"ಭನ್ವರ್ ಸಿಂಗ್ ಶೇಖಾವತ್ ಪ್ರತೀಕಾರದ ಕಿಚ್ಚು ಇನ್ನೂ ಆರಿಲ್ಲ": 'ಪುಷ್ಪರಾಜ್' ಕಥೆಯೇನು?

ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಪುಷ್ಪ 2' ಕೂಡ ಒಂದು. ಇತ್ತೀಚೆಗೆ ನಿರ್ದೇಶಕ ಸುಕುಮಾರ್ 'ಪುಷ್ಪ 2' ಕಾನ್ಸೆಪ್ಟ್ ವಿಡಿಯೋವನ್ನು ವಿಭಿನ್ನವಾಗಿ ರಿವೀಲ್ ಮಾಡಿದ್ದರು. ಪುಷ್ಪರಾಜ್ ಎಲ್ಲಿ ಅಂತ ಹುಡುಕೋ ಹಾಗೇ ಮಾಡಿದ್ದರು.

'ಪುಷ್ಪ' ಪ್ಯಾನ್ ಇಂಡಿಯಾ ಅಬ್ಬರಿಸಿದ ಮೇಲೆ ಚಾಪ್ಟರ್ 2ಗೆ ಚಿತ್ರತಂಡ ಸ್ಕೆಚ್ ಹಾಕಿದೆ. ಪುಷ್ಪರಾಜ್ ಅನ್ನು ಮತ್ತಷ್ಟು ಪವರ್‌ಫುಲ್ ಆಗಿ, ಖಡಕ್ ಆಗಿ ತೋರಿಸಲು ಮುಂದಾಗಿದ್ದಾರೆ. ಈಗಾಗಲೇ ರಿವೀಲ್ ಆಗಿರೋ ಅಲ್ಲು ಅರ್ಜುನ್ ಗೆಟಪ್‌ ಇದ್ದಕ್ಕೆ ಪ್ರಮುಖ ಸಾಕ್ಷಿ.

Pushpa 2 Fahadh Faasil’s BTS First Look Out Allu Arjun Movie Director Sukumar Discussing scene

'ಪುಷ್ಪ 2' ಟೀಮ್ ಈಗ ಮತ್ತೊಂದು ವರ್ಕಿಂಗ್ ಇಮೇಜ್ ರಿಲೀಸ್ ಮಾಡಿದೆ. ಈ ಮೂಲಕ ಸಿನಿಮಾ ಪ್ರೇಮಿಗಳಿಗೆ ಒಂದು ಸಂದೇಶವನ್ನು ಕಳುಹಿಸಿದೆ. ಅಷ್ಟಕ್ಕೂ 'ಪುಷ್ಪ 2' ರಿವೀಲ್ ಮಾಡಿದ್ದೇನು? ಭನ್ವರ್ ಸಿಂಗ್ ಶೇಖಾವತ್ ಹಾಗೂ ನಿರ್ದೇಶಕ ಸುಕುಮಾರ್ ನಡುವಿನ ಸಂಭಾಷಣೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಭನ್ವರ್ ಸಿಂಗ್ ಶೇಖಾವತ್ ಪ್ರತೀಕಾರ

'ಪುಷ್ಪ' ಸಿನಿಮಾದ ಕೊನೆಯಲ್ಲಿ ಭನ್ವರ್ ಸಿಂಗ್ ಶೇಖಾವತ್ ಎಂಟ್ರಿ ಆಗಿದ್ದರೂ, ಪುಷ್ಪರಾಜ್ ಅಷ್ಟೇ ಪವರ್‌ಫುಲ್ ರೋಲ್ ಆಗಿತ್ತು. ಒಬ್ಬರಿಗೊಬ್ಬರು ಟಕ್ಕರ್ ಕೊಟ್ಟಿಕೊಂಡ ದೃಶ್ಯಗಳು ಸಿನಿಪ್ರಿಯರನ್ನು ರಂಜಿಸಿದ್ದವು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದ 'ಪುಷ್ಪ'ದ ಎರಡನೇ ಚಾಪ್ಟರ್‌ನಲ್ಲಿ ಇವರಿಬ್ಬರ ಕಾದಾಟ ಹೇಗಿರುತ್ತೆ? ಅನ್ನೋದು ನೋಡುವಕದಲ್ಲಿ ಪ್ರೇಕ್ಷಕರಿದ್ದಾರೆ.

