'ಗೇಮ್ ಚೇಂಜರ್' ಸಿನಿಮಾಗೆ ಶಂಕರ್ ಮೊದಲ ಆಯ್ಕೆ ರಾಮ್ ಚರಣ್ ಆಗಿರಲಿಲ್ಲ: ದಿಲ್ ರಾಜು ಬಿಚ್ಚಿಟ್ಟ ಗುಟ್ಟೇನು?

ಟಾಲಿವುಡ್‌ನ ಯಶಸ್ವಿ ನಿರ್ಮಾಪಕ ದಿಲ್ ರಾಜು. ಕೆಲವು ವರ್ಷಗಳಿಂದ ಸಕ್ಸಸ್‌ಫುಲ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಲೇ ಬಂದಿದ್ದಾರೆ. ಕೆಲವು ವರ್ಷಗಳು ಸ್ಮಾಲ್ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದ ನಿರ್ಮಾಪಕ ಈಗ ಬಿಗ್ ಬಜೆಟ್‌ಗೆ ಕೈ ಹಾಕುತ್ತಿದ್ದಾರೆ.

ದಳಪತಿ ವಿಜಯ್ ಅಭಿನಯದ 'ವಾರಿಸು' ಸಿನಿಮಾ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ್ದಾರೆ. ಅದುವೇ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿರುವ ಸಿನಿಮಾ 'ಗೇಮ್ ಚೇಂಜರ್'. ಇದು ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಅಭಿನಯದ 15ನೇ ಸಿನಿಮಾ. ದಿಲ್ ರಾಜು ಬಿಗ್ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

Ram Charan not a first choice for Shankars game changer but Pawan Kalyan says Dil Raju

ಶಂಕರ್ ನಿರ್ದೇಶಿಸುತ್ತಿರುವ 'ಗೇಮ್ ಚೇಂಜರ್' ಸಿನಿಮಾಗೆ ಮೊದಲ ಆಯ್ಕೆ ರಾಮ್ ಚರಣ್ ಆಗಿರಲಿಲ್ಲ ಎಂದು ನಿರ್ಮಾಪಕ ದಿಲ್ ರಾಜು ಹೇಳಿದ್ದಾರೆ. ಶಂಕರ್ ಮನಸ್ಸಿನಲ್ಲಿ ತೆಲುಗಿನ ಸ್ಟಾರ್ ನಟ ಇದ್ದರು ಎಂದು ದಿಲ್ ರಾಜು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಅಲ್ಲದೆ, ಶಂಕರ್ ಒಂದು ಹಾಡಿಗೆ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರೋದಾಗಿ ಹೇಳಿದ್ದಾರೆ.

ಶಂಕರ್ ಮೊದಲ ಆಯ್ಕೆ ರಾಮ್‌ಚರಣ್ ಆಗಿರಲಿಲ್ಲ

ಶಂಕರ್ ಜೊತೆ ಸಿನಿಮಾ ಮಾಡಬೇಕು ಅಂತ ದಿಲ್ ರಾಜು ಇಷ್ಟ ಪಟ್ಟಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಒಂದು ದಿನ ಶಂಕರ್ ಮ್ಯಾನೇಜರ್ ಅವರೇ ಫೋನ್ ಮಾಡಿದ್ದರು. ಒಳ್ಳೆಯ ಕಥೆ ಇದೆ ಕೇಳುತ್ತೀರಾ ಎಂದಿದ್ದರಂತೆ. ಹಾಗೇ ದಿಲ್ ರಾಜುಗೆ ಕಥೆಯನ್ನೂ ಹೇಳಿದ್ದರು. ಅದು ಇಷ್ಟ ಆದ ಮೇಲೆ ಮಾತು ಮುಂದುವರೆದಿತ್ತು.

