Ram Charan:ಅಪ್ಪ ದುಡಿದಿದ್ದು ಬಿಟ್ಟು ಸಾವಿರ ಕೋಟಿಯ ಸರದಾರ ರಾಮ್ ಚರಣ್; ಇಷ್ಟೊಂದು ಹಣ ಎಲ್ಲಿಂದ ಬಂತು?

ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ತೆಲುಗು ಚಿತ್ರರಂಗದ ಶ್ರೀಮಂತ ನಟರ ಪಟ್ಟಿಯಲ್ಲಿ ರಾಮ್‌ ಚರಣ್‌ಗೂ ಒಂದು ಸ್ಥಾನವಿದೆ. ಅಪ್ಪ ಚಿರಂಜೀವಿ ಮೆಗಾ ಸ್ಟಾರ್. ಚಿಕ್ಕಪ್ಪ ಪವನ್ ಕಲ್ಯಾಣ್ ಪವರ್‌ಸ್ಟಾರ್, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ. ಇವರ ಸಂಪಾದನೆ ಬಿಟ್ಟು ರಾಮ್‌ ಚರಣ್ ಬಳಿ ಇರೋದು ಒಂದೂವರೆ ಸಾವಿರ ಕೋಟಿ. ಇಷ್ಟೊಂದು ಹಣ ಸಂಪಾದಿಸಿದ್ದು ಹೇಗೆ?

ರಾಜಮೌಳಿ ನಿರ್ದೇಶಿದ RRR ಸಿನಿಮಾ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಆದರೆ, ಈ ಸಿನಿಮಾ ಸಿಕ್ಕಿರುವ ಯಶಸ್ಸು ಮುಂದುವರೆದಿಲ್ಲ. ಪ್ಯಾನ್ ಇಂಡಿಯಾ ನಿರ್ದೇಶಕ ಶಂಕರ್ ನಿರ್ದೇಶಿಸಿದ 'ಗೇಮ್ ಚೇಂಜರ್' ರಾಮ್ ಚರಣ್ ವೃತ್ತಿ ಬದುಕನ್ನೇ ಚೇಂಜ್ ಮಾಡುತ್ತೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಹಾಗಾಗಲಿಲ್ಲ. ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಇದರೊಂದ ತಮ್ಮ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕ್ರೇಜ್ ಏನೂ ಕಮ್ಮಿಯಾಗಿಲ್ಲ.

Ram Charan 40th birthday here is the net worth and upcoming films

ಇಂದು (ಮಾರ್ಚ್ 27) ರಾಮ್ ಚರಣ್ 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಟಾಲಿವುಡ್ ಈಗ ರಾಮ್ ಚರಣ್ ಬರ್ತ್‌ಡೇ ಸಂಭ್ರಮದಲ್ಲಿದೆ. ತೆಲುಗು ತಾರೆಯರು ಮೆಗಾ ಪವರ್‌ಸ್ಟಾರ್‌ಗೆ ಬರ್ತ್‌ಡೇ ವಿಶ್ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ಸಾವಿರ ಕೋಟಿ ಸರದಾರನಿಗೆ ಹಣ ಹೊಳೆ ಎಲ್ಲಿಂದ ಹರಿದು ಬರುತ್ತೆ? ಸಿನಿಮಾ ಬಿಟ್ಟು ಬೇರೆ ಯಾವ ಕ್ಷೇತ್ರದಿಂದ ಹಣ ಸಂಪಾದನೆ ಮಾಡುತ್ತಾರೇ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಾಮ್ ಚರಣ್ ಹೆಸರು ಮೊದಲು ತಳುಕು ಹಾಕಿಕೊಳ್ಳುವುದು ಸಿನಿಮಾದಲ್ಲಿಯೇ. ಎಕಾನಮಿಕ್ ಟೈಮ್ಸ್ ವರದಿಯ ಪ್ರಕಾರ, ರಾಮ್‌ ಚರಣ್ ಒಟ್ಟು ಆಸ್ತಿಯ ಮೌಲ್ಯ 1370 ಕೋಟಿ ರೂಪಾಯಿ. ಒಂದು ಸಿನಿಮಾಗೆ ರಾಮ್ ಚರಣ್ 90 ರಿಂದ 100 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಗ್ಲೋಬಲ್ ಸ್ಟಾರ್‌ ಕೇವಲ ತಾವು ನಟಿಸುವ ಚಿತ್ರರಂಗಳಿಂದಲೇ ಇಷ್ಟೊಂದು ಸಂಪಾದನೆ ಮಾಡಿದ್ರಾ? ಖಂಡಿತಾ ಇಲ್ಲ. ರಾಮ್‌ ಚರಣ್‌ ಯಾವ್ಯಾವ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ? ಅಂತ ನೋಡುವುದಾದರೆ.

