ಗೆಳೆಯ ಚಿರಂಜೀವಿ ಟಕ್ಕರ್ ಕೊಡಲು ರಜನಿ ರೆಡಿ: 'ಜೈಲರ್' Vs 'ಭೋಲಾ ಶಂಕರ್'.. ಯಾರಾಗ್ತಾರೆ ಸೂಪರ್‌ಸ್ಟಾರ್?

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಹಾಗೂ ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಇಬ್ಬರೂ ಒಳ್ಳೆಯ ದೋಸ್ತ್‌ಗಳು. ಈ ವಿಷಯ ಇಡೀ ದಕ್ಷಿಣ ಭಾರತಕ್ಕೆ ಗೊತ್ತು. ಆದರೂ, ಇತ್ತೀಚೆಗೆ ರಜನಿಕಾಂತ್ ಹಾಗೂ ಮೆಗಾಸ್ಟಾರ್ ನಡುವೆ ಸ್ನೇಹದ ಬಗ್ಗೆಯೇ ಅನುಮಾನ ಮೂಡುವಂತಿದೆ.

ರಜನಿಕಾಂತ್ ನಟಿಸುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಜೈಲರ್'. ನಿನ್ನೆ(ಮೇ 4)ಯಷ್ಟೇ 'ಜೈಲರ್' ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆಗಸ್ಟ್ 10ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ತಂಡ ಹೇಳಿದೆ. ಇದೇ ವೇಳೆ ಚಿರಂಜೀವಿ ಸಿನಿಮಾ ಕೂಡ ಬಿಡುಗಡೆಗೆ ಪ್ಲ್ಯಾನ್ ಮಾಡಿಕೊಂಡಿದೆ.

Rajinikanth Jailer Vs Chiranjeevi Bhoola Shankar Box Office Fight in Independence Day Weekend

ರಜನಿಕಾಂತ್ ಹಾಗೂ ಚಿರಂಜೀವಿ ಇಬ್ಬರೂ ಸ್ವಾತಂತ್ರ್ಯ ದಿನವನ್ನೇ ಟಾರ್ಗೆಟ್ ಮಾಡಿದ್ದಾರೆ. ಈ ಕಾರಣಕ್ಕೆ ಬಾಕ್ಸಾಫೀಸ್‌ನಲ್ಲಿ 'ಜೈಲರ್' Vs 'ಭೋಲಾ ಶಂಕರ್' ಫೈಟ್ ನಡೆಯೋದು ಬಹುತೇಕ ಕನ್ಫರ್ಮ್ ಆದಂತೆ ಆಗಿದೆ. ಇದನ್ನೇ ಇಟ್ಟುಕೊಂಡು ಎರಡು ಸಿನಿಮಾ ಬಗ್ಗೆ ಲೆಕ್ಕಾಚಾರಾ ಹಾಕಲಾಗುತ್ತಿದೆ? ಅಲ್ಲದೆ ಇಬ್ಬರಲ್ಲಿ ಸೂಪರ್‌ಸ್ಟಾರ್ ಯಾರು ಅನ್ನೋದು ನಿರ್ಧಾರ ಆಗುತ್ತೆ.

ಸವಾಲು ಎಸೆದ್ರಾ ಸೂಪರ್‌ಸ್ಟಾರ್?

ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಆಂಧ್ರದಲ್ಲಿ ಸುದ್ದಿಯಾಗಿದ್ದರು. ಸೀನಿಯರ್ ಎನ್‌ಟಿಆರ್ 100ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೂಪರ್‌ಸ್ಟಾರ್ ಭಾಗಿಯಾಗಿದ್ದರು. ಈ ವೇಳೆ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಹೊಗಳಿ ಮಾತಾಡಿದ್ದರು. ಇದು ಆಂಧ್ರ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿತ್ತು. ವೈಎಸ್‌ಆರ್ ಕಾಂಗ್ರೆಸ್‌ ಸದಸ್ಯ ಹಾಗೂ ನಟ ಪೊಸಾನಿ ಕೃಷ್ಣ ಮುರಳಿ ತಿರುಗಿಬಿದ್ದಿದ್ದರು.

"ರಜನಿಕಾಂತ್ ನಮಗೆ ಸೂಪರ್‌ಸ್ಟಾರ್ ಅಲ್ಲ. ಚಿರಂಜೀವಿ ಸೂಪರ್‌ಸ್ಟಾರ್" ಎಂದು ಹೇಳಿದ್ದರು. ಈ ವಿವಾದ ಇನ್ನೇನು ತಣ್ಣಗಾಗುತ್ತಿದೆ ಎನ್ನುವಾಗಲೇ ರಜನಿಕಾಂತ್ 'ಜೈಲರ್' ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಚಿರಂಜೀವಿ ಪ್ಲ್ಯಾನ್ ಮಾಡಿದ್ದಕ್ಕೂ ಒಂದು ಮುನ್ನವೇ ತಮ್ಮ ಸಿನಿಮಾ ರಿಲೀಸ್‌ಗೆ ಮುಂದಾಗಿದ್ದಾರೆ. ಈ ಮೂಲಕ ರಜನಿಕಾಂತ್ ಸೂಪರ್‌ಸ್ಟಾರ್‌ಗಿರಿಗೆ ಸವಾಲು ಎಸೆದ್ರಾ ಅನ್ನೋ ಚರ್ಚೆ ಶುರುವಾಗಿದೆ.

