24 ಗಂಟೆಗಳಲ್ಲಿ ದಾಖಲೆ ವೀವ್ಸ್ ಪಡೆದ 'ಪೆದ್ದಿ' ಸಾಂಗ್ಸ್; ರಾಮ್ ಚರಣ್, ಎಆರ್ ರೆಹಮಾನ್‌ಗೆ ಬಹುಪರಾಕ್
ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಮ್ಯೂಸಿಕ್ ಮಾಂತ್ರಿಕ ಎಆರ್ ರೆಹಮಾನ್. ಒಂದಿಷ್ಟು ದಿನ ಇವರ ಬತ್ತಳಿಕೆಯಿಂದ ಹೇಳಿಕೊಳ್ಳುವಂತಹ ಟ್ಯೂನ್‌ಗಳು ಬಂದಿರಲಿಲ್ಲ. ರೆಹಮಾನ್ ಹಾಡುಗಳಿಗಾಗಿ ಎದುರು ನೋಡುತ್ತಿದ್ದ ಸಂಗೀತ ಪ್ರಿಯರಿಗೆ ಜಬರ್ದಸ್ತ್ ಆಗಿರುವಂತಹ ಒಂದು ಸಾಂಗ್ ಸಿಕ್ಕಿದೆ. ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ನಟಿಸುತ್ತಿರುವ 'ಪೆದ್ದಿ' ಸಿನಿಮಾ "ಚಿಕಿರಿ" ಹಾಡು ಇರೋ ಬರೋ ದಾಖಲೆಗಳನ್ನು ಮುರಿಯುತ್ತಿದೆ.
ನಿನ್ನೆಯಷ್ಟೇ (ನವೆಂಬರ್ 7) 'ಪೆದ್ದಿ' ಸಿನಿಮಾ ಹಾಡನ್ನು ರಿವೀಲ್ ಮಾಡಲಾಗಿತ್ತು. ಎಆರ್ ರೆಹಮಾನ್ ಹಾಗೂ ಮೋಹಿತ್ ಚೌಹಾಣ್ ಜೋಡಿ ಮತ್ತೆ ಜಾದು ಮಾಡಿದೆ. ಪಕ್ಕಾ ರಗಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಮ್ ಚರಣ್ ಲುಕ್‌ಗೆ ಫಿದಾ ಆಗಿದ್ದ ಸಿನಿ ಪ್ರಿಯರು ಈಗ ಸ್ಟೆಪ್‌ಗಳಿಗೂ ಕ್ಲೀನ್ ಬೌಲ್ಡ್ ಆಗಿದ್ದಾರೆ. ಈ ಸಿನಿಮಾದ "ಚಿಕಿರಿ" ಹಾಡು ರಿಲೀಸ್ ಆಗುತ್ತಿದ್ದಂತೆ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ.

