ಮಹೇಶ್ ಬಾಬು ಸಿನಿಮಾ ಮುಗಿಸಲು ರಾಜಮೌಳಿಗೆ ಬೇಕು 3 ವರ್ಷ: ಫ್ರಾನ್ಸ್‌ನಲ್ಲಿ VFX!

ಮೂವೀ ಮಾಂತ್ರಿಕ ರಾಜಮೌಳಿ RRR ಅಂತಹ ಮೆಗಾ ಬ್ಲಾಕ್‌ಬಸ್ಟರ್ ಕೊಟ್ಟ ಬಳಿಕ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ಅದು ಮತ್ಯಾವುದೂ ಅಲ್ಲ. ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯಿಸುತ್ತಿರುವ ಸಿನಿಮಾ. ಇದೇ ಸಿನಿಮಾ ಬಗ್ಗೆ ಇಡೀ ಟಾಲಿವುಡ್ ಎದುರು ನೋಡುತ್ತಿದೆ.

ಭಾರತದ ಮೋಸ್ಟ್‌ ಸಕ್ಸಸ್‌ಫುಲ್ ನಿರ್ದೇಶಕ ರಾಜಮೌಳಿ ಹಾಗೂ ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ ಸಹಜವಾಗಿಯೇ ಗಮನ ಸೆಳೆಯುತ್ತೆ. ಅದರಲ್ಲೂ ಸೋಲಿಲ್ಲದ ಸರದಾರ ರಾಜಮೌಳಿ ನಿರ್ದೇಶನ ಅಂದರೆ ಕುತೂಹಲ ತುಸು ಹೆಚ್ಚಿರುತ್ತೆ.

ರಾಜಮೌಳಿ ಈಗಾಗಲೇ ತಮ್ಮ ಮುಂದಿನ ಸಿನಿಮಾದ ಕೆಲಸ ಶುರು ಮಾಡಿದ್ದಾರೆ. ಇತ್ತೀಚೆಗೆ 'ಬಾಹುಬಲಿ' ನಿರ್ಮಾಪಕರೊಂದಿಗೆ ಫ್ರಾನ್ಸ್‌ಗೆ ಭೇಟಿ ಕೊಟ್ಟು ಬಂದಿದ್ದಾರೆ. ಇದೇ ವೇಳೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮತ್ತೊಂದು ಸುದ್ದಿ ಏನಂದ್ರೆ, ಮಹೇಶ್ ಬಾಬು ಸಿನಿಮಾ ಮುಗಿಸುವುದಕ್ಕೆ ರಾಜಮೌಳಿ 3 ವರ್ಷ ಕೇಳಿದ್ದಾರಂತೆ. ಅಷ್ಟಕ್ಕೂ ಈ ಮೆಗಾ ಕಾಂಬಿನೇಷನ್‌ ಬಗ್ಗೆ ಹರಿದಾಡುತ್ತಿರುವ ಸುದ್ದಿಯೇನು?

ಫ್ರಾನ್ಸ್ ಭೇಟಿ ಮಾಡಿದ್ದೇಕೆ?

ಫ್ರಾನ್ಸ್ ಭೇಟಿ ಮಾಡಿದ್ದೇಕೆ?

ರಾಜಮೌಳಿ ಮುಂದಿನ ಸಿನಿಮಾ ಭರ್ಜರಿ ತಯಾರಿಯಂತೂ ನಡೆಸಿದ್ದಾರೆ. ಇತ್ತೀಚೆಗೆ ರಾಜಮೌಳಿ ಫ್ರಾನ್ಸ್ ಮೂಲದ 3ಡಿ ಆನಿಮೇಷನ್ ಹಾಗೂ ವಿಎಫ್‌ಎಕ್ಸ್ ಸ್ಟುಡಿಯೊಗೆ ಭೇಟಿ ನೀಡಿದ್ದಾರೆ. ಯುನಿಟ್ ಇಮೇಜ್ ಎನ್ನುವ ಅನಿಮೇಷನ್ ಕಂಪನಿ ಮುಂದೆ ರಾಜಮೌಳಿ ನಿಂತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಮಹೇಶ್ ಬಾಬು 29ನೇ ಸಿನಿಮಾ ಬಗ್ಗೆ ರಾಜಮೌಳಿ ನೀಡಿರುವ ಮೊದಲ ಅಪ್‌ಡೇಟ್ ಎಂದು ಹೇಳಲಾಗುತ್ತಿದೆ.

