'ರಾಧೆ ಶ್ಯಾಮ್' ಸಿನಿಮಾ ಒಪ್ಪಿಕೊಂಡು 'ಬಿಗ್ ರಿಸ್ಕ್' ತೆಗೆದುಕೊಂಡಿದ್ದೇನೆ ಎಂದ ಪ್ರಭಾಸ್

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗೆ ಮಾಸ್ ಸ್ಟೋರಿ ಬಿಟ್ಟರೆ, ಬೇರೆ ಸ್ಟೋರಿಗಳು ಸೂಟ್ ಆಗಲ್ಲ. ರೊಮ್ಯಾಂಟಿಕ್ ಸಿನಿಮಾಗಳು ಪ್ರಭಾಸ್‌ಗೆ ಒಗ್ಗಲ್ಲ ಅಂತ ಸಿನಿಮಾ ಮಂದಿ ನಿರ್ಧರಿಸಿಬಿಟ್ಟಿದ್ದರು. 'ಬಾಹುಬಲಿ' ಸಿನಿಮಾ ಬಿಡುಗಡೆ ಬಳಿಕ ಪ್ರಭಾಸ್ ಇಮೇಜ್ ಬದಲಾಗಿದ್ದು, ಮಾಸ್ ಸ್ಟೋರಿಗಳನ್ನೇ ಅವರ ಮುಂದಿಟ್ಟಿದ್ದರು. ಆದರೆ, ಪ್ರಭಾಸ್‌ಗೆ ಲವ್ ಸ್ಟೋರಿಯಲ್ಲಿ ನಟಿಸಬೇಕು ಅನ್ನುವ ಆಸೆ. ಅದಕ್ಕೆ ಆಕ್ಷನ್ ಸಿನಿಮಾಗಳನ್ನು ಪಕ್ಕಕ್ಕಿಟ್ಟು ರೊಮ್ಯಾಂಟಿಕ್ ಸಿನಿಮಾ 'ರಾಧೆಶ್ಯಾಮ್' ಆಯ್ಕೆ ಮಾಡಿಕೊಂಡಿದ್ದರು.

'ರಾಧೆ ಶ್ಯಾಮ್' ಪಕ್ಕಾ ರೊಮ್ಯಾಂಟಿಕ್ ಸಿನಿಮಾ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್‌ ತೆರೆಮೇಲೆ ನೋಡುವುದಕ್ಕೆ ಇಬ್ಬರ ಅಭಿಮಾನಿಗಳೂ ಕಾದು ಕೂತಿದ್ದಾರೆ. ಇತ್ತ ಪ್ರಭಾಸ್ ಕೂಡ 'ರಾಧೆ ಶ್ಯಾಮ್' ಸಿನಿಮಾ ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ 'ರಾಧೆ ಶ್ಯಾಮ್' ಸಿನಿಮಾ ಒಪ್ಪಿಕೊಂಡಿದ್ದೇ ದೊಡ್ಡ ರಿಸ್ಕ್ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ರಿಲೀಸ್ ವೇಳೆ ಪ್ರಭಾಸ್ 'ರಾಧೆ ಶ್ಯಾಮ್' ಸಿನಿಮಾ ದೊಡ್ಡ ರಿಸ್ಕ್ ಎಂದಿದ್ದೇಕೆ?

 'ರಾಧೆ ಶ್ಯಾಮ್' ಒಪ್ಪಿದ್ದೇ 'ಬಿಗ್ ರಿಸ್ಕ್'

'ರಾಧೆ ಶ್ಯಾಮ್' ಒಪ್ಪಿದ್ದೇ 'ಬಿಗ್ ರಿಸ್ಕ್'

ಪ್ಯಾನ್ ಇಂಡಿಯಾ ಸಿನಿಮಾ 'ರಾಧೆ ಶ್ಯಾಮ್' ಇದೇ ಮಾರ್ಚ್ 11ರಂದು ರಿಲೀಸ್ ಆಗುತ್ತಿದೆ. ಹೀಗಾಗಿ ಪ್ರಭಾಸ್ ಬಿಡುವಿಲ್ಲದೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ 'ರಾಧೆ ಶ್ಯಾಮ್ ಸಿನಿಮಾ ಒಪ್ಪಿಕೊಂಡಿದ್ದೇ ದೊಡ್ಡ ರಿಸ್ಕ್ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಅನ್ನುವಾಗ ಇಂತಹ ಹೇಳಿಕೆ ಕೊಟ್ಟಿದ್ದು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಹಾಗೇ 'ರಾಧೆ ಶ್ಯಾಮ್' ಯಾಕೆ ದೊಡ್ಡ ರಿಸ್ಕ್ ಎನ್ನುವುದನ್ನೂ ಪ್ರಭಾಸ್ ಹೇಳಿದ್ದಾರೆ.

 ರಾಧೆ ಶ್ಯಾಮ್' ರಿಸ್ಕ್ ಎಂದಿದ್ದೇಕೆ?

ರಾಧೆ ಶ್ಯಾಮ್' ರಿಸ್ಕ್ ಎಂದಿದ್ದೇಕೆ?

