ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ ಕೆ ವಿ ವಿಜಯೇಂದ್ರ ಪ್ರಸಾದ್: ಅದರ ಟೈಟಲ್ 'ಬ್ರಹ್ಮಪುತ್ರ'.. ಏನಿದು?

ಭಾರತೀಯ ಚಿತ್ರರಂಗ ಶ್ರೇಷ್ಠ ಕಥೆಗಾರ ವಿಜಯೇಂದ್ರ ಪ್ರಸಾದ್. ಈಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಕಥೆ ಬರೆದಿದ್ದಾರೆ. ಬಾಹುಬಲಿ, RRR ಅಂತಹ ಸಿನಿಮಾಗಳಿಗೆ ಶ್ರೇಷ್ಠ ಕಥೆಯನ್ನು ಒದಗಿಸಿದ್ದು, ಇದೇ ವಿಜಯೇಂದ್ರ ಪ್ರಸಾದ್. ಸದ್ಯ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಹೊಸ ಪ್ರಾಜೆಕ್ಟ್‌ಗೆ ಕಥೆ ಹೆಣೆಯುತ್ತಿದ್ದಾರೆ.

ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಿದು. RRR ಬಳಿಕ ಈ ಸಿನಿಮಾ ಪ್ಯಾನ್ ವರ್ಲ್ಡ್ ಸಿನಿಮಾ ಆದರೂ ಆಗಬಹುದು ಅನ್ನೂ ಊಹೆಯಲ್ಲಿ ಪ್ರಿನ್ಸ್ ಅಭಿಮಾನಿಗಳಿದ್ದಾರೆ. ಈಗಾಗಲೇ ವಿಜಯೇಂದ್ರ ಪ್ರಸಾದ್ ಕೂಡ ಈ ಪ್ರಾಜೆಕ್ಟ್ ಬಗ್ಗೆ ಕುತೂಹಲ ಕೆರಳಿಸುತ್ತಲೇ ಇದ್ದಾರೆ.

Rajamouli Father K V Vijayendra Prasad writing a novel called Brahmaputra here is the details

ಈ ಸ್ಟಾರ್ ರೈಟರ್ ವಿಜಯೇಂದ್ರ ಪ್ರಸಾದ್, ಪ್ರಿನ್ಸ್ ಮಹೇಶ್ ಬಾಬು ಸಿನಿಮಾಗಿಂತಲೂ ಮೊದಲು ಮತ್ತೊಂದು ಪ್ರಾಜೆಕ್ಟ್ ಅನ್ನು ಮುಗಿಸಲಿದ್ದಾರೆ. ಅದುವೇ ಬ್ರಹ್ಮಪುತ್ರ. ಅಷ್ಟಕ್ಕೂ ಏನಿದು 'ಬ್ರಹ್ಮಪುತ್ರ' ಹೊಸ ಐತಿಹಾಸಿಕ ಸಿನಿಮಾನಾ? ಕಥೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ವಿಜಯೇಂದ್ರ ಪ್ರಸಾದ್ ಹೊಸ ಪ್ರಾಜೆಕ್ಟ್ 'ಬ್ರಹ್ಮಪುತ್ರ'

ವಿಜಯೇಂದ್ರ ಪ್ರಸಾದ್ ಉತ್ತಮ ಬರಹಗಾರ ಅನ್ನೋದು ಎಲ್ಲರಿಗೂ ಗೊತ್ತು. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಹೇಗೆ ಸೆಳೆಯಬೇಕು ಅನ್ನೋದು ಅವರಿಗೆ ಚೆನ್ನಾಗೇ ಗೊತ್ತು. ಇದರು 'ಬಾಹುಬಲಿ' ಸೀರಿಸ್ ಹಾಗೂ 'RRR' ಸಿನಿಮಾವೇ ಸಾಕ್ಷಿ.

17ನೇ ಶತಮಾನದ ವೀರನೊಬ್ಬನ ಕಥೆಯನ್ನು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸಿದ್ಧಪಡಿಸುತ್ತಿದ್ದಾರೆ. ಮಹೇಶ್ ಬಾಬು ಪ್ರಾಜೆಕ್ಟ್‌ಗೂ ಮುನ್ನವೇ 'ಬ್ರಹ್ಮಪುತ್ರ' ಕಥೆಯನ್ನು ಬರೆದು ಮುಗಿಸಲಿದ್ದಾರೆ ಅಂತ ಟಾಲಿವುಡ್‌ನಲ್ಲಿ ಸುದ್ದಿಯಾಗುತ್ತಿದೆ.

Rajamouli Father K V Vijayendra Prasad writing a novel called Brahmaputra here is the details

