Peddi-Shivarajkumar: 'ಪೆದ್ದಿ' ಸಿನಿಮಾದಲ್ಲಿ ಶಿವಣ್ಣನ ಖದರ್ ನೋಡಿದ್ರಾ?

ಈ ವರ್ಷ ಶಿವಣ್ಣ ನಟಿಸಿರುವ ಒಂದೇ ಒಂದು ಸಿನಿಮಾ ರಿಲೀಸ್ ಆಗಿಲ್ಲ. ಆದರೆ, ಇನ್ನು 20 ದಿನಗಳಲ್ಲಿ ಅವರು ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಪೆದ್ದಿ'. ರಾಮ್ ಚರಣ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದೇನು ಈಗ ಸೀಕ್ರೆಟ್ ವಿಷಯವೇನು ಅಲ್ಲ. ಆದರೆ, ಚಿತ್ರತಂಡ ಶಿವಣ್ಣನ ಲುಕ್‌ ಅನ್ನು ಸಾಕಷ್ಟು ಗೌಪ್ಯವಾಗಿಯೇ ಇಟ್ಟಿತ್ತು.

ಶಿವರಾಜ್‌ಕುಮಾರ್ ಇತ್ತೀಚೆಗೆ ಕನ್ನಡದ ಜೊತೆ ಜೊತೆಗೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. 'ಜೈಲರ್' ಬಳಿಕ ಶಿವಣ್ಣನಿಗೆ ಎಲ್ಲಾ ಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿದೆ. ಕನ್ನಡ ಸಿನಿಮಾಗಳ ಜೊತೆಯಲ್ಲಿಯೇ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸೆಂಚುರಿ ಸ್ಟಾರ್ ಈಗ ಎರಡು ತೆಲುಗು ಸಿನಿಮಾ ಹಾಗೂ ಒಂದು ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೊಂದು 'ಪೆದ್ದಿ'.

Ram Charan movie Peddi team released Shivarajkumar character making video

ಗ್ಲೋಬಲ್ ಸ್ಟಾರ್ ರಾಮ್ ಚರಣ್‌ ಸಿನಿಮಾದಲ್ಲಿ ಶಿವಣ್ಣನ ಲುಕ್ ಹೇಗಿರಬಹುದು? ಅವರ ಪಾತ್ರವೇನು? ರಾಮ್ ಚರಣ್ ಹಾಗೂ ಶಿವರಾಜ್‌ಕುಮಾರ್ ಮುಖಾಮುಖಿ ಆಗುತ್ತಾರಾ? ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಆ ಕುತೂಹಲವನ್ನು ತಣಿಸುವುದಕ್ಕೆ 'ಪೆದ್ದಿ' ಟೀಮ್ ಒಂದು ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದೆ. ಅದು ಹೊರಬಿದ್ದಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.

ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ' ಜೂನ್ 4 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಸಿನಿಮಾ ತಂಡ ಪ್ರಚಾರವನ್ನು ಶುರು ಮಾಡಿದೆ. ಕನ್ನಡದಲ್ಲಿಯೂ ಡಬ್ ಆಗಿ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಈ ಸಿನಿಮಾಗೆ ಕರ್ನಾಟಕದಲ್ಲಿಯೂ ಬೇಡಿಕೆ ಹೆಚ್ಚಾಗಿದೆ. ಶಿವಣ್ಣ ಇರುವುದರಿಂದ ಈ ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಹೊಂಬಾಳೆ ಫಿಲ್ಮ್ಸ್ ಖರೀದಿ ಮಾಡಿ ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದೆ.

