For Quick Alerts
  ALLOW NOTIFICATIONS  
  For Daily Alerts

  ಭಲೆ ಮಸ್ತ್ ಆಗಿದೆ ರಾಜಮೌಳಿ ನಾಟು ನಾಟು ಸಾಂಗ್ ಪ್ರೋಮೊ

  |

  ರಾಜಮೌಳಿ ನಿರ್ದೇಶನದ ಮತ್ತೊಂದು ದುಬಾರಿ ಪ್ಯಾನ್ ಇಂಡಿಯಾ ಸಿನಿಮಾ RRR. ಬಾಹುಬಲಿ ಬಳಿಕ ಜಕ್ಕಣ್ಣ ನಿರ್ದೇಶಿಸಿರುವ ಈ ಚಿತ್ರದ ಯಾವಾಗ ರಿಲೀಸ್ ಆಗುತ್ತದೆಯೋ ಅಂತ ಎದುರು ನೋಡುತ್ತಿದ್ದಾರೆ. ಜೂ.ಎನ್‌ಟಿಆರ್, ರಾಮ್ ಚರಣ್ ತೇಜಾರನ್ನು ಒಟ್ಟಿಗೆ ತೆರೆಮೇಲೆ ನೋಡುವುದಕ್ಕೆ ಕಾದು ಕೂತಿದ್ದ ಅಭಿಮಾನಿಗಳಿಗೆ ಕೊನೆಗೂ ರಿಲೀಸ್ ಡೇಟ್ ಸಿಕ್ಕಿದೆ. ರಾಜಮೌಳಿ ಹೊಸ ವರ್ಷದ ಆರಂಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

  ರಾಜಮೌಳಿ ಏನೇ ಮಾಡಿದರೂ ಪರ್ಫೆಕ್ಟ್. ಸಿನಿಮಾದ ಒಂದು ಚಿಕ್ಕ ಪ್ರೋಮೊ ರಿಲೀಸ್ ಮಾಡಬೇಕಾದರೂ ಅಲ್ಲೊಂದು ಪೂರ್ವ ಸಿದ್ಧತೆ ಇರುತ್ತೆ. ಈ ಬಾರಿ ಕೂಡ RRR ಸಿನಿಮಾದ ಪ್ರಚಾರಕ್ಕೂ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮೊದಲ ಹಾಡು ರಿಲೀಸ್ ಮಾಡುವ ಮುನ್ನ ಹಾಡಿನ ಒಂದು ಪ್ರೋಮೊ ರಿಲೀಸ್ ಆಗಿದೆ. ಈ ಪ್ರೋಮೊ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ. ಮೂವಿ ಮಾಂತ್ರಿಕನ ಈ ಸಾಂಗ್ ಪ್ರೋಮೊದ ಆಕರ್ಷಣೆ ಏನು? ಇಡೀ ಹಾಡು ಯಾವಾಗ ರಿಲೀಸ್ ಆಗುತ್ತೆ? ಅನ್ನುವ ಮಾಹಿತಿಗಾಗಿ ಮುಂದೆ ಓದಿ.

  ಪವರ್‌ಫುಲ್ ಸಾಂಗ್‌ನ ಪ್ರೋಮೊ ಬಿಟ್ಟ ಜಕ್ಕಣ್ಣ

  ರಾಜಮೌಳಿ ಸಿನಿಮಾವನ್ನು ನೋಡುವ ರೀತಿನೇ ಬೇರೆ. ಚಿತ್ರದ ಕಥೆಯಿಂದ ಹಿಡಿದು ಹಾಡುಗಳವರೆಗೂ ಪ್ರೇಕ್ಷಕರನ್ನು ಸೆಳೆಯಲು ಬೇಕಿರುವ ಎಲ್ಲಾ ಅಂಶಗಳನ್ನು ಸೇರಿಸುತ್ತಾರೆ. ಬಾಹುಬಲಿ ಬಲಿಯಂತಹ ಮೆಗಾ ಸಿನಿಮಾವನ್ನು ಕಣ್ತುಂಬಿ ಕೊಂಡವರಿಗೆ ಜಕ್ಕಣ್ಣ ಮತ್ತೊಂದು ಚಿತ್ರವನ್ನು ತೆರೆಮೇಲೆ ನೋಡಲು ಕಾತುರದಿಂದ ಕಾದು ಕೂತಿದ್ದಾರೆ. ಆದರೆ, ರಾಜಮೌಳಿ ಮಾತ್ರ ದಿನದಿಂದ ದಿನಕ್ಕೆ ಕುತೂಹಲವನ್ನು ಕೆರಳಿಸುತ್ತಿದ್ದಾರೆ. ಸದ್ಯಕ್ಕೀಗ ಟಾಲಿವುಡ್ ಅಂಗಳದಲ್ಲಿ RRR ಚಿತ್ರದ ಈ ಹಾಡಿನ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.

