RRR Day 10 Box Office Collection: 10 ದಿನದಲ್ಲಿ ಬೆಚ್ಚಿಬೀಳಿಸಿದ RRR ಕಲೆಕ್ಷನ್, ಆದರೂ 'ಬಾಹುಬಲಿ 2' ಬ್ರೇಕ್ ಆಗಲ್ಲ!
ಭಾರತೀಯ ಚಿತ್ರರಂಗದಲ್ಲಿ 'RRR', 'ಕೆಜಿಎಫ್ 2' ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 'ಕೆಜಿಎಫ್ 2' ಸಿನಿಮಾ ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದ್ರೆ, ರಾಜಮೌಳಿ ನಿರ್ದೇಶನದ RRR ತೆರೆಕಂಡು 10 ದಿನಗಳ ಬಳಿಕ ಸೌಂಡು ಮಾಡುತ್ತಲೇ ಇದೆ. ಬಾಕ್ಸಾಫೀಸ್‌ನಲ್ಲಿ RRR ಸಿನಿಮಾ ಸದ್ದು ಇನ್ನೂ ಕಮ್ಮಿಯಾಗಿಲ್ಲ.
ಎರನೇ ವಾರವೂ RRR ಸಿನಿಮಾ ಬಾಕ್ಸಾಫೀಸ್ ಬೇಜಾನ್ ಸದ್ದು ಮಾಡುತ್ತಿದೆ. ಭಾರತೀಯ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ. ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ RRR ಬಾಕ್ಸಾಫೀಸ್ ಗಳಿಕೆ ಜೋರಾಗೇ ಇದೆ. 10 ದಿನಗಳಲ್ಲಿ ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನೇ ಬರೆದಿದೆ.
10 ದಿನಗಳಲ್ಲಿ RRR ಸಿನಿಮಾ ಇಡೀ ವಿಶ್ವವೇ ಬೆಚ್ಚಿಬೀಳಿಸುವಂತಹ ಗಳಿಕೆ ಕಂಡಿದೆ. ಇನ್ನೊಂದು ಕಡೆ ಈ ಸಿನಿಮಾ ಕೆಲವೇ ದಿನಗಳಲ್ಲಿ 1000 ಕೋಟಿ ಲೂಟಿ ಮಾಡಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. 'RRR' ವೇಗ ನೋಡುತ್ತಿದ್ದರೂ 'ಬಾಹುಬಲಿ 2' ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡಲು ಸಾಧ್ಯವೇ ಇಲ್ಲ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ.

10 ದಿನದ RRR ಕಲೆಕ್ಷನ್ ಎಷ್ಟು?
ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜಾ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ರಾಜಮೌಳಿ ಮತ್ತೆ ಗೆದ್ದು ಬೀಗಿದ್ದಾರೆ. ಹೌದು RRR ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ ಸುಮಾರು 620 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. RRR ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದ್ದು, ಎಲ್ಲಾ ಭಾಷೆಗಳಿಂದ ದೊಡ್ಡ ಮಟ್ಟದ ಗಳಿಕೆ ಕಂಡಿದೆ ಎನ್ನಲಾಗಿದೆ.
ವಿಶ್ವದಾದ್ಯಂತ RRR ಗಳಿಸಿದ್ದು ಎಷ್ಟು?
RRR ಸಿನಿಮಾ ವಿಶ್ವದಾದ್ಯಂತ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಟ್ರೇಡ್ ಅನಲಿಸ್ಟ್ ಪ್ರಕಾರ, RRR ಸಿನಿಮಾದ ಬಾಕ್ಸಾಫೀಸ್ ಗಳಿಕೆ 800 ಕೋಟಿ ದಾಟಿದೆ. ಭಾರತದಲ್ಲಿ 620 ಕೋಟಿ ಗಳಿಸಿದ್ದರೆ. ವಿದೇಶಿ ಬಾಕ್ಸಾಫೀಸ್‌ನಲ್ಲಿ 190 ಕೋಟಿಗೂ ಅಧಿಕ ಮೊತ್ತ ಗಳಿಸಿದೆ ಎಂದು ಹೇಳಲಾಗಿದೆ. ಟ್ರೇಡ್ ಅನಲಿಸ್ಟ್ ಮನೋಬಲಾ ವಿಜಯಬಾಲನ್ ಅವರ ಪ್ರಕಾರ, 9 ದಿನಕ್ಕೆ 819 ಕೋಟಿ ಗಳಿಕೆ ಕಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
10 ದಿನದ ಹಿಂದಿ ಕಲೆಕ್ಷನ್ ಎಷ್ಟು?
RRR ಸಿನಿಮಾ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಭರ್ಜರಿ ಗಳಿಕೆ ಕಾಣುತ್ತಿದೆ. ಈ ಎರಡೂ ಭಾಷೆಯಲ್ಲೂ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. RRR ಹಿಂದಿ ಅವತರಣೆಕೆ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಎರಡನೇ ಭಾನುವಾರ ಕೂಡ 20.50 ಕೋಟಿ ಗಳಿಸಿದೆ. ಈ ಮೂಲಕ ಸಿನಿಮಾ ಕಲೆಕ್ಷನ್ 184.59 ಕೋಟಿ ಲೂಟಿ ಮಾಡಿದೆ. 'ಬಾಹುಬಲಿ 2'ಗೆ ಹೋಲಿಸಿದರೆ, RRR ಗಳಿಕೆ ಏನೂ ಇಲ್ಲ ಎನ್ನುತ್ತಿದೆ ಬಾಲಿವುಡ್.
Recommended Video


'ಬಾಹುಬಲಿ 2' ದಾಖಲೆ ಮುರಿಯಲ್ಲ
RRR ಸಿನಿಮಾ ಬಿಡುಗಡೆಯಾದ ಕಡೆಯಲ್ಲೆಲ್ಲಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 'ಬಾಹುಬಲಿ 2' ದಾಖಲೆಯನ್ನು ಮುರಿಯಬೇಕು ಅಂದರೆ, RRR ಬಾಕ್ಸಾಫೀಸ್‌ನಲ್ಲಿ 1800 ಕೋಟಿ ಗಳಿಸಬೇಕು. ಇತ್ತ ಹಿಂದಿ ಬಾಕ್ಸಾಫೀಸ್‌ನಲ್ಲಿ RRR ಕಲೆಕ್ಷನ್ 500 ಕೋಟಿಗೂ ಅಧಿಕ ಕಲೆ ಹಾಕಬೇಕು. ಹೀಗಾಗಿ 'ಬಾಹುಬಲಿ 2' ದಾಖಲೆಯನ್ನು RRR ಮುರಿಯಲ್ಲ ಅಂತಿದ್ದಾರೆ ಸಿನಿಮಾ ಪಂಡಿತರು. ಆದರೆ, ಇನ್ನೆರಡು ವಾರದಲ್ಲಿ ಬಾಕ್ಸಾಫೀಸ್‌ನಲ್ಲಿ 1000 ಕೋಟಿಯನ್ನು ಖಚಿತವಾಗಿಯೂ ಲೂಟಿ ಮಾಡುತ್ತೆ ಎನ್ನುತ್ತಿದ್ದಾರೆ.


Click it and Unblock the Notifications











