RRR ಸಿನಿಮಾಗಾಗಿ ರಾಮ್ ಚರಣ್, ಜೂ.ಎನ್‌ಟಿಆರ್, ರಾಜಮೌಳಿ, ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಕೋಟಿ?

ಮೂವಿ ಮಾಂತ್ರಿಕ ರಾಜಮೌಳಿ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಇಡೀ ದೇಶವೇ ಎದುರು ಕಾದು ಕೂತಿರುತ್ತೆ. ಬಾಹುಬಲಿ ಸಿನಿಮಾದಿಂದ ಜಕ್ಕಣ್ಣ ಸಿನಿಮಾ ಜಗತ್ತಿನಲ್ಲಿ ಜಾದು ಸೃಷ್ಟಿಸಿಬಿಟ್ಟಿದ್ದಾರೆ. ಈಗ 'RRR' ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. 'RRR' 2022 ಜನವರಿ 07ಕ್ಕೆ ರಿಲೀಸ್ ಆಗುತ್ತಿದೆ. ಹೀಗಾಗಿ ಇಡೀ ಸಿನಿಮಾ ತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ರಾಮ್ ಚರಣ್, ಜೂ.ಎನ್‌ಟಿಆರ್, ರಾಜಮೌಳಿ ಸೇರಿದಂತೆ ಆಲಿಯಾ ಭಟ್ ದೇಶದ ಉದ್ದಗಲಕ್ಕೂ ಅಲೆದಾಡಿ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ.

ಜಕ್ಕಣ್ಣ ಸಿನಿಮಾವನ್ನು ನೋಡುವ ಪರಿಯೇ ಬೇರೆ. ಇನ್ನು ಸಿನಿಮಾ ಪ್ರಚಾರ ವಿಚಾರದಲ್ಲೂ ವಿಭಿನ್ನವಾಗಿಯೇ ಆಲೋಚನೆ ಮಾಡುತ್ತಾರೆ. ಸಿನಿಮಾ ಬಿಡುಗಡೆಗೆ ಅಂತ ಇರುವುದು ಇನ್ನೂ ಕೇವಲ ಎರಡು ವಾರ ಅಷ್ಟೇ. ಅಷ್ಟರಲ್ಲೇ ಮತ್ತೊಂದು ಸುತ್ತು ದೇಶದ ಉದ್ದಕ್ಕೂ ಇಡೀ ತಂಡ ಅಲೆದಾಡುತ್ತಿದ್ದಾರೆ. ಈ ಮಧ್ಯೆ ರಾಜಮೌಳಿ ಸೇರಿದಂತೆ 'RRR' ಸಿನಿಮಾದಲ್ಲಿ ರಾಮ್ ಚರಣ್, ಜೂ.ಎನ್‌ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ಪಡೆದಿರುವ ಸಂಭಾವನೆ ಬಗ್ಗೆನೂ ಭಾರಿ ಚರ್ಚೆಯಾಗುತ್ತಿದೆ. ಹಾಗಿದ್ದರೆ, ನಿರ್ಮಾಪಕರು ಯಾರಿಗೆ ಎಷ್ಟು ಸಂಭಾವನೆ ನೀಡಿದ್ದಾರೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ರಾಮ್ ಚರಣ್, ಜೂ.ಎನ್‌ಟಿಆರ್ ಸಂಭಾವನೆ ಎಷ್ಟು?

ರಾಮ್ ಚರಣ್, ಜೂ.ಎನ್‌ಟಿಆರ್ ಸಂಭಾವನೆ ಎಷ್ಟು?

ದಾನಯ್ಯ ಬರೋಬ್ಬರಿ 500 ಕೋಟಿ ವೆಚ್ಚದಲ್ಲಿ 'RRR' ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳು ಏಕಕಾಲಕ್ಕೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜೂ.ಎನ್‌ಟಿಆರ್ ಕೊಮರಂ ಭೀಮ್ ಪಾತ್ರದಲ್ಲಿಯೂ, ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಘರ್ಜಿಸಲಿದ್ದಾರೆ. ಈ ಪಾತ್ರಗಳಿಗೆ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಾಗೂ ಯಂಗ್ ಟೈಗರ್ ಜೂ.ಎನ್‌ಟಿಆರ್ ಪಡೆದ ಸಂಭಾವನೆ ಬರೋಬ್ಬರಿ 45 ಕೋಟಿ ಎನ್ನಲಾಗಿದೆ. ಎರಡು ವರ್ಷ ಇದೊಂದೇ ಸಿನಿಮಾಗೆ ಕಾಲ್‌ಶೀಟ್ ನೀಡಿರುವ ಇಬ್ಬರು ಸ್ಟಾರ್‌ ನಟರು ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ.

