ರಾಮ್ ಚರಣ್-ಉಪಾಸನಾ ಪುತ್ರಿಗೆ 'ಕ್ಲಿನ್ ಕಾರಾ ಕೊನಿಡೆಲಾ' ಎಂದು ನಾಮಕರಣ: ಈ ಹೆಸರಿನ ಅರ್ಥವೇನು?
ರಾಮ್ ಚರಣ್ ಹಾಗೂ ಉಪಾಸನಾಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿತ್ತು. ಈ ಖುಷಿ ವಿಷಯವನ್ನು ದಂಪತಿಗಳು ಹಂಚಿಕೊಂಡಿದ್ದರು. ಮೆಗಾ ಕುಟಂಬಕ್ಕೆ ಮಹಾಲಕ್ಷ್ಮಿ ಆಗಮನವಾಗುತ್ತಿದ್ದಂತೆ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು.
ಮೆಗಾ ಕುಟುಂಬಕ್ಕೆ ಬಂದು ರಾಮ್ ಚರಣ್, ಉಪಾಸನಾ ಪುತ್ರಿಯನ್ನು ಅಭಿಮಾನಿಗಳು 'ಮೆಗಾ ಡಾಟರ್' ಅಂತಲೇ ಕರೆಯೋಕೆ ಶುರುವಿಟ್ಟುಕೊಂಡಿದ್ದರು. ಆದ್ರೀಗ ಈಗ ಚಿರಂಜೀವಿ ಮೊಮ್ಮಗಳಿಗೆ ನಾಮಕರಣ ಮಾಡಲಾಗಿದೆ. ಆ ಹೆಸರನ್ನು ರಾಮ್ ಚರಣ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ರಾಮ್ ಚರಣ್ ಪುತ್ರಿಗೆ ಇಟ್ಟಿರುವ ಹೆಸರಿನ ಬಗ್ಗೆ ಆಂಧ್ರ-ತೆಲಂಗಾಣದಲ್ಲಿ ಚರ್ಚೆಯಾಗುತ್ತಿದೆ. ರಾಮ್ ಚರಣ್ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಷ್ಟೇ ಅಲ್ಲದೆ, ಆ ಹೆಸರಿನ ಅರ್ಥವೇನು? ಅನ್ನೋದನ್ನು ತಿಳಿಸಲಾಗಿದೆ.
ವಿಡಿಯೋ ಶೇರ್ ಮಾಡಿದ ರಾಮ್ ಚರಣ್
ರಾಮ್ ಚರಣ್ ಹಾಗೂ ಉಪಾಸನಾ ಅವರ ಮಗಳ ನಾಮಕರಣ ನೆರವೇರಿದೆ. ಈ ವಿಷಯವನ್ನು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಲಾಗಿದೆ. ಜೊತೆ ರಾಮ್ ಚರಣ್ ಹಾಗೂ ಉಪಾಸನ ಪೋಷಕರು ಜೊತೆಯಲ್ಲಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದೆ.\
ರಾಮ್ ಚರಣ್ ಶೇರ್ ಮಾಡಿದ ವಿಡಿಯೋದಲ್ಲಿ " ಚೆಂಚು ಬುಡಕಟ್ಟಿನ ದೇವತೆಯಾದ ಭಾವ್ರಮ್ಮ ದೇವಿಯ ಆಶೀರ್ವಾದದೊಂದಿಗೆ ನಮ್ಮ ಮೊಮ್ಮಗಳನ್ನು ಕ್ಲಿನ್ ಕಾರಾ ಕೊನಿಡೆಲಾ ಎಂದು ಪರಿಚಯಿಸುತ್ತಿದ್ದೇವೆ" ಎಂದು ಬರೆಯಲಾಗಿದ್ದು, ಇದರಲ್ಲಿ ರಾಮ್ ಚರಣ್ ಪೋಷಕರು ಚಿರಂಜೀವಿ ಹಾಗೂ ಸುರೇಖಾ, ಉಪಾಸನಾ ಪೋಷಕರು ಅನಿಲ್ ಹಾಗೂ ಶೋಭನಾ ಅವರ ಹೆಸರನ್ನು ನಮೂದಿಸಲಾಗಿದೆ.
'ಕ್ಲಿನ್ ಕಾರಾ' ಹೆಸರಿನ ಅರ್ಥವೇನು?
ರಾಮ್ ಚರಣ್ ಹಾಗೂ ಉಪಾಸನಾ ಮಗಳ ಹೆಸರು ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಅಂತ ಅನಿಸಿದೆ. ಈ ಹೆಸರಿನ ಅರ್ಥವನ್ನು ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ರಾಮ್ ಚರಣ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ವಿಡಿಯೋದಲ್ಲೇ ಮಗಳ ಹೆಸರಿನ ಅರ್ಥವನ್ನು ಹಾಗೂ ಎಲ್ಲಿಂದ ತೆಗೆದುಕೊಂಡಿರುವುದಾಗಿಯೂ ಹೇಳಿದ್ದಾರೆ.
"ಈ ಹೆಸರನ್ನು ಲಲಿತ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ. ಈ ಹೆಸರು ಆಧ್ಯಾತ್ಮವನ್ನು ಜಾಗೃತಗೊಳಿಸಲು ಬೇಕಾಗುವ ಪರಿಶುದ್ಧ ಶಕ್ತಿ ಹಾಗೂ ಪರಿವರ್ತನೆಯ ಸಂಕೇತ" ಎಂದು ಹೇಳಲಾಗಿದೆ. ಬ್ರಹ್ಮ ಪುರಾಣದಲ್ಲಿ ಸಾವಿರಕ್ಕೂ ಅಧಿಕ ಹೆಸರುಗಳನ್ನು ದೇವತೆ ಲಲಿತಾ ದೇವಿ ಪಟ್ಟಿದ್ದು ಮಾಡಿದ್ದಾರೆ ಎಂದು ನಂಬಲಾಗಿದೆ.
ಮೆಗಾ ಫ್ಯಾನ್ಸ್ ದಿಲ್ ಖುಷ್
ರಾಮ್ ಚರಣ್ ಹಾಗೂ ಉಪಾಸನಾ ಮಗಳ ಹೆಸರನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬ ಅಭಿಮಾನಿ " ಎಷ್ಟೊಂದು ಸುಂದರ ಹಾಗೂ ಧಾರ್ಮಿಕ ಹೆಸರು" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು " ಅದಕ್ಕೆ ನನಗೆ ದಕ್ಷಿಣ ಭಾರತದ ನಟರು ಇಷ್ಟ ಆಗುತ್ತಾರೆ. ಅವರು ತಮ್ಮ ರೂಟ್ಸ್ ಅನ್ನು ಮರೆಯುವುದಿಲ್ಲ" ಎಂದಿದ್ದಾರೆ.
ಮಗಳಿಗೆ ನಾಮಕರಣ ಮಾಡಿದ ಖುಷಿಯಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ಒಂದೇ ಫ್ರೇಮ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಂದ್ಹಾಗೆ, ಕ್ಲಿನ್ ಕಾರಾ ಜನನ ಜೂನ್ 20ರಂದು ಹೈದರಾಬಾದ್‌ನ ಅಪೊಲೋ ಆಸ್ಪತ್ರೆಯಲ್ಲಾಗಿದೆ.


Click it and Unblock the Notifications











