'ಟಾಕ್ಸಿಕ್' ರಿಲೀಸ್‌ ಡೇಟ್‌ ಮೇಲೆ ಕಣ್ಣು ಯಾಕೆ? ಅದೇ ದಿನ 'ಪೆದ್ದಿ' ರಿಲೀಸ್.. ಜೂನ್ 4ರ ಗುಟ್ಟೇನು?

ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಪೆದ್ದಿ' ರಿಲೀಸ್ ಡೇಟ್ ಅನ್ನು ನಿರಂತರವಾಗಿ ಮುಂದಕ್ಕೆ ಹಾಕುತ್ತಲೇ ಇತ್ತು. ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಲೀಡ್ ರೋಲ್‌ನಲ್ಲಿ ನಟಿಸಿರುವ ಈ ಸಿನಿಮಾ ರಿಲೀಸ್‌ಗೆ ತೆಲುಗು ಮಂದಿ ತುದಿಗಾಲಲ್ಲಿ ನಿಂದಿದ್ದರು. ಎರಡು ಬಾರಿ ಸಿನಿಮಾ ಪೋಸ್ಟ್‌ಪೋನ್ ಆದ ಬಳಿಕ ಈಗ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಅಂದ್ಹಾಗೆ ಇದೇ ಡೇಟ್‌ನಲ್ಲಿ ಯಶ್ ಸಿನಿಮಾ 'ಟಾಕ್ಸಿಕ್' ರಿಲೀಸ್ ಆಗಬೇಕಿತ್ತು.

ಯಶ್ ಸಿನಿಮಾ 'ಟಾಕ್ಸಿಕ್' ಪೋಸ್ಟ್‌ಪೋನ್ ಆಗುತ್ತಿದ್ದಂತೆ ಈ ಡೇಟ್‌ಗೆ ರಿಲೀಸ್ ಮಾಡುವುದಕ್ಕೆ 'ಪೆದ್ದಿ' ತಂಡ ಮುಂದೆ ಬಂದಿದೆ. 'ಟಾಕ್ಸಿಕ್' ಟೀಮ್ ಒಂದಿಷ್ಟು ಲೆಕ್ಕಾಚಾರಗಳನ್ನು ಹಾಕಿ ಮಾರ್ಚ್ 19ಕ್ಕೆ ರಿಲೀಸ್ ಮಾಡುವುದಕ್ಕೆ ಮುಂದಾಗಿತ್ತು. ಆದರೆ, ಯುದ್ಧದ ಕಾರಣವೊಡ್ಡಿ ಸಿನಿಮಾವನ್ನು ಜೂನ್ 4ಕ್ಕೆ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿತು. ಮಾರ್ಚ್ 19ಕ್ಕೆ 'ಧುರಂಧರ್ 2' ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

Ram Charan Movie Peddi releasing on June 4th after Yash Toxic postponed

ಜೂನ್ 4ಕ್ಕೆ ರಿಲೀಸ್ ಆಗಬೇಕಿದ್ದ 'ಟಾಕ್ಸಿಕ್' ಮತ್ತೆ ಮುಂದೂಡಲ್ಪಟ್ಟಿದೆ. ಈ ದಿನದಂದು ರಾಮ್‌ ಚರಣ್ ಸಿನಿಮಾ 'ಪೆದ್ದಿ' ರಿಲೀಸ್‌ ಆಗುತ್ತಿದೆ. ಹೀಗಾಗಿ ಸಿನಿಮಾ ಮಂದಿ 'ಧುರಂಧರ್‌ 2' ಸಿಕ್ಕ ಯಶಸ್ಸು 'ಪೆದ್ದಿ'ಗೂ ಸಿಗುತ್ತಾ? ಎಂದು ಎದುರು ನೋಡುತ್ತಿದ್ದಾರೆ. ಇನ್ನೊಂದು ಕಡೆ 'ಪೆದ್ದಿ' ಜೂನ್ 4ರಂದೇ ಬಿಡುಗಡೆಯಾಗುತ್ತಿರೋದು ಯಾಕೆ? ಜೂನ್ 4ರ ಗುಟ್ಟೇನು? ತಿಳಿಯುವುದಕ್ಕೆ ಮುಂದೆ ಓದಿ.

'ಟಾಕ್ಸಿಕ್‌' ಡೇಟ್‌ಗೆ 'ಪೆದ್ದಿ' ಯಾಕೆ?

