Baahubali Day 1 Box Office:'ಬಾಹುಬಲಿ'ಗೆ ಮೊದಲ ದಿನವೇ ₹70 ಕೋಟಿ ನಷ್ಟ;ಕಣ್ಣೀರು ಹಾಕಿದ್ದೇಕೆ ರಾಜಮೌಳಿ?

ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಿಸಿದ ಸಿನಿಮಾ 'ಬಾಹುಬಲಿ'. ಈಗ ಚಿತ್ರರಂಗದಲ್ಲಿ 'ಬಾಹುಬಲಿಗಿಂತ ಹಿಂದೆ, ಬಾಹುಬಲಿಯ ನಂತರದ ಎಂದು ವಿಂಗಡಿಸಿ ಮಾತಾಡುತ್ತಾರೆ. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಆ ಮಟ್ಟಿಗೆ ಕ್ರಾಂತಿ ಸೃಷ್ಟಿಸಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದ್ದನ್ನು ಮಾತಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದನ್ನು ಕೊಂಡಾಡುತ್ತಾರೆ. ಆದರೆ, ಈ ಸಿನಿಮಾ ಬಿಡುಗಡೆಯಾದ ಮೊದಲ ದಿನ ಎದುರಿಸಿದ ಸಂಕಷ್ಟದ ಪರಿಸ್ಥಿತಿ ಯಾರಿಗೂ ಗೊತ್ತೇ ಇರಲಿಲ್ಲ.

ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ 'ಬಾಹುಬಲಿ: ದಿ ಟಾರ್ಚ್‌ಬೇರರ್' ಎಂಬ ವಿಶೇಷ ಡಾಕ್ಯೂಮೆಂಟರಿ ರಿಲೀಸ್ ಆಗಿದೆ. ಅದರಲ್ಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ, ನಟ ಪ್ರಭಾಸ್ ಮತ್ತು ನಿರ್ಮಾಪಕರ ತಂಡ ಸಿನಿಮಾ ಬಿಡುಗಡೆಯಾದ ಬಳಿಕ ಅನುಭವಿಸಿದ ಕಷ್ಟ ಹಾಗೂ ಭಯದ ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಾಜಮೌಳಿ ಹೇಳಿದ ಮೊದಲ ದಿನದ ಕಥೆ ಸಿನಿಪ್ರಿಯರಲ್ಲಿ ಅಚ್ಚರಿಯನ್ನು ಮೂಡಿಸಿದೆ.

Rajamouli revealed that Rs 70 crore lost on Baahubali day 1 box office collection

ರಿಲೀಸ್ ದಿನವೇ ₹70 ಕೋಟಿ ನಷ್ಟ

ನೆಟ್‌ಫ್ಲಿಕ್ಸ್ ಡಾಕ್ಯೂಮೆಂಟರಿಯಲ್ಲಿ 'ಬಾಹುಬಲಿ' ನಿರ್ಮಾಪಕರಾದ ಶೋಬು ಯ್ಯಾರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ಇಬ್ಬರೂ ಸಿನಿಮಾದ ಮೊದಲ ಭಾಗ ರಿಲೀಸ್ ಆದ ದಿನ ಎದುರಿಸಿದ ಆರ್ಥಿಕ ಬಿಕ್ಕಟ್ಟನ್ನು ನೆನಪಿಸಿಕೊಂಡಿದ್ದಾರೆ. "ನಾವು ಸಿನಿಮಾಗಾಗಿ ಮಾಡಿದ ಒಟ್ಟು ಖರ್ಚು ಹಾಗೂ ಪ್ರಿ-ರಿಲೀಸ್ ಬಿಸಿನೆಸ್ ಮೂಲಕ ನಮಗೆ ಬಂದ ಹಣವನ್ನು ಲೆಕ್ಕ ಹಾಕಿದಾಗ ಇನ್ನೂ 70 ಕೋಟಿ ರೂಪಾಯಿಗಳ ನಷ್ಟ ಎದುರಿಸುತ್ತಿದ್ದೆವು" ಎಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಇಂದಿನಂತೆ ಒಟಿಟಿ (OTT) ಮಾರುಕಟ್ಟೆ ಇರಲಿಲ್ಲ. ಅಲ್ಲದೆ ಇನ್ನೂ ಸ್ಯಾಟಲೈಟ್ ಹಕ್ಕುಗಳೂ ಕೂಡ ಮಾರಾಟವಾಗಿರಲಿಲ್ಲ. ಹೀಗಾಗಿ ಈ 70 ಕೋಟಿ ನಷ್ಟದಲ್ಲಿ ಇದ್ದೆವು ಎಂದು ಹೇಳಿದ್ದಾರೆ.

