'ಕೂಲಿ' ಹೈಪ್ ಆಗಿದ್ದು ರಜನಿಯಿಂದನಾ? ನಾಗಾರ್ಜುನರಿಂದನಾ? ಫ್ಯಾನ್ಸ್ ಶುರು.. ಯಾರಿಗೆ ಸಲ್ಲಬೇಕು ಕ್ರೆಡಿಟ್?

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಮುಂಬರುವ ಆಗಸ್ಟ್ 14ರಂದು ಬಿಡುಗಡೆ ಸಜ್ಜಾಗಿರುವ ಈ ಸಿನಿಮಾ ಮೇಲೆ ಕೇವಲ ಸೌತ್ ಇಂಡಿಯಾ ಅಷ್ಟೇ ಅಲ್ಲ. ಉತ್ತರ ಭಾರತದಲ್ಲೂ ಕ್ರೇಜ್ ಇದೆ. ಅದಕ್ಕೆ ರಜನಿ ಜೊತೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂಪರ್‌ಸ್ಟಾರ್‌ಗಳು.

ತೆಲುಗಿನಿಂದ ನಾಗಾರ್ಜುನ, ಕನ್ನಡದಿಂದ ಉಪೇಂದ್ರ, ಹಿಂದಿ ಚಿತ್ರರಂಗದಿಂದ ಆಮಿರ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ, ವಿಶ್ವದಾದ್ಯಂತ 'ಕೂಲಿ'ಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆ. ನಿನ್ನೆಯಷ್ಟೇ (ಜೂನ್ 27) ಈ ಸಿನಿಮಾದ ಮೊದಲ ಹಾಡು "ಚಿಕಿತು" ರಿಲೀಸ್ ಆಗಿದೆ. 24 ಗಂಟೆಗಳಾಗುವುದರೊಳಗೆ ಈ ಹಾಡು ಯೂಟ್ಯೂಬ್‌ನಲ್ಲಿ 5.2 ಮಿಲಿಯನ್ ವೀವ್ಸ್ ದಾಟಿದೆ.

Rajinikanth and Nagarjuna fans war started about stardom later Coolie film telugu business

ಈ ಮಧ್ಯೆ ತೆಲುಗು ಚಿತ್ರರಂಗದ ಕಿಂಗ್ ನಾಗಾರ್ಜುನ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಮಧ್ಯೆ ವಾರ್ ಶುರುವಾಗಿದೆ. ಇತ್ತೀಚೆಗೆ 'ಕೂಲಿ' ಸಿನಿಮಾದ ತೆಲುಗು ವರ್ಷನ್‌ 46 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎಂದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ನಾಗಾರ್ಜುನ ಇದ್ದಿದ್ದರಿಂದಲೇ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದರು. ಅದು ರಜನಿಕಾಂತ್ ಅಭಿಮಾನಿಗಳ ನಿದ್ದೆ ಕೆಡಿಸಿತ್ತು. ಹೀಗಾಗಿ ನಾಗಾರ್ಜನ ಸಿನಿಮಾಗಳ ಬಗ್ಗೆ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದು ಎಕ್ಸ್‌ನಲ್ಲಿ (ಟ್ವಿಟರ್‌) ಹೆಚ್ಚಾಗುತ್ತಲೇ ಇದೆ. ಈ ಇಬ್ಬರು ಅಭಿಮಾನಿಗಳ ನಡುವೆ ಕಿತ್ತಾಟ ಹೇಗಿದೆ ಅಂತ ನೋಡಿ.

ಯಾರಿಗೆ ಸಲ್ಲಬೇಕು ಕ್ರೆಡಿಟ್

"ಕ್ರೆಡಿಟ್ ಯಾರಿಗೆ ಸಿಗಬೇಕು ಎನ್ನುವ ವಿಚಾರಕ್ಕೆ ಫ್ಯಾನ್ಸ್ ವಾರ್ ಶುರುವಾಗಿದೆ. ನಾಗಾರ್ಜುನ ಇದ್ದಿದ್ದಕ್ಕೆ ತೆಲುಗು ಮಾರುಕಟ್ಟೆಯಲ್ಲಿ ಹೈಪ್ ಕ್ರಿಯೇಟ್ ಆಗಿದೆ ಅಂತ ನಾಗ್ ಫ್ಯಾನ್ಸ್. ಅತ್ತ ರಜನಿಕಾಂತ್, ಲೋಕೇಶ್ ಕನಗರಾಜ್ ಹಾಗೂ ಮಲ್ಟಿಸ್ಟಾರ್‌ಗಳು ಇದ್ಮೇಲೆ ಈ ಹೈಪ್ ಕಾಮನ್ ಅಂತಿದ್ದಾರೆ" ಎಂದು ಕೆಲವು ಪೇಜ್‌ಗಳು ನಾಗಾರ್ಜುನ ಹಾಗೂ ರಜನಿಕಾಂತ್ ನಡುವಿನ ಫ್ಯಾನ್ಸ್ ವಾರ್ ಅನ್ನು ಬಣ್ಣಿಸಿವೆ.