ಪ್ರಿ-ಪ್ರೊಡಕ್ಷನ್ ಕೆಲಸ ಶುರು

ಪ್ರಿ-ಪ್ರೊಡಕ್ಷನ್ ಕೆಲಸ ಶುರು

ಮಹೇಶ್ ಬಾಬು 29ನೇ ಸಿನಿಮಾಗಾಗಿ ಮಹೇಶ್ ಬಾಬು ಪ್ರೀ-ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದೊಂದು ಅದ್ಧೂರಿ ಸಾಹಸಮಯ ದೃಶ್ಯಗಳನ್ನು ಹೊಂದಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ರಾಜಮೌಳಿ ವಿಜ್ಯೂವಲ್ ಎಫೆಕ್ಟ್‌ಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದು, ಕಣ್ಣು ಕುಕ್ಕುವ ದೃಶ್ಯಗಳು ಇರಲಿವೆ ಎಂದು ಟಾಲಿವುಡ್‌ನಲ್ಲಿ ವರದಿಯಾಗಿದೆ.

ರಾಜಮೌಳಿಗೆ ಬೇಕು 3 ವರ್ಷ

ರಾಜಮೌಳಿಗೆ ಬೇಕು 3 ವರ್ಷ

ಮಹೇಶ್ ಬಾಬು ಸಿನಿಮಾವನ್ನಾದರೂ ರಾಜಮೌಳಿ ಬೇಗ ಮುಗಿಸುತ್ತಾರಾ? ಅಂತ ಮಹೇಶ್ ಬಾಬು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಆದರೆ, ಇದೀಗ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಟಾಲಿವುಡ್‌ ಸೂಪರ್‌ಸ್ಟಾರ್ ಸಿನಿಮಾಗೆ ರಾಜಮೌಳಿಗೆ 3 ವರ್ಷ ಬೇಕಂತೆ. ಈ ಕಾರಣಕ್ಕೆ ಮಹೇಶ್ ಬಾಬು ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗಿದ್ದರೂ, ಮತ್ತೊಂದು ಮೆಗಾ ಹಿಟ್ ಸಿಗುತ್ತೆ ಎನ್ನುವ ಖುಷಿಯಲ್ಲೂ ಇದ್ದಾರೆ.

ತ್ರಿವಿಕ್ರಮ್ ಜೊತೆ ಮಹೇಶ್ ಮುಂದಿನ ಸಿನಿಮಾ

ತ್ರಿವಿಕ್ರಮ್ ಜೊತೆ ಮಹೇಶ್ ಮುಂದಿನ ಸಿನಿಮಾ

'ಸರ್ಕಾರು ವಾರಿ ಪಾಟ' ಸಿನಿಮಾದ ಬಳಿಕ ಮಹೇಶ್ ಬಾಬು ಮುಂದಿನ ಸಿನಿಮಾವನ್ನು ಮಹೇಶ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಕೆಲಸ ಕೂಡ ಶುರುವಾಗಿದೆ. ತ್ರಿವಿಕ್ರಮ್ ಜೊತೆಗಿನ ಸಿನಿಮಾ ಮುಗಿದ ಬಳಿಕವೇ ಮಹೇಶ್ ಬಾಬು ಹಾಗೂ ರಾಜಮೌಳಿ ಪ್ಯಾನ್ ಇಂಡಿಯಾ ಸಿನಿಮಾ ಆರಂಭ ಆಗಲಿದೆ. ಮೂಲಗಳ ಪ್ರಕಾರ 2023 ಮಾರ್ಚ್ -ಏಪ್ರಿಲ್ ವೇಳೆಗೆ ಸಿನಿಮಾ ಆರಂಭ ಆಗಲಿದೆ.

More from Filmibeat

English summary
Rajamouli Want 3 Years to Complete Superstar Mahesh Babu Movie. Rajamouli recently visited a France-based 3D Animation and VFX studio named ‘UNIT IMAGE.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X