ರಾಮ್ ಚರಣ್ ಹೂಡಿಕೆ ಮಾಡಿದ ಕಂಪನಿಗಳು

ರಾಮ್‌ ಚರಣ್ ಕೇವಲ ನಟನಷ್ಟೇ ಅಲ್ಲ. ಅವರೊಬ್ಬ ಬ್ಯುಸಿನೆಸ್ ಮ್ಯಾನ್. ಸಿನಿಮಾದಲ್ಲಿ ಯಶಸ್ಸು ಸಿಗುತ್ತಿದ್ದಂತೆ ಪೋಲೊ ಟೀಮ್ ಅನ್ನು ಖರೀದಿಸಿದ್ದರು. ಅದುವೇ ಹೈದರಾಬಾದ್ ಪೋಲೊ ರೈಡಿಂಗ್ ಕ್ಲಬ್‌. ಈ ಟೀಮ್ ಮೇಲೆ ಹೂಡಿಕೆ ಮಾಡಿದ್ದಾರೆ. 2016ರಲ್ಲಿ ರಾಮ್ ಚರಣ್ ತನ್ನದೇ ನಿರ್ಮಾಣ ಕಂಪನಿಯನ್ನು ಶುರು ಮಾಡಿದ್ದರು. ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಮೂಲಕ 'ಕಿಲಾಡಿ 150', 'ಸೈರಾ ನರಸಿಂಹ ರೆಡ್ಡಿ' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದಿದ್ದಾರೆ. ಆದರೆ, 2022ರಲ್ಲಿ ತೆರೆಕಂಡ 'ಆಚಾರ್ಯ' ಕೈ ಹಿಡಿಯಲಿಲ್ಲ.

Ram Charan 40th birthday here is the net worth and upcoming films

ರಾಮ್ ಚರಣ್ ತೆಲುಗಿನ ಯುವಿ ಕ್ರಿಯೇಷನ್ಸ್ ಸಂಸ್ಥೆಯ ವಿಕ್ರಮ್ ರೆಡ್ಡಿ ಜೊತೆ ಕೈ ಜೋಡಿಸಿ ಮತ್ತೊಂದು ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ಅದುವೇ ವಿ ಮೆಗಾ ಪಿಕ್ಚರ್ಸ್. ಈ ನಿರ್ಮಾಣ ಸಂಸ್ಥೆಯ ಮೂಲಕ ದಿ ಇಂಡಿಯಾ ಹೌಸ್ ಎನ್ನುವ ಮೊದಲ ಪ್ರಾಜೆಕ್ಟ್ ಅನ್ನು ಕೈಗೆತ್ತುಕೊಂಡಿದೆ ಎಂದು ಜಿಕ್ಯೂ ವರದಿ ಮಾಡಿದೆ.

ರಾಮ್ ಚರಣ್ ಬ್ರ್ಯಾಂಡ್‌ಗಳು

ರಾಮ್‌ ಚರಣ್ 2013ರಲ್ಲಿ ಹೈದರಾಬಾದ್ ಮೂಲದ ಮೇಘಾ ಏರ್‌ವೇಸ್‌ ಪ್ರೈವೆಟ್ ಲಿಮಿಟೆಡ್ ಜೊತೆ ಸೇರಿಕೊಂಡಿದ್ದರು. ಬಳಿಕ ಅದನ್ನು ಟ್ರುಜೆಟ್ ಎಂದು ಮರುನಾಮಕರಣ ಮಾಡಲಾಗಿತ್ತು. ಆದರೂ, 2022ರಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಜಿಕ್ಯೂ ಪ್ರಕಾರ ರಾಮ್‌ ಚರಣ್ ಸೆವಿಲ್ ಸರ್ಕ್ಯೂಟ್‌ ಎಂಬ ಸಂಸ್ಥೆಯಲ್ಲೂ ಹೂಡಿಕೆ ಮಾಡಿದ್ದಾರೆ. ಈ ಸಂಸ್ಥೆಯ ಮಾಲೀಕರಲ್ಲಿ ರಾಮ್‌ ಚರಣ್ ಕೂಡ ಒಬ್ಬರು ಎನ್ನಲಾಗಿದೆ.

