'ಗ್ಲೋಬ್ ಟ್ರೋಟರ್' ಇವೆಂಟ್‌ಗೆ ಹೋಗ್ತಿದ್ದೀರಾ? ಸೂಪರ್‌ಸ್ಟಾರ್ ಮಹೇಶ್ ಬಾಬುವಿನ ಈ ವಿಡಿಯೋ ನೋಡಿ

ನಾಳೆ (ನವೆಂಬರ್ 15) ಮಹೇಶ್ ಬಾಬು ಅಭಿಮಾನಿಗಳಿಗೆ ಹಬ್ಬ. ಇಲ್ಲಿವರೆಗೂ ಸದ್ದಿಲ್ಲದೆ ರಾಜಮೌಳಿ ಸಿನಿಮಾದಲ್ಲಿ ನಟಿಸಿದ್ದ ಮಹೇಶ್ ಬಾಬು ತಮ್ಮ ಅಭಿಮಾನಿಗಳಿಗೆ ಒಂದೇ ಒಂದು ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ರಾಜಮೌಳಿ ಕೂಡ ಕಟ್ಟು ನಿಟಾಗಿ ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದರು. ಕಳೆದ ಕೆಲವು ದಿನಗಳಿಂದ ರಾಜಮೌಳಿ ತಮ್ಮ ಸಿನಿಮಾದ ಒಂದೊಂದು ರಹಸ್ಯವನ್ನು ರಿವೀಲ್ ಮಾಡುತ್ತಿದ್ದಾರೆ.

ಹೀಗಾಗಿ ನಾಳೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿರುವ 'ಗ್ಲೋಬ್ ಟ್ರೋಟರ್' ಇವೆಂಟ್‌ನಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಅಚ್ಚರಿಗಳು ಕಾದಿವೆ. ಮಹೇಶ್ ಬಾಬು ಫ್ಯಾನ್ಸ್ ಕೂಡ ಈ ಸಿನಿಮಾದ ಝಲಕ್ ಅನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾತುರರಾಗಿದೆ. ಅದ್ಧೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು, ಸಿನಿಮಾದ ಗಣ್ಯರು ಹಾಗೂ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸೇರುವ ಸಾಧ್ಯತೆಯಿದೆ.

Rajamouli globetrotter event Tollywood superstar Mahesh Babu releases special video for fans about ssmb 29

ರಾಮೋಜಿ ಫಿಲ್ಮಿ ಸಿಟಿಯಲ್ಲಿ ಈಗಾಗಲೇ 'ಗ್ಲೋಬ್ ಟ್ರೋಟರ್' ಇವೆಂಟ್‌ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಾಳೆ ಸಂಜೆ ನಡೆಯುವ ಈ ಕಾರ್ಯಕ್ರಮ ಇಡೀ ದೇಶವನ್ನು ಹೌಹಾರಿಸುವುದು ಪಕ್ಕಾ. ಈ ಬೆನ್ನಲ್ಲೇ ಇವೆಂಟ್‌ನ ಕೇಂದ್ರ ಬಿಂದು ಸೂಪರ್‌ಸ್ಟಾರ್ ಮಹೇಶ್ ಬಾಬು ತಮ್ಮ ಅಭಿಮಾನಿಗಳಿಗೆ ಸಂದೇಶ ಹೊತ್ತ ವಿಡಿಯೋವೊಂದನ್ನು ರವಾನೆ ಮಾಡಿದ್ದಾರೆ. ಅದರಲ್ಲಿ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಇತ್ತೀಚೆಗೆ ಬಿಗ್ ಇವೆಂಟ್, ಸಲೆಬ್ರೆಷನ್ ನಡೆಯುವ ವೇಳೆ ಸರಣಿ ದುರ್ಘಟನೆಗಳು ನಡೆದಿವೆ. ಹೀಗಾಗಿ ರಾಜಮೌಳಿ ಹಾಗೂ ಅವರ ತಂಡ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಅವರ 'ಗ್ಲೋಬ್ ಟ್ರೋಟರ್' ಇವೆಂಟ್‌ಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಮುನ್ನಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕಾಲ್ತುಳಿತ ಹಾಗೂ ಇನ್ನಿತರ ಅವಘಡಗಳನ್ನು ತಪ್ಪಿಸುವುದಕ್ಕೆ ಚಿತ್ರತಂಡ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಹೇಶ್ ಬಾಬು ಕೂಡ ತಮ್ಮ ಫ್ಯಾನ್ಸ್‌ಗಾಗಿ ವಿಡಿಯೋ ಮಾಡಿ ಸಂದೇಶ ರವಾನೆ ಮಾಡಿದ್ದಾರೆ.

