ಹೈದರಾಬಾದ್ ಹೈವೇನಲ್ಲಿ 'ಪುಷ್ಪ 2' ಕಲಾವಿದರಿದ್ದ ಬಸ್‌ಗೆ ಅಪಘಾತ: ನಿಂತಿದ್ದ ಬಸ್‌ಗೆ ಗುದ್ದಿದ ಚಾಲಕ

By ಫಿಲ್ಮಿಬೀಟ್ ಡೆಸ್ಕ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಆಂಧ್ರ ಪ್ರದೇಶದಲ್ಲಿ ಇಡೀ ತಂಡ ಚಿತ್ರೀಕರಣಕ್ಕಾಗಿ ಬೀಡುಟ್ಟಿದೆ. ಶೂಟಿಂಗ್ ಮುಗಿದ ಬಳಿಕ ಕಲಾವಿದರನ್ನು ಕರೆದುಕೊಂಡು ಹೈದರಾಬಾದ್‌ಗೆ ಬಸ್ ಮರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ.

'ಪುಷ್ಪ 2' ಬಸ್ ಸಿನಿಮಾದ ಕಲಾವಿದರನ್ನು ಕರೆದುಕೊಂಡು ಹೈದರಾಬಾದ್‌ಗೆ ಹಿಂತಿರುಗುತ್ತಿತ್ತು. ಈ ವೇಳೆ ಹೈದರಾಬಾದ್ ಹಾಗೂ ವಿಜಯವಾಡ ಹೈವೇಯ ನಾರ್ಕೆಟ್‌ಪಲ್ಲಿ ಎಂಬಲ್ಲಿ ನಿಂತಿದ್ದ ಬಸ್‌ಗೆ 'ಪುಷ್ಪ 2' ತಂಡದ ಬಸ್ ಗುದ್ದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಪ್ರಾಣಿ ಹಾನಿಯೇನು ಆಗಿಲ್ಲ. ಆದರೆ, ಇಬ್ಬರು ಕಲಾವಿದರಿಗೆ ಚಿಕ್ಕ ಪುಟ್ಟ ಗಾಯವಾಗಿದೆ.

Pushpa 2 Bus Accident: 2 persons injured carrying movie artists in Telangana

ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಸಿನಿಮಾದ ಶೂಟಿಂಗ್ ಮುಗಿದಿದ್ದರಿಂದ ಕಲಾವಿದರು ಹಿಂತಿರುಗುತ್ತಿದ್ದರು. ಆಂಧ್ರ ಪ್ರದೇಶದ ಶ್ರಿಕಾಕುಲಂ ಜಿಲ್ಲೆಯಿಂದ ಹೈದರಾಬಾದ್ ಕಡೆಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಈ ಅವಘಡ ನಡೆದಿದೆ.

ಆರ್‌ಟಿಸಿ ಬಸ್‌ನ ಚಾಲಕ ತಾಂತ್ರಿಕ ದೋಷದಿಂದ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ. ಆದರೆ, 'ಪುಷ್ಪ 2' ಕಲಾವಿದರನ್ನು ಕರೆದುಕೊಂಡು ಬರುತ್ತಿದ್ದ ಚಾಲಕ ಆ ಬಸ್ ನಿಂತಿದ್ದು ಗಮನಿಸಲಿಲ್ಲ. ಹೀಗಾಗಿ ನಿಂತಿದ್ದ ಬಸ್‌ಗೆ ಗುದ್ದಿದ್ದಾನೆ. ಸದ್ಯ ಗಾಯಗೊಂಡು ಇಬ್ಬರು ಕಲಾವಿದರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಪವನ್ ಕಲ್ಯಾಣ್ ಅಭಿನಯದ 'ಹರಿಹರ ವೀರ ಮಲ್ಲು' ಸಿನಿಮಾ ಶೂಟಿಂಗ್ ಸೆಟ್ಟಿಗೆ ಬೆಂಕಿ ಬಿದ್ದಿತ್ತು. ಐತಿಹಾಸಿಕ ಸಿನಿಮಾಗಾಗಿ ಹಾಕಿದ್ದ ಕೋಟ್ಯಾಂತರ ರೂಪಾಯಿಯ ಸೆಟ್ ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯಲ್ಲೂ ಪ್ರಾಣಾಪಾಯದಿಂದ ತಂತ್ರಜ್ಞರು ಹಾಗೂ ಕಲಾವಿದರು ಪಾರಾಗಿದ್ದಾರೆ.

ಟಾಲಿವುಡ್‌ನ ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ 'ಪುಷ್ಪ 2'. ಮೊದಲ ಚಾಪ್ಟರ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಅರ್ಜುನ್ ಅರ್ಜುನ್ ಮ್ಯಾನರಿಸಂಗೆ ಸ್ಟೈಲ್‌ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಾಕ್ಸಾಫೀಸ್‌ನಲ್ಲಿ 350 ಕೋಟಿ ರೂ.ಗೂ ಅಧಿಕ ಗಳಿಕ ಕಂಡು ಹೊಸ ದಾಖಲೆ ಬರೆದಿತ್ತು.

ಹೀಗಾಗಿ 'ಪುಷ್ಪ 2' ಬಗ್ಗೆ ನಿರೀಕ್ಷೆಗಳು ಗಗನಕ್ಕೇರಿವೆ. ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ 'ಪುಷ್ಪ 2' ನೋಡುವುದಕ್ಕೆ ಪ್ರೇಕ್ಷಕರು ಕಾದು ಕೂತಿದ್ದಾರೆ. ಇತ್ತೀಚೆಗೆ ಇದೇ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು. ಅಲ್ಲು ಅರ್ಜುನ್ ಲುಕ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದರು. ಅಲ್ಲದೆ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ವಿಶೇಷವಾದ ವಿಡಿಯೋವನ್ನು ರಿಲೀಸ್ ಮಾಡಿದ್ದರು.

ಮೂಲಗಳ ಪ್ರಕಾರ, 'ಪುಷ್ಪ 2' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇದೇ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಮಾಡಬೇಕು ಅಂತ ಚಿತ್ರತಂಡ ಹರಸಾಹಸ ಮಾಡಿತ್ತು. ಆದ್ರೀಗ 2024 ಏಪ್ರಿಲ್ ವೇಳೆಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿದಂತೆ ದಿಗ್ಗಜರೇ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

'ಪುಷ್ಪ' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಂತೆ 'ಪುಷ್ಪ 2' ಹೊಸದೊಂದು ದಾಖಲೆ ಬರೆಯುವುದಕ್ಕೆ ಸಜ್ಜಾಗಿದೆ. ಮೊದಲನೇ ಚಾಪ್ಟರ್‌ಗೆ ಸಿಕ್ಕಿರೋ ರೆಸ್ಪಾನ್ಸ್‌ನಿಂದ ಥ್ರಿಲ್ ಆಗಿರೋ ಚಿತ್ರತಂಡ ದುಬಾರಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

More from Filmibeat

English summary
Pushpa 2 Bus Accident: 2 persons injured carrying movie artists in Telangana, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X