ಶ್ರೀರಾಮ ನವಮಿಗೆ ರಾಮ್ ಚರಣ್ 'ಪೆದ್ದಿ' ಫಸ್ಟ್ ಗ್ಲಿಂಪ್ಸ್: ಇದೇ ದಿನ ರಿಲೀಸ್ ಯಾಕೆ ಆಗ್ತಿದೆ?

RRR ಬಳಿಕ ರಾಮ್‌ ಚರಣ್‌ ಗ್ಲೋಬಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ರಾಜಮೌಳಿ ಸಿನಿಮಾ ಬಳಿಕ ಆ ಯಶಸ್ಸು ಹಾಗೇ ಮುಂದುವರೆಯುತ್ತೆ ಎನ್ನುವ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಇತ್ತು. ಆದರೆ, ಶಂಕರ್ ನಿರ್ದೇಶಿಸಿದ ಸಿನಿಮಾ ಗ್ಲೋಬಲ್ ಸ್ಟಾರ್‌ ಗೇಮ್ ಚೇಂಜ್ ಮಾಡಲಿಲ್ಲ. ಇದು ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ಅಭಿಮಾನಿಗಳಿಗೆ ಅತೀ ದೊಡ್ಡ ನಿರಾಸೆಯಾಗಿತ್ತು.

ಹಾಗಂತ ರಾಮ್ ಚರಣ್ ಸುಮ್ಮನೆ ಕೂತಿಲ್ಲ. ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. 'ಪುಷ್ಪ 2' ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿ ಬಾಬು ಸನ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಮತ್ತೆ ಅಭಿಮಾನಿಗಳ ಮುಂದೆ ಬರುವುದಕ್ಕೆ ನಿರ್ಧರಿಸಿದ್ದರು. ಅದುವೇ 'ಪೆದ್ದಿ'. ಈಗಾಗಲೇ ರಾಮ್ ಚರಣ್ ಲುಕ್ ಅನೌನ್ಸ್ ಮಾಡಿ, ಟೈಟಲ್ ಕೂಡ ರಿವೀಲ್ ಮಾಡಿದ್ದರು. ಈಗ ಶ್ರೀರಾಮ ನವಮಿಗೆ ಫಸ್ಟ್ ಶಾಟ್ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಿದ್ದಾರೆ.

Ram Charan Janhvi Kapoor Peddi First Shot Glimpse and release date announced

ಇಂದು (ಏಪ್ರಿಲ್ 6) ರಾಮ ನವಮಿ. ಇದೇ ದಿನ ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹೊಸ ಸಿನಿಮಾ ಅಪ್‌ಡೇಟ್ ಸಿಕ್ಕಿದೆ. ರಾಮ್ ಚರಣ್ ಅಭಿಮಾನಿಗಳಿಗೆ ಕೇವಲ ಫಸ್ಟ್ ಲುಕ್ ಅಷ್ಟೇ ಅಲ್ಲ. ರಿಲೀಸ್ ಡೇಟ್ ಅನ್ನೂ ಅನೌನ್ಸ್ ಮಾಡಿದ್ದಾರೆ. ಆದರೆ, 'ಪೆದ್ದಿ' ಟೀಮ್ ಇದೇ ದಿನ ಯಾಕೆ ಸಿನಿಮಾವನ್ನು ರಿಲೀಸ್ ಮಾಡುತ್ತಿದೆ. ಆ ದಿನ ಏನು ಸ್ಪೆಷಲ್ ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಪಕ್ಕಾ ರಗಡ್, ಹಳ್ಳಿ ಹೈದನಾಗಿ ಈ ಹಿಂದೆ ಕೂಡ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸಿದ್ದಾರೆ. ಇದೇ ಬುಚ್ಚಿ ಬಾಬು ಸನ ಗುರು ಸುಕುಮಾರ್ ನಿರ್ದೇಶಿಸಿದ್ದ 'ರಂಗಸ್ಥಳಂ' ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಈಗ ಅವರ ಶಿಷ್ಯ ಕೂಡ ಹಾಗೇ ರಗಡ್ ಲುಕ್‌ನಲ್ಲಿ ಗ್ಲೋಬಲ್ ಸ್ಟಾರ್ ಅನ್ನು ತೋರಿಸುವುದಕ್ಕೆ ಮುಂದಾಗಿದ್ದಾರೆ. ತಮ್ಮ ಸಿನಿಮಾದ ಖದರ್ ಹೇಗಿರುತ್ತೆ ಅನ್ನೋದನ್ನು ಶ್ರೀ ರಾಮ ನವಮಿಯಂದೇ ರಿವೀಲ್ ಮಾಡಲಾಗಿದೆ. 'ಗೇಮ್ ಚೇಂಜರ್' ಬಳಿಕ ನಿರಾಸೆಯಲ್ಲಿದ್ದ ಅಭಿಮಾನಿಗಳು ಈ ಝಲಕ್ ನೋಡಿ ಥ್ರಿಲ್ ಆಗಿದ್ದಾರೆ.