ಆಪೋಲೊ ಆಸ್ಪತ್ರೆಯಲ್ಲೂ ಹೂಡಿಕೆ

ರಾಮ್ ಚರಣ್ ಇಷ್ಟಕ್ಕೆ ನಿಲ್ಲಿಸಿಲ್ಲ. ದೇಶದ ಪ್ರತಿಷ್ಠಿತ ಆಪೋಲೊ ಆಸ್ಪತ್ರೆಯಲ್ಲೂ ಹೂಡಿಕೆ ಮಾಡಿದ್ದಾರೆ. ಈ ಆಸ್ಪತ್ರೆ ರಾಮ್ ಚರಣ್ ಪತ್ನಿ ಉಪಾಸನಾ ಅವರ ಅಜ್ಜ ಪ್ರತಾಪ್ ಚಂದ್ರ ರೆಡ್ಡಿ ಸ್ಥಾಪಿಸಿದ್ದರು. ಇಂತಹ ದೊಡ್ಡ ಸಂಸ್ಥೆಯಲ್ಲಿ ರಾಮ್‌ ಚರಣ್ ಹೂಡಿಕೆ ಮಾಡಿದ್ದರೆ. ಈ ಎಲ್ಲಾ ಮೂಲಗಳಿಂದ ರಾಮ್ ಚರಣ್‌ಗೆ ಆದಾಯ ಹರಿದು ಬರುತ್ತಿದೆ.

ಹುಟ್ಟುಹಬ್ಬಕ್ಕೆ ಟೈಟಲ್ ಅನೌನ್ಸ್

ರಾಮ್‌ ಚರಣ್‌ 40ನೇ ಹುಟ್ಟುಹಬ್ಬದಂದು ಅವರ 16ನೇ ಸಿನಿಮಾದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿದೆ. ಈ ಸಿನಿಮಾವನ್ನು ಸುಕುಮಾರ್ ಶಿಷ್ಯ ಬುಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಉಪ್ಪೆನಾ ಅಂತ ಸೂಪರ್‌ ಹಿಟ್ ಸಿನಿಮಾವನ್ನು ರಾಮ್ ಚರಣ್ ನೀಡಿದ್ದರು. ಈಗ ಬರ್ತ್‌ಡೇಯಂದು 16ನೇ ಸಿನಿಮಾ ಟೈಟಲ್ ರಿವೀಲ್ ಆಗಿದೆ. ಅದಕ್ಕೆ 'ಪೆದ್ದಿ' ಅನ್ನುವ ಟೈಟಲ್ ಅನ್ನು ಇಟ್ಟಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ರಾಮ್ ಚರಣ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಮ್ ಚರಣ್ 16ನೇ ಸಿನಿಮಾ 'ಪೆದ್ದಿ' ಫಸ್ಟ್ ಲುಕ್ ಸಿಕ್ಕಾಪಟ್ಟೆ ರಗಡ್ ಆಗಿದೆ. ಮತ್ತೊಂದು ಮಾಸ್ ಅವತಾರದ ಸಿನಿಮಾ ಮೆಗಾ ಪವರ್‌ಸ್ಟಾರ್ ಅನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ಕಾದು ಕೂತಿದ್ದಾರೆ. 'ಪುಷ್ಪ 2' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಇಬ್ಬರೂ ಬೆಂಬಲ ಈ ಸಿನಿಮಾಗಿದೆ. ಹೀಗಾಗಿ ಟಾಲಿವುಡ್‌ನಲ್ಲಿ ಅಪ್ಪಟ ಮಾಸ್ ರಗಡ್ ಸಿನಿಮಾವೊಂದು ರೆಡಿಯಾಗುತ್ತಿದೆ.

