'ಪೆದ್ದಿ' ಓವರ್‌ಸೀಸನ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್; ರಾಮ್ ಚರಣ್ ಕರಿಯರ್‌ನಲ್ಲೇ ಹೊಸ ದಾಖಲೆ
ತೆಲುಗಿನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿದೆ. ಈ ಆಕ್ಷನ್- ಡ್ರಾಮಾ ಈಗಾಗಲೇ ಒಂದು ಹಾಡಿನಿಂದ ಸದ್ದು ಮಾಡುತ್ತಿದೆ. ಗೇಮ್ ಚೇಂಜರ್ ಸೋಲಿನ ಬಳಿಕ ರಾಮ್ ಚರಣ್‌ಗೆ ಮತ್ತೆ ಸಕ್ಸಸ್ ಸಿಗೋದು ಗ್ಯಾರಂಟಿ ಅಂತಲೇ ಟ್ರೇಡ್ ಎಕ್ಸ್‌ಪೆರ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ ಚಿತ್ರತಂಡ ಬ್ಯುಸಿನೆಸ್ ಮಾಡುವುದಕ್ಕೆ ಶುರು ಮಾಡಿದೆ.
ಟಾಲಿವುಡ್‌ನಲ್ಲಿ ರಾಮ್ ಚರಣ್ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಈ ಸಿನಿಮಾ ಈಗಾಗಲೇ ಭರ್ಜರಿ ಬ್ಯುಸಿನೆಸ್ ಮಾಡುವುದಕ್ಕೆ ಆರಂಭ ಮಾಡಿದೆ. ಪ್ರಿ-ರಿಲೀಸ್ ಬ್ಯುಸಿನೆಸ್ ವ್ಯವಹಾರದ ಬಗ್ಗೆ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ 'ಪೆದ್ದಿ'ಯ ಓವರ್‌ಸೀಸ್ ಥಿಯೇಟ್ರಿಕಲ್ ಹಕ್ಕುಗಳು ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಇದು ರಾಮ್ ಚರಣ್ ವೃತ್ತಿಜೀವನದಲ್ಲೇ ಸಾರ್ವಕಾಲಿಕ ದಾಖಲೆ ಬರೆಯುವ ಸಾಧ್ಯತೆಯಿದೆ ಎಂದು ತೆಲುಗು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ.

'ಪೆದ್ದಿ' ಸಿನಿಮಾ ಮಾರ್ಚ್ ತಿಂಗಳು ಕೊನೆಯ ವಾರ ರಿಲೀಸ್ ಆಗಬೇಕಿತ್ತು. ಆದರೆ, 'ಟಾಕ್ಸಿಕ್' ಹಾಗೂ 'ಧುರಂಧರ್ 2' ಒಂದು ವಾರ ಮುಂಚೆ ರಿಲೀಸ್ ಆಗುತ್ತಿರುವುದರಿಂದ ಕ್ಲ್ಯಾಶ್ ಅನ್ನು ತೆಡೆಯುವುದಕ್ಕೆ ಒಂದು ತಿಂಗಳು ಮುಂದಕ್ಕೆ ಹೋಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿದ್ದರೂ ಪ್ರಿ-ರಿಲೀಸ್ ಬ್ಯುಸಿನೆಸ್ ನಡೆಯುತ್ತಿವೆ ಎಂದು ವರದಿಯಾಗಿದೆ.
ರಾಮ್ ಚರಣ್ ಸಿನಿಮಾ 'ಪೆದ್ದಿ' ವಿದೇಶಿ ಮಾರುಕಟ್ಟೆಯಲ್ಲಿ ಭಾರಿ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ. 'ಉಪ್ಪೆನ' ಖ್ಯಾತಿಯ ಬುಚ್ಚಿ ಬಾಬು ಸನಾ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ತುಣುಕು ಹಾಗೂ ಹಾಡು ಭಾರೀ ಸದ್ದು ಮಾಡಿದ್ದರಿಂದ ಈ ಸಿನಿಮಾದ ಓವರ್‌ಸೀಸ್ ಹಕ್ಕುಗಳು ದಾಖಲೆ ಬೆಲೆಯಲ್ಲಿ ಮಾರಾಟವಾಗಿವೆ ಎಂದು ವರದಿಯಾಗಿವೆ.
ಈ ಸಿನಿಮಾ ಆಂಧ್ರ ಪ್ರದೇಶದ ಗ್ರಾಮೀಣ ಹಿನ್ನೆಲೆಯಲ್ಲಿ ಸೆಟ್ಟೇರಿದೆ. 1980ರ ಕಾಲ ಘಟ್ಟದಲ್ಲಿ ನಡೆಯುವ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಎಂದು ಹೇಳಲಾಗುತ್ತಿದೆ. ಗ್ರಾಮೀಣ ಭಾಗದ ಕ್ರಿಕೆಟ್ ಪಂದ್ಯ 'ಪೆದ್ದಿ' ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಸೆಟ್‌ಗಳ ಸ್ಟಿಲ್‌ಗಳು ರಾಮ್ ಚರಣ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಂಪೂರ್ಣ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವುದನ್ನು ಖಾತ್ರಿಯಾಗಿದೆ.

ರಾಮ್ ಚರಣ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವಣ್ಣ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಟ್ಯೂನ್ ಹಾಕಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಇನ್ನು 'ಪೆದ್ದಿ' ಸಿನಿಮಾದ ಬಜೆಟ್ 300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸಿನಿಮಾ ನಿರ್ಮಾಣದ ವೆಚ್ಚವೇ ₹200 ಕೋಟಿ ದಾಟಿದೆ ಎಂದು ವರದಿಯಾಗಿದೆ.
ಈಗಾಗಲೇ 80 ದಿನಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನು ಕೆಲವು ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ ಎನ್ನಲಾಗಿದೆ. ಈ ಮಧ್ಯೆ 'ಪೆದ್ದಿ' ಓವರ್‌ಸೀಸ್ ಹಕ್ಕುಗಳು ಸೇಲ್ ಆಗಿವೆ ಎನ್ನಲಾಗಿದೆ. ಈಗಾಗಲೇ ವರದಿಯಾಗಿರುವಂತೆ ಉತ್ತರ ಅಮೆರಿಕದ ಹಕ್ಕುಗಳನ್ನು ಸುಮಾರು 7 ಮಿಲಿಯನ್ ಡಾಲರ್ ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು ₹29 ಕೋಟಿಗೆ ಸೇಲ್ ಆಗಿದೆ ಎನ್ನಲಾಗಿದೆ. ಹಾಗೆಯೇ, ವಿಶ್ವದ ಇತರ ದೇಶಗಳ ಸುಮಾರು 10 ರಿಂದ 11 ಕೋಟಿ ರೂಪಾಯಿ ಬಂದಿವೆ ಎಂದು ವರದಿಯಾಗಿದೆ. ಈ ಮೂಲಕ ಓವರ್‌ಸೀಸನ್ ಹಕ್ಕುಗಳಿಂದಲೇ ₹40 ಕೋಟಿ ಬಂದಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











