ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್‌ಗೆ ಚಿತ್ರದಲ್ಲಿ ನಟಿಸಲು ಆಫರ್!

ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ತೆಲುಗು ಪ್ರೀತಿ ಎಲ್ಲರಿಗೂ ಗೊತ್ತಿರುವಂಥದ್ದು. ಹೆಂಡತಿ ಮಕ್ಕಳ ಜತೆಗೂಡಿ ಟಿಕ್ ಟಾಕ್‌ನಲ್ಲಿ ತೆಲುಗು ಸಿನಿಮಾ ಹಾಡುಗಳಿಗೆ ಕುಣಿದು ಅಚ್ಚರಿ ಮೂಡಿಸಿದ್ದ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರಿಗೆ ತೆಲುಗು ಚಿತ್ರದಲ್ಲಿ ನಟಿಸುವಂತೆ ಆಫರ್ ಬಂದಿದೆ.

Recommended Video

KGF 2 ನಂತರ ಯಶ್ ಮಾಡುವ ಸಿನಿಮಾ ಯಾವುದು ಗೊತ್ತಾ..? | YASH | KGF2 | MAHESH BABU | POORIJAGANATH

ಮಗಳ ಒತ್ತಾಯಕ್ಕೆ ಮಣಿದು ಟಿಕ್ ಟಾಕ್ ಲೋಕಕ್ಕೆ ಬಂದವರು ಡೇವಿಡ್ ವಾರ್ನರ್. ಲಾಕ್ ಡೌನ್ ಅವಧಿಯಲ್ಲಿ ಅವರು ಟಿಕ್ ಟಾಕ್ ವಿಡಿಯೋ ಮಾಡಿ ಅವುಗಳನ್ನು ಹಂಚಿಕೊಳ್ಳುವ ಮೂಲಕ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಜೆರ್ಸಿ ತೊಟ್ಟುಕೊಂಡು 'ಬುಟ್ಟ ಬೊಮ್ಮಾ' ಹಾಡಿಗೆ ಅವರು ಪತ್ನಿ ಜತೆಗೆ ನರ್ತಿಸಿದ್ದು, ಹಿಂದಿನಿಂದ ಅವರ ಪುಟಾಣಿ ಮಗಳು ತುಂಟಾಟ ನಡೆಸಿದ್ದು, ವೈರಲ್ ಆಗಿತ್ತು. ಅದು ಎಲ್ಲರ ಮೆಚ್ಚುಗೆಗೆ ಒಳಗಾಗಿತ್ತು. ಅವರ ತೆಲುಗು ಸಿನಿಮಾ ಒಲವು ಕಂಡು ತೆಲುಗಿನ ಖ್ಯಾತ ನಿರ್ದೇಶಕರು ಫಿದಾ ಆಗಿದ್ದಾರೆ. ಮುಂದೆ ಓದಿ...

ಪೋಕಿರಿ ಡೈಲಾಗ್

ಪೋಕಿರಿ ಡೈಲಾಗ್

ಡೇವಿಡ್ ವಾರ್ನರ್ ಈಗ ಕ್ರಿಕೆಟ್ ಮಾತ್ರವಲ್ಲದೆ, ಟಿಕ್ ಟಾಕ್ ಮೂಲಕವೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಬುಟ್ಟ ಬೊಮ್ಮಾ ಹಾಡಿನ ಟಿಕ್ ಟಾಕ್ ನೋಡಿ ಮೆಚ್ಚಿಕೊಂಡ ಫ್ಯಾನ್ಸ್, ವಿವಿಧ ಬೇಡಿಕೆಗಳನ್ನು ಇರಿಸುತ್ತಿದ್ದಾರೆ. ಅದರಂತೆ ವಾರ್ನರ್, ಮಹೇಶ್ ಬಾಬು ನಟನೆಯ 'ಪೋಕಿರಿ' ಚಿತ್ರದ ಡೈಲಾಗ್‌ಗೆ ಟಿಕ್ ಟಾಕ್ ಮಾಡಿದ್ದಾರೆ.

ಚಿತ್ರದ ಹೆಸರು ಊಹಿಸಿ!

'ಒಂದು ಬಾರಿ ನಾನು ಕಮಿಟ್ ಆದರೆ ನನ್ನ ಮಾತನ್ನು ನಾನೇ ಕೇಳೊಲ್ಲ' ಎಂಬ ಪೋಕಿರಿ ಚಿತ್ರದ ಡೈಲಾಗ್‌ಗೆ ಟಿಕ್ ಟಾಕ್ ಮಾಡಿರುವ ವಾರ್ನರ್, ತಮಗೆ ಚಿತ್ರದ ಹೆಸರು ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ. 'ಚಿತ್ರದ ಹೆಸರು ಊಹಿಸಿ. ನಾನು ಎಲ್ಲರ ಬಳಿ ಪ್ರಯತ್ನಿಸಿದೆ. ಗುಡ್ ಲಕ್ ಟಾಲಿವುಡ್' ಎಂದು ಬರೆದುಕೊಂಡಿದ್ದಾರೆ.

ಪುರಿ ಜಗನ್ನಾಥ್‌ ಆಹ್ವಾನ

ಪುರಿ ಜಗನ್ನಾಥ್‌ ಆಹ್ವಾನ

ಇದನ್ನು ಕಂಡು ಖುಷಿಯಾದ 'ಪೋಕಿರಿ' ನಿರ್ದೇಶಕ ಪುರಿ ಜಗನ್ನಾಥ್, ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವಂತೆ ಆಹ್ವಾನಿಸಿದ್ದಾರೆ. 'ಹಠಮಾರಿತನ ಮತ್ತು ಆಕ್ರಮಣಶೀಲತೆ. ಈ ಡೈಲಾಗ್ ನಿಮಗೆ ಸೂಟ್ ಆಗುತ್ತದೆ. ನೀವು ಅದ್ಭುತ ನಟರೂ ಹೌದು. ನನ್ನ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತೀರಿ ಎಂದು ಭಾವಿಸಿದ್ದೇನೆ. ಲವ್ ಯೂ' ಎಂದು ಹೇಳಿದ್ದಾರೆ.

ಟೀಮ್‌ನವರು ಬಿಡಬೇಕು!

ಟೀಮ್‌ನವರು ಬಿಡಬೇಕು!

ಅದಕ್ಕೆ ಪ್ರತಿಕ್ರಿಯಿಸಿರುವ ವಾರ್ನರ್, ಪ್ರಯತ್ನಿಸುತ್ತಿದ್ದೇನೆ ಸರ್. ಸನ್ ರೈಸರ್ಸ್ ತಂಡದವರು ನನ್ನನ್ನು ಬಿಡಬೇಕು ಇಲ್ಲವೇ ನಿಮಗೆ ಟ್ರೇಡ್ ಮಾಡಬೇಕು ಎಂದು ಐಪಿಎಲ್ ಟ್ರೇಡಿಂಗ್ ನೆನಪಿಸಿ ತಮಾಷೆಯಾಗಿ ಹೇಳಿದ್ದಾರೆ.

More from Filmibeat

English summary
Pokiri director Puri Jagannadh asked Australian cricketer David Warner to do a cameo in his movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X