"ನಾನು ಟಾಲಿವುಡ್‌ನಲ್ಲಿ ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿ ಸಾಬೀತು ಮಾಡಿದ್ದೇನೆ. ನಾನು ನಟಿಸಿದ ವರ್ಷಂ, ಡಾರ್ಲಿಂಗ್ ಹಾಗೂ ಮಿಸ್ಟರ್ ಪರ್ಫೆಕ್ಟ್ ಅಂತಹ ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದೇನೆ. ಇದನ್ನೇ ಬಾಲಿವುಡ್‌ನಲ್ಲಿ ಮಾಡಲು ಹೊರಟಿದ್ದೇನೆ. 'ರಾಧೆ ಶ್ಯಾಮ್' ಅಂತಹ ಒಂದು ಪ್ರಯತ್ನದಲ್ಲಿ ಒಂದು. ಈ ಕಾರಣಕ್ಕೆ 'ರಾಧೆ ಶ್ಯಾಮ್' ನಾನು ತೆಗೆದುಕೊಂಡ ದೊಡ್ಡ ರಿಸ್ಕ್" ಎಂದು ಪ್ರಭಾಸ್ ಪ್ರಚಾರದ ವೇಳೆ ಹೇಳಿದ್ದಾರೆ.

 ಲವ್‌ಸ್ಟೋರಿ, ಆಕ್ಷನ್ ಫೇವರಿಟ್ ಯಾವುದು?

ಲವ್‌ಸ್ಟೋರಿ, ಆಕ್ಷನ್ ಫೇವರಿಟ್ ಯಾವುದು?

'ಬಾಹುಬಲಿ' ಬಳಿಕ ಪ್ರಭಾಸ್ ಇಮೇಜ್ ಬದಲಾಗಿದೆ. ಡಾರ್ಲಿಂಗ್ ಅನ್ನು ರೊಮ್ಯಾಂಟಿಕ್ ಮೂಡ್‌ನಲ್ಲಿ ನೋಡಲು ಜನರು ಇಷ್ಟ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಭಾಸ್‌ಗೆ ಮಾತ್ರ ಆಕ್ಷನ್ ಸಿನಿಮಾಗಳಿಗಿಂತ ಲವ್‌ಸ್ಟೋರಿಗಳೇ ಇಷ್ಟವಂತೆ. " ನೀವು ವೈಯಕ್ತಿಕವಾಗಿ ಕೇಳಿದರೆ, ನನಗೆ ಲವ್ ಸ್ಟೋರಿ ಸಿನಿಮಾಗಳನ್ನು ನೋಡುವುದಕ್ಕೆ ಇಷ್ಟ. ಮಣಿರತ್ನಂ ನಿರ್ದೇಶಿಸಿದ 'ಗೀತಾಂಜಲಿ' ನನ್ನ ಫೇವರಿಟ್ ಸಿನಿಮಾ. ಆದರೆ ಸಿನಿಮಾದಲ್ಲಿ ನಟಿಸುವಾಗ ನಾನು ಆಕ್ಷನ್ ಸಿನಿಮಾಗಳನ್ನು ಇಷ್ಟ ಪಡುತ್ತೇನೆ." ಎಂದು ಪ್ರಭಾಸ್ ಹೇಳಿದ್ದಾರೆ.

 ಲವ್‌ಸ್ಟೋರಿ ಜೊತೆ ಥ್ರಿಲ್ಲರ್

ಲವ್‌ಸ್ಟೋರಿ ಜೊತೆ ಥ್ರಿಲ್ಲರ್

ಪ್ರಭಾಸ್ 'ರಾಧೆ ಶ್ಯಾಮ್' ಸಿನಿಮಾ ಮೂಡಿ ಬಂದಿರುವ ಬಗ್ಗೆ ಫುಲ್ ಖುಷಿಯಾಗಿದ್ದಾರೆ. " ರಾಧೆಶ್ಯಾಮ್ ಸಿನಿಮಾ ಪಕ್ಕಾ ಲವ್ ಸ್ಟೋರಿ. ಜೊತೆ ಥ್ರಿಲ್ಲರ್ ಕೂಡ ಇದೆ. ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಚೇಸಿಂಗ್ ದೃಶ್ಯವಿದೆ. ಈ ಸಿನಿಮಾದಲ್ಲಿನ ಹಡಗಿನ ದೃಶ್ಯವೇ 13 ನಿಮಿಷಗಳಿದೆ. ಇದು ಲವ್ ಸ್ಟೋರಿ ಆಗಿದ್ದರೂ, ಆಕ್ಷನ್ ಪ್ರಿಯರಿಗೆ ಖಂಡಿತಾ ನಿರಾಸೆಯಾಗುವುದಿಲ್ಲ. ವಿಕ್ರಮಾದಿತ್ಯ ಪಾತ್ರವನ್ನು ನನ್ನ ಫಿಮೇಲ್ ಫ್ಯಾನ್ಸ್ ಇಷ್ಟ ಪಡುತ್ತಾರೆ " ಎಂದು ಪ್ರಭಾಸ್ ಹೇಳಿಕೆ ನೀಡಿದ್ದಾರೆ.

More from Filmibeat

English summary
Radhe Shyam is a Big Risk by picking love story says Prabhas. Prabhas acted love story movies in Varsham, Darling, Mr Perfect. He wants to do the same in Bollywood with Radhe Shyam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X