Pushpa 2 Box Office Day 5: ಸೋಮವಾರದ ಪರೀಕ್ಷೆಯಲ್ಲಿ 'ಪುಷ್ಪ 2'ಗೆ ಹಿನ್ನೆಡೆ; ₹1000 ಕೋಟಿ ಕಲೆಕ್ಷನ್ ಆಗುತ್ತಾ?

ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕಳೆದ ನಾಲ್ಕು ದಿನಗಳಿಂದ ಬಾಕ್ಸಾಫೀಸ್‌ ಅನ್ನು ಲೂಟಿ ಮಾಡುತ್ತಲೇ ಇತ್ತು. ಮೊದಲ ನಾಲ್ಕು ದಿನ 'ಪುಷ್ಪ 2' ಕಲೆಕ್ಷನ್ ನೋಡಿ ಸಿನಿಮಾ ಮಂದಿನೇ ದಂಗಾಗಿದ್ದರು. ಆದರೆ, ಯಾವುದೇ ಸಿನಿಮಾವಿದ್ದರೂ, ಸೋಮವಾರ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗುತ್ತೆ ಅನ್ನೋದರ ಮೇಲೆ ಮುಂದಿನ ಭವಿಷ್ಯ ನಿಂತಿರುತ್ತೆ.

'ಪುಷ್ಪ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್ 2' ಸಿನಿಮಾದ ದಾಖಲೆಯನ್ನು ಮುರಿದು ಹಾಕುತ್ತೆ ಅಂತ ಲೆಕ್ಕಾಚಾರ ಹಾಕಿದ್ದರು. ಆದರೆ, ಐದನೇ ದಿನ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಿಂದೆ ಬಿದ್ದಿದೆ. ನಿನ್ನೆ ಸೋಮವಾರ (ಡಿಸೆಂಬರ್ 9) ಈ ಸಿನಿಮಾದ ಬಾಕ್ಸಾಫೀಸ್‌ನಲ್ಲಿ ಶೇ.55ರಷ್ಟು ಡ್ರಾಪ್ ಕಂಡಿದೆ.

Pushpa 2 Box Office Collection day 5 Allu Arjun Rashmika Mandanna movie failed in Monday test

ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದ 'ಪುಷ್ಪ 2'ಗೆ ಮೂರು ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾದ ಕಲೆಕ್ಷನ್ ಅದ್ಭುತವಾಗಿದೆ. ಆದರೆ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದೆ. ಎನ್ನಲಾಗಿದೆ. ಹಾಗಿದ್ದರೆ, ವಾರದ ಮೊದಲ ದಿನ 'ಪುಷ್ಪ 2' ಗೆ ಬಾಕ್ಸಾಫೀಸ್‌ನಲ್ಲಿ ರೆಸ್ಪಾನ್ಸ್ ಹೇಗಿದೆ? ಕರ್ನಾಟಕದ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಪುಷ್ಪ 2' ಸೋಮವಾರ ಡ್ರಾಪ್ ಆಗಿದ್ದೇಕೆ?

ಅಲ್ಲುಅರ್ಜುನ್ ಸಿನಿಮಾ 'ಪುಷ್ಪ 2' ಬಾಕ್ಸಾಫೀಸ್ ಅದ್ಭುತ ಕಲೆಕ್ಷನ್ ಮಾಡಿದೆ. ಮೊದಲ ನಾಲ್ಕು ದಿನ ನಿರೀಕ್ಷೆ ಮಾಡಿದಂತೆ ಅದ್ಬುತ ಕಲೆಕ್ಷನ್ ಮಾಡಿತ್ತು. ಆದರೆ, ಐದನೇ ದಿನ ಅಂದರೆ ಮೊದಲ ಸೋಮವಾರ 'ಪುಷ್ಪ 2' ಸಿನಿಮಾ ಕಲೆಕ್ಷನ್ ಶೇ.55ರಷ್ಟು ಡ್ರಾಪ್ ಆಗಿದೆ. ಇಂಡಸ್ಟ್ರಿ ಟ್ರ್ಯಾಕರ್ Sacnilk ಪ್ರಕಾರ 'ಪುಷ್ಪ 2' ಸೋಮವಾರ 64 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ಭಾನುವಾರ ಈ ಸಿನಿಮಾ 141.05 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಸಾವಿರ ಕೋಟಿಗೆ ಇನ್ನೆಷ್ಟು ಬೇಕು?