'ಪೆದ್ದಿ' ಸಿನಿಮಾದ "ಚಿಕಿರಿ.." ಸದ್ಯ ಭಾರತದ ಟಾಪ್ ಸಾಂಗ್ ಲಿಸ್ಟ್‌ನಲ್ಲಿದೆ. ಕೇವಲ 24 ಗಂಟೆಗಳಲ್ಲಿ ದಾಖಲೆ ವೀವ್ಸ್ ಪಡೆದುಕೊಂಡು ಭಾರತದಲ್ಲಿ ಹೆಚ್ಚು ವೀವ್ಸ್ (24 ಗಂಟೆಗಳಲ್ಲಿ ಪಡೆದ ಹಾಡಾಗಿದೆ. ರಾಮ್ ಚರಣ್, ಎಆರ್ ರೆಹಮಾನ್, ಮೋಹಿತ್ ಚೌಹಾಣ್ ಹಾಗೂ ಕನ್ನಡ ವರ್ಷನ್ ಹಾಡಿರುವ ಸಂಚಿತ್ ಹೆಗ್ಡೆಗೆ ಹೊಗಳಿಕೆಯ ಮಹಾಪೂರವೇ ಹರಿದು ಬಂದಿದೆ. ಹಾಗಿದ್ದರೆ, 24 ಗಂಟೆಗಳಲ್ಲಿ ಎಷ್ಟು ವೀವ್ಸ್ ಆಗಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಲಾಂಗ್ ಗ್ಯಾಪ್ ಕೊಟ್ಟು ಎಆರ್ ರೆಹಮಾನ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಪುಷ್ಪ' ಸಿನಿಮಾ ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿ ಬಾಬು ಸನಾ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಉಪೆನಾ' ಸಿನಿಮಾ ನಿರ್ದೇಶಿಸಿದ್ದರು. ಇದೂ ಕೂಡ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿತ್ತು. ಈಗ 'ಪೆದ್ದಿ' ಒಂದು ಹಾಡಿನಿಂದಲೇ ರಾಮ್ ಚರಣ್ ಅಭಿಮಾನಿಗಳ ಹೃದಯ ಗೆದ್ದಿದೆ.
'ಪೆದ್ದಿ' ಸಿನಿಮಾದ "ಚಿಕಿರಿ ಚಿಕಿರಿ" ಸಾಂಗ್ ನವೆಂಬರ್ 7 ರಂದು ರಿಲೀಸ್ ಮಾಡಲಾಗಿದೆ. ಐದು ಭಾಷೆಗಳಲ್ಲಿ ಈ ಸಿನಿಮಾದ ಹಾಡು ಬಿಡುಗಡೆಯಾಗಿದ್ದು ಒಂದೊಂದು ಭಾಷೆಯಲ್ಲೂ ಈ ಸಿನಿಮಾದ ಸಾಂಗ್ ಸಂಗೀತ ಪ್ರಿಯರಿಗೆ ಕಿಕ್ ಕೊಟ್ಟಿದೆ. ಹಾಡು ಬಿಡುಗಡೆಯಾದ 24 ಗಂಟೆಯಲ್ಲಿ ಐದು ಭಾಷೆಯಿಂದ ಸುಮಾರು 46 ಮಿಲಿಯನ್ ವೀವ್ಸ್ ಕಂಡಿದೆ. ಭಾರತದ ಯಾವುದೇ ಹಾಡು ಮಾಡದ ದಾಖಲೆಯನ್ನು ಈ ಸಾಂಗ್ ಮಾಡಿದೆ.

ತೆಲುಗು ವರ್ಷನ್‌ನಿಂದ 32 ಮಿಲಿಯನ್ ಬಂದಿದ್ದರೆ, ಹಿಂದಿ ವರ್ಷನ್ 10 ಮಿಲಿಯನ್ ವೀವ್ಸ್ ಕಂಡಿದೆ. ಇದರೊಂದಿಗೆ ಕನ್ನಡ ವರ್ಷನ್‌ಗೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 1 ಮಿಲಿಯನ್ ವೀವ್ಸ್ ಬಂದಿದೆ. ಇನ್ನು ತಮಿಳು ಹಾಗೂ ಮಲಯಾಳಂ ನಿಂದ 3 ಮಿಲಿಯನ್ ವೀವ್ಸ್ ಬಂದಿದೆ. ಇದು ಕೇವಲ 24 ಗಂಟೆಗಳ ಲೆಕ್ಕಾಚಾರ ಅಷ್ಟೇ. ಇನ್ನೂ ಹಲವು ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ.
ಎಆರ್ ರೆಹಮಾನ್ ಮತ್ತೆ ಒಳ್ಳೊಳ್ಳೆ ಹಾಡುಗಳ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಎರಡು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ ಇತ್ತೀಚೆಗೆ ಧನುಷ್, ಕೃತಿ ಸನನ್ ನಟಿಸಿರುವ 'ತೆರೆ ಇಷ್ಕ್ ಮೇ' ಸಿನಿಮಾದ ಟೈಟಲ್ ಸಾಂಗ್ ಕೂಡ ಸೂಪರ್ ಹಿಟ್ ಆಗಿದೆ. 24 ಗಂಟೆಗಳಲ್ಲಿ 25 ಮಿಲಿಯನ್ ವೀವ್ಸ್ ದಾಖಲು ಮಾಡಿದೆ.


Click it and Unblock the Notifications