Ram Charan not a first choice for Shankars game changer but Pawan Kalyan says Dil Raju

ಶಂಕರ್ ಕಥೆ ಹೇಳಿದ್ದೇನೋ ಆಗಿತ್ತು. ಬಳಿಕ ಹೀರೊ ಯಾರು ಅಂತ ಬಂದಾಗ, ಶಂಕರ್ ಮನಸ್ಸಿನಲ್ಲಿ ಪವನ್ ಕಲ್ಯಾಣ್ ಇತ್ತು ಎಂದಿದ್ದಾರೆ ದಿಲ್ ರಾಜು. ಆದರೆ, ಅವರೇ ರಾಮ್‌ ಚರಣ್ ಹೆಸರನ್ನು ಸೂಚಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿಯೇ ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಆಗುತ್ತಿದೆ ಎಂದು ಹೇಳಿದ್ದಾರೆ.

ಶಂಕರ್ ಜೊತೆ 'ಇಂಡಿಯನ್ 2' ಮಾಡಬೇಕಿತ್ತು.

ಶಂಕರ್ ನಿರ್ದೇಶಿಸುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಇಂಡಿಯನ್ 2'. ಈ ಸಿನಿಮಾ ನಿರ್ಮಾಣ ಮಾಡುವುದಕ್ಕೆ ದಿಲ್ ರಾಜು ಇಷ್ಟ ಒಟ್ಟಿದ್ದರಂತೆ. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕಮಲ್ ಹಾಸನ್ ನಟಿಸುತ್ತಿರುವ 'ಇಂಡಿಯನ್ 2' ಸಿನಿಮಾ ಸೆಟ್ಟಿನಲ್ಲಿ ಅಪಘಾತ ನಡೆದಿತ್ತು. ಆ ಬಳಿಕ ಈ ಸಿನಿಮಾ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಶಂಕರ್ ಹೊಸ ಕಥೆಯೊಂದನ್ನು ದಿಲ್ ರಾಜುಗೆ ಕಳುಹಿಸಿಕೊಟ್ಟಿದ್ದರು. ಅದುವೇ 'ಇಂಡಿಯನ್ 2'.

ಒಂದೊಂದು ಹಾಡಿಗೆ 12 ಕೋಟಿ ರೂ.

'ಗೇಮ್ ಚೇಂಜರ್' ಸಿನಿಮಾ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಆದರೆ, ರಾಮ್‌ ಚರಣ್‌ಗೆ ಈ ಸಿನಿಮಾದ ಕಥೆಯನ್ನು 'RRR' ಚಿತ್ರೀಕರಣದ ವೇಳೆ ಹೇಳಿದ್ದರಂತೆ. ಆ ಬಳಿಕ ಶಂಕರ್ ಈ ಕಥೆಯನ್ನು ಫೋನ್ ಮೂಲಕವೇ ರಾಮ್‌ ಚರಣ್‌ಗೆ ಹೇಳಿ ಮುಗಿಸಿದ್ದರಂತೆ. ಅದಕ್ಕೆ ಈ ಸಿನಿಮಾ ಸೆಟ್ಟೇರಿದೆ ಎಂದಿದ್ದಾರೆ.

'ಗೇಮ್ ಚೇಂಜರ್' ಸಿನಿಮಾ ಐದು ಹಾಡುಗಳನ್ನು 5 ವಿಭಿನ್ನ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆಯಂತೆ. ಪ್ರತಿ ಹಾಡಿಗೂ ಶಂಕರ್ 10 ರಿಂದ 12 ಕೋಟಿ ರೂ. ಖರ್ಚು ಮಾಡಿಸಿದ್ದಾರೆಂದು ಹೇಳಿದ್ದಾರೆ. ಈಗಾಗಲೇ ಶೇ.70ರಷ್ಟು ಸಿನಿಮಾ ಮುಗಿದಿದ್ದು, 'ಗೇಮ್ ಚೇಂಜರ್‌'ಗೆ 10 ದಿನ 'ಇಂಡಿಯನ್ 2'ಗೆ 10 ದಿನವನ್ನು ಶಂಕರ್ ಮೀಸಲಿಟ್ಟಿದ್ದಾರೆ ಎಂದು ದಿಲ್ ರಾಜು ಹೇಳಿದ್ದಾರೆ.

More from Filmibeat

English summary
Ram Charan not a first choice for Shankar's Game Changer but Pawan Kalyan says Dil Raju, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X