RRR ಬಂದ್ಮೇಲೆ ರಾಮ್ ಚರಣ್‌ಗೆ ಯಾಕೋ ಅದೃಷ್ಟವೇ ಇಲ್ಲ; ಗೇಮ್‌ ಚೇಂಜರ್‌ಗೆ ಅಮೆರಿಕದಲ್ಲೂ ಕ್ರೇಜ್ ಇಲ್ಲ!

ಇನ್ನೇನು ಕೆಲವೇ ದಿನಗಳಲ್ಲಿ ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ 'ಗೇಮ್ ಚೇಂಜರ್' ರಿಲೀಸ್‌ ಆಗುತ್ತಿದೆ. ಒಂದ್ಕಡೆ ಮೆಗಾ ಪವರ್‌ಸ್ಟಾರ್ ರಾಮ್‌ ಚರಣ್, ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್. ಇಬ್ಬರ ಕಾಂಬಿನೇಷನ್ ಅಂದರೆ ಸಿನಿಮಾದ ಕ್ರೇಜ್ ಹೇಗಿರಬೇಕು? ಆದರೆ, ಯಾಕೋ 'ಗೇಮ್ ಚೇಂಜರ್' ಬಿಡುಗಡೆಗೂ ಮುನ್ನ ಸದ್ದೇ ಮಾಡುತ್ತಿಲ್ಲ.

'ಗೇಮ್ ಚೇಂಜರ್' ಬಗ್ಗೆ ಸಿನಿಮಾ ಮಂದಿಗೆ ಇಂತಹದ್ದೊಂದು ಅಭಿಪ್ರಾಯವಿದೆ. RRR ಅಂತಹ ಸಿನಿಮಾ ಕೊಟ್ಮೇಲೆ ರಾಮ್ ಚರಣ್ ಸಿನಿಮಾ ಕ್ರೇಜ್ ಬೇರೆ ಲೆವೆಲ್‌ನಲ್ಲಿಯೇ ಇರಬೇಕು. ಆದರೆ, ಅದ್ಯಾಕೋ ಸದ್ದು ಮಾಡುತ್ತಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ಅಮೆರಿಕದ ಪ್ರೀಮಿಯರ್‌ಗೆ ಸಿಗುತ್ತಿರುವ ರೆಸ್ಪಾನ್ಸ್.

Ram Charan Kiara Advani film Game Changer US Box Office Premiere response not good

ಸಾಮಾನ್ಯವಾಗಿ ತೆಲುಗಿನ ಸೂಪರ್‌ಸ್ಟಾರ್ ಸಿನಿಮಾಗಳು ಅಮೆರಿಕದಲ್ಲಿ ಪ್ರೀಮಿಯರ್ ಆಗುತ್ತವೆ. ಯುಎಸ್‌ಎನಲ್ಲಿ ನೆಲೆಸಿರುವ ಭಾರತೀಯರಿಂದ ತೆಲುಗು ಸಿನಿಮಾಗಳ ಪ್ರೀಮಿಯರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತೆ. ಹಾಗಾಗಿಯೇ 'ಗೇಮ್ ಚೇಂಜರ್' ಪ್ರೀಮಿಯರ್‌ಗೂ ಬುಕಿಂಗ್ ಓಪನ್ ಮಾಡಲಾಗಿತ್ತು. ಬಿಡುಗಡೆಗೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇವೆ. ಆದರೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ.

'ಗೇಮ್ ಚೇಂಜರ್' ಸಿನಿಮಾದ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಅಲ್ಲಿಂದ ಸಿನಿಮಾದ ಪ್ರೀ ಸೇಲ್ಸ್‌ನಲ್ಲಿ ಚೇತರಿಕೆ ಕಂಡಿದೆ. ಅಲ್ಲಿವರೆಗೂ ಪ್ರೇಕ್ಷಕರು ಆಸಕ್ತಿ ತೋರುತ್ತಿರಲಿಲ್ಲ. ಈಗ ಟಿಕೆಟ್ ಬುಕಿಂಗ್‌ನಲ್ಲಿ ಕೊಂಚ ಮಟ್ಟಿಗೆ ಚೇತರಿಕೆ ಕಂಡಿದೆ. ಆದರೂ, ಅದು ಸಾಲುವುದಿಲ್ಲ ಅನ್ನೋದು ಸಿನಿಮಾ ಮಂದಿಯ ಅಭಿಪ್ರಾಯ. ಭಾರತದಲ್ಲಿ ಈ ಸಿನಿಮಾ ರಿಲೀಸ್‌ಗೂ ಒಂದು ದಿನ ಮುನ್ನ, ಅಂದರೆ ಜನವರಿ 9ರಂದು ಯುಎಸ್‌ಎನಲ್ಲಿ ಪ್ರೀಮಿಯರ್ ನಡೆಯಲಿದೆ.