ಪ್ರತಿದಿನದ ₹25 ಲಕ್ಷ ಖರ್ಚು

ನಿರ್ದೇಶಕ ರಾಜಮೌಳಿ ಕೂಡ 'ಬಾಹುಬಲಿ' ಮೇಕಿಂಗ್ ಬಗ್ಗೆ ಮಾತಾಡಿದ್ದಾರೆ. "ಒಂದು ವೇಳೆ ಬಾಹುಬಲಿ ಎರಡೂ ಭಾಗಗಳಿಗೆ ಒಟ್ಟು ₹400 ಕೋಟಿಗೂ ಅಧಿಕ ಬಜೆಟ್ ಆಗುತ್ತೆ ಎಂದು ನಮಗೆ ಮೊದಲೇ ತಿಳಿದಿದ್ದರೆ, ಈ ಸಿನಿಮಾವನ್ನು ಮಾಡುತ್ತಿರಲಿಲ್ಲ" ಎಂದಿದ್ದಾರೆ. "ಆರಂಭ ಮಾಡಿದಾಗ ಸಿನಿಮಾಗೆ ಇಂತಿಷ್ಟೇ ಬಜೆಟ್ ಅನ್ನೋದು ಇರಲಿಲ್ಲ" ಎನ್ನುತ್ತಾರೆ ರಾಜಮೌಳಿ. ಇನ್ನು ನಟ ಪ್ರಭಾಸ್ ಹೇಳುವ ಪ್ರಕಾರ "ಚಿತ್ರೀಕರಣ ಆರಂಭವಾದ ಬಳಿಕ ಪ್ರತಿದಿನ ₹25 ಲಕ್ಷ ದಾಟುತ್ತಿತ್ತು. ಯುದ್ಧದ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ 4 ದಿನಕ್ಕೆ ₹1 ಕೋಟಿ ಬೇಕಾಗುತ್ತಿತ್ತು. ಆ ಹಣದಲ್ಲಿ ಒಂದು ಸಣ್ಣ ಸಿನಿಮಾವನ್ನೇ ನಿರ್ಮಿಸಬಹುದಿತ್ತು. ಬಾಹುಬಲಿ ಮೊದಲ ಭಾಗ ಥಿಯೇಟರ್‌ಗೆ ಬರುವಷ್ಟರಲ್ಲಿ ಬಜೆಟ್ ₹220 ಕೋಟಿ ತಲುಪಿತ್ತು" ಎಂದಿದ್ದಾರೆ.

ತೆಲುಗು ರಾಜ್ಯಗಳಲ್ಲೇ ನೆಗೆಟಿವ್ ವಿಮರ್ಶೆ

'ಬಾಹುಬಲಿ' ಬಿಡುಗಡೆಯಾದ ದಿನದ ಮೊದಲ ದಿನ ಪರಿಸ್ಥಿತಿ ಪಾಸಿಟಿವ್ ಆಗಿರಲಿಲ್ಲ. ಹಿಂದಿ ಏರಿಯಾ, ವಿದೇಶಗಳಲ್ಲಿ ಸಿನಿಮಾಗೆ ಅದ್ಭುತ ವಿಮರ್ಶೆಗಳು ಬಂದಿದ್ದವು. ಆದರೆ, ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೇ ನೆಗೆಟಿವ್ ವಿಮರ್ಶೆಗಳು ಬಂದಿದ್ದವು. ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು. "ಸಿನಿಮಾದಲ್ಲಿ ಶಿವಲಿಂಗವನ್ನು ಎತ್ತುವ ಪ್ರಭಾಸ್ ಕೈಗೆ 'ಜಾಂಡು ಬಾಮ್' (Zandu Balm) ಹಚ್ಚಿರುವ ಮೀಮ್ಸ್‌ಗಳು ಹರಿದಾಡುತ್ತಿದ್ದವು. ಚಿತ್ರರಂಗದಲ್ಲಿ ಇದನ್ನು ಭಾರತೀಯ ಚಿತ್ರರಂಗದ ಅತಿ ದೊಡ್ಡ ಡಿಸಾಸ್ಟರ್ ಎಂದು ಕರೆದಿದ್ದರು. ಇಲ್ಲಿಗೆ ನಮ್ಮ ವೃತ್ತಿಜೀವನವೇ ಇಲ್ಲಿಗೆ ಮುಗಿಯಿತು ಎಂದು ಭಾವಿಸಿದ್ವಿ. ನನಗೆ ಏನು ಮಾಡಬೇಕು ಅಂತಾನೇ ಗೊತ್ತಾಗುತ್ತಿರಲಿಲ್ಲ" ಎಂದು ರಾಜಮೌಳಿ ಹೇಳಿಕೊಂಡಿದ್ದಾರೆ.