Also Read
Peddi X Hombale: 'ಪೆದ್ದಿ' ರಾಮ್‌ಚರಣ್ ಜೊತೆ ಕೈಜೋಡಿಸಿದ ಹೊಂಬಾಳೆ.. ಹೊಸ ಅಧ್ಯಾಯ ಆರಂಭ
Peddi X Hombale: 'ಪೆದ್ದಿ' ರಾಮ್‌ಚರಣ್ ಜೊತೆ ಕೈಜೋಡಿಸಿದ ಹೊಂಬಾಳೆ.. ಹೊಸ ಅಧ್ಯಾಯ ಆರಂಭ

ಸಿನಿಮಾ ರಿಲೀಸ್‌ಗೆ ಇನ್ನೂ 20 ದಿನಗಳು ಬಾಕಿ ಇರುವಾಗ ಚಿತ್ರತಂಡ ಶಿವಣ್ಣನ ಪಾತ್ರದ ಸಣ್ಣ ತುಣುಕನ್ನು ರಿಲೀಸ್ ಮಾಡಿದೆ. ಈ ವಿಡಿಯೋದಲ್ಲಿ ಶಿವರಾಜ್‌ಕುಮಾರ್ ಪಾತ್ರದ ಝಲಕ್ ಅನ್ನು ತೋರಿಸಲಾಗಿದೆ. ಒಂದು ಊರಿನ ಮುಖ್ಯಸ್ಥನ ಪಾತ್ರದಲ್ಲಿ ನಟಿಸಿರುವಂತೆ ತೋರುತ್ತಿದೆ. ಹಾಗೇ ಕುಸ್ತಿ ಅಖಾಡದಲ್ಲಿ ಶಿವಣ್ಣ ಕಾಣಿಸಿಕೊಂಡಿರುವುದು ಅವರ ಪಾತ್ರದ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

Ram Charan movie Peddi team released Shivarajkumar character making video

ಈ ಮೇಕಿಂಗ್ ವಿಡಿಯೋದಲ್ಲಿ ಕುಸ್ತಿಪಟುವನ್ನು ಶಿವಣ್ಣ ಎತ್ತಿ ಹಾಕುತ್ತಿರುವ ದೃಶ್ಯವಿದೆ. ಇದು ಶಿವಣ್ಣ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಗೌರ್‌ನಾಯ್ಡು ಎಂಬ ಪಾತ್ರದಲ್ಲಿ ನಟಿಸುತ್ತಿರುವ ಶಿವಣ್ಣ ಈ ಬಾರಿ ಕೂಡ ಪ್ರೇಕ್ಷಕರಿಗೆ ಕಿಕ್ ಕೊಡಬಹುದು. ಅಲ್ಲದೇ ರಾಮ್‌ ಚರಣ್‌ ಜೊತೆ ಶಿವಣ್ಣನ ದೃಶ್ಯಗಳು ಇರುತ್ತವೋ ಇಲ್ಲವೋ ಎಂಬ ಗೊಂದಲಕ್ಕೂ ತೆರೆ ಬಿದ್ದಂತೆ ಆಗಿದೆ. 'ಜೈಲರ್'ನಲ್ಲಿ ಮೋಡಿ ಮಾಡಿದಂತೆ ಈ ಸಿನಿಮಾದಲ್ಲೂ ಶಿವಣ್ಣ ಗಮನ ಸೆಳೆಯಬಹುದೇ? ಈ ಪ್ರಶ್ನೆಗೆ ಜೂನ್ 4ರಂದು ಉತ್ತರ ಸಿಗಲಿದೆ.

'ಪೆದ್ದಿ' ಸಿನಿಮಾವನ್ನು 'ಪುಷ್ಪ' ಸಿನಿಮಾದ ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಿದ್ದಾರೆ. ರಾಮ್ ಚರಣ್, ಜಾಹ್ನವಿ ಕಪೂರ್, ಶಿವರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಎ ಆರ್ ರೆಹಮಾನ್ ಸಂಗೀತ ನೀಡಿದ್ದು, ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗಿವೆ. 'ಪೆದ್ದಿ' ಜೂನ್ 4 ರಂದು ರಿಲೀಸ್ ಆಗಲಿದ್ದು, ಮೇ 18ರಂದು ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆ ಆಗುತ್ತೆ ಎಂದು ಹೇಳಲಾಗಿದೆ.

English summary
Ram Charan movie Peddi team released Shivarajkumar character making video. Shivarajkumar playing Gournaidu in this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X