ಕ್ರೇಜಿ ಸ್ಟಾರ್ 'ಶಾಂತಿ ಕ್ರಾಂತಿ' ಬಳಿಕ ಒಂದಾಗ್ತಾರಾ ರಜನಿ-ನಾಗಾರ್ಜುನಾ? 3 ದಶಕಗಳ ಕಾತರ ಅಂತ್ಯ ಆಗುತ್ತಾ?

ಒಂದ್ಕಡೆ ಸೂಪರ್‌ಸ್ಟಾರ್ ರಜನಿಕಾಂತ್. ಇನ್ನೊಂದು ಕಡೆ ಲೋಕೇಶ್ ಕನಕರಾಜ್. ಈ ಜೋಡಿ ಕಾಂಬಿನೇಷನ್‌ ಸಿನಿಮಾಗಾಗಿ ಅದೆಷ್ಟು ಮಂದಿ ಎದುರು ನೋಡುತ್ತಿದ್ದಾರೋ ಗೊತ್ತಿಲ್ಲ. ತಮಿಳು ಚಿತ್ರರಂಗದಲ್ಲಿ ತನ್ನದೇ ಯೂನಿವರ್ಸ್ ಕಟ್ಟಿಕೊಂಡಿರೋ ಲೋಕೇಶ್ ಕನಕರಾಜ್ ಸೂಪರ್‌ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆಂದರೆ ಈ ಕ್ರೇಜ್ ಇರಲೇಬೇಕು.

ಆದರೆ, ಇದಕ್ಕಿಂತ ಕಿಕ್ ಕೊಡುವ ಮತ್ತೊಂದು ಕ್ರೇಜಿ ಮ್ಯಾಟರ್ ಇದೆ. ಇಲ್ಲಿವರೆಗೂ ಲೋಕೇಶ್ ಕನಕರಾಜ್ ಹಾಗೂ ರಜನಿಕಾಂತ್ ಇಬ್ಬರೇ ಚರ್ಚೆಯಲ್ಲಿದ್ದರು. ಆದ್ರೀಗ ಮತ್ತೊಬ್ಬ ಸ್ಟಾರ್ ನಟನ ಹೆಸರು ಸೇರಿಕೊಂಡಿದೆ. ಅದು ಮತ್ಯಾರೂ ಅಲ್ಲ ತೆಲುಗು ಚಿತ್ರರಂಗದ ಮನ್ಮಥ ಅಕ್ಕಿನೇನಿ ನಾಗಾರ್ಜುನಾ.

Rajinikanth and Nagarjuna reunite after Ravichandran s Shanti Kranti for Thalaivar 171

ಕಳೆದೆರಡು ದಿನಗಳಿಂದ ರಜನಿ ನಟಿಸುತ್ತಿರುವ 'ತಲೈವಾ 171' ಸಿನಿಮಾದಲ್ಲಿ ನಾಗಾರ್ಜುನ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅಂತ ಗುಲ್ಲೆದ್ದಿದೆ. ಈ ಸುದ್ದಿಯೀಗ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹಾಗೇನಾದರೂ ಈ ಸಿನಿಮಾ ನಿಜವೇ ಆದರೆ, 32 ವರ್ಷಗಳ ಬಳಿಕ ರಜನಿಕಾಂತ್ ಹಾಗೂ ನಾಗಾರ್ಜುನ ತೆರೆಮೇಲೆ ನೋಡಬಹುದು.

ಕಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಸಿನಿಮಾಗೆ ನಾಗಾರ್ಜುನ ಎಂಟ್ರಿ ಕೊಡುತ್ತಿದ್ದಾರೆ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಇಬ್ಬರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ರಜನಿಕಾಂತ್, ನಾಗಾರ್ಜುನ ಹಾಗೂ ಲೋಕೇಶ್ ಕನಕರಾಜ್ ಈ ಮೂವರು ಸೇರಿದರೆ, ಖಂಡಿತಾ ಇದೊಂತರ ಡಿಡ್ಲಿ ಕಾಂಬಿನೇಷನ್ ಆಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಚಿತ್ರರಂಗ ಅಧಿಕೃತವಾಗಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಒಂದು ವೇಳೆ ರಜನಿಕಾಂತ್ ಸಿನಿಮಾದಲ್ಲಿ ನಾಗಾರ್ಜುನ ನಟಿಸುವುದು ಪಕ್ಕಾನೇ ಆದರೆ, 32 ವರ್ಷಗಳ ಬಳಿಕ ಇವರಿಬ್ಬರು ಒಂದೇ ಸಿನಿಮಾಗಾಗಿ ಕೆಲಸ ಮಾಡಿದಂತೆ ಆಗುತ್ತೆ. ಹಾಗಿದ್ದರೆ, ರಜನಿ ಹಾಗೂ ನಾಗಾರ್ಜುನ ಇಬ್ಬರೂ ಮೂರು ದಶಕಗಳ ಹಿಂದೆ ಒಟ್ಟಿಗೆ ನಟಿಸಿದ್ದರೇ? ಈ ಪ್ರಶ್ನೆ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿದ 'ಶಾಂತಿ ಕ್ರಾಂತಿ' ಸಿನಿಮಾ ಕಣ್ಮುಂದೆ ಬರುತ್ತೆ.

1991ರಲ್ಲಿ ರವಿಚಂದ್ರನ್ 'ಶಾಂತಿ ಕ್ರಾಂತಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಸೇರಿದಂತೆ ಹಿಂದಿಯ ನಾಲ್ಕು ಭಾಷೆಯಲ್ಲಿ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ವೇಳೆ ತೆಲುಗು ಆವೃತ್ತಿಯಲ್ಲಿ ನಾಗಾರ್ಜುನಾ, ತಮಿಳು ಹಾಗೂ ಹಿಂದಿ ಆವೃತ್ತಿಯಲ್ಲಿ ರಜನಿಕಾಂತ್ ನಟಿಸಿದ್ದರು. ನಾಲ್ಕು ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ಶೂಟಿಂಗ್ ಮಾಡುತ್ತಿದ್ದರಿಂದ ರಜನಿಕಾಂತ್ ಹಾಗೂ ನಾಗಾರ್ಜುನಾ ಇಬ್ಬರೂ ಒಂದೇ ಸೆಟ್ಟಿನಲ್ಲಿದ್ದರು. ಆದರೆ, ಒಟ್ಟಿಗೆ ನಟಿಸಿರಲಿಲ್ಲ.

Rajinikanth and Nagarjuna reunite after Ravichandran s Shanti Kranti for Thalaivar 171

ಈಗ 'ತಲೈವರ್ 171' ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಾಗಾರ್ಜುನ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇನ್ನು ನಾಗಾರ್ಜುನಗೆ ಮಲ್ಟಿಸ್ಟಾರರ್ ಸಿನಿಮಾ ಹೊಸದೇನು ಅಲ್ಲ. ಇತ್ತೀಚೆಗೆ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ಕಾಣಿಸಿಕೊಂಡಿದ್ದರು. ಈಗ ಧನುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಊಪಿರಿ' ಸಿನಿಮಾದಲ್ಲೂ ಕಾರ್ತಿ ಜೊತೆ ನಾಗಾರ್ಜುನ ಜೊತೆ ನಟಿಸಿದ್ದರು. ಹೀಗಾಗಿ ರಜನಿಕಾಂತ್ ಜೊತೆ ನಟಿಸಬಹುದು ಎಂದು ಹೇಳಲಾಗುತ್ತಿದೆ.

More from Filmibeat

English summary
Buzz is that Telugu star Nagarjuna acting with Rajinikanth in Thalaivar 171
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X