'RRR'ಗೆ ಆಲಿಯಾ ಭಟ್‌ ಪಡೆದಿದ್ದೆಷ್ಟು?

'RRR'ಗೆ ಆಲಿಯಾ ಭಟ್‌ ಪಡೆದಿದ್ದೆಷ್ಟು?

'RRR' ಸಿನಿಮಾ ಮೂಲಕ ಆಲಿಯಾ ಭಟ್ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಆಲಿಯಾ ಭಟ್ ಕರಿಯರ್‌ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಹೌದು. ಆದರೂ, ಆಲಿಯಾ ಭಟ್ ಈ ಸಿನಿಮಾಗೆ ಕಡಿಮೆ ಸಂಭಾವನೆ ಪಡೆದಿಲ್ಲ. ಸಿನಿಮಾದಲ್ಲಿ ಕೇವಲ 15 ನಿಮಿಷ ಕಾಣಿಸಿಕೊಳ್ಳುವ ಆಲಿಯಾ ಭಟ್ ಬರೋಬ್ಬರಿ 9 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದರಲ್ಲಿ ಪ್ರಚಾರದ ವೆಚ್ಚ ಕೂಡ ಸೇರಿಕೊಂಡಿದೆ.

'RRR'ಗೆ ಅಜಯ್ ದೇವಗನ್ ಸಂಭಾವನೆ ಎಷ್ಟು?

'RRR'ಗೆ ಅಜಯ್ ದೇವಗನ್ ಸಂಭಾವನೆ ಎಷ್ಟು?

'RRR' ಚಿತ್ರದಲ್ಲಿ ಅಜಯ್ ದೇವಗನ್ ನಟಿಸಿದ ಪಾತ್ರ ಕೂಡ ಪ್ರಮುಖವಾಗಿದೆ. ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟ ಅಜಯ್ ಕೂಡ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಕೇವಲ 8 ನಿಮಿಷ ಮಾತ್ರ ಕಾಣಿಸಿಕೊಳ್ಳಲಿದ್ದು, ಪಡೆದ ಸಂಭಾವನೆ ಬರೋಬ್ಬರಿ 25 ಕೋಟಿ ಎನ್ನಲಾಗಿದೆ.

ಜಕ್ಕಣ್ಣ ಪಡೆದ ಸಂಭಾವನೆ ಎಷ್ಟು?

ಜಕ್ಕಣ್ಣ ಪಡೆದ ಸಂಭಾವನೆ ಎಷ್ಟು?

ರಾಜಮೌಳಿ 'RRR' ಸಿನಿಮಾಗೆ ಸಂಭಾವನೆ ಪಡೆದಿಲ್ಲ. ಈ ಬಾರಿಗೆ ನಿರ್ಮಾಪಕರೊಂದಿಗೆ ಬೇರೊಂದು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಗಳಿಸುವ ಒಟ್ಟು ಗಳಿಕೆಯಲ್ಲಿ ಶೇ. 30ರಷ್ಟು ಸಂಭಾವನೆಯಾಗಿ ಪಡೆಯಲಿದ್ದಾರೆ. ಉದಾಹರಣೆಗೆ 'RRR' ಸಿನಿಮಾ 1000 ಕೋಟಿ ಗಳಿಸಿದರೆ, ರಾಜಮೌಳಿ ಅದರಲ್ಲಿ 300 ಕೋಟಿಯನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ. ಇದು ಒಬ್ಬ ನಿರ್ದೇಶಕನಾಗಿ ಪಡೆಯುವ ಅತೀ ದೊಡ್ಡ ಸಂಭಾವನೆ.

More from Filmibeat

English summary
Ram Charan Jr.NTR Rajamouli Ajay Devagan Alia Bhatt Remuneration For RRR is too big. Ram Charan and Jr Ntr is getting 45 crore each, Ajay Devgan 25 crore, Alia Bhat 9 crore, Rajamouli is getting shares.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X