Rajinikanth Jailer Vs Chiranjeevi Bhoola Shankar Box Office Fight in Independence Day Weekend

ಗೆಳೆಯನ ಸಿನಿಮಾಗೆ ರಜನಿ ಟಕ್ಕರ್?

ರಜನಿಕಾಂತ್, ಚಿರಂಜೀವಿ ಹಾಗೂ ಮೋಹನ್ ಬಾಬು ಆತ್ಮೀಯ ಗೆಳೆಯರು. ಇವರು ಆಗಾಗ ಸೇರುತ್ತಲೇ ಇರುತ್ತಾರೆ. ಹೀಗಾಗಿ ಚಿರಂಜೀವಿ ಸಿನಿಮಾಗೆ ರಜನಿಕಾಂತ್ ಟಕ್ಕರ್ ಕೊಡಲು ಮುಂದಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಇದು ಕಾಕತಾಳೀಯವೋ ಅಥವಾ ಉದ್ದೇಶ ಪೂರ್ವಕವೋ ಅನ್ನೋ ಗೊಂದಲದಲ್ಲಿದ್ದಾರೆ.

ರಜನಿಕಾಂತ್ ಸಿನಿಮಾ ತೆಲುಗು ರಾಜ್ಯಗಳಲ್ಲೂ ಕ್ರೇಜ್ ಇದೆ. ಅಲ್ಲದೆ, 'ಜೈಲರ್' ಮಲ್ಟಿಸ್ಟಾರರ್ ಸಿನಿಮಾ. ಇದರಲ್ಲಿ ತೆಲುಗು ನಟ ಸುನೀಲ್ ನಟಿಸಿದ್ದಾರೆ. ಹಾಗೇ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ಬಾಲಿವುಡ್‌ ಜಾಕಿ ಶ್ರಾಫ್ ಅಂತಹ ದಿಗ್ಗಜರು ನಟಿಸಿದ್ದಾರೆ. ಹೀಗಾಗಿ ಭೋಲಾ ಶಂಕರ್‌ಗೆ ಟಫ್‌ ಕಾಂಪಿಟೇಷನ್ ಸಿಗುವ ಸಾಧ್ಯತೆಯಿದೆ.

ಚಿರಂಜೀವಿಗೆ ಟ್ರಬಲ್?

ರಜನಿಕಾಂತ್ 'ಜೈಲರ್' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರಿಂದ ಆ ವೇಳೆ ರಿಲೀಸ್ ಆಗುತ್ತಿರುವ ಸಿನಿಮಾಗಳು ಗೊಂದಲಕ್ಕೆ ಬಿದ್ದಿವೆ. ಆಗಸ್ಟ್ 11ಕ್ಕೆ ರಿಲೀಸ್ ಆಗಲು ರೆಡಿಯಾಗಿದ್ದ 'ಭೋಲಾ ಶಂಕರ್' ಅದೇ ದಿನ ರಿಲೀಸ್ ಆಗುತ್ತಾ? ಇಲ್ಲಾ ಪೋಸ್ಟ್‌ಪೋನ್ ಆಗುತ್ತಾ? ಅನ್ನೋ ಕುತೂಹಲವಿದೆ.

ಅಷ್ಟಕ್ಕೂ 'ಭೋಲಾ ಶಂಕರ್' ತಮಿಳುನಾಡಿನಲ್ಲಿ ರಿಲೀಸ್ ಆಗೋದು ಅನುಮಾನ. ಯಾಕಂದ್ರೆ, ಇದು 'ವೇದಲಂ' ಸಿನಿಮಾದ ರಿಮೇಕ್. ಹೀಗಾಗಿ ಎರಡೂ ಸಿನಿಮಾಗಳಿಗೂ ಹೋಲಿಕೆ ಮಾಡಬಹುದು ಅನ್ನೋ ಕಾರಣಕ್ಕೆ ತಮಿಳುನಾಡಿನಲ್ಲಿ ರಿಲೀಸ್ ಮಾಡಲ್ಲ ಎನ್ನಲಾಗುತ್ತಿದೆ. ಈ ಮಧ್ಯೆ ಪೊಸಾನಿ ಹೇಳಿಕೆಗೆ ಟ್ರಿಗರ್ ಆಗಿದ್ದು, 'ಜೈಲರ್'ಗೆ ಟಕ್ಕರ್ ಕೊಡಲು ಚಿರಂಜೀವಿ ಸಿನಿಮಾ ರೆಡಿಯಾದರೆ, ಸೂಪರ್‌ಸ್ಟಾರ್ ಯಾರು? ಸವಾಲಿಗೆ ರಜನಿ ಉತ್ತರ ಕೊಡಬಹುದು.

More from Filmibeat

English summary
Rajinikanth Jailer Vs Chiranjeevi Bhoola Shankar Box Office Fight in Independence Day Weekend, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X