'ಗ್ಲೋಬ್ ಟ್ರೋಟರ್' ಇವೆಂಟ್ ನಡುವೆ ವೇಳೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಾಜಮೌಳಿ ಅಭಿಮಾನಿಗಳಿಗೆ ಸಂದೇಶ ರವಾನಿಸಿದ ಬಳಿಕ ಈಗ ಮಹೇಶ್ ಬಾಬು ಆ ಕೆಲಸ ಮಾಡುತ್ತಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯ ಮುಖ್ಯ ಗೇಟ್ ಅನ್ನು ಮುಚ್ಚಲಾಗಿದೆ ಎಂದು ಸ್ಪಷ್ಟ ಪಡಿಸಲಾಗಿದೆ. ಮಹೇಶ್ ಬಾಬು ವಿಡಿಯೋದಲ್ಲಿ ಹೇಳಿದಂತೆ "ನಿಮ್ಮ ಜೊತೆ ಇರುವ ಪಾಸ್ ಅನ್ನು ಸ್ಕ್ಯಾನ್ ಮಾಡಿದ ಬಳಿಕ ನೀವು ಯಾವ ಗೇಟ್‌ನಿಂದ ಎಂಟ್ರಿ ಕೊಡಬೇಕು ಎಂಬುವುದು ಗೊತ್ತಾಗುತ್ತೆ. ಪ್ರತಿಯೊಬ್ಬರೂ ನಿಯಮವನ್ನು ಪಾಲಿಸಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಹಕರಿಸಿ" ಎಂದು ಮಹೇಶ್ ಬಾಬು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಹಾಗೇ ಮಹೇಶ್ ಬಾಬು ಸ್ವಂತ ವಾಹನದಲ್ಲಿ ಬರಬೇಡಿ ಎಂದು ಸಲಹೆ ನೀಡಿದ್ದಾರೆ. "ಪೊಲೀಸರು ಹೇಳಿರುವಂತೆ ನಿಮ್ಮ ಸ್ವಂತ ವಾಹನಗಳಲ್ಲಿ ಬರಬೇಡಿ. ಇದು ಟ್ರಾಫಿಕ್ ನಿಯಂತ್ರಣ ಮಾಡುವುದಕ್ಕೆ ಸುಲಭವಾಗುತ್ತೆ. ಪಾಸ್ ಇಲ್ಲಿ ಕಾರ್ಯಕ್ರಮಕ್ಕೆ ಬಂದು ನಿರಾಶರಾಗಬೇಡಿ. ಇಂತಹ ಹಲವು ಕಾರ್ಯಕ್ರಮಗಳನ್ನು ಮಾಡುವುದು ಬಾಕಿಯಿದೆ. ನಾಳೆ ಸಂಜೆ ಭೇಟಿಯಾಗೋಣ" ಎಂದು ಮಹೇಶ್ ಬಾಬು ಹೇಳಿದ್ದಾರೆ.

ರಾಜಮೌಳಿ ಹಾಗೂ ಮಹೇಶ್ ಬಾಬು ಅವರ 'ಗ್ಲೋಬ್ ಟ್ರೋಟರ್' ಇವೆಂಟ್ ಈಗಾಗಲೇ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಇದರಲ್ಲಿ ಮಹೇಶ್ ಬಾಬು ಅವರ ಫಸ್ಟ್ ಲುಕ್ ಹಾಗೂ ಸಿನಿಮಾದ ಟೈಟಲ್‌ ರಿವೀಲ್ ಮಾಡುವ ಸಾಧ್ಯತೆಯಿದೆ. ಅಲ್ಲದೆ ಈ ಬಿಗ್ ಈವೆಂಟ್‌ ಅನ್ನು ಜಿಯೋ ಹಾಟ್‌ಸ್ಟಾರ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ.

More from Filmibeat

English summary
Rajamouli globetrotter event Tollywood superstar Mahesh Babu releases special video for fans about ssmb 29.
Read more about: rajamouli mahesh babu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X