Rajamouli revealed that Rs 70 crore lost on Baahubali day 1 box office collection

"ಮನೆ ಮಾರಬೇಕಾಗುತ್ತಾ?"

ಬಾಹುಬಲಿಗೆ ಮೊದಲ ದಿನವೇ ನೆಗೆಟಿವ್ ಟಾಕ್ ಬಂದಿದ್ದರಿಂದ ನಿರ್ಮಾಪಕರ ಕುಟುಂಬಗಳು ಕೂಡ ಕಂಗೆಟ್ಟಿದ್ದರು. ನಿರ್ಮಾಪಕ ಶೋಬು ಅವರ 8 ವರ್ಷದ ಮಗ ತನ್ನ ತಾಯಿಯ ಬಳಿ ನಾವು ಈ ಮನೆಯನ್ನು ಮಾರಬೇಕಾಗುತ್ತಾ? ನಾವು ಮುಂದೆ ಎಲ್ಲಿ ಇರೊದು?" ಎಂದು ಅಮಾಯಕವಾಗಿ ಕೇಳಿದ್ದನಂತೆ. ಇತ್ತ ರಾಜಮೌಳಿ ಪುತ್ರ ಕಾರ್ತಿಕೇಯ ಟ್ರೋಲ್‌ಗಳನ್ನು ನೋಡಿ ತಂದೆಯನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು ಎಂದು ಪ್ರಭಾಸ್ ನೆನಪಿಸಿಕೊಂಡಿದ್ದಾರೆ.

ರಾತ್ರೋರಾತ್ರಿ ಬದಲಾದ ಇತಿಹಾಸ ಸೃಷ್ಟಿಸಿದ ಬಾಹುಬಲಿ

ಶುಕ್ರವಾರದ ಮೊದಲ ಅರ್ಧ ದಿನ ನೆಗೆಟಿವ್ ವಾತಾವರಣವಿತ್ತು. ಆದರೆ, ಸೆಕೆಂಡ್ ಹಾಫ್‌ನಲ್ಲಿ ದೊಡ್ಡ ಪವಾಡವೇ ನಡೆದಿತ್ತು. ಥಿಯೇಟರ್‌ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಗಳು ಬರಲು ಆರಂಭಿಸಿತ್ತು. ಬಾಹುಬಲಿ ಮೊದಲ ಭಾಗ ವಿಶ್ವಾದ್ಯಂತ ₹650 ಕೋಟಿಗೂ ಅಧಿಕ ಗಳಿಕೆ ಕಂಡು ಇತಿಹಾಸ ನಿರ್ಮಿಸಿತ್ತು. ಅದೇ 'ಬಾಹುಬಲಿ 2: ದಿ ಕನ್‌ಕ್ಲೂಷನ್'ಗೆ ಧೈರ್ಯ ತುಂಬಿತ್ತು. 2ನೇ ಭಾಗ ಕೂಡ ವಿಶ್ವಾದ್ಯಂತ 1,788 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.

English summary
Rajamouli revealed that Rs 70 crore lost on Baahubali day 1 box office collection. Because of negative comments while releasing.
Read more about: rajamouli prabhas baahubali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X