"ಸಮಂತಾಗೆ 40 ವರ್ಷ ಆದರೂ ಸರಿ ಹೊಂದುವ ಪಾತ್ರ ಕೊಡುತ್ತೇನೆ"; ಪುಷ್ಪ ನಿರ್ದೇಶಕ ಸುಕುಮಾರ್
ಟಾಲಿವುಡ್‌ನ ಸ್ಟಾರ್ ನಿರ್ದೇಶಕ ಸುಕುಮಾರ್ 'ಪುಷ್ಪ 2' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ನಟಿಸುತ್ತಿರುವ ಈ ಬಹು ನಿರೀಕ್ಷಿತ ಸಿನಿಮಾ ಬಗ್ಗೆ ಇಡೀ ಪ್ಯಾನ್ ಇಂಡಿಯಾ ಕಾದು ಕೂತಿದೆ. ಸುಕುಮಾರ್ ಕೇವಲ ನಿರ್ದೇಶಕ ಅಷ್ಟೇ ಅಲ್ಲ. ನಿರ್ಮಾಪಕ ಹಾಗೂ ಬರಹಗಾರ ಕೂಡ ಹೌದು.
'ಪುಷ್ಪ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುಕುಮಾರ್ ಗುರುತಿಸಿಕೊಂಡಿದ್ದಾರೆ. ಟಾಲಿವುಡ್‌ನಲ್ಲಿ ಮೆಗಾ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಸುಕುಮಾರ್ ನಟಿ ಸಮಂತಾ ಬಗ್ಗೆ ಸಂದರ್ಶನವೊಂದರಲ್ಲಿ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಅವರು ಯಾವುದೇ ವಯಸ್ಸಿನವರಾಗಿದ್ದರೂ ಅದಕ್ಕೆ ತಕ್ಕಂತೆ ಪಾತ್ರಗಳನ್ನು ಕೊಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಸುಕುಮಾರ್ ನಿರ್ದೇಶಿಸಿದ 'ರಂಗಸ್ಥಳಂ' ಸಿನಿಮಾದಲ್ಲಿ ಸಮಂತಾ ನಟಿಸಿದ್ದರು. ರಾಮ್ ಚರಣ್ ಹಾಗೂ ಸಮಂತಾ ಕಾಂಬಿನೇಷನ್‌ನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬ್ಲಸ್ಟರ್ ಅಂತ ಸಾಬೀತಾಗಿತ್ತು. ಈ ಸಿನಿಮಾ ವೇಳೆ ಸಮಂತಾ ಅಭಿನಯ ಕಂಡು ಸುಕುಮಾರ್ ಫ್ಯಾನ್ ಆಗಿದ್ದರು. ಆದರೆ, ಮೊದಲು 'ರಂಗಸ್ಥಳಂ' ಸಮಂತಾ ಬೇಡ ಅಂತ ಅಂದುಕೊಂಡಿದ್ದರಂತೆ. ಅದ್ಯಾಕೆ ಅನ್ನೋದನ್ನು ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸುಕುಮಾರ್ ಟಾಲಿವುಡ್‌ನ ಸಕ್ಸಸ್‌ಫುಲ್ ನಿರ್ದೇಶಕ. 'ಆರ್ಯ', 'ಆರ್ಯ 2', '100% ಲವ್', 'ನಂ 1 ನೇನೊಕ್ಕಡೇನೆ', ನಾನ್ನಕು ಪ್ರೇಮತೋ ಹಾಗೂ ರಂಗಸ್ಥಳಂ ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಅದರಲ್ಲೂ 'ರಂಗಸ್ಥಳಂ' ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತ್ತು.
ಸುಕುಮಾರ್ ನಿರ್ದೇಶಿಸಿದ 'ರಂಗಸ್ಥಳಂ' ಸಿನಿಮಾದಲ್ಲಿ ರಾಮಲಕ್ಷ್ಮಿ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಆದರೆ, ಸುಕುಮಾರ್‌ಗೆ ಸಮಂತಾ ಈ ಸಿನಿಮಾಗೆ ಬೇಡ ಅಂತ ಅನಿಸಿತ್ತಂತೆ. ಈ ಮಾತ್ರ ಸಂದರ್ಶನವೊಂದರಲ್ಲಿ ಸುಕುಮಾರ್ ಹೇಳಿಕೊಂಡಿದ್ದಾರೆ. ರಾಮ್ ಚರಣ್ ಪಾತ್ರದಲ್ಲಿ ಬೇರೆಯವರನ್ನು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ, ಹಳ್ಳಿ ಹುಡುಗಿ ಪಾತ್ರದಲ್ಲಿ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಬಗ್ಗೆ ಚಿಂತನೆ ಮಾಡಿದ್ದರಂತೆ.

ರಾಮ್ ಚರಣ್ ಹಾಗೂ ಸಮಂತಾ ಇಬ್ಬರೂ ಸ್ಟಾರ್ ನಟರೇ. ಇಬ್ಬರನ್ನು ಒಂದೇ ಸಿನಿಮಾದಲ್ಲಿ ಹಾಕಿಕೊಂಡರೆ ಅವರನ್ನು ಹ್ಯಾಂಡಲ್ ಮಾಡುವುದು ತುಂಬಾನೇ ಕಷ್ಟ ಈ ಕಾರಣಕ್ಕಾಗಿ ಸಮಂತಾ ಬದಲು ಬೇರೆಯವರನ್ನು ಆಯ್ಕೆ ಮಾಡಿ ಸಿನಿಮಾ ಮುಗಿಸುವ ಪ್ಲಾನ್ ಮಾಡಿದ್ದಂತೆ. ಬಳಿಕ ಮತ್ತೆ ಸಮಂತಾರನ್ನೇ ಆಯ್ಕೆ ಮಾಡಿದ್ದರು. 'ರಂಗಸ್ಥಳಂ'ನಲ್ಲಿ ಅವರ ಅಭಿನಯ ನೋಡಿ ಸುಕುಮಾರ್ ಥ್ರಿಲ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ.
ಹೀಗಾಗಿ ತಾನು ನಿರ್ದೇಶನ ಮಾಡುವವರೆಗೂ ಸಮಂತಾರನ್ನು ಆಯ್ಕೆ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಸಮಂತಾಗೆ 30, 40 ಅದೆಷ್ಟೇ ವಯಸ್ಸಾದರೂ, ಅವರ ವಯಸ್ಸಿಗೆ ಸರಿ ಹೊಂದುವಂತಹ ಪಾತ್ರವನ್ನೇ ನೀಡುತ್ತೇನೆ ಎಂದಿದ್ದಾರೆ. ಸಮಂತಾ ಲಿಪ್ ಲಾಕ್ ಮಾಡಿದ ದೃಶ್ಯ ಕೂಡ ಸಿನಿಮಾಗೆ ಮುಖ್ಯ. ಕಲೆಯ ದೃಷ್ಟಿಯಲ್ಲಿ ಸಿನಿಮಾವನ್ನು ನೋಡಬೇಕು ಎಂದು ಸುಕುಮಾರ್ ಹೇಳಿದ್ದಾರೆ.


Click it and Unblock the Notifications











