ರಾಜಮೌಳಿ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಮಾಡಿದ್ರಾ ಮಹೇಶ್ ಬಾಬು? ಏನಿದು 6 ಪ್ಯಾಕ್ ಸೀಕ್ರೆಟ್?
ಟಾಲಿವುಡ್‌ನ ಸ್ಪುರದ್ರೂಪಿ ನಟ ಮಹೇಶ್ ಬಾಬು. ತೆಲುಗು ಚಿತ್ರರಂಗದ ಈ ಹ್ಯಾಂಡ್‌ಸಮ್ ಹೀರೊ ಲುಕ್‌ಗೆ ಫಿದಾ ಆಗದವರೇ ಇಲ್ಲ. ಮಹೇಶ್ ಬಾಬು ಇತ್ತೀಚೆಗೆ ನಟಿಸಿದ ಸಿನಿಮಾ 'ಗುಂಟೂರು ಖಾರಂ' ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಈ ಸಿನಿಮಾ ಅದ್ಯಾಕೋ ಅಷ್ಟೊಂದು ಮೋಡಿ ಮಾಡಲಿಲ್ಲ. ಆದರೆ, ಟಾಲಿವುಡ್ ಸೂಪರ್‌ಸ್ಟಾರ್ ಯೂತ್ ಲುಕ್‌ಗೆ ಫಿದಾ ಆಗಿದ್ದರು.
ಮಹೇಶ್‌ಬಾಬುಗೆ ಈಗ 48 ವರ್ಷ. ಆದರೆ, ಇಷ್ಟು ವಯಸ್ಸಾಗಿದೆ ಅಂದರೆ ಯಾರೂ ನಂಬೋದಿಲ್ಲ. ಇನ್ನೂ 30ರ ಆಸುಪಾಸಿನ ಯುವಕರಂತೆ ಕಾಣುತ್ತಾರೆ. 'ಗುಂಟೂರು ಖಾರಂ' ಸಿನಿಮಾ ಮಹೇಶ್ ಯಂಗ್ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಈಗ ರಾಜಮೌಳಿ ನಿರ್ದೇಶಿಸಲಿರುವ ಹೊಸ ಸಿನಿಮಾಗೆ ಮಹೇಶ್ ಬಾಬು ಜಿಮ್‌ನಲ್ಲಿ ಸಿಕ್ಕಾಪಟ್ಟೆ ವರ್ಕ್‌ಔಟ್ ಮಾಡುತ್ತಿದ್ದಾರೆ.