ರಾಮ್‌ ಚರಣ್ ಜೊತೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಬಾಲಿವುಡ್ ನಟಿ ಜಾಹ್ನವಿ ಕಪೂರ್, ಜಗಪತಿ ಬಾಬು ಹಾಗೂ ಮಿರ್ಜಾಪುರ್ ವೆಬ್‌ ಸೀರಿಸ್ ಫೇಮ್‌ನ ದಿವ್ಯೆಂದು ಶರ್ಮಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಅದ್ಭುತ ನಟರ ಜೊತೆ ರಾಮ್‌ ಚರಣ್ ಮತ್ತೆ ಮಾಸ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತ್ತಿದ್ದಾರೆ. ಇನ್ನು ಫಸ್ಟ್‌ ಲುಕ್ ನೋಡಿದರೆ, ರಾಮ್ ಚರಣ್ ಇಲ್ಲಿ ಲಾಂಗ್ ರಫ್ ಹೇರ್ ಬಿಟ್ಕೊಂಡು, ಉದ್ದುದ್ದ ಗಡ್ಡ ಬಿಟ್ಟ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇದು ಪಕ್ಕಾ ಹೈಫೈ ಕ್ಯಾರೆಕ್ಟರ್ ಅಂತೂ ಅಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಅಲ್ಲದೆ ನಿರ್ಮಾಣ ಸಂಸ್ಥೆ ರಾಮ್ ಚರಣ್‌ ಹುಟ್ಟುಹಬ್ಬದ ಈ ಸಂದರ್ಭದಲ್ಲಿ 'ಎ ಮ್ಯಾನ್​ ಆಫ್​ ದಿ ಲ್ಯಾಂಡ್, ಫೋರ್ಸ್ ಆಫ್​ ದಿ ನೇಚರ್' ಎಂದು ಬಣ್ಣಿಸಿದ್ದು, ಫ್ಯಾನ್ಸ್‌ಗೆ ಮತ್ತಷ್ಟು ಕಿಕ್ ಕೊಟ್ಟಿದೆ.

Take a Poll

ರಾಮ್‌ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಗೇಮ್ ಚೇಂಜರ್' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಇದು ಗ್ಲೋಬಲ್ ಸ್ಟಾರ್ ರಾಮ್‌ ಚರಣ್ ಅಭಿಮಾನಿಗಳಿಗೂ ಬೇಸರ ತರಿಸಿತ್ತು. ಅಷ್ಟೇ ಅಲ್ಲದೆ ಬಾಕ್ಸಾಫೀಸ್ ಕಲೆಕ್ಷನ್‌ ಕೂಡ ಫೇಕ್ ಅಂತ ಟ್ರೋಲ್ ಆಗಿತ್ತು. ಹೀಗಾಗಿ ಈ ಸಿನಿಮಾ ಗೆಲ್ಲಲೇಬೇಕಿದೆ. ರಾಮ್ ಮತ್ತೆ ಅಭಿಮಾನಿಗಳಿಗೆ ಮಾಸ್ ಅವತಾರದಲ್ಲಿ ಬರಬೇಕಿದೆ. ಹೀಗಾಗಿ 'ಪೆದ್ದಿ' ನಿರೀಕ್ಷೆ ಗಗನಕ್ಕೇರಿದೆ. ಫಸ್ಟ್‌ ಲುಕ್ ನೋಡಿಯೇ ಫ್ಯಾನ್ಸ್ ಈ ಬಾರಿ ಗೆಲ್ಲೋದು ನಾವೇ ಅಂತ ನಿರ್ಧರಿಸಿದ್ದಾರೆ. ಈ ಸಿನಿಮಾ ಎ ಆರ್ ರೆಹಮಾನ್ ಸಂಗೀತ ನೀಡುತ್ತಿದ್ದು, ಆರ್.ರತ್ನವೇಲು ಕ್ಯಾಮರಾ ವರ್ಕ್ ಇದೆ.

More from Filmibeat

Read more about: ram charan net worth tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X