ಸಿನಿಪ್ರೇಮಿಗಳ ಕುತೂಹಲಕ್ಕೆ ತಕ್ಕಂತೆ 'ಪುಷ್ಪ 2' ತಂಡ ತೆರೆ ಹಿಂದಿನ ವರ್ಕಿಂಗ್ ಸ್ಟಿಲ್ ಅನ್ನು ರಿಲೀಸ್ ಮಾಡಿದೆ. ಅಷ್ಟೇ ಅಲ್ಲ, ಆ ಇಮೇಜ್ ಮೂಲಕ ಶೇಖಾವತ್ ಪಾತ್ರದ ಪವರ್ ಏನು? ಅನ್ನೋದನ್ನು ರಿವೀಲ್ ಮಾಡಿದೆ.

ಶೇಖಾವತ್ ಪ್ರತೀಕಾರದ ಕಥೆಯೇನು?

'ಪುಷ್ಪ 2' ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ವರ್ಕಿಂಗ್ ಸ್ಟಿಲ್ ಅನ್ನು ರಿಲೀಸ್ ಮಾಡಿದೆ. ಇದರಲ್ಲಿ ನಿರ್ದೇಶಕರು ಸುಕುಮಾರ್ ಹಾಗೂ ಭನ್ವರ್ ಸಿಂಗ್ ಶೇಖಾವತ್ ಪಾತ್ರಧಾರಿ ಫಹಾದ್ ಫಾಸಿಲ್ ಜೊತೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಈ ಇಮೇಜ್ ಈ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

"ಈ ಬಾರಿ ಪ್ರತೀಕಾರ ತೀರಿಸಿಕೊಂಡೇ ಹಿಂತಿರುಗುತ್ತಾನೆ" ಎಂದು ಮೈತ್ರಿ ಮೂವಿ ಮೇಕರ್ಸ್ ಟ್ವೀಟ್ ಮಾಡಿದೆ. ಹೀಗಾಗಿ ಈ ಬಾರಿ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಡುವಿನ ಕಾಳಗ ತೀವ್ರವಾಗಿಯೇ ಇರುತ್ತೆ ಅನ್ನೋ ಸಂದೇಶವನ್ನು ರವಾನೆ ಮಾಡಿದೆ.

ಪುಷ್ಪರಾಜ್ ಕಥೆಯೇನು?

'ಪುಷ್ಪ 2' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ನಿರ್ದೇಶಕ ಸುಕುಮಾರ್ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡುತ್ತಿದ್ದಾರೆ. ಈಗ ಫಹಾದ್ ಫಾಸಿಲ್ ಭಾಗದ ಶೂಟಿಂಗ್ ಮುಗಿದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ ಇದೇ ವರ್ಷ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.

'ಪುಷ್ಪ 2'ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಹಾಗೂ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅಲ್ಲು ಅರ್ಜುನ್ ಗೆಟಪ್ ಸಖತ್ ಕಿಕ್ ಕೊಟ್ಟಿದೆ. ಪುಷ್ಪರಾಜ್ ಹೊಸ ಅವತಾರಕ್ಕೆ ಪ್ರೇಕ್ಷಕರು ಥ್ರಿಲ್ ಆಗಿದ್ದರು. ಈಗ ವೇಗ ಶೂಟಿಂಗ್ ಮುಗಿಯುತ್ತಿರೋದು ನೋಡಿದರೆ, ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

More from Filmibeat

English summary
Pushpa 2 Fahadh Faasil’s BTS First Look Out Allu Arjun Movie Director Sukumar Discussing scene with actor, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X