಲವಾಗಿದ್ದು, ಹೀಗಾಗಿ ಬಚಾವ್ ಆದೆ. ಆ ಡ್ರೆಸ್ ಹಿಡಿದುಕೊಂಡು ಮೂಲೆಯಲ್ಲಿ ಕೂತಿದ್ದೆ. ಒಂದು ಗಂಟೆ ಕಾಲ ಬಲವಂತ ಮಾಡಿದರು. ಬಳಿಕ ಅದು ಸಾಧ್ಯವಾಗಲಿಲ್ಲವೆಂದು ನಿರ್ದೇಶಕರಿಗೆ ಫೋನ್ ಮಾಡಿ, ನನ್ನನ್ನು ಮನೆಯಲ್ಲಿ ಇಳಿಸಿ ಹೋದರು" ಎಂದು ಗಾಯತ್ರಿ ಗುಪ್ತಾ ಹೇಳಿಕೊಂಡಿದ್ದಾರೆ.


Click it and Unblock the Notifications