RRR ಸಿನಿಮಾ ಬಳಿಕ ರಾಜಮೌಳಿ ಪ್ಯಾನ್ ವರ್ಲ್ಡ್ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿವುಡ್‌ಗೂ ಸೆಡ್ಡು ಹೊಡೆಯುವ ಸಿನಿಮಾ ಮಾಡುವುಕ್ಕೆ ನಿರ್ಧರಿಸಿದ್ದಾರೆ. ಹೀಗಾಗಿ ಮಹೇಶ್ ಬಾಬುಗೆ ಸಿನಿಮಾ ಮಾಂತ್ರಿಕ ರಾಜಮೌಳಿ ಕಂಡೀಷನ್ ಹಾಕಿದ್ದಾರೆ ಅನ್ನೋದ ಸದ್ಯಕ್ಕೆ ಒಡಾಡುತ್ತಿರುವ ಸುದ್ದಿ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಫೋಟೊಗಳು ಹರಿದಾಡುತ್ತಿವೆ. ಇದನ್ನು ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ.
ಸಿನಿಮಾದಿಂದ ಸಿನಿಮಾಗಳಿಗೆ ಮಹೇಶ್ ಬಾಬು ಫಿಟ್ ಆಗಿ ಕಾಣಿಸುತ್ತಿದ್ದಾರೆ. ಅದಕ್ಕೆ 'ಗುಂಟೂರು ಖಾರಂ' ಸಿನಿಮಾವೇ ಸಾಕ್ಷಿ. ಹಾಗೇ ರಾಜಮೌಳಿ ಸಿನಿಮಾಗೂ ಮಹೇಶ್ ಬಾಬು ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರೋದು ಗೊತ್ತೇ ಇದೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೊದಲ್ಲಿ ಮಹೇಶ್ ಬಾಬು ಸಿಕ್ಸ್ ಪ್ಯಾಕ್ ನೋಡಿ ಥ್ರಿಲ್ ಆಗಿದ್ದಾರೆ. ಜಕ್ಕಣ್ಣನ ಸಿನಿಮಾಗಾಗಿ ಮಹೇಶ್ ಬಾಬು ಈ ಮಟ್ಟಿಗೆ ರೆಡಿಯಾಗ್ತಿದ್ದಾರಾ? ಅನ್ನೋ ಪ್ರಶ್ನೆ ಮೂಡಿದೆ.
ರಾಜಮೌಳಿ ಸಿನಿಮಾ ಅಂದರೆ ಸುಮ್ಮನೆ ಅಲ್ಲ. ವರ್ಷಗಟ್ಟಲೆ ಕಾಲ್‌ಶೀಟ್ ಕೊಡಬೇಕು. ಒಮ್ಮೆ ಆರಂಭ ಆದರೆ, ಅದು ಎಷ್ಟು ದಿನ ಹಿಡಿಯುತ್ತೋ ಗೊತ್ತಿಲ್ಲ. ಪ್ರಭಾಸ್, ಜೂ.ಎನ್‌ಟಿಆರ್, ರಾಮ್ ಚರಣ್ ಎಲ್ಲರೂ ರಾಜಮೌಳಿಗೆ ವರ್ಷಗಟ್ಟಲೆ ಕಾಲ್‌ಶೀಟ್ ಕೊಟ್ಟು ಕೂತಿದ್ದರು. ಈಗ ಮಹೇಶ್ ಬಾಬು ಸರದಿ. ಈಗಾಗಲೇ ಮಹೇಶ್ ಬಾಬು ಫಿಟ್ನೆಸ್ ತರಬೇತಿಗಾಗಿ ವಿದೇಶಕ್ಕೂ ತೆರಳಿದಿದ್ದರು. ಅಲ್ಲದೇ ಅಲ್ಲಿನ ವೈದ್ಯರೊಂದಿಗೆ ಸಲಹೆಯನ್ನೂ ಪಡೆದು ಬಂದಿದ್ದಾರೆ ಎನ್ನಲಾಗಿದೆ.

ಸದ್ಯ ಮಹೇಶ್ ಬಾಬು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶರ್ಟ್ ತೆಗೆದು ವರ್ಕ್ ಔಟ್ ಮಾಡುತ್ತಿರವ ಬ್ಲ್ಯಾಕ್ ಅಂಡ್ ವೈಟ್ ಫೋಟೊಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಫೋಟೊಗಳನ್ನು ನೋಡಿ ಮಹೇಶ್ ಬಾಬು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದೇ ಇನ್ನೊಂದು ಕಡೆ ಇದು ಒರಿಜಿನಲ್ ಫೋಟೊ ಅಲ್ಲ ಅಂತಿದ್ದಾರೆ.
ಮಹೇಶ್ ಬಾಬು ಸಿಕ್ಸ್ ಪ್ಯಾಕ್ ಮಾಡಿಲ್ಲ. ಇದು ಎಡಿಟ್ ಮಾಡಿದ ಫೋಟೊ ಎಂದು ಪ್ರತಿಪಾದಿಸುತ್ತಿದ್ದಾರೆ. ರಾಜಮೌಳಿ ಸಿನಿಮಾಗಾಗಿ ಮಹೇಶ್ ಬಾಬು ವರ್ಕ್‌ಔಟ್ ಮಾಡುತ್ತಿರೋದು ನಿಜ. ಆದರೆ, ಈ ಫೋಟೊ ಅಲ್ಲ ಅಂತಿದ್ದಾರೆ. ಸದ್ಯಕ್ಕೆ ಮಹೇಶ್ ಬಾಬು, ರಾಜಮೌಳಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, 1000 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿರೋದ್ರಿಂದ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿರುತ್ತೆ ಅನ್ನೋದಂತೂ ಸ್ಪಷ್ಟ.


Click it and Unblock the Notifications