ಅಷ್ಟಕ್ಕೂ ರಾಮ ನವಮಿಯಂದೇ 'ಪೆದ್ದಿ' ಸಿನಿಮಾದ ಫಸ್ಟ್ ಲುಕ್ ಹಾಗೂ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುವುದಕ್ಕೆ ಕಾರಣವಿದೆ. ರಾಮ್ ಚರಣ್ ಸಿನಿಮಾ 'ಪೆದ್ದಿ' 2026, ಮಾರ್ಚ್ 27ರಂದು ರಿಲೀಸ್ ಆಗುತ್ತಿದೆ. ಅಷ್ಟಕ್ಕೂ ಇದೇ ಡೇಟ್‌ನಲ್ಲಿ ಯಾಕೆ ರಿಲೀಸ್ ಮಾಡುತ್ತಿದೆ ಅನ್ನೋದಕ್ಕೊಂದು ಕಾರಣವಿದೆ. ಮುಂದಿನ ವರ್ಷ ಮಾರ್ಚ್ 27ರಂದು ರಾಮ ನವಮಿ. ಅದೇ ದಿನ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.

Ram Charan Janhvi Kapoor Peddi First Shot Glimpse and release date announced

ರಾಮ ನವಮಿಯನ್ನು ಇದೇ ದೇಶವೇ ಆಚರಿಸುತ್ತೆ. ಭಾರತದ ಮೂಲೆ ಮೂಲೆಯಲ್ಲಿಯೂ ರಾಮ ನವಮಿ ಸಂಭ್ರಮಾಚರಣೆ ಆಗುತ್ತೆ. ಇನ್ನು ಹೆಸರಿನಲ್ಲೇ ರಾಮನಿರುವ ರಾಮ್‌ ಚರಣ್ ಸಿನಿಮಾ ಶ್ರೀರಾಮ ನವಮಿಗೆ ಬಿಡುಗಡೆಯಾಗುತ್ತಿರುವುದು ವಿಶೇಷ. ಅಲ್ಲದೆ 'ಪೆದ್ದಿ' ಸಿನಿಮಾ ಪ್ಯಾನ್ ಇಂಡಿಯಾ ಆಗಿರುವುದರಿಂದ ಇಡೀ ದೇಶವೇ ಶ್ರೀರಾಮ ನವಮಿ ಸಂಭ್ರಮದಲ್ಲಿ ಇರುವಾಗ ಬಿಡುಗಡೆಯಾಗುತ್ತಿದೆ.

ಇನ್ನು ರಾಮ್ ಚರಣ್ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಶ್ರೀದೇವಿ ಪುತ್ರಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿದ್ದಾರೆ. 'ದೇವರ' ಸಿನಿಮಾ ಬಳಿಕ ಇದು ಎರಡನೇ ತೆಲುಗು ಸಿನಿಮಾ. ಹಾಗೇ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಟಾಲಿವುಡ್‌ ನಟ ಜಗಪತಿ ಬಾಬು, ಮಿರ್ಜಾಪುರ್ ಖ್ಯಾತಿಯ ದಿವ್ಯೆಂದು ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ನಿರ್ಮಾಣ ಮಾಡುತ್ತಿದೆ. ಎಆರ್ ರೆಹಮಾನ್ ಮ್ಯೂಸಿಕ್, ಆರ್. ರತ್ನವೇಲು ಕ್ಯಾಮರಾವರ್ಕ್ ಈ ಸಿನಿಮಾ ಹೈಲೈಟ್.

More from Filmibeat

English summary
Ram Charan, Janhvi Kapoor Peddi First Shot Glimpse for Sri Ram Navami
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X