ಒಂದಿಷ್ಟು ಲೆಕ್ಕಾಚಾರಗಳನ್ನು ಹಾಕಕಿ 'ಟಾಕ್ಸಿಕ್' ಯುಗಾದಿಗೆ ರಿಲೀಸ್ ಅಂತ ಅನೌನ್ಸ್ ಮಾಡಿದ್ದರು. ಆದರೆ, ಅವರಿಗೆ ಆದಿನ ರಿಲೀಸ್ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಈ ಡೇಟ್‌ನಲ್ಲೇ ರಿಲೀಸ್‌ಗೆ ಮುಂದಾಗಿದ್ದಕ್ಕೂ ರಜೆಯ ದಿನಗಳು ಪ್ರಮುಖ ಕಾರಣವಾಗಿತ್ತು. 'ಟಾಕ್ಸಿಕ್' ಹಿಂದೆನೇ 'ಪೆದ್ದಿ' ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ಮಾರ್ಚ್ 27ಕ್ಕೆ ಸಿನಿಮಾ ರಿಲೀಸ್‌ಗೆ ಮುಂದಾಗಿತ್ತು. 'ಟಾಕ್ಸಿಕ್' ಪೋಸ್ಟ್‌ಪೋನ್ ಆಗುತ್ತಿದ್ದಂತೆ 'ಪೆದ್ದಿ' ಕೂಡ ಆಗಿತ್ತು. ಬಳಿಕ ಏಪ್ರಿಲ್ 30ಕ್ಕೆ ರಿಲೀಸ್ ಅಂತ ಇನ್ನೊಂದು ಡೇಟ್ ಅನ್ನು ಅನೌನ್ಸ್ ಮಾಡಲಾಯ್ತು. ಅದನ್ನೂ ಮುಂದೂಡಿ ಜೂನ್ 27ಕ್ಕೆ ರಿಲೀಸ್ ಎನ್ನಲಾಗಿತ್ತು. ಈಗ ಜೂನ್ 27 ಅನ್ನೂ ಕೈ ಬಿಟ್ಟು ಜೂನ್ 4ಕ್ಕೆ ವಿಶ್ವದಾದ್ಯಂತ ಬಿಡುಗಡೆ ಮಾಡುವುದಕ್ಕೆ ಹೊರಟಿದೆ.

ಏನಿದು ತಂತ್ರಗಳು?

ಜೂನ್ ಮೊದಲ ವಾರವೇ ಸಿನಿಮಾ ಬಿಡುಡಗೆ ಮಾಡುವುದಕ್ಕೆ ಕಾರಣವಿದೆ. ಆಗತಾನೇ ಐಪಿಎಲ್ ಪಂದ್ಯಗಳು ಮುಗಿದಿರುತ್ತವೆ. ಹೀಗಾಗಿ ಜನರು ಸಂಜೆ 7.30ರ ಬಳಿಕ ಆರಂಭ ಆಗುವ ಶೋಗಳಿಗೆ ಗಣನೀಯವಾಗಿ ಕಡಿಮೆ ಆಗುತ್ತಿದ್ದಾರೆ. ಜೂನ್ 4ಕ್ಕೆ ರಿಲೀಸ್ ಮಾಡುವುದರಿಂದ ಐಪಿಎಲ್ ಹ್ಯಾಂಗೋವರ್‌ನಿಂದ ಬಂದು ಪ್ರೇಕ್ಷಕರು ಸಿನಿಮಾ ನೋಡುತ್ತಾರೆ ಎಂಬ ನಂಬಿಕೆಯಲ್ಲಿ ಚಿತ್ರ ತಂಡವಿದೆ.

ಮಳೆ ಆರಂಭ ಅಷ್ಟೇ

ಇನ್ನು ಜೂನ್ ತಿಂಗಳಿನಿಂದ ಮಳೆ ಆರಂಭ ಆಗುತ್ತೆ. ಆದರೆ, ಜೂನ್ 4ರ ವೇಳೆ ಆಗಿನ್ನೂ ಮಳೆ ಆರಂಭ ಆಗಿರುತ್ತೆ. ಹೀಗಾಗಿ ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆ. ಜುಲೈ, ಆಗಸ್ಟ್ ತಿಂಗಳಲ್ಲಿ ಮಳೆ ಜೋರು ಇರುವುದರಿಂದ ಜನರು ಥಿಯೇಟರ್‌ಗಳಿಗೆ ಬರೋದು ಕಡಿಮೆ ಆಗುತ್ತೆ. ಇನ್ನೊಂದು ಕಡೆ ಈ ಡೇಟ್ ಮಿಸ್ ಮಾಡಿಕೊಂಡರೆ, ರಿಲೀಸ್‌ಗೆ ಇನ್ನೂ ಎರಡು ತಿಂಗಳು ಕಾಯಬೇಕಾಗುತ್ತೆ. ಹೀಗಾಗಿ ಜೂನ್‌ 4 ಒಳ್ಳೆಯ ಡೇಟ್.

ರಗಡ್ ಸಿನಿಮಾ

'ಪೆದ್ದಿ' ರಗಡ್ ಸ್ಪೋರ್ಟ್ಸ್ ಆಕ್ಷನ್ ಸಿನಿಮಾ. ಹೀಗಾಗಿ ಮಾಸ್ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸಿದ್ದರೆ, ಜಾಹ್ನವಿ ಕಪೂರ್ ಜೋಡಿಯಾಗಿದ್ದಾರೆ. ಶಿವಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕನ್ನಡಿಗರು ಕುತೂಹಲದಿಂದ ಎದುರು ನೀಡುತ್ತಿದ್ದಾರೆ. ಜೊತೆಗೆ ದಿವ್ಯಂದು ಶರ್ಮಾ, ಜಗಪತಿ ಬಾಬು, ಬೊಮನ್ ಇರಾನಿ ಕೂಡ ಪ್ರಮುಖ ಪಾತ್ರದಲ್ಲಿ ನೋಡಬಹುದು. ಒಟ್ನಲ್ಲಿ 'ಟಾಕ್ಸಿಕ್' ಡೇಟ್‌ನಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ 'ಪೆದ್ದಿ' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಾ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
Ram Charan Movie Peddi releasing on June 4th after Yash Toxic postponed.
Read more about: ram charan yash telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X