ನಾಗಾರ್ಜುನರಿಂದಲೇ 'ಕೂಲಿ'ಗೆ ಕ್ರೇಜ್

"ರಜನಿಕಾಂತ್‌ಗಿಂತ ನಾಗಾರ್ಜುನ ಒಬ್ಬಂಟಿಯಾಗಿ ಕೂಲಿಗೆ ಹೈಪ್ ಕೊಟ್ಟಿದ್ದಾರೆ." ಎಂದು ತೆಲುಗು ಅಭಿಮಾನಿಗಳು ನಾಗಾರ್ಜುನ ಬೆಂಬಲಕ್ಕೆ ಬಂದಿದ್ದಾರೆ. ನಾಗಾರ್ಜುನ ಅವರಿಂದಲೇ 'ಕೂಲಿ' ಕ್ರೇಜ್ ಹೆಚ್ಚಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವಾದ ಮಾಡುತ್ತಿದ್ದಾರೆ.

ನಾಗಾರ್ಜುನ ಸೈಡ್ ಆಕ್ಟರ್

"ನಾಗ್ ಅವರ ಅಭಿಮಾನಿಗಳಿಗೆ ನಾಗಾರ್ಜುನ ಪ್ಯಾನ್ ಇಂಡಿಯಾ ಸ್ಟಾರ್. ತೆಲುಗು ಸಿನಿಮಾ ಅಭಿಮಾನಿಗಳ ಪ್ರಕಾರ ನಾಗಾರ್ಜುನ ಸೈಡ್ ಆಕ್ಟರ್. ಭಾರತೀಯ ಸಿನಿಮಾ ಅಭಿಮಾನಿಗಳ ಪ್ರಕಾರ ನಾಗಾರ್ಜುನ ಹಳೆ ಕಾಮಿಡಿಯನ್ ಅಥವಾ ತೆರೆಮರೆಗೆ ಸರಿದಿರುವ ಕಾಮಿಡಿಯನ್" ಎಂದು ಇನ್ನೊಬ್ಬರ ನೆಟ್ಟಿಗರು ಈ ಫ್ಯಾನ್ ವಾರ್‌ಗೆ ಬೆಂಕಿ ಹಚ್ಚಿದ್ದಾರೆ.

ಕೂಲಿಯ ಪವರ್ ಹೌಸ್ ಕಿಂಗ್ ನಾಗಾರ್ಜುನ

"ಕೆಲವು ಸಾಂಬರ್ ಪೇಜ್‌ಗಳು ಹಾಗೂ ಜನರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ನಾಗಾರ್ಜುನ ಕಟ್‌ಔಟ್ ಹಾಗೂ ಚರಿಷ್ಮಾ ಕೂಲಿ ಸಿನಿಮಾದ ಉಳಿದ ಪಾತ್ರಗಳನ್ನು ತಿಂದು ಹಾಕಿದೆ. ಇದರಲ್ಲಿ ಅಚ್ಚರಿ ಏನೂ ಇಲ್ಲ. ಕೂಲಿಯ ಪವರ್ ಹೌಸ್ ಕಿಂಗ್ ನಾಗಾರ್ಜುನ" ಎಂದು ನಾಗಾರ್ಜುನ ಅಭಿಮಾನಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಾಗಾರ್ಜುನ ಸೈಡ್ ಕ್ಯಾರೆಕ್ಟರ್

ರಜನಿಕಾಂತ್ ಅಭಿಮಾನಿಗಳು ಇಬ್ಬರ ಇಮೇಜ್‌ಗಳನ್ನು ಇಟ್ಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಹೀರೋ ರಜನಿಕಾಂತ್, ವಿಲನ್ ರಜನಿಕಾಂತ್, ಡ್ಯಾನ್ಸ್ ರಜನಿಕಾಂತ್. ಇದರಲ್ಲಿ 25 ನಿಮಿಷದ ಸೈಡ್ ಕ್ಯಾರೆಕ್ಟರ್ ನಾಗಾರ್ಜುನ ಅವರದ್ದು. ಇವರ ಅಭಿಮಾನಿಗಳು ಇಡೀ ಸಿನಿಮಾದ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ" ಎಂದು ರಜನಿಕಾಂತ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

More from Filmibeat

English summary
Superstar Rajinikanth and Nagarjuna fans war started about stardom later Coolie film telugu business;
Read more about: rajinikanth nagarjuna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X