'ಪುಷ್ಪ 2' ತಂಡ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಗುರಿಯನ್ನು ಹೊಂದಿತ್ತು. ಇದನ್ನು ಮುಂದಿಟ್ಟುಕೊಂಡು 'ಪುಷ್ಪ 2' ತಂಡ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಭಾರತದಾದ್ಯಂತ ಸುಮಾರು 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಕಲೆಕ್ಷನ್ ಮಾಡಿತ್ತು. ಕೇವಲ 5 ದಿನಗಳಲ್ಲಿ ಶೇ. 90ರಷ್ಟು ತನ್ನ ಗುರಿಯನ್ನು ತಲುಪಿದ್ದು, ಇದೂವರೆಗೂ 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೋಮವಾರ ಡ್ರಾಪ್ ಆಗಿದ್ದರೂ ಇನ್ನು ಎರಡು ಮೂರು ದಿನಗಳಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಲೆಕ್ಕ ಹಾಕಲಾಗಿದೆ.

Pushpa 2 Box Office Collection day 5 Allu Arjun Rashmika Mandanna movie failed in Monday test

ಕರ್ನಾಟಕದಲ್ಲಿ 'ಪುಷ್ಪ 2' ಗಳಿಸಿದ್ದೆಷ್ಟು?

ಅಲ್ಲು ಅರ್ಜುನ್ ಸಿನಿಮಾಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಮೊದಲ ದಿನ 17 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ನಂತರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿತ್ತು. ವೀಕೆಂಡ್‌ನಲ್ಲಿ ಮತ್ತೆ ಏರಿಕೆ ಕಂಡಿದ್ದ ಕಲೆಕ್ಷನ್ ಸೋಮವಾರ ಡ್ರಾಪ್ ಆಗಿದೆ. ಕರ್ನಾಟಕದಲ್ಲಿ ನಿನ್ನೆ ಸೋಮವಾರ (ಡಿಸೆಂಬರ್ 9) ಕೇವಲ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಬಗ್ಗೆ ವಿತರಕರ ವಲಯದಲ್ಲಿ ಚರ್ಚೆಯಾಗಿತ್ತಿದೆ.

'ಕೆಜಿಎಫ್ 2' ಕಲೆಕ್ಷನ್ ಬ್ರೇಕ್ ಮಾಡುತ್ತಾ?

'ಪುಷ್ಪ 2' ಈಗಾಗಲೇ ಹಲವು ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಆದರೆ, ಸಿನಿಮಾ ಮೇಕಿಂಗ್ ಶುರುವಾದ ದಿನದಿಂದಲೂ 'ಕೆಜಿಎಫ್ 2' ದಾಖಲೆಯನ್ನು ಮುರಿಯುವುದೇ ಗುರಿಯಾಗಿಸಿಕೊಂಡಿತ್ತು. ಬಾಕ್ಸಾಫೀಸ್‌ನಲ್ಲಿ 'ಪುಷ್ಪ 2' ವೇಗ ನೋಡಿದರೆ 'ಕೆಜಿಎಫ್ 2' ದಾಖಲೆಯನ್ನು ಇನ್ನೊಂದು ವಾರದಲ್ಲಿ ಮುರಿಯಬಹುದು. ಆದರೆ, ಸೋಮವಾರದಿಂದ ಕಲೆಕ್ಷನ್ ಡ್ರಾಪ್ ಆಗಿದ್ದರಿಂದ ಇನ್ನೂ 300 ಕೋಟಿ ರೂಪಾಯಿಯನ್ನು ಕಲೆಕ್ಷನ್ ಮಾಡಬಹುದಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಈ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಚಿತ್ರತಂಡ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿಲ್ಲ.

More from Filmibeat

English summary
Pushpa 2 Box Office Collection day 5: Allu Arjun, Rashmika Mandanna movie failed in Monday test;
Read more about: pushpa 2 allu arjun box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X