ಲಚಿತ್ ಬೊರ್ಫುಕನ್ ಮೇಲೆ ವಿಜಯೇಂದ್ರ ಕಣ್ಣು

17ನೇ ಶತಮಾನದ ವೀರ ಲಚಿತ್ ಬೊರ್ಫುಕನ್. ಲಚಿತ್ ಹಾಗೂ ಅಹೋಮ್ ಸಾಮ್ರಾಜ್ಯವನ್ನು ಆಳಿದ ಸ್ವರ್ಗದೇವ್ ಜಯಧ್ವಜ ಸಿಂಹನ ಮಗಳು ರಾಜಕುಮಾರಿ ಪದ್ಮಿನಿ ಪ್ರೀತಿಯಲ್ಲಿ ಬಿದ್ದಿರುತ್ತಾರೆ. ಇಬ್ಬರ ಪ್ರೀತಿಯ ಗುಟ್ಟು ರಾಜನಿಗೆ ತಿಳಿಯುತ್ತೆ. ಈಗ ರಾಜ ಲಚಿತ್‌ನನ್ನು ರಾಜಧಾನಿ ಜೋರ್ಹತ್‌ನಿಂದ ಹೊರದಬ್ಬುತ್ತಾನೆ. ಇದೇ ವೇಳೆ ಔರಂಗಜೇಬನ ಸೈನ್ಯ ಅಹೋಮ್ ರಾಜಧಾನಿಯ ಮೇಲೆ ದಾಳಿ ಮಾಡುತ್ತೆ. ಈ ಪರಿಣಾಮ ಸ್ವರ್ಗದೇವ್ ರಾಜ್ಯ ಒಂದು ಭಾಗವನ್ನು ಮೊಘಲಿಗೆ ನೀಡಬೇಕಾಗಿ ಬರುತ್ತೆ.

ಇದನ್ನು ಅರಿತ ಲಚಿತ್, ರಾಜಧಾನಿಯನ್ನು ಮೊಘಲರಿಂದ ರಕ್ಷಣೆ ಮಾಡಲೇಬೇಕು ಎಂದು ನಿರ್ಧರಿಸಿದ್ದ. ಹೀಗಾಗಿ ಚಕ್ರಧ್ವಜನೊಂದಿಗೆ ಸೇರಿಕೊಂಡು ಯುದ್ಧಕ್ಕೆ ಮುಂದಾಗುತ್ತಾನೆ. ಈ ಯುದ್ಧ ಅಹೋಮ್ ಸಾಮ್ರಾಜ್ಯದ ಭವಿಷ್ಯವನ್ನೇ ಬದಲಾಯಿಸುತ್ತೆ. ಇತಿಹಾಸದ ಪುಟಗಳಲ್ಲಿ ಸದ್ದು ಮಾಡದೆ ಕೂತಿರುವ ಲಚಿತ್ ಅನ್ನೋ ಯೋಧನ ಕಥೆಗೆ ವಿಜಯೇಂದ್ರ ಪ್ರಸಾದ್ ಆಕ್ಷನ್ ಮತ್ತು ಪ್ರಣಯದ ಚಟ್ ಕೊಟ್ಟಿದ್ದಾರೆ.

'ಬ್ರಹ್ಮಪುತ್ರ: ದಿ ಅಹೋಮ್ ಸನ್ ರೈಸಸ್'

ಅಂದ್ಹಾಗೆ 'ಬ್ರಹ್ಮಪುತ್ರ' ಅನ್ನೋದು ಒಂದು ಕಾದಂಬರಿ. ಇದರ ಹೆಸರು 'ಬ್ರಹ್ಮಪುತ್ರ: ದಿ ಅಹೋಮ್ ಸನ್ ರೈಸಸ್'. ನೌಕಾದಳದ ಅಧಿಕಾರಿ ಕಲಪ್ರೀತ್ ಯಾದವ್ ಜೊತೆ ಸೇರಿಕೊಂಡು ಈ ಕಾದಂಬರಿಯನ್ನು ಬರೆದು ಮುಗಿಸಿದ್ದಾರೆ. ಇದೊಂದು ಪತ್ತೇದಾರಿ ಕಥೆಯಾಗಿದ್ದು, ಹಾರ್ಪರ್‌ಕಾಲಿನ್ಸ್ ಪಬ್ಲಿಷರ್ಸ್ ಇಂಡಿಯಾ ಈ ಕಾದಂಬರಿಯನ್ನು ಮೇ 30 ರಂದು ರಿಲೀಸ್ ಮಾಡುತ್ತಿದೆ.

ಲಚಿತ್ ಬೋರ್ಫುಕನ್ ಅಸ್ಸಾಂನ ಅಹೋಮ್ ಸಾಮ್ರಾಜ್ಯದಲ್ಲಿ ಸೇನಾಪತಿ. 1671ರಲ್ಲಿ ನಡೆದ ಸಾರೈಘಾಟ್ ಯುದ್ಧದಲ್ಲಿ ನಾಯಕತ್ವ ವಹಿಸಿಕೊಂಡಿದ್ದನು. ಲಚಿತ್ ಹಲವು ಬಾರಿ ಮೊಘಲರನ್ನು ಸೋಲಿಸಿ, ಅವರಿಂದ ರಾಜಧಾನಿ ಗುವಾಹಟಿಯನ್ನು ವಶಪಡಿಸಿಕೊಂಡಿದ್ದನು. ಹೀಗಾಗಿ ಅಲ್ಲಿ ಜನರ ಪಾಲಿಗೆ ಲಚಿತ್ ಹೀರೊ. ಈಗ ಈ ಕಾದಂಬರಿಯನ್ನು ವಿಜಯೇಂದ್ರ ಪ್ರಸಾದ್ ಸಿನಿಮಾ ಮಾಡುತ್ತಾರಾ? ಇಲ್ಲ ಕಾದಂಬರಿಯಾಗಿಯೇ ಉಳಿಸಿಕೊಳ್ಳುತ್ತಾರಾ? ಅನ್ನೋದು ನೋಡಬೇಕಿದೆ.

More from Filmibeat

English summary
Rajamouli Father K V Vijayendra Prasad writing a novel called Brahmaputra here is the details, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X