ವಿಶ್ವದ ಗಮನ ಸೆಳೆದ ಅಲ್ಲು ಅರ್ಜುನ್ 'ಪುಷ್ಪ': ಹೊಸ ಸಾಧನೆಯೇನು?
ಪುಷ್ಪ' ಸಿನಿಮಾ ಬಿಡುಗಡೆಗೂ ಮುನ್ನ ಈ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದು ಯಾರೂ ಊಹಿಸಿರಲಿಲ್ಲ. ಆದರೆ, ಸಿನಿಮಾ ರಿಲೀಸ್ ಆದ್ಮೇಲೆ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಹಿಂದಿಗೆ ಡಬ್ ಆಗಿದ್ದ 'ಪುಷ್ಪ' ಸಿನಿಮಾ ಪ್ರಚಾರವಿಲ್ಲದೆ ರಿಲೀಸ್ ಆಗಿತ್ತು.
ಜೀರೊ ಪಬ್ಲಿಸಿಟಿಯಲ್ಲಿ 'ಪುಷ್ಪ' ರಿಲೀಸ್ ಆಗಿದ್ದರೂ, ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಅಲ್ಲು ಅರ್ಜುನ್ ಸ್ಟೈಲ್, ಮ್ಯಾನರಿಸಂ, ಹಾಡುಗಳು ಡೈಲಾಗ್ ಎಲ್ಲವೂ ಹಿಂದಿ ಪ್ರೇಕ್ಷಕರಿಗೂ ಇಷ್ಟ ಆಗಿತ್ತು. ತೆಲುಗಿನಲ್ಲಿ ಮೊದಲ ದಿನವೇ 'ಪುಷ್ಪ' ಸಿನಿಮಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ, ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿರಲಿಲ್ಲ.
2021ರ ಅತೀ ದೊಡ್ಡ ಹಿಟ್ ಕೊಟ್ಟ ಸಿನಿಮಾ
ಇಷ್ಟೆಲ್ಲಾ ಇದ್ದರೂ, ಅಲ್ಲು ಅರ್ಜುನ್ 'ಪುಷ್ಪ' 2021ರಲ್ಲಿ ತೆರೆಕಂಡು ಬಾಕ್ಸಾಫೀಸ್ ಲೂಟಿ ಮಾಡಿದ ಅತೀ ದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿತ್ತು. 'ಪುಷ್ಪ' ಸಿನಿಮಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿತ್ತು. ರಾಷ್ಟ್ರ ಮಟ್ಟದಲ್ಲಿ ಸಿನಿಪ್ರಿಯರ ಗಮನ ಸೆಳೆದಿತ್ತು.

'ಪುಷ್ಪ ಪಾರ್ಟ್ 1' ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ಬಳಿಕ 'ಪುಷ್ಪ 2' ಬಗ್ಗೆ ಎಲ್ಲರ ಗಮನ ಸೆಳೆದಿದೆ. ಮೊದಲ ಪಾರ್ಟ್ ಗೆದ್ದ ಬೆನ್ನಲ್ಲೇ ಪಾರ್ಟ್ 2 ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. 'ಪುಷ್ಪ' ರಿಲೀಸ್ ಆಗಿ ಹಲವು ದಿನಗಳಾಗಿದ್ದರೂ, ಇನ್ನೂ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸದ್ಯಕ್ಕೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾ ಗಮನ ಸೆಳೆದು ಹೊಸ ಸಾಧನೆಯನ್ನು ಮಾಡಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ 'ಪುಷ್ಪ'
'ಪುಷ್ಪ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಸಿನಿಪ್ರಿಯರು ಸೀಕ್ವೆಲ್‌ಗಾಗಿ ಎದುರು ನೋಡುತ್ತಿದ್ದಾರೆ. ಭಾರತದ ಈ ಸಿನಿಮಾ ಆ ಮಟ್ಟಿಗೆ ಕ್ರೇಜ್ ಹುಟ್ಟಾಕಿದೆ. ಅಲ್ಲು ಅರ್ಜುನ್ 'ತಗ್ಗೆದೆಲೆ' ಸ್ಟೈಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಈ ಮಧ್ಯೆ ಮತ್ತೊಂದು ಸಾಧನೆ ಮಾಡಿದೆ.
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾ ಮಾಸ್ಕೋ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಈ ಸಿನಿಮಾವನ್ನು ಅಲ್ಲಿನ ಜನರಿಗಾಗಿ ಇಂಗ್ಲಿಷ್ ಹಾಗೂ ರಷ್ಯನ್ ಭಾಷೆಯ ಸಬ್ ಟೈಟಲ್ ಹಾಕಿ ಪ್ರದರ್ಶನ ಮಾಡಲಾಗಿದೆ. ವಿಶ್ವದಾದ್ಯಂತ ಬ್ಲಾಕ್ ಬಸ್ಟರ್ ಹಿಟ್ ಕಂಡ ಸಿನಿಮಾಗಳ ಕ್ಯಾಟಗರಿಯಲ್ಲಿ 'ಪುಷ್ಪ' ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಗುರುತಿಸಿಕೊಂಡಿದೆ.

'ಪುಷ್ಪ 2' ಸಿನಿಮಾಗೆ ಅಡಿಪಾಯ
ಅಲ್ಲು ಅರ್ಜುನ್ 'ಪುಷ್ಪ' ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು 'ಪುಷ್ಪ 2'ಗೆ ಅಡಿಪಾಯ ಹಾಕಿಕೊಟ್ಟಿದೆ. ಈ ಮೂಲಕ ಸೀಕ್ವೆಲ್ ವರ್ಲ್ಡ್ ವೈಡ್ ರಿಲೀಸ್‌ಗೆ ಈಗಿನಿಂದಲೇ ತಯಾರಿ ನಡೆಸುತ್ತಿರೋ ಸುಳಿವು ಸಿಕ್ಕಿದೆ.
ರಕ್ತಚಂದನ ಸ್ಮಗ್ಲಿಂಗ್ ಮಾಡುವ ಕಥೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ತೆಲುಗು ಸೇರಿದಂತೆ ತಮಿಳು, ಹಿಂದಿ, ಕನ್ನಡ ಮಲಯಾಳಂನಲ್ಲಿ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ, ಭನ್ವರ್ ಸಿಂಗ್ ಶೇಖಾವತ್ ಅವತಾರದಲ್ಲಿ ಫಹಾದ್ ಫಾಸಿಲ್, ಸುನಿಲ್ ಹಾಗೂ ಮತ್ತಿತರ ದಿಗ್ಗಜರೇ ನಟಿಸಿದ್ದರು. ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಕಿಕ್ ಕೊಟ್ಟಿತ್ತು.


Click it and Unblock the Notifications