Ram Charan Kiara Advani film Game Changer US Box Office Premiere response not good

ಅಷಕ್ಕೂ ಇಲ್ಲಿವರೆಗೂ 'ಗೇಮ್ ಚೇಂಜರ್' ಸಿನಿಮಾದ ಪ್ರೀಮಿಯರ್ ಶೋಗಾಗಿ ಮಾರಾಟವಾದ ಟಿಕೆಟ್‌ಗಳ ಸಂಖ್ಯೆ 18,600 ಕ್ಕೂ ಅಧಿಕ ಎನ್ನಲಾಗಿದೆ. ಯುಎಸ್‌ಎನಲ್ಲಿ 413 ಲೋಕೇಶನ್‌ಗಳಲ್ಲಿ ಸುಮಾರು 1.241 ಶೋಗಳನ್ನು ಹಾಕಲಾಗಿತ್ತು. ಇದರಿಂದ ಇಲ್ಲಿವರೆಗೂ ಕೇವಲ 5,222 ಡಾಲರ್ ಅಷ್ಟೇ ಕಲೆಕ್ಷನ್ ಆಗಿದೆ ಎಂದು ಕೊಯ್‌ಮೊಯ್ ವರದಿ ಮಾಡಿದೆ. ಇದು ಮಹೇಶ್ ಬಾಬು ಸಿನಿಮಾ 'ಗುಂಟೂರು ಖಾರಂ' ಗಿಂತಲೂ ಕಮ್ಮಿ ಎನ್ನಲಾಗಿದೆ.

ಕಳೆದ ವರ್ಷ 2024ರಲ್ಲಿ ಮಹೇಶ್ ಬಾಬು ನಟಿಸಿದ 'ಗುಂಟೂರು ಖಾರಂ' ಸಿನಿಮಾ ಕೂಡ ಅಮೆರಿಕದಲ್ಲಿ ಪ್ರೀಮಿಯರ್ ಆಗಿತ್ತು. ಈ ಸಿನಿಮಾ 25 ಸಾವಿರ ಟಿಕೆಟ್‌ಗಳನ್ನು ಸೇಲ್ ಮಾಡಿತ್ತು. ಅಂದಾಜು 6 ಸಾವಿರ ಡಾಲರ್‌ಗಳನ್ನು ಕೇವಲ ಪ್ರಿಮಿಯರ್‌ಗಳಿಂದಲೇ ಕಲೆಕ್ಷನ್ ಮಾಡಿತ್ತು. ಆದರೆ, 'ಗೇಮ್ ಚೇಂಜರ್' ಸಿನಿಮಾದ ಸ್ಕೇಲ್ ಬೇರೆನೇ ಇದೆ. ಸ್ಟಾರ್ ಕಾಸ್ಟ್‌ ಕೂಡ ದೊಡ್ಡದಿದೆ. ಹೀಗಿರುವಾಗ ಮಹೇಶ್ ಬಾಬು ಸಿನಿಮಾವನ್ನು ಈಗಾಗಲೇ ಮೀರಿಸಬೇಕಿತ್ತು ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ.

ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ ಅಂದಾಗ ಆರಂಭದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇತ್ತು. ಆದರೆ, ಶಂಕರ್ ನಿರ್ದೇಶಿಸಿದ 'ಇಂಡಿಯನ್ 2' ಯಾವಾಗ ನೆಲಕ್ಕಚ್ಚಿತೋ ಅಲ್ಲಿಂದ 'ಗೇಮ್ ಚೇಂಜರ್' ಬಗ್ಗೆನೂ ಸಿನಿಪ್ರಿಯರು ಆಸಕ್ತಿ ಕಳೆದುಕೊಂಡಂತೆ ಇದೆ. ಸದ್ಯ ಪ್ರಭಾಸ್ 'ಕಲ್ಕಿ', RRR,'ದೇವರ','ಸಲಾರ್', 'ಬಾಹುಬಲಿ 2' ಅಂತಹ ಸಿನಿಮಾಗಳನ್ನು ಪ್ರೀಮಿಯರ್ ಕಲೆಕ್ಷನ್‌ ಅನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.

More from Filmibeat

English summary
Ram Charan, Kiara Advani film Game Changer US Box Office Premiere response not good;
Read more about: ram charan box office tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X