  ನಾಟು ನಾಟು ಎನರ್ಜಿ ಸಾಂಗಿಗೆ ರಾಮ್ ಚರಣ್, ಜೂ. ಎನ್‌ಟಿಆರ್ ಸ್ಟೆಪ್

  RRR ಸಿನಿಮಾದ ಒಂದು ಪ್ರೋಮೊ ರಿಲೀಸ್ ಮಾಡಲಾಗಿದೆ. ಇದು ಕೇವಲ ಲಿರಿಕಲ್ ಸಾಂಗ್ ಅಷ್ಟೇ. ಅಷ್ಟಕ್ಕೆ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಎಂಎಂ ಕೀರಾವಾಣಿ ರಾಗ ಸಂಯೋಜಿಸಿರುವ ಈ ಹಾಡಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಹೆಜ್ಜೆ ಹಾಕಿದ್ದಾರೆ. ಹೈ ಎನರ್ಜಿ ಇರುವ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಟ್ಟಿಗೆ ನೋಡುವುದಕ್ಕೆ ಕಾದು ಕೂತಿದ್ದಾರೆ. ಇದೇ ನಾಟು ನಾಟು ಅನ್ನುವ ಎನರ್ಜಿ ಹಾಡಿನ ಪ್ರೋಮೊಗೆ ಥ್ರಿಲ್ ಆಗಿರುವ ಫ್ಯಾನ್ಸ್ ಇಡೀ ಹಾಡಿಗೆ ಕಾದು ಕೂತಿದ್ದಾರೆ.

  ಇದು ವಿಡಿಯೋ ಸಾಂಗ್ ಅಲ್ಲ.. ಕೇವಲ ಲಿರಿಕಲ್ ಸಾಂಗ್

  ನಾಳೆ( ನವೆಂಬರ್ 10)ರಂದು ರಿಲೀಸ್ ಆಗುತ್ತಿರುವ ನಾಟು ನಾಟು ಸಾಂಗ್ ವಿಡಿಯೋ ಸಾಂಗ್ ಅಲ್ಲ. ಅದು ಕೇವಲ ಲಿರಿಕಲ್ ಸಾಂಗ್ ಅಷ್ಟೆ. ಹೀಗಾಗಿ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳಿಗೆ ನಿರಾಸೆ ಆದರೂ, ಹಾಡಿನಲ್ಲಿ ಮೇಕಿಂಗ್ ಝಲಕ್ ಇರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಹೈ ಎನರ್ಜಿ ನಾಟು ನಾಟು ಸಾಂಗ್ ನಾಳೆ ಸಂಜೆ ಬಿಡುಗಡೆಯಾಗಲಿದೆ.

  Rajamouli RRR Film Naatu Naatu Song Promo with Ram Charan and Jr NTR is fesrival movement for fans

  ಕನ್ನಡದಲ್ಲಿ ಹಳ್ಳಿ ನಾಟು ಹಾಡು ಬಿಡುಗಡೆ

  RRR ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಹೀಗಾಗಿ ಐದೂ ಭಾಷೆಗಳಲ್ಲೂ ಈ ಹಾಡು ರಿಲೀಸ್ ಆಗುತ್ತಿದೆ. ತೆಲುಗಿನ ಈ ನಾಟು ನಾಟು ಹಾಡು ಕನ್ನಡದಲ್ಲಿ ಹಳ್ಳಿ ನಾಟು ಅಂತಾಗಿದೆ. ನಮ್ಮಾಟ ನೋಡು.. ನಮ್ಮಾಟ ನೋಡು.. ಹಳ್ಳಿ ನಾಟು.. ಎಂದು ನಾಳೆ ಸಂಜೆ 4 ಗಂಟೆಗೆ ಧೂಳೆಬ್ಬಿಸಲು ಈ ಹಾಡು ಬರುತ್ತಿದೆ. ಆಜಾದ್ ವರದ ರಾಜ್ ಸಾಹಿತ್ಯ ರಚಿಸಿದ್ದರೆ, ರಾಹುಲ್ ಹಾಗೂ ಕಲಾ ಭೈರವ ಹಾಡಿದ್ದಾರೆ. ಈ ಸಾಂಗ್ ಪ್ರೋಮೊ ತೆಲುಗಿನಲ್ಲಿ 2 ಮಿಲಿಯನ್ ದಾಟಿದ್ರೆ, ಕನ್ನಡದಲ್ಲಿ 75 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

  English summary
  Rajamouli unveiled the promo of RRR film song Naatu Naatu, which is highly energetic. The mass dance number features Jr NTR and Ram Charan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X